ಅಕ್ಕನಿಗೆ ಕಿಡ್ನಿ ಕೊಡಲು ನಿರಾಕರಿಸಿದ ತಂಗಿ.. ಚರ್ಚೆಯಲ್ಲಿದೆ ಕಾರಣ!
ನಮ್ಮ ಆಪ್ತರಿಗೆ ಆರೋಗ್ಯ ಸಮಸ್ಯೆಯಾದಾಗ ಕೈಲಾದಷ್ಟು ಸಹಾಯ ಮಾಡ್ತೇವೆ. ಕಿಡ್ನಿ ದಾನ ಮಾಡಿ ಜೀವ ಉಳಿಸಿದವರು ಅನೇಕರಿದ್ದಾರೆ. ಆದ್ರೆ ಇಲ್ಲೊಬ್ಬ ತಂಗಿ ಏನೇ ಅಂದ್ರೂ ಅಕ್ಕಂಗೆ ಕಿಡ್ನಿ ಕೊಡಲ್ಲ ಎನ್ನುತ್ತಿದ್ದಾಳೆ.
ಅಕ್ಕ ತಂಗಿ, ಅಣ್ಣ- ತಂಗಿ ಮಧ್ಯೆ ಗಲಾಟೆ ನಡೆಯೋದು ಮಾಮೂಲಿ. ಆದ್ರೆ ಸಮಸ್ಯೆ ಬಂದಾಗ ಎಲ್ಲರೂ ಒಂದಾಗ್ತಾರೆ. ಪರಸ್ಪರ ಸಹಾಯಕ್ಕೆ ಬರ್ತಾರೆ. ಆರೋಗ್ಯ ಸಮಸ್ಯೆ ಆದ್ರಂತೂ ಎಲ್ಲರೂ ತಾ ಮುಂದು, ನಾ ಮುಂದು ಅಂತಾ ಬರ್ತಾರೆ. ಸದಾ ಅವರ ಆರೈಕೆ ಮಾಡ್ತಾರೆ. ಹಾಗಂತ ಎಲ್ಲ ಸಹೋದರ- ಸಹೋದರಿ ಮಧ್ಯೆ ಇದೇ ಬಾಂಧವ್ಯ, ಪ್ರೀತಿ ಇರಬೇಕೆಂದೇನಿಲ್ಲ. ಕೆಲವು ಘಟನೆಗಳು ಇಬ್ಬರ ಮಧ್ಯೆ ದ್ವೇಷಕ್ಕೆ ಕಾರಣವಾಗಿರುತ್ತೆ. ಒಡಹುಟ್ಟಿದವರು ಸಾಯ್ತಿದ್ದಾರೆ ಎಂದ್ರೂ ಅವರನ್ನು ನೋಡಲು ಹೋಗದ, ಅವರ ಸಹಾಯಕ್ಕೆ ನಿಲ್ಲದ ಜನರಿದ್ದಾರೆ. ಈಗ ಸಹೋದರಿಯೊಬ್ಬಳು ಇದೇ ವಿಷ್ಯಕ್ಕೆ ಸುದ್ದಿಯಲ್ಲಿದ್ದಾಳೆ. ತನ್ನ ಅಕ್ಕನಿಗೆ ಸಾವುಬದುಕಿನ ಮಧ್ಯೆ ಹೋರಾಡ್ತಿದ್ದರೂ ಆಕೆಗೆ ಕಿಡ್ನಿ ಕೊಡಲು ಒಲ್ಲೆ ಎಂದಿದ್ದಾಳೆ. ಅಷ್ಟಕ್ಕೂ ಆಕೆ ಜೀವನದಲ್ಲಿ ನಡೆದಿದ್ದೇನು? ಯಾಕೆ ಕಿಡ್ನಿ ನೀಡಲು ನಿರಾಕರಿಸ್ತಿದ್ದಾಳೆ ಎಂಬ ವಿವರ ಇಲ್ಲಿದೆ.
ಈ ಘಟನೆ ನಡೆದಿರೋದು ಬ್ರಿಟನ್ (Britain) ನಲ್ಲಿ. ಅಕ್ಕನ ಸ್ಥಿತಿ ಗಂಭೀರವಾಗಿದೆ. ಆದ್ರೆ ತಂಗಿ, ಅಕ್ಕನನ್ನು ದ್ವೇಷಿಸುತ್ತಾಳೆ. ಅಕ್ಕ ಪ್ರಾಣ ಕಲೆದುಕೊಂಡ್ರೂ ತನಗೆ ಚಿಂತೆಯಿಲ್ಲ ಎಂಬ ಸ್ಥಿತಿಯಲ್ಲಿ ಆಕೆ ಇದ್ದಾಳೆ. ತಂಗಿ ತನ್ನ ಕಥೆಯನ್ನು ರೆಡ್ಡಿಟ್ (Reddit) ನಲ್ಲಿ ಬರೆದುಕೊಂಡಿದ್ದಾಳೆ. ಯಾಕೆ ನಾನು ಅಕ್ಕನನ್ನು ದ್ವೇಷಿಸುತ್ತೇನೆ, ನಾನು ಕಿಡ್ನಿ (Kidney) ನೀಡಲು ನಿರಾಕರಿಸಿದ್ದು ಏಕೆ ಎಂಬುದನ್ನು ಹೇಳಿದ್ದಲ್ಲದೆ, ತಾನು ಮಾಡಿದ್ದು ಎಷ್ಟು ಸರಿ ಎಂಬುದನ್ನು ಆಕೆ ಪ್ರಶ್ನಿಸಿದ್ದಾಳೆ.
ಪತ್ನಿಯಿಂದ ಅತೀವ ಹಿಂಸೆ, ಶಿಖರ್ ಧವನ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ದೆಹಲಿ ಕೋರ್ಟ್!
ಅಕ್ಕನನ್ನು ದ್ವೇಷಿಸಲು ಇದು ಕಾರಣ : ತಂಗಿ 17 ವರ್ಷದಲ್ಲಿದ್ದಾಗ ಗರ್ಭಿಣಿಯಾಗಿದ್ದಳು. ಹೆತ್ತವರು ಇದನ್ನು ಒಪ್ಪುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಆದ್ರೆ 27 ವರ್ಷದ ಅಕ್ಕ, ತಂಗಿ ಬೆಂಬಲಕ್ಕೆ ನಿಂತಿದ್ದಳು. ಆಪರೇಷನ್ ಬೇಡ, ನೀನು ಮಗುವನ್ನು ಹೆರು ಎಂದು ಅಕ್ಕ ಸಲಹೆ ನೀಡಿದ್ದಳು. ಅಕ್ಕನಿಗೆ ಮಗುವಿಲ್ಲದ ಕಾರಣ, ನಿನ್ನ ಮಗುವನ್ನು ನಾನು ದತ್ತು ಪಡೆಯುತ್ತೇನೆ. ನನ್ನ ಮಗುವಿನಂತೆ ನೋಡಿ ಕೊಳ್ತೇನೆ ಎಂಬ ಭರವಸೆ ನೀಡಿದ್ದಳು. ಅಲ್ಲದೆ ನೀನು, ನಿನ್ನ ಮಗುವಿಗೆ ಚಿಕ್ಕಮ್ಮನಾಗಿ, ಸದಾ ಅದರ ಜೊತೆ ಇರು ಎಂದಿದ್ದಳು. ಹಾಗೇ ಈ ವಿಷ್ಯವನ್ನು ಯಾರಿಗೂ ಹೇಳಬೇಡ ಎಂದಿದ್ದಳು.
ಜೋ ಜೋನಾಸ್, ಸೋಫಿ ಟರ್ನರ್ ವಿಚ್ಛೇದನಕ್ಕೆ ಪ್ರಿಯಾಂಕಾ ಚೋಪ್ರಾ ಕಾರಣವೇ?
ಆದ್ರೆ ತಂಗಿ ಅಂದುಕೊಂಡಂತೆ ಯಾವುದೂ ಆಗ್ಲಿಲ್ಲ. ಕುಟುಂಬದಲ್ಲಿ ಕೆಲ ಸಮಸ್ಯೆ ಕಾಣಿಸಿಕೊಂಡಿತು. ಇದ್ರಿಂದ ಅಕ್ಕ ಬೇರೆಯಾದಳು. ತನ್ನ ಪತಿ ಹಾಗೂ ಮಗುವಿನ ಜೊತೆ ದೂರ ವಾಸ ಶುರು ಮಾಡಿದಳು. ತಂಗಿಗೆ ಮಗುವನ್ನು ನೋಡಲೂ ಅವಕಾಶ ನೀಡಲಿಲ್ಲ. ತಾಯಿ ಸತ್ತು ಹೋಗಿದ್ದಾಳೆಂದು ಮಗುವನ್ನು ನಂಬಿಸಿದ್ದಳು. ಅಕ್ಕ ಆಲಿಸ್, ತನ್ನ ತಂಗಿ ಮಗಳಾದ ಎಮಿಲಿಯನ್ನು, ತಂಗಿಗೆ ನೋಡಲು ಬಿಡಲಿಲ್ಲ. ಎಮಿಲಿ ಎರಡು ವರ್ಷದವಳಿದ್ದಾಗ ಈ ಎಲ್ಲ ಘಟನೆ ನಡೆದಿದೆ. ಅಕ್ಕ ಆಲಿಸ್ ಜೊತೆ ತಂಗಿ ಜಗಳವಾಡಿದ್ದಾಳೆ. ಇಬ್ಬರ ಮಧ್ಯೆ ಇದೇ ಕಾರಣಕ್ಕೆ ದ್ವೇಷ ಬೆಳೆದಿದೆ.
ಅಕ್ಕನ ಪರಿಸ್ಥಿತಿ ಸರಿಯಿಲ್ಲ ಎಂಬುದು ನನಗೆ ಗೊತ್ತಿದೆ. ಆಕೆಗೆ ಕುಟುಂಬದಲ್ಲಿ ಕಿಡ್ನಿ ನೀಡಲು ಯೋಗ್ಯವಾದ ವ್ಯಕ್ತಿ ನಾನೊಬ್ಬಳೇ ಇರೋದು. ಆದ್ರೆ ಆಕೆಗೆ ಕಿಡ್ನಿ ನೀಡುವ ಮನಸ್ಸು ನನಗಿಲ್ಲ. ನನ್ನ ಮಗುವಿನ ಜೊತೆ ಆಕೆ ಮೋಸ ಮಾಡಿದ್ದಾಳೆ ಎಂಬುದು ತಂಗಿ ವಾದ. ಜನರು ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸ್ಬೇಕು ಎಂಬುದು ತಂಗಿ ಉದ್ದೇಶ. ರೆಡ್ಡಿಟ್ ನಲ್ಲಿ ಆಕೆಯ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ತಂಗಿ ಮಾಡಿದ್ದು ಸರಿಯಾಗಿದೆ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ. ಅಕ್ಕ ಮಾಡಿದ ತಪ್ಪಿಗೆ ಶಿಕ್ಷೆ ಆಗ್ಬೇಕು. ನೀವು ಒಂದು ಕಿಡ್ನಿ ಕೊಟ್ಮೇಲೆ ನಿಮಗೆ ಸಮಸ್ಯೆಯಾದ್ರೆ ಯಾರು ಬರ್ತಾರೆ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.