ಅತೀ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿರುವ ರಾಜ್ಯದ ಹೆಸರು ಪ್ರಕಟಿಸಿದ ಕೇಂದ್ರ!
ಬಾಲ್ಯ ವಿವಾಹದ ಅನಿಷ್ಟ ಪದ್ಧತಿ ದೇಶದಲ್ಲಿ ಇನ್ನೂ ಇದೆ. ಹಲವು ರಾಜ್ಯಗಳಲ್ಲಿ ಕದ್ದು ಮುಚ್ಚಿ ನಡೆದರೆ, ಮತ್ತೆ ಕೆಲವು ರಾಜ್ಯಗಳಲ್ಲಿ ಬಹಿರಂಗಾಗಿ ನಡೆಯುತ್ತಿದೆ. ಇದೀಗ ಕೇಂದ್ರ ಗೃಹ ಇಲಾಖೆ ಮಹತ್ವದ ವರದಿ ಪ್ರಕಟಿಸಿದೆ. ಅತೀ ಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವ ರಾಜ್ಯಗಳ ಹೆಸರು ಸೂಚಿಸಿದೆ.
ನವದೆಹಲಿ(ಅ.08): ಹಲವು ಅನಿಷ್ಠ ಪದ್ಧತಿಗಳು ಭಾರತದಿಂದ ತೊಲಗಿದರೂ ಬಾಲ್ಯ ವಿವಾಹ ಪದ್ದತಿ ಸಂಪೂರ್ಣವಾಗಿ ನಿರ್ನಾಮಗೊಂಡಿಲ್ಲ. ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ನಡೆಯುತ್ತಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಾಲ್ಯ ವಿವಾಹ ಪದ್ದತಿ ಈಗಲೂ ಇದೆ. ಇದೀಗ ಕೇಂದ್ರ ಗೃಹ ಇಲಾಖೆ ಅನಿಷ್ಠ ಪದ್ಧತಿ ಇರುವ ರಾಜ್ಯದ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಾರ್ಖಂಡ್ ಮೊದಲ ಸ್ಥಾನ ಪಡೆದಿದೆ. ಜಾರ್ಖಂಡ್‌ನಲ್ಲಿ ಬಾಲ್ಯ ವಿವಾಹ ಶೇಕಡಾ 5.8 ರಷ್ಟು ನಡೆಯುತ್ತಿದೆ. ಅಂದರೆ ಜಾರ್ಖಂಡ್‌ನ ಶೇಕಡಾ 5.8 ರಷ್ಟು ಹೆಣ್ಣು ಮಕ್ಕಳನ್ನು 18 ವಯಸ್ಸು ತುಂಬುವ ಮೊದಲೇ ಮದುವೆ ಮಾಡಿಸುತ್ತಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಜಾರ್ಖಂಡ್‌ನ(Jharkhand) ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ(child Marriage) ಪದ್ಧತಿ ಹೆಚ್ಚಾಗಿದೆ. ಜಾರ್ಖಂಡ್ ಗ್ರಾಮೀಣ ಭಾಗದಲ್ಲಿ ಶೇಕಡಾ 7.9 ರಷ್ಟಿರುವ ಬಾಲ್ಯವಿವಾಹ, ನಗರಗಳಲ್ಲಿ ಇದರ ಪ್ರಮಾಣ ಶೇಕಡಾ 3ಕ್ಕೆ ಇಳಿದಿದೆ. ಇನ್ನು ಒಟ್ಟಾರೆ ದೇಶದಲ್ಲಿ ಬಾಲ್ಯ ವಿವಾಹ ಪದ್ಧತಿ ಶೇಕಡಾ 1.9 ರಷ್ಟಿದೆ ಎಂದು ವರದಿ ಹೇಳುತ್ತಿದೆ.
16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು
ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ(West Bengal) ಹೆಚ್ಚಿನ ಹೆಣ್ಣುಮಕ್ಕಳನ್ನು 21 ವರ್ಷಕ್ಕೂ ಮೊದಲೇ ಮದುವೆ ಮಾಡಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 54.9 ಹೆಣ್ಣು ಮಕ್ಕಳು 21 ವರ್ಷ ಮೊದಲೇ ಮದುವೆಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಈ ಪ್ರಮಾಣ ಶೇಕಡಾ 54.6.
ವಾಮಾಚರಕ್ಕೆ ಬಲಿಯಾಗುತ್ತಿರುವ ಸಂಖ್ಯೆಯಲ್ಲೂ ಜಾರ್ಖಂಡ್‌ನಲ್ಲಿ ಮುಂಚೂಣಿಯಲ್ಲಿದೆ. 2020ರಲ್ಲಿ 15 ಮಂದಿ ವಾಮಾಚಾರಕ್ಕೆ ಬಲಿಯಾಗಿದ್ದಾರೆ. 2015ರಲ್ಲಿ ಈ ಸಂಖ್ಯೆ 32 ಆಗಿತ್ತು. ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಇವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಬ್ಬಾಳಿಕೆಯ ಸಂಖ್ಯೆಯೂ ಹೆಚ್ಚಾಗಿದೆ.
Chikkamagaluru; 68 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಅಧಿಕ, ಜಿಲ್ಲೆಯಲ್ಲಿ 25 ಬಾಲ್ಯ ವಿವಾಹ ತಡೆ!
ಜಾರ್ಖಂಡ್ ಬುಡಕಟ್ಟು ಬಾಲಕಿ ರೇಪ್, ಕೊಲೆ
ಜಾರ್ಖಂಡ್‌ನಲ್ಲಿ ಅತ್ಯಾಚಾರದ ಸರಣಿ ಮುಂದುವರಿದಿದೆ. ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯು ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ 14 ವರ್ಷದ ಬುಡಕಟ್ಟು ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಬಳಿಕ ಆಕೆಯ ಶವ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಮಾನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಬಾಲಕಿ 8-10 ವಾರದ ಗರ್ಭಿಣಿಯಾಗಿದ್ದಳು ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಆದರೆ ಬಾಲಕಿಯ ಮರಣೋತ್ತರ ಪರೀಕ್ಷೆ ಬಳಿಕವೇ ಆಕೆಯ ಸಾವನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಹತ್ಯೆ ಮಾಡಿ ಬಳಿಕ ಮರಕ್ಕೆ ನೇಣು ಹಾಕಿದ್ದರೇ ಎಂಬ ಬಗ್ಗೆ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.