ಮಾಲ್‌ನಲ್ಲಿ ಮಹಿಳೆಯೊಬ್ಬರು ಐದು ಒಳ ಉಡುಪುಗಳನ್ನು ಕದ್ದು ಧರಿಸಿ ಹೊರಟಾಗ ಸೆಕ್ಯುರಿಟಿ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ವೈರಲ್ ವಿಡಿಯೋದಲ್ಲಿ ಮಹಿಳೆ ಪ್ಯಾಂಟ್ ಜರಿಸಿ ಕದ್ದ ಚಡ್ಡಿಗಳನ್ನು ತೋರಿಸುತ್ತಿರುವುದು ದಾಖಲಾಗಿದೆ. ಈ ಕೃತ್ಯದ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಮಹಿಳೆಯ ಅವಶ್ಯಕತೆಯನ್ನು ಒತ್ತಿ ಹೇಳಿದರೆ, ಇನ್ನು ಕೆಲವರು ವಿಡಿಯೋ ಚಿತ್ರೀಕರಣವನ್ನು ಖಂಡಿಸಿದ್ದಾರೆ. ಜಪಾನ್‌ನಲ್ಲಿ ಒಳ ಉಡುಪು ಕಳ್ಳತನ ಹೆಚ್ಚಿದ್ದು, ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿಯೂ ಇದೆ.

ಬಂಗಾರದ ಆಭರಣ (Gold jewelry), ದುಬಾರಿ ವಸ್ತುಗಳನ್ನು ಜನರು ಕದ್ದು ತಮ್ಮ ಬ್ಯಾಗ್ ಗೆ ಹಾಕಿಕೊಳ್ಳುವ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರುತ್ವೆ. ಅಂಗಡಿಗೆ ಬಂದ ಗ್ರಾಹಕರು, ಸಿಬ್ಬಂದಿ ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದಿರ್ತಾರೆ. ಕೆಲವೊಮ್ಮೆ ಸಿಕ್ಕಿಬಿದ್ರೆ ಮತ್ತೆ ಕೆಲವೊಮ್ಮೆ ಕಳ್ಳತನದಲ್ಲಿ ಯಶಸ್ವಿಯಾಗಿರ್ತಾರೆ. ದುಬಾರಿ ವಸ್ತು ಕದಿಯೋದು ಮಾಮೂಲಿ ಅಂದ್ಕೊಳ್ಳೋಣ. ಆದ್ರೆ ಈ ಮಹಿಳೆ ಒಳ ಉಡುಪು (Underwear) ಕದ್ದಿದ್ದಾಳೆ. ಅದೂ ಒಂದೋ ಎರಡೋ ಅಲ್ಲ. ಐದು ಒಳ ಉಡುಪನ್ನು ಕದ್ದಿದ್ದಲ್ದೆ ಅದನ್ನು ಹಾಕಿಕೊಂಡು ಅಂಗಡಿಯಿಂದ ಹೊರಗೆ ಹೊರಟಿದ್ದಾಳೆ. ಆಕೆ ಕೆಲ್ಸ ಸೆಕ್ಯೂರಿಟಿ ಗಾರ್ಡ್ ಗೆ ಗೊತ್ತಾಗಿದೆ. ಪ್ಯಾಂಟ್ ಜರಿಸಿ, ಹಾಕಿದ್ದ ಚಡ್ಡಿಯನ್ನು ಆಕೆ ಲೆಕ್ಕ ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಚಡ್ಡಿ ಕದ್ದಿದ್ದು ಸರಿ ಆದ್ರೆ ಕದ್ದಿದ್ದಾಳೆ ಅಂತ ಗೊತ್ತಾಗಿದ್ದು ಹೇಗೆ ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡ್ತಿದೆ.

ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮಹಿಳೆಯೊಬ್ಬಳು ಮಾಲ್ ನಲ್ಲಿ ಈ ಕೃತ್ಯ ಎಸಗಿದ್ದಾಳೆ. ವಿಡಿಯೋ ಪ್ರಕಾರ, ಸೆಕ್ಯೂರಿಟಿ ಗಾರ್ಡ್ ಮಹಿಳೆಯನ್ನು ತಡೆಯುತ್ತಾಳೆ. ಆಕೆ ಪ್ಯಾಂಟ್ ಜರಿಸಿ, ಹಾಕಿದ್ದ ಚಡ್ಡಿ ಲೆಕ್ಕ ಮಾಡ್ತಿದ್ದಾಳೆ. ಒಂದು ಎರಡು ಅಂತ ಒಟ್ಟೂ ಐದು ಚಡ್ಡಿ ಕೌಂಟ್ ಮಾಡ್ತಾಳೆ ಮಹಿಳೆ. ಎಲ್ಲ ಒಂದೇ ರೀತಿ ಒಳ ಉಡುಪು. ಈ ವಿಡಿಯೋ ನೋಡಿದ ಜನರು ತಮ್ಮದೇ ಅಭಿಪ್ರಾಯ ನೀಡಲು ಶುರು ಮಾಡಿದ್ದಾರೆ.

ಪೋಸ್ಟ್ ಲೈಕ್ ಮಾಡಿ ಹೊಸ ಚರ್ಚೆ ಹುಟ್ಟುಹಾಕಿದ ಸಮಂತಾ; ಪುರುಷರು ಗರಂ ಆದ್ರಾ..!?

ಆಕೆಗೆ ಒಳ ಉಡುಪು ಅಷ್ಟು ಅಗತ್ಯವಿತ್ತು ಎನ್ನಿಸುತ್ತೆ. ಹಾಗಾಗಿ ಅದನ್ನು ಕದ್ದಿದ್ದಾಳೆ ಅಂತ ಒಬ್ಬರು ಬರೆದಿದ್ದಾರೆ. ಜನರು ಒಳ ಉಡುಪನ್ನೂ ಕದಿಯುತ್ತಾರಾ ಅಂತ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ನೋಡೋಕೆ ಶ್ರೀಮಂತರಂತೆ ಕಾಣುವ ಜನರೇ ಇಂಥ ಕೃತ್ಯ ಮಾಡೋದು ಹೆಚ್ಚು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವರಿಗೆ ಅನುಮಾನ ಬಂದಿದೆ. ಸಾಮಾನ್ಯವಾಗಿ ಒಳ ಉಡುಪುಗಳನ್ನು ಟ್ರಯಲ್ ಮಾಡೋಕೆ ನೀಡೋದಿಲ್ಲ. ಅಂದ್ಮೇಲೆ ಈಕೆ ಅದನ್ನು ಧರಿಸಿದ್ದು ಎಲ್ಲಿ ಅನ್ನೋದು ಒಂದು ಪ್ರಶ್ನೆಯಾದ್ರೆ, ಟ್ರಯಲ್ ರೂಮಿನಲ್ಲೇ ಆಕೆ ಒಂದರ ಮೇಲೆ ಒಂದು ಚಡ್ಡಿ ಹಾಕಿಕೊಂಡಿದ್ದರೂ, ಆಕೆ ಕದ್ದಿದ್ದಾಳೆ ಎನ್ನುವ ಅನುಮಾನ ಸೆಕ್ಯುರಿಟಿ ಗಾರ್ಡ್ ಗೆ ಹೇಗೆ ಬಂತು ಎನ್ನುವ ಪ್ರಶ್ನೆ ಇನ್ನೊಬ್ಬರನ್ನು ಕಾಡಿದೆ. 

ಮಹಿಳೆ ಚಡ್ಡಿ ಕದ್ದಿರಬಹುದು. ಆದ್ರೆ ಅದನ್ನು ಲೆಕ್ಕ ಹಾಕುವಾಗ ವಿಡಿಯೋ ಯಾಕೆ ಮಾಡ್ಬೇಕಿತ್ತು? ಮಹಿಳೆ ಮುಖವನ್ನು ಏಕೆ ತೋರಿಸ್ಬೇಕಿತ್ತು? ಇದು ಮಹಿಳೆಗೆ ಮಾಡುವ ಅವಮಾನ. ಆಕೆ ಮುಂದೆ ತಲೆ ಎತ್ತಿ ಓಡಾಡೋದು ಕಷ್ಟ ಅಂತ ವಿಡಿಯೋ ಬಗ್ಗೆ ಮತ್ತೆ ಕೆಲವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆ ಎಲ್ಲಿ ಇಷ್ಟೊಂದು ಚಡ್ಡಿ ಕದ್ದಿದ್ದಾಳೆ ಎಂಬುದು ತಿಳಿದಿಲ್ಲ. 

ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ

ಜಪಾನ್ ನಲ್ಲಿ ಚಡ್ಡಿ ಕದಿಯೋದು ಹೆಚ್ಚು : ಮನೆಯಿಂದ ಹೊರಗೆ ಬಿದ್ದಾಗ ಹಣವಿರುವ ಪರ್ಸ್ ಹಾಗೂ ದುಬಾರಿ ಬೆಲೆಯ ಮೊಬೈಲ್ ಮೇಲೆ ಹೆಚ್ಚಿನ ಗಮನ ಇಟ್ಟಿರ್ತೇವೆ. ಆದ್ರೆ ಜಪಾನ್ ಗೆ ಹೋದಾಗ ನೀವು ಪರ್ಸ್ ಬದಲು ಒಳ ಉಡುಪಿನ ಮೇಲೆ ಗಮನ ಇಟ್ಟಿರಬೇಕು. ಜಪಾನ್ ನಲ್ಲಿ ಒಳ ಉಡುಪು ಕಳ್ಳತನ ಒಂದು ರೀತಿ ಟ್ರೆಂಡ್. 2017 ರಲ್ಲಿ ಜಪಾನಿನಲ್ಲಿ 10,000 ಕ್ಕೂ ಹೆಚ್ಚು ಒಳ ಉಡುಪು ಕಳ್ಳತನ ಪ್ರಕರಣ ದಾಖಲಾಗಿತ್ತು. ಇಲ್ಲಿನ ಕಾನೂನಿನ ಪ್ರಕಾರ, ಒಳ ಉಡುಪು ಕದ್ದವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆಯಾಗುತ್ತದೆ. 

Scroll to load tweet…