Asianet Suvarna News Asianet Suvarna News

ಕೇರಳದಲ್ಲಿ ಫಿಫಾ ವಿಶ್ವಕಪ್ ಜ್ವರ... ಜೊತೆಯಾಗಿ ಮ್ಯಾಚ್ ನೋಡಲು ಮನೆ ಖರೀದಿಸಿದ ಕ್ರೀಡಾಪ್ರೇಮಿಗಳು

ಕೇರಳದಲ್ಲಿ ಪುಟ್ಬಾಲ್ ಪ್ರಿಯರು ಫುಟ್ಬಾಲ್ ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ (Mundakkamugal) ಗ್ರಾಮಸ್ಥರು ಪುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ಎಲ್ಲರೂ ಜೊತೆಯಾಗಿ ಪಂದ್ಯ ನೋಡುವ ಸಲುವಾಗಿ 23 ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಇರುವ ಒಂದು ಆಸ್ತಿಯನ್ನೇ ಖರೀದಿಸಿದ್ದಾರೆ. 

FIFA Fever in Gods own country keral footbal fans buy house in village to watch FiFa match together in Mundakkamugal village of Kochi akb
Author
First Published Nov 20, 2022, 4:24 PM IST

ಕೇರಳ: ದೇವರನಾಡು ಕೇರಳದಲ್ಲಿ ಫಿಫಾ ವಿಶ್ವಕಪ್ ಜ್ವರ ಜೋರಾಗಿದೆ. ಖತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಜಗತ್ತಿನಾದ್ಯಂತ ಇರುವ ಫುಟ್ಬಾಲ್ ಪ್ರಿಯರ ಹೃದಯದ ಬಡಿತವನ್ನು ಹೆಚ್ಚಿಸುತ್ತಿದೆ. ಅದರಲ್ಲೂ ಕೇರಳದಲ್ಲಿ ಪುಟ್ಬಾಲ್ ಪ್ರಿಯರು ಫುಟ್ಬಾಲ್ ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ (Mundakkamugal) ಗ್ರಾಮಸ್ಥರು ಪುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ಎಲ್ಲರೂ ಜೊತೆಯಾಗಿ ಪಂದ್ಯ ನೋಡುವ ಸಲುವಾಗಿ 23 ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಇರುವ ಒಂದು ಆಸ್ತಿಯನ್ನೇ ಖರೀದಿಸಿದ್ದಾರೆ. 

ಸುಮಾರು 17 ಜನ ಪುಟ್ಬಾಲ್ ಅಭಿಮಾನಿಗಳು ಒಟ್ಟು ಸೇರಿ ಹಣ ಹಾಕಿ ಈ ಆಸ್ತಿಯನ್ನು ಖರೀದಿಸಿದ್ದಾರೆ. ಗಮನಾರ್ಹವಾಗಿ ಇವರು ತಾವು ಖರೀದಿಸಿದ ಜಾಗದಲ್ಲಿದ್ದ ಮನೆಯಲ್ಲಿ ಬ್ರೆಜಿಲ್‌, ಅರ್ಜೆಂಟೈನಾ ಹಾಗೂ ಪೋರ್ಚುಗಲ್ ದೇಶಗಳನ್ನು ಚಿತ್ರಿಸಿದ್ದಾರೆ. ಹಾಗೆಯೇ ಜೊತೆಗೆ ಅರ್ಜೆಂಟೈನಾದ ಪುಟ್ಬಾಲ್ ಸ್ಟಾರ್ ಲಿಯೊನಲ್ ಮೆಸ್ಸಿ (Lionel Messi) ಹಾಗೂ ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿನೊ ರೊನಾಲ್ಡ್ (Cristiano Ronaldo) ಅವರ ಫೋಟೋಗಳನ್ನು ಕೂಡ ಪೇಂಟ್ ಮಾಡಿದ್ದಾರೆ. ಅಲ್ಲದೇ ಈ ಆಸ್ತಿಯ ಒಳಗೆ ವಿವಿಧ ಫುಟ್ಬಾಲ್ ತಾರೆಯರ ಕಟೌಟ್‌ಗಳನ್ನು ಕೂಡ ನಿರ್ಮಿಸಿದ್ದಾರೆ. 

FIFA World Cup 2022 Prize Money: ಫುಟ್‌ಬಾಲ್‌-ಕ್ರಿಕೆಟ್‌ ವಿಶ್ವಕಪ್‌ ಬಹುಮಾನ ಮೊತ್ತ ಅಜಗಜಾಂತರ!

ಫುಟ್ಬಾಲ್ ವಿಶ್ವಕಪ್‌  ಬಗ್ಗೆ ತಮ್ಮ ಸಿದ್ಧತೆ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಈ ಆಸ್ತಿಯ ಖರೀದಿದಾರರಲ್ಲಿ ಒಬ್ಬರಾದ ಶರೀಫ್ ಪಿಎ (Shefeer PA) , ನಾವು ಫಿಫಾ ವಿಶ್ವಕಪ್‌ಗಾಗಿ ಏನೂ ಹೊಸತನ್ನು ಮಾಡಲು ಯೋಜನೆ ರೂಪಿಸಿದ್ದೆವು. ನಾವು 17 ಜನ ಮಾರಾಟಕ್ಕೆ ಇಟ್ಟಿದ್ದ ಆಸ್ತಿಯೊಂದನ್ನು ಇದಕ್ಕಾಗಿ ಖರೀದಿಸಿದೆವು. ಅಲ್ಲದೇ ಅದನ್ನು ಪುಟ್ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಅವುಗಳ ಧ್ವಜಗಳ ರೀತಿಯಲ್ಲಿ ಅಲಂಕರಿಸಿದೆವು ಅಲ್ಲದೇ ಇಲ್ಲಿಗೆ ಆಗಮಿಸಿ ಎಲ್ಲರೂ ಜೊತೆಯಾಗಿ ದೊಡ್ಡದಾದ ಸ್ಕ್ರೀನ್‌ ನಲ್ಲಿ ಫುಟ್ಬಾಲ್ ಮ್ಯಾಚ್ (FIFA teams) ನೋಡಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.

ಫುಟ್ಬಾಲ್‌ ವಿಶ್ವಕಪ್‌ ಸಿದ್ಧತೆಗೆ ಕತಾರ್‌ ವೆಚ್ಚ 17 ಲಕ್ಷ ಕೋಟಿ!

ಫಿಫಾ ವಿಶ್ವಕಪ್‌ಗೆ ಕೌಂಟ್‌ಡೌನ್‌, 900 ಕೆಜಿ ಮಾಂಸ ತಂದ ಅರ್ಜೆಂಟೀನಾ, ಉರುಗ್ವೆ!

Follow Us:
Download App:
  • android
  • ios