ಮಕ್ಕಳಿಗೆ ಓದಿಸೋ ಕೆಲ್ಸ ಬಿಟ್ಟು, ಮತ್ಸ್ಯಕನ್ಯೆಯಾದ ಟೀಚರ್!
ಕೈತುಂಬಾ ಸಂಬಳ ಸಿಗುವ ಶಿಕ್ಷಕ ಉದ್ಯೋಗ ತೊರೆದು ಮಹಿಳೆ ಆಯ್ದುಕೊಂಡದ್ದು ಮತ್ಸ್ಯಕನ್ಯೆಯನ್ನು. ಏನಿದರ ಮರ್ಮ?
ಇಷ್ಟಪಡುವ ಕೆಲಸವನ್ನು ಆರಿಸಿಕೊಂಡರೆ, ಜೀವನದಲ್ಲಿ ನೀವು ಎಂದಿಗೂ ಬೇಸರ ಪಡುವ ಅಗತ್ಯವೇ ಬರುವುದಿಲ್ಲ. ಏಕೆಂದರೆ ಅದು ನಿಮಗೆ ಕೆಲಸವೇ ಎನ್ನಿಸುವುದಿಲ್ಲ. ಆದರೆ ಇಷ್ಟ ಪಡುವ ಕೆಲಸವನ್ನು ಪಡೆಯುವ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಸಂಬಳಕ್ಕಾಗಿ ಯಾವುದೋ ಒಂದು ಕೆಲಸಕ್ಕೆ ಸೇರುವ ಅನಿವಾರ್ಯತೆ ಇರುತ್ತದೆ ಎನ್ನುವ ಮಾತಿದೆ. ಕೆಲವರು ತಾವು ಇಷ್ಟ ಪಡುವ ಉದ್ಯೋಗ ಸಿಕ್ಕರೆ, ಅದರ ನೆಮ್ಮದಿಗಿಂತ ಬೇರೊಂದಿಲ್ಲ ಎಂದು ಲಕ್ಷಾಂತರ ರೂಪಾಯಿ ಬರುವ ಸಂಬಳದ ಉದ್ಯೋಗವನ್ನೂ ತೊರೆದು ಹೋಗುವವರಿದ್ದಾರೆ. ಅಂಥವರಲ್ಲಿ ಒಬ್ಬ ಟೀಚರ್ (Teacher) ಈಗ ಸಕತ್ ಸುದ್ದಿಯಾಗುತ್ತಿದ್ದಾರೆ. ಇದು ಇಂಗ್ಲೆಂಡ್‌ನ ಮಹಿಳಾ ಟೀಚರ್ ಕಥೆ. ಈಕೆ ಕೈತುಂಬಾ ಸಿಗುವ ಉದ್ದಯೋಗವನ್ನು ತೊರೆದು ತಮ್ಮಿಷ್ಟದ ಉದ್ಯೋಗವನ್ನು ಅರಸಿ ಹೊರಟು ಸಕತ್ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಇವರು ಬೇರೆ ಉದ್ಯೋಗ ಹುಡುಕಿ ಹೊರಟರೆ ಅದರಲ್ಲೇನು ವಿಶೇಷ ಅಂತೀರಾ? ಅಲ್ಲೇ ಇರುವುದು ವಿಶೇಷ.
ಅದೇನೆಂದರೆ, ಇಂಗ್ಲೆಂಡ್‌ನ ಇಂಗ್ಲಿಷ್ ವಿಷಯದ ಈ ಲೇಡಿ ಟೀಚರ್, ಇಟಲಿಯಲ್ಲಿ ಪೂರ್ಣ ಸಮಯದ ವೃತ್ತಿಪರ ಮತ್ಸ್ಯಕನ್ಯೆಯಾಗಲು ಶಿಕ್ಷಕಿ ವೃತ್ತಿಯನ್ನು ತೊರೆದವರು! ಹೌದು. ನೀವು ಸರಿಯಾಗಿಯೇ ಓದಿದ್ದೀರಿ. 2016ರಿಂದ ಇಂಗ್ಲೆಂಡ್ ಸಿಸಿಲಿಯಲ್ಲಿ ಶಿಕ್ಷಕಿಯಾಗಿದ್ದ 33 ವರ್ಷದ ಮಾಸ್ ಗ್ರೀನ್ (Moss Green) ಎಂಬ ಶಿಕ್ಷಕಿಗೆ ತಾವು ಮರ್ಮೇಡ್ ಅರ್ಥಾತ್ ಮತ್ಸ್ಯಕನ್ಯೆಯಾಗುವ ಬಯಕೆ ಉಂಟಾಯಿತು. ಇದೇ ಕಾರಣಕ್ಕೆ ಅವರು ಶಿಕ್ಷಕಿ ವೃತ್ತಿ ತೊರೆದು ಮತ್ಸ್ಯಕನ್ಯೆಯಾಗಿದ್ದಾರೆ.
ನಟಿ ಅದಿತಿ ಹೇರ್ಕಟ್ ಸೂಪರ್ರೋ, ಪನ್ನೀರ್ ರೆಸಿಪಿ ಸೂಪರ್ರೊ? ಪತಿ ರಿಯಾಕ್ಷನ್ ಹೇಗಿತ್ತು?
ಅಷ್ಟಕ್ಕೂ ಶಿಕ್ಷಕಿಗೆ ಮತ್ಸ್ಯಕನ್ಯೆಯಾಗುವ ಆಸೆ ಹುಟ್ಟಿದ್ದು, ಇವರು ಒಮ್ಮೆ ಕಡಲತೀರದಲ್ಲಿ ಸಮುದ್ರದಿಂದ ಹೊರಹೊಮ್ಮುವ ‘ಮಾಂತ್ರಿಕ ಮತ್ಸ್ಯಪುರುಷ’ ವೇಷಧಾರಿ ವ್ಯಕ್ತಿಯನ್ನು ವೀಕ್ಷಿಸಿದಾಗಲಂತೆ. ಈ ಸಂದರ್ಭದಲ್ಲಿ ಆಕೆಗೂ ಇದೇ ವೃತ್ತಿ ಮಾಡಬೇಕು ಎನಿಸಿದೆ. ಈ ವೃತ್ತಿ ಮೋಡಿ ಮಾಡುತ್ತದೆ ಎನ್ನುವುದನ್ನು ಅರಿತುಕೊಂಡ ಮಾಸ್, ಅದನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಸೆಯಿಂದ ಫುಲ್ಟೈಮ್ ಮತ್ಸ್ಯಕನ್ಯೆಯಾಗಲು (Full Time Mermaid) ವೃತ್ತಿ ತೊರೆದಿದ್ದಾರೆ. ಮತ್ಸ್ಯಕನ್ಯೆ ಈಜುವಾಗ ಬಾಲ ಇರಬೇಕಾಗುತ್ತದೆ. ಈ ಬಾಲ ಧರಿಸುವುದು ತಮಗೆ ತುಂಬಾ ಖುಷಿಕೊಡುತ್ತಿದೆ ಎನ್ನುತ್ತಾರೆ ಮಾಸ್. ಮತ್ಸ್ಯಕನ್ಯೆಯ ವೇಷ ಧರಿಸುವವರು ಮೀನಿನ ಬಾಲದ ರೀತಿಯ ಬಟ್ಟೆ ಧರಿಸಿ ಈಜುಬೇಕು. ಇದು ಪ್ರಕೃತಿ ಮತ್ತು ಸಾಗರದೊಂದಿಗೆ ಆಳವಾದ ಸಂಪರ್ಕವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ ಎನ್ನುವ ಗ್ರೇಸ್, ಈಗ ಅದನ್ನು ಫುಲ್ಟೈಮ್ ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಮೊದಲಿಗೆ ಇದನ್ನು ಕೇವಲ ಟೈಂ ಪಾಸ್ ಕೆಲಸ ಎಂದು ಎಣಿಸಲಾಗಿತ್ತು. ಶೀಘ್ರದಲ್ಲೇ ವೃತ್ತಿಪರರಾಗಿ ರೂಪಾಂತರಗೊಂಡರು. ವೃತ್ತಿಪರ ಮತ್ಸ್ಯಕನ್ಯೆಯಾಗಲು, ಅವರು ನೀರೊಳಗಿನ ಉಸಿರಾಟವನ್ನು ಹಿಡಿದಿಟ್ಟುಕೊಳ್ಳುವ ಕಲೆ, ಡ್ರೈವಿಂಗ್ ತಂತ್ರಗಳು ಮತ್ತು ಮೋಡಿಮಾಡುವ ತಂತ್ರಗಳನ್ನು ಕರಗತ ಮಾಡಿಕೊಳ್ಳಲು ತರಬೇತಿ ಪಡೆದರು. ನಾನು ವೃತ್ತಿಪರ ಮತ್ಸ್ಯಕನ್ಯೆಯಾಗಿ ತರಬೇತಿಯನ್ನು (Training) ಪಡೆಯಬೇಕಾಗಿತ್ತು, ಏಕೆಂದರೆ ಉಸಿರನ್ನು ನೀರಿನ ಅಡಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಮತ್ತು ಚಮತ್ಕಾರಗಳನ್ನು ಪ್ರದರ್ಶಿಸುವುದರ ಹೊರತಾಗಿ ಧುಮುಕುವುದು ಇತ್ಯಾದಿ ಕಲಿಯಬೇಕಿತ್ತು. ಇವೆಲ್ಲವನ್ನೂ ನಾನು ಕಲಿತೆ, ಇವುಗಳ ತರಬೇತಿ ಪಡೆದೆ ಎಂದಿದ್ದಾರೆ ಮಾಸ್.
ದೇವಸ್ಥಾನಗಳಿಗೆ ಸಾರಾ ಅಲಿ ಭೇಟಿ: ನೀವು ಮುಸ್ಲಿಂ ಧರ್ಮಕ್ಕೆ ಕಳಂಕ ಅಂದೋರಿಗೆ ನಟಿ ಉತ್ತರ
“ಯಾವುದೇ ಸಮಯದಲ್ಲಿ ನಾನು ಮತ್ಸ್ಯಕನ್ಯೆಯ ಕೆಲಸವನ್ನು ನಿಲ್ಲಿಸುವುದನ್ನು ಅಥವಾ ವೃತ್ತಿಜೀವನವನ್ನು ಬದಲಾಯಿಸುವುದನ್ನು ಮಾಡಲಾರೆ. ಇದು ನನಗೆ ಸಂಪೂರ್ಣ ಖುಷಿ ಕೊಟ್ಟಿದೆ ಎಂದಿದ್ದಾರೆ. ವಾಸ್ತವವಾಗಿ, ಮೊದಲಿನಂತೆ ಗಳಿಕೆ ಇಲ್ಲ. ಆದರೆ ತಲೆಕೆಡಿಸಿಕೊಳ್ಳುವುದಿಲ್ಲ. ಬದುಕಲು ಇಷ್ಟು ಸಾಕು ಎನ್ನುವ ಮಾಸ್. ಭವಿಷ್ಯದಲ್ಲಿ ಏನಾಗಬಹುದು ಎಂದು ಯಾರಿಗೆ ತಿಳಿದಿದೆ ಎಂದು ಪ್ರಶ್ನಿಸುತ್ತಾರೆ. ಸದ್ಯಕ್ಕೆ, ನಾನು ಮತ್ಸ್ಯಕನ್ಯೆಯ ಪ್ರಪಂಚದಲ್ಲಿ ಸ್ವರ್ಗ ಅನುಭವಿಸುತ್ತಿದ್ದೇನೆ ಎಂದಿದ್ದಾರೆ.