Asianet Suvarna News Asianet Suvarna News

ಮೆಜೆಸ್ಟಿಕ್ ಗೆಳತಿ ಮರೆಯಾಗಿದ್ದು ಎಲ್ಲಿ?: ಆಕೆ ಚೆಲುವಿನ ಚಿತ್ತಾರದ ಲವ್‌ ಸ್ಟೋರಿ ಹೇಳಿದ್ಯಾಕೆ?

ಸ್ಮಾರ್ಟ್ ಫೋನ್ ಬಂದ ಮೇಲೆ ಎಲ್ಲರೂ ಸ್ಮಾರ್ಟ್ ಆಗಿದ್ದಾರೆ.‌ ಆವತ್ತು ಭಾನುವಾರ ಅನ್ನಿಸುತ್ತೆ.‌ ಹೀಗೆ ಸ್ನೇಹಿತರ ಜೊತೆಗೆ ಹೊರಗೆ ಮಾತನಾಡುವ ವೇಳೆ ಒಂದು ಫೋನ್ ಕರೆ ಬಂದಿತ್ತು. ‌ಆ ಕಡೆಯಿಂದ ಹೆಣ್ಣು ಮಗಳು ಒಬ್ಬಳು ಹಲೋ ಸರ್..ನಾನು ಒಂದು ಪ್ರಾಬ್ಲಂನಲ್ಲಿ ಇದ್ದೇನೆ.

women tragedy life story Why did cheluvina chittara love story tell gvd
Author
First Published Aug 8, 2024, 9:58 PM IST | Last Updated Aug 8, 2024, 9:58 PM IST

ರಾಯಚೂರು (ಆ.08): ಪ್ರತಿಯೊಬ್ಬ ಬದುಕಿನಲ್ಲಿ ಈ ತರಹ ಘಟನೆಗಳು ನಡೆದೇ ಇರುತ್ತವೆ. ಅಂತದೇ ಒಂದು ಘಟನೆ ನಡೆದಿದೆ. ನಾವು ತಾಂತ್ರಿಕ ಯುಗದಲ್ಲಿ ಜೀವನ ಮಾಡುತ್ತಿದ್ದೇವೆ. ಎಲ್ಲರ ಕೈಯಲ್ಲಿ ಪ್ರಪಂಚ ನೋಡುವ ಕಾಲ ಬಂದು ಬಿಟ್ಟಿದೆ. ಇಂತಹ ಕಾಲದಲ್ಲಿ ಯಾರು ಯಾರಿಗೆ ಬೇಕಾದರೂ ಕ್ಷಣದಲ್ಲಿ ನೋಡುತ್ತಾ ಮಾತನಾಡಲು ಹತ್ತಾರು ಸೋಷಿಯಲ್ ಮೀಡಿಯಾದ ಆ್ಯಪ್ ಗಳು ಇವೆ. ಸ್ಮಾರ್ಟ್ ಫೋನ್ ಬಂದ ಮೇಲೆ ಎಲ್ಲರೂ ಸ್ಮಾರ್ಟ್ ಆಗಿದ್ದಾರೆ.‌ ಆವತ್ತು ಭಾನುವಾರ ಅನ್ನಿಸುತ್ತೆ.‌ ಹೀಗೆ ಸ್ನೇಹಿತರ ಜೊತೆಗೆ ಹೊರಗೆ ಮಾತನಾಡುವ ವೇಳೆ ಒಂದು ಫೋನ್ ಕರೆ ಬಂದಿತ್ತು. ‌ಆ ಕಡೆಯಿಂದ ಹೆಣ್ಣು ಮಗಳು ಒಬ್ಬಳು ಹಲೋ ಸರ್..ನಾನು ಒಂದು ಪ್ರಾಬ್ಲಂನಲ್ಲಿ ಇದ್ದೇನೆ.

ನನ್ನ ಮಕ್ಕಳು ನನಗೆ ನನ್ನ ಅತ್ತ ನೀಡುತ್ತಿಲ್ಲ. ನನ್ನ ಗಂಡ ಸತ್ತು ಹೋಗಿದ್ದಾನೆ. ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ‌ನನಗೆ ನೀವೂ ಸಹಾಯ ಮಾಡಿ ಅಂತ ಆ ಮಹಿಳೆ ಕಣ್ಣೀರು ಹಾಕುತ್ತಾ ಮಾತನಾಡಲು ಶುರು ಮಾಡಿದ್ದಳು. ನಾನು ಅವಸರದಲ್ಲಿ ಇದ್ರೂ ಆಕೆಯೊಂದಿಗೆ ಮಾತನಾಡಿ ಮಾಹಿತಿ ತಿಳಿದುಕೊಂಡೆ..ಅಷ್ಟೇ ಆವತ್ತು ಆ ಫೋನ್ ಕಾಲ್ ಕಟ್ ಆಯ್ತು.. ಮತ್ತೆ ಎರಡು ದಿನಗಳ ಬಳಿಕ ಮತ್ತೆ ಆ ಮಹಿಳೆ ನನಗೆ ಫೋನ್ ಮಾಡಿದ್ದಳು. ಸರ್.... ಸರ್... ನೀವೂ ಮೀಡಿಯಾದವರ ಅಂತಾ ಕೇಳಿದಳು. ಹೌದು ಎಂದಾಗ ಆಕೆಗೆ ಖುಷಿ ಜೊತೆಗೆ ಧೈರ್ಯ ಬಂದಂತೆ ಸರ್... ನನಗೆ ನೀವೂ ಸಹಾಯ ಮಾಡುತ್ತೀರಿ ಅಂತ ನಿಮ್ಮ ನಂಬರ್ ಕೊಟ್ಟಿದ್ದಾರೆ. ನೀವೂ ನನಗೆ ಹೆಲ್ಪ್ ಮಾಡಲೇಬೇಕು ಅಂತ ಮಾತನಾಡಲು ಶುರು ಮಾಡಿದ್ದಳು. ನಾನು ಹೋಗಿ ಹೆಣ್ಣು ಮಗಳು ಅಂತ ಮಾತನಾಡಲು ಶುರು ಮಾಡಿದೆ. 

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭರವಸೆಯ ಬೆಳಕು: ಎಸ್.ಆರ್.ಪಾಟೀಲ

ಚೆಲುವಿನ ಚಿತ್ತಾರದ ಲವ್‌ ಸ್ಟೋರಿ ಹೇಳಿದ ಮೆಜೆಸ್ಟಿಕ್ ಗೆಳತಿ: ಆ ಗೆಳತಿ ಊರು ಬಂದು ಬಿಟ್ಟು ದಾವಣಗೆರೆ ಜಿಲ್ಲೆ ಬಳಿಯ ಒಂದು ಚಿಕ್ಕ ಹಳ್ಳಿ.. ಚಿತ್ರದುರ್ಗದ ಮೂಲದ ಯುವಕನೊಂದಿಗೆ ಆಕೆ ಎಸ್ ಎಸ್ ಎಲ್ ಸಿ ಓದುವಾಗ ಲವ್ ಮಾಡಿ ಆಕೆ ಮನೆಯವರ ವಿರೋಧದೊಂದಿಗೆ ಮದುವೆ ಆಗಿದ್ದಳು. ಅದು ಅಂತರಜಾತಿ ವಿವಾಹ. ಆರಂಭದಲ್ಲಿ ಯುವಕನ ಮನೆಯವರು ಮದುವೆಗೆ ವಿರೋಧ ಮಾಡಿದ್ರು. ಆದ್ರೂ ಎಲ್ಲವೂ ಆಗಿ ಹೋಗಿದೆ ಅಂತ ಸುಮ್ಮನೇ ಆಗಿದ್ರು. ಯುವಕ ಮದುವೆ ಆಗಿದ ಒಂದು ವರ್ಷದಲ್ಲಿ ಆ ದಂಪತಿಗೆ ಒಂದು ಗಂಡು ಮಗು ಆಯ್ತು..ಮಗು ಆದ ಬಳಿಕ ಕುಟುಂಬದಲ್ಲಿ ‌ಅತ್ತೆ- ಸೊಸೆ ನಡುವೆ ಜಗಳ ಶುರುವಾಯ್ತು‌. ಇತ್ತ ಯುವಕ ಕುಡಿತದ ಚಟಕ್ಕೆ ಬಿದ್ದು ನಿತ್ಯವೂ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದ, ಈಗ ತವರು ಮನೆಗೆ ಹೋಗಲು ಆಗದೇ ಗಂಡನ ಮನೆಯಲ್ಲಿ ನರಕಯಾತನೆ ಅನುಭವಿಸುತ್ತಾ ಆ ಯುವತಿ ಜೀವನ ನಡೆಸಿದ್ದಳು. 

ಹೀಗೆ ಆತ ಕುಡಿದು ಕಾಯಿಲೆಗೆ ಗುರಿಯಾಗಿ ಈಕೆಗೆ ಎರಡು ಮಕ್ಕಳು ಕೊಟ್ಟು ಪ್ರಾಣಬಿಟ್ಟ.. ಇತ್ತ ಅತ್ತೆ ಸಹ ನಿನ್ನಿಂದಲ್ಲೇ ನನ್ನ ಮಗ ಸತ್ತ ಅಂತ ನಿತ್ಯವೂ ಕಿರುಕುಳ ನೀಡಲು ಶುರು ಮಾಡಿದ್ದಳು. ಅಲ್ಲದೇ ಮನಬಂದಂತೆ ಸೊಸೆಗೆ ಹೊಡೆದು ಚಿತ್ರಹಿಂಸೆ ನೀಡಲು ಶುರು ಮಾಡಿದ್ದಳು. ಇನ್ನೂ 21-22 ವರ್ಷದ ಯುವತಿಗೆ ಜೀವನವೇ ನರಕವಾಯ್ತು.‌ ಮನೆಯಲ್ಲಿ ಕಡುಬಡತನ, ಕೈಯಲ್ಲಿ ಎರಡು ಚಿಕ್ಕ ಗಂಡು ಮಕ್ಕಳು. ನಿತ್ಯವೂ ಅತ್ತೆಕಾಟ ಅಯ್ಯೋ ವಿಧಿಯೇ ನೀನು ಎಷ್ಟು ಕ್ರೂರಿ ನನ್ನ ಹಣೆಬರಹ ಹೀಗೆ ಆಯ್ತು ಅಂತ ನಿತ್ಯವೂ ಕಣ್ಣಿರು ಹಾಕುತ್ತಾ ಜೀವನ ನಡೆಸಿದ್ದಳು.‌  ಹೀಗೆ ಒಂದು ದಿನ ಪಕ್ಕದ ಮನೆಯವರೊಂದಿಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಲಸಕ್ಕೆ ಹೋಗಬೇಕು ಅಂತ ನಿರ್ಧಾರ ‌ಮಾಡಿದ್ದಳು.

ಓದಿದ್ದು 10ನೇ ಕ್ಲಾಸ್ ಫೇಲ್: ಆ ಯುವತಿಗೆ ಅಪ್ಪ- ಅಮ್ಮ ಕೂಲಿ ಕೆಲಸ ಮಾಡಿದ್ದರು. ಮಗಳಿಗೆ ಖಾಸಗಿ ಶಾಲೆಗೆ ದಾಖಲು ಮಾಡಿದ್ರು. ಆದ್ರೆ ಓದಬೇಕಾದ ವಯಸ್ಸಿನಲ್ಲಿ ಮಗಳು ರೋಡ್ ನ ರೋಮಿಯೊ ಮಾತಿಗೆ ಮರಳಾಗಿ ಲವ್ ಮಾಡಿ ಮದುವೆ ಆಗಿ 10ನೇ ಕ್ಲಾಸ್ ಫೇಲ್ ಆಗಿದ್ದಳು. ಈಗ ಸಂಸಾರದ ಬಂಡಿ ಸಾಗಿಸಬೇಕಾಗಿದೆ. ಗಂಡ ಸತ್ತು ಹೋದ ಚಿಕ್ಕ ‌ಮಕ್ಕಳು, ನಿತ್ಯ ಕಿರುಕುಳ ನೀಡುವ ವಯಸ್ಸಾದ ಅತ್ತೆ. ತವರು ಮನೆಯವರ ಸಂಪರ್ಕ ಇಲ್ಲ. ದಾರಿ ಯಾವುದು ಎಂದು ತಿಳಿಯದೇ ಪಕ್ಕದ ಮನೆಯವರ ಜೊತೆಗೆ ರೈಲು ಹತ್ತಿ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನಲ್ಲಿ ಯಾರದೋ ಸಹಾಯದೊಂದಿಗೆ ಚಿಕ್ಕ ಮಕ್ಕಳಿಗೆ ನೋಡಿಕೊಳ್ಳುವ ಕೆಲಸವೂ ಸಿಕ್ಕಿತ್ತು. ತಿಂಗಳಿಗೆ 12 ಸಾವಿರ ರೂ. ಆ ಮನೆಯಲ್ಲೇ ವಾಸ..ಊಟವೂ  ಉಚಿತವಾಗಿತ್ತು.‌ ತಿಂಗಳು ಪೂರ್ತಿ ದುಡಿದು ಅತ್ತೆಗೆ ಹಣ ಖಾತೆಗೆ ಜಮಾ ಮಾಡಬೇಕಾಗಿತ್ತು. ಆ ಹಣ ಜಮಾವಾದ್ರೆ ಆ ಅತ್ತೆ ಆ ಚಿಕ್ಕ ಮಕ್ಕಳಿಗೆ ಊಟ ಹಾಕುತ್ತಿದ್ದಳಂತೆ... ಹೀಗೆ ಎರಡು- ಮೂರು ವರ್ಷಗಳ ಆಗಿ ಹೋಗಿವೆ. ಸೊಸೆ ದುಡಿದ ಹಣ ಹಾಕಬೇಕು. ಅತ್ತೆ ಊರಿನಲ್ಲಿ ಮಕ್ಕಳಿಗೆ ನೋಡಿಕೊಂಡು ನಿತ್ಯವೂ ಕುಡಿದು ಕುಪ್ಪಳಿಸುತ್ತಿದ್ದಳು. ಈ ವಿಚಾರ ತಿಳಿದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದ ಆಕೆ ಅತ್ತೆ ನನ್ನ ಮಕ್ಕಳನ್ನ ನನಗೆ ಕೊಡು ಅತ್ತ ಮನವಿ ಮಾಡಿದ್ದಾಳೆ. ಈ ವೇಳೆ ಅತ್ತೆ- ಸೊಸೆ ಜಗಳ ಕೂಡ ಮಾಡಿಕೊಂಡಿದ್ದಾರೆ. ಜೊತೆಗೆ ಗ್ರಾಮದಲ್ಲಿ ನ್ಯಾಯ ಪಂಚಾಯತಿ ಸಹ ನಡೆದಿದೆ. ಆದ್ರೂ ಮಕ್ಕಳಿಗೆ ಕೊಡಲು ಅತ್ತೆ ಹಿಂದೇಟು ಹಾಕಿದ್ದಾಳೆ. ಆ ಆಕೆ ಫೋನ್ ಮಾಡಿದೇ ನನಗೆ.

ಅತ್ತೆ- ಸೊಸೆ ಜಗಳದಲ್ಲಿ ನಾನೇನು ಮಾಡಲಿ: ಅದು ಕುಟುಂಬದ ಸಮಸ್ಯೆ.. ನಾನು ಒಬ್ಬ ಪತ್ರಕರ್ತ.. ನನ್ನ ವ್ಯಾಪ್ತಿಯ ಜಿಲ್ಲೆಯೂ ಅಲ್ಲ. ನಾನು ಎರಡು- ಮೂರು ಸಲ ಫೋನ್ ಕಟ್ ಮಾಡಿದೆ. ಆದ್ರೂ ಆಕೆ ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿ ಒಂದೇ ಮಾತು ಹೇಳುವಳು. ಸರ್..ನನ್ನ ಮಕ್ಕಳನ್ನ ನನಗೆ ಕೊಡಿಸಿ..ನನ್ನ ಅತ್ತೆ ನನ್ನ ಮಕ್ಕಳಿಗೆ ಕೊಡುತ್ತಿಲ್ಲ. ನನಗೆ ಯಾರು ಸಹಾಯ ಮಾಡುವರು ಇಲ್ಲ..ನಾನು ತುಂಬಾ ಸಂಕಷ್ಟದಲ್ಲಿ ಇದ್ದೇನೆ. ನಾನು ಏನ್ ಹೇಳಬೇಕು ಅಂತ ತಿಳಿಯದೇ..ನಿಮಗೆ ಫೋನ್ ಮಾಡುತ್ತಿರುವೆ. ನಿಮ್ಮ ಜಿಲ್ಲೆಯಲ್ಲಿ ನಮ್ಮ ವರದಿಗಾರರು ಇದ್ದಾರೆ ಅಂತ ಸಹ ಹೇಳಿದೆ. ಆದ್ರೂ ಆಕೆ ಪದೇ ಪದೇ ಕಾಲ್ ಮಾಡಲು ಶುರು ಮಾಡಿದ್ದಳು.‌ ನಾನು  ಆವತ್ತು ಆಕೆಯ ಫೋನ್ ಕಟ್ ಮಾಡಿ ದಯವಿಟ್ಟು ನನಗೆ ಕಾಲ್ ಮಾಡಿ ತೊಂದರೆ ‌ನೀಡಬೇಡಿ ಎಂದು ಹೇಳಿದೆ. ಆದ್ರೂ ಆಕೆ ಮತ್ತೆ ಮಾರನೇ ದಿನ ಫೋನ್ ಮಾಡಿದ್ದಳು. ಹಲೋ ಸಹ ಹೇಳದೇ ಕಣ್ಣೀರು ಹಾಕಲು ಶುರು ಮಾಡಿದ್ದಳು. ‌ಆಗ ಇದು ನಿಜವಾದ ಪ್ರಕರಣ ಇರಬೇಕು ಅಂತ ನನಗೆ ಅನ್ನಿಸಿತ್ತು.‌ಕೂಡಲೇ ನನಗೆ ನೆನಪಿಗೆ ಬಂದಿದ್ದು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ.. ಮಕ್ಕಳ ವಯಸ್ಸು ಕೇಳಿದೆ. ಆಗ ಆಕೆ ಹೇಳಿದ್ದು ಹಿರಿ ಮಗನಿಗೆ 9 ವರ್ಷ, ಕಿರಿ ಮಗನಿಗೆ 7 ವರ್ಷ ಅಂತ ಹೇಳಿದ್ದಳು.‌ ಈಗ ಎಲ್ಲಿ ಇರುವುದು ಅಂತ ಕೇಳಿದೆ. ನಾನು ಬೆಂಗಳೂರಿನ ಶಿವಾಜಿ ನಗರದಲ್ಲಿ ಇದ್ದೇನೆ ಸರ್..ಅಂದಾಗ ನೀವೂ ಎಂಎಸ್ ಬಿಲ್ಡಿಂಗ್ ಬಳಿ ಮಹಿಳಾ ಮತ್ತು ಮಕ್ಕಳ ‌ಕಲ್ಯಾಣ ಇಲಾಖೆ ಇದೆ. ಅಲ್ಲಿ ಹೋಗಿ ಅಧಿಕಾರಿಗಳೇ ಭೇಟಿ ಆಗಿ ಅಂತ ಹೇಳಿದೆ. ಆಗ ಆಕೆ ಸರಿ ಸರ್ ಅಂತ ಫೋನ್ ಕಟ್ ಮಾಡಿದ್ದಳು. ನಾನು ನನ್ನ ಕೆಲಸ ಮುಗಿತ್ತು ಅಂತ ನಿಟ್ಟುಸಿರು ಬಿಟ್ಟೆ..

ತಿಂಗಳ ಬಳಿಕ ಬಂತೂ ಆ ಹೆಣ್ಣು ‌ಮಗಳ ಫೋನ್: ಮಹಿಳಾ ಮತ್ತು ‌ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಹೋಗಲು ‌ನಾನು ವಿಳಾಸ ನೀಡಿ ಫೋನ್ ‌ಕಟ್ ಮಾಡಿದೆ. ಆ ಮಹಿಳೆ ಅಧಿಕಾರಿಗಳಿಗೆ ಭೇಟಿಯಾಗಿ ನನ್ನ ನೋವು ಹೇಳಿಕೊಂಡು ಇಬ್ಬರು ಮಕ್ಕಳನ್ನ ಅತ್ತೆಯಿಂದ ಬಿಡಿಸಿಕೊಂಡು ತವರು ಮನೆಯವರ ಕೈ- ಕಾಲು ಬಿದ್ದು.. ತವರಿಗೆ ಸೇರಿದ್ದಳು.‌ ಅಲ್ಲದೇ ಆ ಮಕ್ಕಳಿಗೆ ತವರು ಮನೆಯಲ್ಲಿಯೇ ಶಾಲೆಗೆ ದಾಖಲು ‌ಮಾಡಲು ಮುಂದಾಗಿದ್ದಳು. ಆಗಲೂ ಸಹ ಆಕೆಯ ಬಳಿಯಿಲ್ಲ ಯಾವುದೇ ದಾಖಲೆ..ಆಧಾರ್ ಕಾರ್ಡ್ ಇಲ್ಲ..ಬ್ಯಾಂಕ್ ಖಾತೆ ಇಲ್ಲ. ವೋಟರ್ ಐಡಿ ಸಹ ಆಕೆಯ ಬಳಿ ಇರಲಿಲ್ಲ.. ನನಗೆ ಅನ್ನಿಸಿತ್ತು.‌ ಇಷ್ಟು ಸಮಸ್ಯೆ ಇರುವವರು ಇರುತ್ತಾರಾ ಅಂತ..ಆಕೆ ಬೆಂಗಳೂರಿನ ಕೆಲಸ ಬಿಟ್ಟು.. ತವರು ‌ಮನೆಯಲ್ಲಿ ಮಕ್ಕಳಿಗೆ ಶಾಲೆಗೆ ಸೇರಿಸಲು ಓಡಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಳು. ಆಗ ನನಗೆ ಎಲ್ಲವೂ ಸರಿಯಾಗಿ ಆಗುತ್ತೆ ಧೈರ್ಯವಾಗಿ ಇರಿ ಎಂದು ಹೇಳಿದೆ.‌ ಮತ್ತೆ ಅಲ್ಲಿ ಇಲ್ಲಿ ಅವರಿಗೆ- ಇವರಿಗೆ ಅಪ್ಪ- ಅಣ್ಣ ಅಂತ ಹೇಳಿ ತವರು ಮನೆ ವಿಳಾಸದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿ ಶಾಲೆಗೆ ದಾಖಲು ಮಾಡಿ, ಮತ್ತೆ ಜೀವನ ಬಂಡಿ ಸಾಗಿಸಲು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು.

ಬೆಂಗಳೂರಿನಿಂದ ಕರೆ ಬಂತೂ ನನ್ನ ಊರಿಗೆ: ಪದೇ ಪದೇ ಫೋನ್ ಮಾಡಿ ಮಕ್ಕಳ ಬಗ್ಗೆ ತನ್ನ ಸಂಸಾರದ ಬಗ್ಗೆ ಹೇಳಲು ಶುರು ಮಾಡಿದ್ದಳು. ನಾನು ಫ್ರೀ ಇದ್ರೆ ಫೋನ್ ತೆಗೆಯುತ್ತಿದೆ. ಇಲ್ಲ ಅಂದ್ರೆ ಫೋನ್ ಪಿಕ್ ಮಾಡುತ್ತಿರಲಿಲ್ಲ. ಆದ್ರೂ ಆಕೆ ಫೋನ್ ಮಾಡಿ ನನ್ನ ಜೀವನದ ಕಥೆ ಹೇಳಲು ಶುರು ಮಾಡುತ್ತಿದ್ದಳು. ನನ್ನ ಮಕ್ಕಳಿಗೆ ಒಳ್ಳೆಯ ಪ್ರಜೆಯಾಗಿ ಮಾಡಬೇಕು ಸರ್. ನಾನು ಮಾಡಿದ ತಪ್ಪು ಈಗ ನನಗೆ ಅರಿವು ಆಗಿದೆ. ನನ್ನಂತೆ ಈ ಭೂಮಿ ಮೇಲೆ ಯಾವ ಹೆಣ್ಣಿಗೂ ಆಗಬಾರದು ಅಂತ ನೋವು ವ್ಯಕ್ತಪಡಿಸುತ್ತಿದ್ದಳು. 

ಸಂಡೂರು ಬೆಟ್ಟಗಳಲ್ಲಿನ ಗುಹೆಯೊಳಗೆ ನಿಧಿ ಶೋಧ: ಹೊಸ ಟೆಕ್ನಾಲಜಿ ಬಳಸಿ ಖದೀಮರಿಂದ ಶೋಧನೆ

ಕೊನೆಗೂ ಮೆಜೆಸ್ಟಿಕ್ ನಲ್ಲಿ ಭೇಟಿಯಾದಳು ದುರ್ಗಾದ ಗೆಳತಿ: ಸುಮಾರು 3 ವರ್ಷಗಳ ಬಳಿಕ ಆಕೆ ನನಗೆ ಭೇಟಿಯಾಗಿ ಅಂತ ಮನವಿ ಮಾಡಿದ್ದಳು. ಆದ್ರೆ ನಾನು ನನ್ನ ಊರು ಬಿಟ್ಟು ಬೆಂಗಳೂರಿಗೆ ಬರುವುದು ಕಚೇರಿ ಕೆಲಸ ಮಾತ್ರ. ಹೀಗಾಗಿ ಬೆಂಗಳೂರಿಗೆ ನಾನು ಬಂದಾಗ ಭೇಟಿ ಆಗೋಣ ಅಂತ ಹೇಳಿದೆ. ಅದಕ್ಕೆ ಅವಳು ಸಹ ಒಪ್ಪಿದ್ದಳು. ಇತ್ತ ಇಬ್ಬರು ಮಕ್ಕಳಿಗೆ ತವರು ಮನೆಯಿಂದ ಕರೆದುಕೊಂಡು ಬಂದು ಮಠವೊಂದರಲ್ಲಿ ಸೇರಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾಳೆ. ಆ ಮಹಿಳೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದಾಳೆ. ನಾನು ಬೆಂಗಳೂರಿಗೆ ಬರುವಾಗ ಹೇಳಿದೆ. ಆಕೆ ನಾನು ಮೆಜೆಸ್ಟಿಕ್ ನ ಬಸ್ ನಿಲ್ದಾಣದ ಹತ್ತಿರ ಇಬ್ಬರು  2 ನಿಮಿಷ ಭೇಟಿಯಾಗಿ ಮಾತುಕತೆ ಮಾಡಿ ನಾನು ನಮ್ಮೂರಿನ ಬಸ್ ಹತ್ತಿದೆ. ಆಕೆ ಆಟೋ ಹತ್ತಿ ಹೋಗಿ ಬಿಟ್ಟಳು. ಅದೇ ಆಕೆ ಮತ್ತು ನನ್ನ ಕೊನೆಯ ಭೇಟಿ. ಆ ಬಳಿಕ ಆಕೆಯ ಫೋನ್ ಈಗ ಸ್ವಿಚ್ಛ ಆಪ್ ಆಗಿದೆ.  ಈಗ ನನಗೆ ಆಕೆ ಹೇಳಿದ ನೋವಿನ ಕಥೆಗಳೇ ಪದೇ ಪದೇ ನೆನಪಿಗೆ ಬರುತ್ತವೆ. ಅದು ಏನೇ ಇರಲಿ..ಆಕೆ ಎಲ್ಲಿಯೇ ಇರಲಿ..ಆಕೆ ಜೀವನ ಸುಖವಾಗಲಿ.

Latest Videos
Follow Us:
Download App:
  • android
  • ios