ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಶಕೀಲಾ!

ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸೂರತ್‌ನಿಂದ ಮುಜಾಫರ್‌ಪುರಗೆ ತೆರಳುತ್ತಿದ್ದ ಅಹ್ಮದಾಬಾದ್-ಬರುನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

woman deliver baby in train, RPF team helps safe delivery akb

ನವದೆಹಲಿ: ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸೂರತ್‌ನಿಂದ ಮುಜಾಫರ್‌ಪುರಗೆ ತೆರಳುತ್ತಿದ್ದ ಅಹ್ಮದಾಬಾದ್-ಬರುನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಗೆ ಹೆರಿಗೆಯಾಗಲು ರೈಲ್ವೆ ಪೊಲೀಸ್ ಪೋರ್ಸ್‌ನ ಮಹಿಳಾ ಸಿಬ್ಬಂದಿ ನೆರವಾಗಿದ್ದಾರೆ. ಮಹಿಳೆ ಅಹ್ಮದಾಬಾದ್‌ ಬರುನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಜಾಫರ್‌ಪುರಕ್ಕೆ ತೆರಳುತ್ತಿದ್ದರು. ರೈಲಿನಲ್ಲಿ ಮಗುವಿಗ ಜನ್ಮ ನೀಡಿದ ಮಹಿಳೆಯನ್ನು ಶಕೀಲಾ ಎಂದು ಗುರುತಿಸಲಾಗಿದೆ. ಸೂರತ್‌ನಿಂದ ಮುಜಾಫರ್‌ಪುರಕ್ಕೆ ತೆರಳುವಾಗ ಮಾರ್ಗಮಧ್ಯೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಿಳೆ ಶಕೀಲಾ ಪತಿ ಈ ಬಗ್ಗೆ ಟಿಕೇಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ನಂತ ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಇಡೀ ರೈಲು ಬೋಗಿಯನ್ನು ಬಟ್ಟೆಗಳಿಂದ ಮುಚ್ಚಿ ಸುಲಭವಾಗಿ ಹೆರಿಗೆ ಮಾಡಲು ಸಹಾಯ ಮಾಡಿದ್ದಾರೆ. ನಂತರ ರೈಲು ಮುಜಾಫರ್‌ ಪುರ ಜಂಕ್ಷನ್‌ ತಲುಪಿದ ನಂತರ ತಾಯಿ ಹಾಗೂ ಮಗು ಇಬ್ಬರನ್ನು ಮುಜಾಫರ್‌ಪುರದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಮಗು ಇಬ್ಬರು ಸುರಕ್ಷಿತರಾಗಿದ್ದಾರೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.


ವಿಮಾನದಲ್ಲಿ ಮಗುವಿಗೆ ಜನ್ಮ
ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಮಗುವಿಗೆ  ಜನ್ಮ ನೀಡಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ಮೇ ತಿಂಗಳಲ್ಲಿ ನಡೆದಿತ್ತು. ಮೇ 17 ರಂದು ಫ್ಲೋರಿಡಾಕ್ಕೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಅಮೆರಿಕಾ ಮೂಲದ ಏರ್‌ಲೈನ್ಸ್ ಆಗಿರುವ ಫ್ರಾಂಟಿಯರ್ ಏರ್‌ಲೈನ್ಸ್‌ ಈ ವಿಚಾರವನ್ನು ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಮಧ್ಯ ಆಗಸದಲ್ಲಿ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅದು ತಿಳಿಸಿತ್ತು.

ವಿಮಾನದ ಅಂಟೆಂಡೆಂಟ್ ಡಿಯಾನಾ ಗೆರಾಲ್ದೊ (Diana Geraldo) ಅವರು ಈ ಮಹಿಳಾ ಪ್ಯಾಸೆಂಜರ್‌ಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದರು ಎಂದು ತಿಳಿದು ಬಂದಿದೆ. ಶಕೆರಿಯಾ ಮಾರ್ಟಿನ್‌ (Shakeria Martin) ಎಂಬುವರೇ ಫ್ಲೈಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಡೆನೆವರ್‌ದಿಂದ (Denver) ಒರ್ಲಾಂಡೊಗೆ (Orlando)ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅನಿರೀಕ್ಷಿತ ಹಾಗೂ ಅವಧಿಪೂರ್ವವೇ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನ ಹತ್ತಿದ ಪ್ರಾರಂಭದಲ್ಲಿ ಶಕೆರಿಯಾ ಮಾರ್ಟಿನ್‌ ಆರೋಗ್ಯವಾಗಿಯೇ ಇದ್ದರು. ಅಲ್ಲದೇ ವಿಮಾನದಲ್ಲಿ ಸಣ್ಣ ನಿದ್ದೆಗೂ ಜಾರಿದ್ದರು. ಆದರೆ ಸ್ವಲ್ಪಹೊತ್ತಿನಲ್ಲೇ ತಡೆಯಲಾಗದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿ ಹೀಗಾಗುವುದು ಎಂಬ ನಿರೀಕ್ಷೆ ಅವರಿಗೆ ಇರಲಿಲ್ಲವಂತೆ.

ಗಂಡ ಸತ್ತು ಎರಡು ವರ್ಷದ ಬಳಿಕ ಆತನ ಮಗುವಿಗೆ ಜನ್ಮ ನೀಡಿದ ಪತ್ನಿ, ಸಾಧ್ಯವಾಗಿದ್ಹೇಗೆ ?

ನಂತರ ಗಗನಸಖಿ ಅವರನ್ನು ವಿಮಾನದ ಹಿಂಭಾಗದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಅಲ್ಲದೇ ಮಗುವಿಗೆ ಜನ್ಮ ನೀಡಲು ಅವರಿಗೆ ಸಹಾಯ ಮಾಡಿದ್ದಾರೆ. ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್‌ ಕ್ಯಾಪ್ಟನ್‌ ಚೆರಿಸ್ ನ್ಯೆ (Captain Chris Nye) ಈ ಬಗ್ಗೆ ಮಾತನಾಡಿದ್ದು, ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ್ದರಿಂದ ಮೂರು ಗಂಟೆ ಪ್ರಯಾಣದ ವಿಮಾನವನ್ನು ಪ್ಲೋರಿಡಾದ (Florida) ಪೆನ್ಸಕೊಲಾ ವಿಮಾನ ನಿಲ್ದಾಣಕ್ಕೆ (Pensacola Airport) ತಿರುಗಿಸಲಾಯಿತು. ಅಲ್ಲಿ ವೈದ್ಯರ ತಂಡ ಹೊಸ ಮಗು ತಾಯಿಗಾಗಿ ಕಾಯುತ್ತಿತ್ತು. ಅಲ್ಲಿ ತಾಯಿ ಹಾಗೂ ಮಗುವನ್ನು ಬಿಟ್ಟ ನಂತರ ನಾವು ಮತ್ತೆ ಒರ್ಲಾಂಡೊಗೆ (Orlando) ಪ್ರಯಾಣ ಬೆಳೆಸಿದೆವು ಎಂದು ಹೇಳಿದರು. 

ಆಡುವ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಐದು ವರ್ಷಕ್ಕೇ ಮಗುವೊಂದು ಮಡಿಲಿನಲ್ಲಿತ್ತು !

Latest Videos
Follow Us:
Download App:
  • android
  • ios