ನವದೆಹಲಿ :  ಸದ್ಯ ದೇಶದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಗರಿಗೆದರಿದ್ದು, ಚರ್ಚೆಗೆ ಗ್ರಾಸವಾಗುತ್ತಿದೆ. ಇದೇ ವೇಳೆ  ಅಯೋಧ್ಯೆ ಬಾಬ್ರಿ ಮಸೀದಿ ವಿಚಾರವಾಗಿ ದಿಲ್ಲಿ ವಿದ್ಯಾರ್ಥಿಯೋರ್ವ  ಉತ್ಖನನದ ದೇವಾಲಯದ ಕುರುಹು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ. 

ವಿದ್ಯಾರ್ಥಿಯಾಗಿದ್ದ ವೇಳೆ ಬಿ.ಬಿ. ಲಾಲ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ನಡೆಸಿದ್ದು, ಈ ತಂಡದಲ್ಲಿ ತಾನೂ ಕೂಡ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದು, ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದ ಇಟ್ಟಿಗೆಗಳು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ. 

ಈ ಸತ್ಯವನ್ನು ನಮ್ಮ ಇತಿಹಾಸ ಹಾಗೂ ಪ್ರಾಚ್ಯ ವಸ್ತುಗಳ ಬಗ್ಗೆ ಇದ್ದ ಜ್ಞಾನದಿಂದ  ಪತ್ತೆ ಹಚ್ಚಿದ್ದಾಗಿ ಅವರು ಹೇಳಿದ್ದಾರೆ. 

ದೇವಾಲಯದ ನಿರ್ಮಾಣಕ್ಕೆ ಹಾಕಿದ್ದ ಕಂಬಗಳನ್ನೇ ಸೇರಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವ ವಿಚಾರ ಈ ವೇಳೆ ತಿಳಿದು ಬಂದಿತ್ತು. ಪೂರ್ಣ ಕಳಸವೂ ಕಂಡು ಬಂದಿದ್ದು ದೇವಾಲಯದ ನಿರ್ಮಾಣಕ್ಕೆ 11 ಹಾಗೂ 12ನೇ ಶತನಮಾನದಲ್ಲಿ ಈ ರೀತಿಯಾಗಿ ಮಾಡುವುದು ಸಂಪ್ರದಾಯವಾಗಿತ್ತು ಎಂದು ಹೇಳಿದ್ದಾರೆ.