ಕುಡಿದಿಲ್ಲ ಅಂದ್ರೂ ಕೇಳ್ತಿರಲಿಲ್ಲ ಡಾಕ್ಟರ್, ದೇಹಕ್ಕೆ ಆಲ್ಕೋಹಾಲ್ ಸೇರ್ತಿದ್ದಿದ್ದು ಹೇಗೆ?
ಆಕೆ ಒಂದು ಹನಿ ಆಲ್ಕೋಹಾಲ್ ಕೂಡ ಕುಡಿದಿರಲಿಲ್ಲ. ಆದ್ರೂ ಕುಡಿದ ನಶೆಯ ಅನುಭವ ಆಗ್ತಿತ್ತು. ವೈದ್ಯರ ಬಳಿ ಹೋದ್ರೆ ನೀವು ಡ್ರಿಂಕ್ ಮಾಡಿದ್ದೀರಿ ಎನ್ನುತ್ತಿದ್ರು. ಕೊನೆಗೂ ಈ ಹಗ್ಗಜಗ್ಗಾಟಕ್ಕೆ ಉತ್ತರ ಸಿಕ್ತು.
ವ್ಯಕ್ತಿಯೊಬ್ಬನ ಹೊಟ್ಟೆಗೆ ಎರಡು – ಮೂರು ಪೆಗ್ ಹೋಗ್ತಿದ್ದಂತೆ ಆತ ಪ್ರಪಂಚ ಮರೆಯುತ್ತಾನೆ. ಆತನ ಮಾತು ಬದಲಾಗುತ್ತದೆ. ತಲೆ ತಿರುಗುತ್ತೆ. ಯಾರಾದ್ರೂ ಆತ ಡ್ರಿಂಕ್ ಮಾಡಿದ್ದಾನೆ ಅಂತ ತಕ್ಷಣ ಹೇಳ್ತಾರೆ. ಈ ಮಹಿಳೆಗೂ ಕುಡಿದಾಗ ಆಗ್ತಿದ್ದ ಅನುಭವವೇ ಆಗ್ತಿತ್ತು. ಒಂದು ಬಾರಿ ತಲೆ ತಿರುಗಿದ್ರೆ ಮತ್ತೊಂದು ಬಾರಿ ಮಾತು ತೊದಲುತ್ತಿತ್ತು. ಹೀಗಾಗ್ತಿದ್ದಂತೆ ಮಹಿಳೆ ಆಸ್ಪತ್ರೆಗೆ ಓಡಿ ಬರ್ತಿದ್ದಳು. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು, ನೀವು ಡ್ರಿಂಕ್ ಮಾಡಿದ್ದೀರಿ ಅಂತ ಹೇಳ್ತಿದ್ದರು. ಅತ್ತ ಅಚ್ಚರಿಗೊಳಗಾಗ್ತಿದ್ದ ಮಹಿಳೆ, ನಾನು ಆಲ್ಕೋಹಾಲ್ ಮುಟ್ಟೇ ಇಲ್ಲ ಎನ್ನುತ್ತಿದ್ದಳು. ಒಂದೆರಡು ಬಾರಿಯಲ್ಲ ಎರಡು ವರ್ಷದಲ್ಲಿ ಏಳಕ್ಕೂ ಹೆಚ್ಚು ಬಾರಿ ಮಹಿಳೆ ಆಸ್ಪತ್ರೆಗೆ ಬಂದಿದ್ದಳು. ಆಕೆ ಸಮಸ್ಯೆ ಆಲಿಸುತ್ತಿದ್ದ ವೈದ್ಯರು ಪ್ರತಿ ಬಾರಿ ಅದನ್ನೇ ಹೇಳಿ ಕುಳುಹಿಸುತ್ತಿದ್ದರು.
ಮಹಿಳೆ ಮಾತ್ರ ಒಂದೇ ಒಂದು ಬಾರಿ ಆಲ್ಕೋಹಾಲ್ (Alcohol) ಸೇವನೆ ಮಾಡಿರಲಿಲ್ಲ. ಮಹಿಳೆ ಸಮಸ್ಯೆಯನ್ನು ಮತ್ತಷ್ಟು ಆಳವಾಗಿ ಆಲಿಸಿದ ವೈದ್ಯರು (Doctor) ಪರೀಕ್ಷೆಗೆ ಮುಂದಾದ್ರು. ಆಗ ಸಿಕ್ಕ ಮಾಹಿತಿ ಅವರನ್ನು ದಂಗಾಗಿಸಿತ್ತು.
ಸ್ತ್ರೀವಾದದಿಂದ ಸಮಾಜ ಹಾಳಾಗಿದೆ; ಮಹಿಳೆಯು ಮನೆ ಮಕ್ಕಳ ಕಾಳಜಿ ವಹಿಸಬೇಕು ಎಂದ ನೋರಾ ಫತೇಹಿ
ಟೊರೊಂಟೊ (Toronto) ದ 50 ವರ್ಷಗಳ ಮಹಿಳೆ ಸತತ ಎರಡು ವರ್ಷ ಈ ಸಮಸ್ಯೆಯಿಂದ ಬಳಲಿದ್ದಳು. ಆಗಾಗ ತಲೆ ಸುತ್ತಿದ ಅನುಭವ ಆಗ್ತಿತ್ತು. ಸರಿಯಾಗಿ ಮಾತನಾಡಲು ಸಾಧ್ಯವಾಗ್ತಿರಲಿಲ್ಲ. ವೈದ್ಯರ ಬಳಿ ರಕ್ತ ಪರೀಕ್ಷೆ ಮಾಡಿದಾಗ ಆಲ್ಕೋಹಾಲ್ ಇರೋದು ಪತ್ತೆಯಾಗಿತ್ತು. ಆದ್ರೆ ಮಹಿಳೆ ಆಲ್ಕೋಹಾಲ್ ಸೇವನೆ ಮಾಡಿಯೇ ಇರಲಿಲ್ಲ. ಇದ್ರ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ ಮಹಿಳೆಗೆ ಅಪರೂಪದ ಖಾಯಿಲೆ ಇರೋದು ತಿಳಿದುಬಂತು. ಮಹಿಳೆ ಅಪರೂಪದ ಆಟೋ ಬ್ರೂವರಿ ಸಿಂಡ್ರೋಮ್ ದಿಂದ ಬಳಲುತ್ತಿದ್ದಳು.
ಆಟೋ ಬ್ರೂವರಿ ಸಿಂಡ್ರೋಮ್ (auto brewery syndrome) ಎಂದರೇನು? : ಇದೊಂದು ರೀತಿಯ ಖಾಯಿಲೆ. ಹೊಟ್ಟೆಯಲ್ಲಿ ವಾಸಿಸುವ ಶಿಲೀಂಧ್ರಗಳು ಸ್ವತಃ ಆಲ್ಕೋಹಾಲ್ (Alcohol) ಅನ್ನು ಉತ್ಪಾದಿಸುತ್ತವೆ. ಆಲ್ಕೋಹಾಲ್ ಹೊಟ್ಟೆಯಲ್ಲಿ ಉತ್ಪಾದನೆ ಆಗ್ತಿದ್ದಂತೆ, ಆಲ್ಕೋಹಾಲ್ ಸೇವಿಸಿದ ಜನರಂತೆ ಇವರ ವರ್ತನೆ ಬದಲಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿ ಆಲ್ಕೋಹಾಲ್ ಸೇವಿಸಿಲ್ಲ ಎಂದ್ರೂ ಆತನ ದೇಹದಲ್ಲಿ ಆಲ್ಕೋಹಾಲ್ ಕಂಡು ಬರುತ್ತದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಸ್ಟೋನಿ ಬ್ರೂಕ್ ಯೂನಿವರ್ಸಿಟಿ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆ (Sugar) ಸೇವನೆ ಮಾಡುವ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಇದು ಹೆಚ್ಚು ಅಪಾಯಕಾರಿ ಅಲ್ಲದೆ ಹೋದ್ರೂ ಅವರಿಗೆ ಇದ್ರ ಬಗ್ಗೆ ಮಾಹಿತಿ ನೀಡೋದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ವಿಶ್ವದಾದ್ಯಂತ ಕೇವಲ 20 ಜನರು ಮಾತ್ರ ಇಂಥ ಸಮಸ್ಯೆಯಿಂದ ಬಳಲುತ್ತಾರೆಂದು ತಜ್ಞರು ಹೇಳಿದ್ದಾರೆ.
ದೀರ್ಘಾವಧಿಯ ಸಮಯಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಅಪಾಯ!
ಟೊರೊಂಟೊದಲ್ಲಿ ವಾಸವಾಗಿರುವ ಈ ಮಹಿಳೆ ಹೊಟ್ಟೆಯಲ್ಲಿರುವ ಶಿಲೀಂದ್ರ ಕೂಡ ಆಲ್ಕೋಹಾಲ್ ತಯಾರಿಸುತ್ತಿತ್ತು. ಆಕೆ ಸೇವನೆ ಮಾಡಿದ ಕಾರ್ಬೋಹೈಡ್ರೇಟ್ ಆಹಾರ (Corbohydreated Food) ಆಲ್ಕೋಹಾಲ್ ಆಗಿ ಪರಿವರ್ತನೆ ಮಾಡ್ತಿತ್ತು. ಆಕೆ ಏನು ಸೇವನೆ ಮಾಡ್ತಾಳೆ ಎಂಬುದು ಇಲ್ಲಿ ಮುಖ್ಯವಾಗಿತ್ತು. ಒಂದು ತುಂಡು ಕೇಕ್ ಹಾಗೂ ಊಟದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಸೇವಿಸಿದ್ರೂ ಆಲ್ಕೋಹಾಲ್ ಉತ್ಪಾದನೆ ಹೆಚ್ಚಾಗುತ್ತದೆ ಎಂದು ವೈದ್ಯರು ಪತ್ತೆ ಮಾಡಿದ್ರು. ಆಕೆ ಊಟದಲ್ಲಿ ನಿಯಂತ್ರಣ ಮಾಡಿದ್ರೆ ಆಲ್ಕೋಹಾಲ್ ಉತ್ಪಾದನೆ ಕಡಿಮೆ ಆಗ್ತಿತ್ತು. ಹಾಗಾಗಿ ಊಟದಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈಗ ಮಹಿಳೆ ಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.