ಜಿರಳೆ ಕೊಲ್ಲಲು ಹೋಗಿ ತನ್ನ ಮನೆಯನ್ನೇ ಸ್ಫೋಟಿಸಿಕೊಂಡ ಜಪಾನಿನ ವ್ಯಕ್ತಿ

ಜಪಾನ್‌ನಲ್ಲಿ ಜಿರಳೆಯನ್ನು ಕೊಲ್ಲಲು ಕೀಟನಾಶಕವನ್ನು ಸಿಂಪಡಿಸಲು ಪ್ರಯತ್ನಿಸುತ್ತಿರುವಾಗ ವ್ಯಕ್ತಿಯೊಬ್ಬ ತನ್ನ ಅಪಾರ್ಟ್ಮೆಂಟನ್ನೇ ಸ್ಫೋಟಿಸಿಕೊಂಡಿದ್ದಾನೆ. 

Japanese man sets house on fire while trying to kill cockroach

ಕೀಟವನ್ನು ಕೊಲ್ಲವ ಸಲುವಾಗಿ ತನ್ನ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಸಿನಿಮಾ ಕಥೆಗಳಲ್ಲಿ ಮಾತ್ರ...  ಅದು ಈಗಾ ಸಿನಿಮಾ ನೋಡಿದವರಿಗೆ ಗೊತ್ತೆ ಇದೆ. ಆದರೆ ಜಪಾನಿನ ವ್ಯಕ್ತಿಯೊಬ್ಬ ಜಿರಳೆಯ ಕಾಟವನ್ನು ಸಹಿಸಲಾಗದೆ ತನ್ನ ಅಪಾರ್ಟ್‌ಮೆಂಟ್‌ ಸ್ಪೋಟಿಸಿಕೊಂಡಿದ್ದಾನೆ ಎಂದು ಜಪಾನಿನ  ಮೈನಿಚಿ ಶಿಂಬುನ್‌ ವರದಿ ಮಾಡಿದೆ. ಜಿರಳೆ ಎಂದರೆ ಯಾರಿಗೆ ಇಷ್ಟ ಆಗುತ್ತೆ ಹೇಳಿ, ಆದರೆ ಒಂದು ಜಿರಳೆಯನ್ನು ಕೊಲ್ಲಲು ತನ್ನ ಜೀವಕ್ಕೆ ತೊಂದರೆ ತಂದುಕೊಳ್ಳುವ ಮೂರ್ಖತನ ಯಾರು ಮಾಡುವುದಿಲ್ಲ. ಆದರೆ ಜಪಾನಿನ 54 ವರ್ಷದ ವ್ಯಕ್ತಿಗೆ  ಕುಮಾಮೊಟೊದ (Kumamoto apartment) ವಾರ್ಡ್‌ನಲ್ಲಿರುವ ತನ್ನ  ಅಪಾರ್ಟ್‌ಮೆಂಟ್‌ನಲ್ಲಿ ಡಿ. 10 ರ ಮಧ್ಯರಾತ್ರಿ ಒಂದು ಜಿರಳೆ ಕಾಣಿಸಿದೆ ಅದನ್ನು ಕೊಲ್ಲಲು ಪ್ರಯತ್ನಿಸಿ ಹೆಚ್ಚಿನ  ಪ್ರಮಾಣದ ಕೀಟನಾಶಕವನ್ನು ಸಿಂಪಡಿಸಿದ್ದು, ಅದು ಅಪಾರ್ಟ್‌ಮೆಂಟ್‌ ಸ್ಫೋಟದೊಂದಿಗೆ ಅಂತ್ಯವಾಗಿದೆ. 

ಜಿರಳೆಯನ್ನು ಸಾಯಿಸಲು ಸಿಂಪಡಿಸಿದ್ದ ಕೀಟನಾಶಕವು ಬಾಲ್ಕನಿ ಕಿಟಕಿಯನ್ನು ಸ್ಫೋಟಿಸಿದೆ ಮತ್ತು ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜಪಾನ್‌ನ ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಕೇಂದ್ರವು (National Consumer Affairs Center of Japan ) ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳ ಬಳಿ ಕೀಟನಾಶಕ ಬಳಕೆಗೆ ಸಂಬಂಧಿಸಿದ ಸ್ಫೋಟಗಳ ಮಾದರಿಯನ್ನು ತಿಳಿಸಿದೆ ಮತ್ತು ಕೀಟನಾಶಕ ತಜ್ಞರು ಇಂತಹ ಅಭ್ಯಾಸಗಳ ವಿರುದ್ಧ ಎಚ್ಚರಿಕೆ ನೀಡಿದರು, ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅವುಗಳನ್ನು ಹಾನಿಯಾಗುತ್ತವೆ ಮತ್ತು ಜನರಿಗೂ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು. 

ಇದನ್ನೂ ಓದಿ: ಈ ದೇಶದ ಬೀದಿ ಬೀದಿಯಲ್ಲಿ ಸಿಗುತ್ತೆ ಚೇಳು, ಜಿರಳೆ ಫ್ರೈ

ಅನೇಕ ಕೀಟನಾಶಕಗಳು ಆಲ್ಕೋಹಾಲ್ ಸೇರಿದಂತೆ ಸುಡುವ ಪದಾರ್ಥಗಳನ್ನು ಹೊಂದಿರುತ್ತವೆ ಮತ್ತು ಪ್ರೋಪೇನ್ ಮತ್ತು ಬ್ಯುಟೇನ್ ಸೇರಿದಂತೆ ಪ್ರೊಪೆಲ್ಲಂಟ್‌ಗಳನ್ನು ಒಳಗೊಂಡಿರುತ್ತವೆ. ಒಂದು ಕೊಠಡಿಯು ಪ್ರೊಪೆಲ್ಲಂಟ್‌ಗಳು ಮತ್ತು ಆಮ್ಲಜನಕದ ಪರಿಪೂರ್ಣ ಮಿಶ್ರಣವನ್ನು ಹೊಂದಿದ್ದರೆ, ಸ್ಫೋಟ ಸಂಭವಿಸಬಹುದು ಎಂದು ಸಿಂಗಾಪುರದ ಪತ್ರಿಕೆ ಹೇಳಿದೆ. 

ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್‌ ಆಗಿದೆ, ತಮಾಷೆಯಾಗಿ ಕಾಣುವ ಈ ಸುದ್ಧಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಸುರಿಮಳೆಯನ್ನೆ ಮಾಡುತ್ತಿದ್ದಾರೆ. ಬಳಕೆದಾರರು ಜಿರಳೆಯ ಭವಿಷ್ಯದ ಬಗ್ಗೆ ಹಾಸ್ಯಮಯವಾಗಿ ಕಮೆಂಟ್ ಮಾಡುತ್ತಿದ್ದು, ಜಿರಳೆಯನ್ನು ಸಾಯಿಸಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡಿದ್ದ ವ್ಯಕ್ತಿಯ ಕೆಲಸದ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಮಲ್ಲಿ  "ಆದರೂ ಜಿರಳೆ ಸತ್ತಿದೆಯೇ," ಎನ್ನುವ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Weird News: ಮನೆಯೊಳಗೆ ಜಿರಳೆ ಬಿಟ್ಟುಕೊಂಡರೆ 1.5 ಲಕ್ಷ ಕೊಡತ್ತೆ ಈ ಸಂಸ್ಥೆ!

ಈ ಘಟನೆಯು  2017ರಲ್ಲಿ ನಡೆದ ಇದೇ ರೀತಿಯ ಘಟನೆಯೊಂದನ್ನು  ನೆನಪಿಸುತ್ತದೆ. ಅಮೆರಿಕಾದ ಓಹಿಯೋ ಮಹಿಳೆಯೊಬ್ಬರು 2017 ರಲ್ಲಿ ಆಲ್ಕೋಹಾಲ್‌ನೊಂದಿಗೆ ಬೆಡ್‌ಬಗ್‌ಗಳನ್ನು ಕೊಲ್ಲುವ ಪ್ರಯತ್ನದಲ್ಲಿ ಆಕಸ್ಮಿಕವಾಗಿ ತನ್ನ ಮನೆಗೆ ಬೆಂಕಿ ಹಚ್ಚಿದರು. ಈ ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದು  10 ಜನರು ನಿರಾಶ್ರಿತರಾಗಿದ್ದರು. 

-ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 
 

Latest Videos
Follow Us:
Download App:
  • android
  • ios