ತಾಯಿ ಆತ್ಮಹತ್ಯೆ ಮಾಡಿಕೊಂಡು, ತಂಗಿಗೆ ವಿಷಪ್ರಾಶನದಿಂದ ಸತ್ತು, ಗಂಡ ಡೈವೋರ್ಸ್ ಮಾಡಿ... ಆಟೋ ಓಡಿಸಿ ಬದುಕಿದ ದಿಟ್ಟ ಹೆಣ್ಣುಮಗಳಿವಳು. 

ಇದು ಆಟೋ ಓಡಿಸಿ ಜೀವನ ಮಾಡುತ್ತಿರುವ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದ ಮಹಿಳೆಯೊಬ್ಬರ ಹೋರಾಟದ ಜೀವನ ಕಥನ. ಕಷ್ಟನಷ್ಟಗಳನ್ನು ಸಾವುಗಳನ್ನು ಎದುರಿಸಿ ಬೆಳೆದು, ಕಷ್ಟಗಳನ್ನು ಒಡ್ಡಿದ ವಿಧಿಗೆ ಸವಾಲಾಗಿ ಜೀವನ ಕಟ್ಟಿಕೊಂಡ ಮಹಿಳೆಯ ಕತೆಯಿದು. 

ಅವರ ಕತೆಯನ್ನು ಅವರ ಮಾತುಗಳಲ್ಲೇ ಕೇಳಿ:
ನಾನು ಸಂಪ್ರದಾಯವಾದಿ ಮತ್ತು ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದೆ. ನಾನು 11 ವರ್ಷದವಳಾಗಿದ್ದಾಗ, ನನ್ನ ಹೆತ್ತವರು ಪ್ರತಿದಿನ ಜಗಳವಾಡಲು ಪ್ರಾರಂಭಿಸಿದರು. ಇದು ನನ್ನ ಮೇಲೆ ಕೆಟ್ಟ ಪ್ರಭಾವ ಬೀರಿತು. ಬಹಳ ಬೇಗ ಅವರು ಡೈವೋರ್ಸ್ ಪಡೆದರು. ನನ್ನ ತಾಯಿ ಮರುಮದುವೆಯಾಗಲು ನಿರ್ಧರಿಸಿದಳು. ಆದರೆ ಮುಸ್ಲಿಂ ಸಮುದಾಯದಲ್ಲಿ ಅದು ಟೀಕೆ, ವ್ಯಂಗ್ಯಕ್ಕೆ ಕಾರಣವಾಯಿತು. ಆದರೆ ಅವಳು ಯಾವಾಗಲೂ ತನಗೆ ಬೇಕಾದುದನ್ನು ನಿರ್ಭಯವಾಗಿ ಮಾಡುತ್ತಿದ್ದವಳು. ಮದುವೆಯಾದ ಕೆಲವು ತಿಂಗಳುಗಳಲ್ಲಿ, ನಮ್ಮ ಸಮುದಾಯದ ಕೆಲವು ಗಂಡಸರ ಗುಂಪು ಅವಳನ್ನು ಸುತ್ತುವರಿದು ಟೀಕಿಸಿ ಅಪಮಾನಿಸಿತು. ಅವರು ಅವಳ ಎರಡನೇ ಮದುವೆಯ ಬಗ್ಗೆ ಅಪಹಾಸ್ಯ ಮಾಡಿದರು. ಅವರು ನನ್ನ ತಮ್ಮನನ್ನು ಸಹ ನಿಂದಿಸಿದರು.

ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!

ಇದು ಅವಳ ಮೇಲೆ ಆಳವಾಗಿ ಪರಿಣಾಮ ಬೀರಿತು. ಅವಳು ಮಾನಸಿಕವಾಗಿ ನೊಂದಳು. ಅದೇ ರಾತ್ರಿ ಅವಳು ಮೈಗೆ ಬೆಂಕಿ ಹಚ್ಚಿಕೊಂಡಳು. ಸತ್ತುಹೋದಳು. ನಾನು ಹತಾಶಳಾದೆ, ಕುಸಿದುಹೋದೆ. ಅವಳನ್ನು ಕಳೆದುಕೊಂಡದ್ದು ನಾನು ಎದುರಿಸಬೇಕಾದ ಕಠಿಣ ಸವಾಲುಗಳಲ್ಲಿ ಒಂದಾಗಿತ್ತು. ಆದರೆ ಬದುಕು ಮುಂದುವರಿಯಬೇಕಾಗಿತ್ತು. ಮತ್ತೆ ಒಂದು ವರ್ಷದಲ್ಲಿ, ನನ್ನ ತಂದೆ ನನಗೆ ಮತ್ತು ನನ್ನ ಸಹೋದರಿ ಇಬ್ಬರಿಗೂ ಮದುವೆ ಮಾಡಿಸಿದರು.

ಆದರೆ ನನ್ನ ತಂಗಿಯ ಮನೆಯಲ್ಲಿ ವರದಕ್ಷಿಣೆ ಕಾಟ ಶುರುವಾಯಿತು. ಆಕೆಯ ಅತ್ತೆ ವರದಕ್ಷಿಣೆಗಾಗಿ ಅವಳನ್ನು ಪೀಡಿಸಿದಳು. ಅವಳು ಗರ್ಭಿಣಿಯಾಗಿದ್ದಾಗ ಅವರು ಅವಳಿಗೆ ವಿಷ ನೀಡಿದರು. ಅವಳೂ ಮೃತಪಟ್ಟಳು. ನಾನು ಛಿದ್ರಗೊಂಡೆ. ನಾನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಇಬ್ಬರನ್ನು ಕಳೆದುಕೊಂಡೆ. ನಾನು ನಿರಾಶೆಯ ಕೂಪದಲ್ಲಿದ್ದೆ. ಸ್ವಲ್ಪ ದಿನದಲ್ಲಿ ನಾನು ಗರ್ಭಿಣಿಯಾದೆ. ನನ್ನ ಮಗ ಈ ಜಗತ್ತಿಗೆ ಬಂದ. ಅವನಿಗಾಗಿ ನಾನು ಬದುಕು ಮುಂದುವರಿಸಿದೆ. ನನಗೆ ಬೇರೆ ದಾರಿ ಇರಲಿಲ್ಲ. ಈ ನಡುವೆ ನನ್ನ ಗಂಡನಿಗೂ ನನಗೂ ಜಗಳಗಳು ಶುರುವಾದವು. ನನಗೆ ಮೂರನೆಯ ಮಗು ಹುಟ್ಟಿತು. ಅದರ ನಂತರ, ಗಂಡ ನಮ್ಮನ್ನು ನೋಡಿಕೊಳ್ಳಲು ನಿರಾಕರಿಸಿದ. ಆದರೆ ಅವನು ನನ್ನೊಂದಿಗೆ ಮಲಗುವ ಸಂಬಂದ ಮಾತ್ರ ಇಟ್ಟುಕೊಂಡಿದ್ದ. ಒಂದು ದಿನ ನಾನು ಸಾಕು ಎನಿಸಿರಬೇಕು. ನನಗೆ 3 ಬಾರಿ 'ತಲಾಖ್' ಎಂದು ಹೇಳಿದ. ಅಲ್ಲಿಗೆ ದಾಂಪತ್ಯ ಮುಗಿಯಿತು. ನಾನು ನನ್ನ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಡಬೇಕಾಯಿತು.

Success Women: ಜಗತ್ತು ಸುತ್ತುವ ಈ ಯುವತಿ ಆಸೆಗೆ ಆಸರೆಯಾಗಿದ್ದು ಷೇರು ಮಾರುಕಟ್ಟೆ

ಆಹಾರಕ್ಕಾಗಿ 3 ಬಾಯಿಗಳೊಂದಿಗೆ ನಾನು ಬೀದಿಯಲ್ಲಿ ಒಬ್ಬಂಟಿಯಾಗಿ ಉಳಿದೆ. ಬದುಕು ನೋವಿನಿಂದ ಕೂಡಿದ್ದರೂ ನಾನು ಪುಟಿದೇಳಬೇಕಾಗಿತ್ತು. ಹಾಗಾಗಿ ಒಂದು ಚಿಕ್ಕ ಬಿರಿಯಾನಿ ಸ್ಟಾಲ್ ಹಾಕಿದೆ. ಆದರೆ ಒಂದು ದಿನ ಮುನ್ಸಿಪಾಲಿಟಿಯವರು ಬಂದು ಅದನ್ನು ಕಿತ್ತುಹಾಕಿದರು. ನನ್ನ ಪತಿ ರಿಕ್ಷಾ ಡ್ರೈವರ್ ಆಗಿದ್ದ. ಆ ಪ್ರಪಂಚ ನನಗೆ ತಿಳಿದಿತ್ತು. ಹೀಗಾಗಿ ನಾನು ನನ್ನ ಉಳಿತಾಯವನ್ನೆಲ್ಲಾ ಬಳಸಿ ರಿಕ್ಷಾ ಓಡಿಸಲು ನಿರ್ಧರಿಸಿದೆ.
ರಿಕ್ಷಾ ಓಡಿಸಿ ನಾನು ಚೆನ್ನಾಗಿ ಸಂಪಾದಿಸಿದೆ. ಆದರೆ ಬಹಳಷ್ಟು ಜನ ನನಗೆ ಕಿರುಕುಳವನ್ನೂ ನೀಡಿದರು. ಹಲವರು ನನ್ನನ್ನು ಟೀಕಿಸುತ್ತಾರೆ, ನಾನು ಮಹಿಳೆ ಎಂಬ ಕಾರಣಕ್ಕೆ ನನ್ನನ್ನು ಅನುಮಾನಿಸುತ್ತಾರೆ. ಇತರ ಕೆಲವು ರಿಕ್ಷಾ ಚಾಲಕರು ಉದ್ದೇಶಪೂರ್ವಕವಾಗಿ ನನ್ನ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಾರೆ. ಆದರೆ ನಾನು ಅದನ್ನೆಲ್ಲ ಮೀರಿ ಬೆಳೆಯಲು ನಿರ್ಧರಿಸಿದೆ. 

ಈಗ ಒಂದು ವರ್ಷದಿಂದ ನನ್ನ ಆದಾಯವು ಮನೆಯನ್ನು ನಡೆಸುತ್ತಿದೆ. ನನ್ನ ಮಕ್ಕಳಿಗೆ ಅವರು ಕೇಳುವ ಎಲ್ಲವನ್ನೂ ನಾನೇ ಕೊಡಿಸುತ್ತೇನೆ. ಅವರಿಗಾಗಿ ಕಾರು ಖರೀದಿಸಬೇಕು ಎಂಬುದು ನನ್ನ ಬಯಕೆ. ಶೀಘ್ರದಲ್ಲೇ ಅದನ್ನು ಮಾಡಬಹುದು ಎಂಬ ನಿಶ್ಚಯ ನನ್ನದು. ನನ್ನ ರೆಗ್ಯುಲರ್ ಪ್ರಯಾಣಿಕರು ಸಹ ನನಗೆ ಸದಾ ಉತ್ತಮ ಬೆಂಬಲ ನೀಡಿದ್ದಾರೆ. ನನಗೆ ನೆನಪಿದೆ, ಒಬ್ಬ ಗಂಡಸು ಒಮ್ಮೆ ನನ್ನ ರಿಕ್ಷಾದಲ್ಲಿ ಬಂದ. ನಾನು ಮಹಿಳೆ ಎಂದು ಅವನಿಗೆ ತಿಳಿದಿರಲಿಲ್ಲ. ನನ್ನನ್ನು 'ಭಯ್ಯಾ' ಎಂದು ಸಂಬೋಧಿಸಿದ. ನಂತರ ನಾನು ಮಹಿಳೆ ಎಂದು ತಿಳಿದಾಗ, 'ದಬಾಂಗ್ ಲೇಡಿ' ಎಂದು ಪ್ರೋತ್ಸಾಹಿಸಿದೆ. ಮಹಿಳೆಯರು ಯಾವುದಕ್ಕೂ ಸಮರ್ಥರು. ಅವರು ಬೇರೆಯವರ ನಿಯಮಗಳಿಗೆ ಒಳಪಟ್ಟು ಬದುಕಬೇಕಿಲ್ಲ. ನನ್ನ ತಾಯಿ ಅಥವಾ ನನ್ನ ಸಹೋದರಿ ಅನುಭವಿಸಿದ ಕಷ್ಟಗಳನ್ನು ಇನ್ಯಾರೂ ಅನುಭವಿಸದಿರಲಿ. ಹಾಗಾಗಿ ನಾನು ಕರೆದೊಯ್ಯುವ ಪ್ರತಿಯೊಬ್ಬ ಪ್ರಯಾಣಿಕರೊಂದಿಗೆ, ಅವರ ಮನೆಯ ಹೆಣ್ಣುಮಕ್ಕಳನ್ನು ಗೌರವದಿಂದ ನೋಡಿಕೊಳ್ಳುವಂತೆ ಹೇಳುತ್ತೇನೆ. 

ವಯಸ್ಸಾದಂತೆ ಮಹಿಳೆಯರು ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾಯಿಸಬೇಕು?