ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ರಾಮ ಮಂದಿರ ನಿರ್ಮಾಣಕ್ಕೆ ಭರದಿಂದ ಸಾಗಿದ ಕಾರ್ಯ| ನಿರ್ಮಾಣ ಕಾರ್ಯಕ್ಕೆ ಭಬೂಮಿ ಅಗೆದಾಗ ಸಿಕ್ತು ಪುರಾತನ ಅವಶೇಷಗಳು| ಮೂರ್ತಿ, ಶಿವಲಿಂಗ ಸೇರಿ ಅನೇಕ ವಸ್ತುಗಳು ಪತ್ತೆ

Ancient idols and objects of archaeological importance found in Ayodhya near Ram temple construction site

ಅಯೋಧ್ಯೆ(ಮೇ.21): ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದನ್ವಯ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಹೀಗಿರುವಾಗ ಲಾಕ್‌ಡೌನ್ ಘೋಷಣೆಯಾದುದರಿಂದ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದ್ದವು. ಆದರೀಗ ಲಾಕ್‌ಡೌನ್ ನಡುವೆ 67 ಎಕರೆ ವಿಸ್ತೀರ್ಣದ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಉತ್ಖನನ ಹಾಗೂ ಇನ್ನಿತರ ಕಾರ್ಯಗಳು ಆರಂಭವಾಗಿವೆ. ಶೀಘ್ರದಲ್ಲೇ ಈ ಇಡೀ ಪ್ರದೇಶವನ್ನು ಸಮತಟ್ಟುಗೊಳಿಸಿ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಆದರೀಗ ಅಗೆಯುವ ಹಾಗೂ ಈ ಭೂಮಿ ಸಮತಟ್ಟು ಮಾಡುವ ಪ್ರಕ್ರಿಯೆ ವೇಳೆ ಅನೇಕ ಪುರಾತನ ಮೂರ್ತಿ ಹಾಗೂ ಮಂದಿರದ ಅವಶೇಷಗಳು ಲಭ್ಯವಾಗಿವೆ.

ರಾಮ ಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡುವವರಿಗೆ ಸಿಗುತ್ತೆ ಬಹುದೊಡ್ಡ ವಿನಾಯಿತಿ!

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಚಂಪತ್ ರಾಯ್ ಪ್ರತಿಕ್ರಿಯಿಸಿದ್ದು 'ಜಿಲ್ಲಾಧಿಕಾರಿ ಎ. ಕೆ. ಝಾ ಅನುಮತಿ ಮೇರೆಗೆ ರಾಮ ಮಂದಿರ ನಿರ್ಮಾಣ ಕಾರ್ಯದ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಹೀಗಿರುವಾಗ ಈ ಪ್ರದೇಶ ಸಮತಟ್ಟುಗೊಳಿಸುವಾಗ ಹಾಗೂ ಇಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳನ್ನು ತೆಗೆಯುವ ಕಾರ್ಯವೂ ಭರದಿಂದ ಸಾಗಿದೆ. ಇಲ್ಲಿ ಕೆಲಸ ನಿರ್ವಿಸುವವರು ಲಾಕ್‌ಡೌನ್ ಹಾಗೂ ಕೊರೋನಾ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ನಿಯಮಗಳನ್ನು ಪಾಲಿಸುತ್ತಿದ್ದು, ಮಾಸ್ಕ್ ಧರಿಸುವುದರೊಂದಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ' ಎಂದು ತಿಳಿಸಿದ್ದಾರೆ. 

ರಾಮ ಮಂದಿರ ನಿರ್ಮಾಣಕ್ಕೆ ಉದ್ಧವ್‌ ಠಾಕ್ರೆ 1 ಕೋಟಿ ರು.!

ಭೂಮಿ ಅಗೆಯುವ ವೇಳೆ ಸಿಗುತ್ತಿವೆ ಮೂರ್ತಿ ಹಾಗೂ ಶಿವಲಿಂಗಗಳು

ಇಷ್ಟೇ ಅಲ್ಲದೇ ಸಮತಟ್ಟುಗೊಳಿಸಲು ಭೂಮಿ ಅಗೆಯುತ್ತಿದ್ದು, ಇದಕ್ಕಾಗಿ ಮೂರು ಜೆಸಿಬಿ, ಒಂದು ಕ್ರೇನ್, ಡೆರಡು ಟ್ರ್ಯಾಕ್ಟರ್ ಹಾಗೂ ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ. 11 ರಿಂದ ಈ ಕಾರ್ಯ ನಡೆಯುತ್ತಿದ್ದು, ಹೈಕೋರ್ಟ್‌ ಆದೇಶದ ಮೇರೆಗೆ ಇಲ್ಲಿ ಎಎಸ್‌ಐ ಉತ್ಖನನ ಕಾರ್ಯ ನಡೆಸಿದ್ದಾರೆ. ಆ ವೇಳೆ ಅಲ್ಲಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಅವಶೇಷಗಳು, ದೇವಿ ದೇವತೆಯ ತುಂಡಾದ ಮೂರ್ತಿಗಳು, ಪುಷ್ಪ ಕಲಶ ಮೊದಲಾದ ಕಲಾಕೃತಿಗಳು ಸಿಕ್ಕಿವೆ. ಈವರೆಗೂ ಏಳು ಬ್ಲ್ಯಾಕ್‌ ಟಚ್‌ ಸ್ಟೋನ್‌ನ ಸ್ಥಂಭ, ಆರು ರೆಡ್‌ ಸ್ಯಾಂಡ್‌ ಸ್ಟೋನ್ ಸ್ಥಂಭ, ಹಾಗೂ ಐದು ಅಡಿ ಎತ್ತರದ ಶಿವಲಿಂಗ ಸೇರಿ ಅನೇಕ ಪುರಾತನ ಅವಶೇಷಗಳು ಸಿಕ್ಕಿವೆ ಎಂದಿದ್ದಾರೆ.

ಇದೇ ವೇಳೆ ಪ್ರತಿಕ್ರಿಯಿಸಿದ ರಾಮಲಲ್ಲಾ ಮಂದಿರದ ಅರ್ಚಕ ಸತ್ಯೇಂದ್ರ ದಾಸ್ 'ಜೆಸಿಬಿ ಮೂಲಕ ಯಂತ್ರಗಳ ಸಹಾಯದಿಂದ ಮುಖ್ಯ ಗರ್ಭಗುಡಿ ನಿರ್ಮಿಸುವ ಸ್ಥಳ ಹಾಗೂ ಆಸುಪಾಸಿನ ಪ್ರದೇಶ ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಬಹಳಷ್ಟು ಸಮಯ ತಗುಲುತ್ತದೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios