Asianet Suvarna News Asianet Suvarna News

ವಿಮಾನ ಹಾರಾಟದಲ್ಲಿ ಸಾಧನೆ ತೋರಿದ ಭಾರತೀಯ ಮಹಿಳೆಯರು…

ಹೆಣ್ಣಿಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದ್ರೆ ಆಕಾಶದೆತ್ತರಕ್ಕೆ ನೆಗೆಯಬಲ್ಲಳು. ಇದಕ್ಕೆ ಭಾರತೀಯ ಮಹಿಳೆಯರು ಉತ್ತಮ ನಿದರ್ಶನ. ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಭಾರತೀಯ ಮಹಿಳೆಯರು ವಿಮಾನ ಓಡಿಸುವಲ್ಲೂ ಮೆಲುಗೈ ಸಾಧಿಸಿದ್ದಾರೆ.
 

The Woman Pilots Ratios In India Is Highest In The Entire World
Author
First Published Jan 30, 2023, 3:17 PM IST

ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಹೋರಾಟ ನಡೆಯುತ್ತಿದೆ. ಈ ಹೋರಾಟ, ಅಭಿಯಾನಗಳ ಪರಿಣಾಮ ನಿಧಾನವಾಗಿ ಕಾಣಲು ಶುರುವಾಗಿದೆ. ಜಾಗತಿಕ ಲಿಂಗ ಸಮಾನತೆಯ ಶ್ರೇಯಾಂಕದಲ್ಲಿ 146 ದೇಶಗಳಲ್ಲಿ ಭಾರತ 135 ನೇ ಸ್ಥಾನದಲ್ಲಿದೆ. ಆದ್ರೆ ಮಹಿಳಾ ಪೈಲಟ್ ವಿಷ್ಯದಲ್ಲಿ ಭಾರತ ದೊಡ್ಡ ಸಾಧನೆಯನ್ನು ಮಾಡಿದೆ.

ಭಾರತ (India) ದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾರೆ. ಪುರುಷನ ಸಮಾನ (Equal) ನಿಂತು ಕೆಲಸ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ವಿಮಾನ (Plane) ದಲ್ಲಿ ಪ್ರಯಾಣ ಬೆಳೆಸುವುದು ಮಾತ್ರವಲ್ಲ ವಿಮಾನ ಓಡಿಸುವ ಶಕ್ತಿ, ಬುದ್ದಿವಂತಿಕೆ ತಮಗಿದೆ ಎಂಬುದನ್ನು ಈಗಾಗಲೇ ಮಹಿಳೆ (Woman) ಯರು ತೋರಿಸಿದ್ದಾರೆ. ಈಗ  ದೇಶವು ಮಹಿಳಾ ಪೈಲಟ್‌ (Pilot) ಗಳ ವಿಷಯದಲ್ಲಿ ಪ್ರಪಂಚದ ಉಳಿದ ದೇಶವನ್ನು ಹಿಂದಿಕ್ಕಿದೆ. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ ಪೈಲಟ್ಸ್ ವರದಿ  ಬಿಡುಗಡೆಯಾಗಿದೆ. ಈ ವರದಿ ಪ್ರಕಾರ, ಭಾರತ ಹೆಚ್ಚು ಮಹಿಳಾ ಪೈಲಟ್ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.  

ಭಾರತೀಯ ಏರ್‌ಲೈನ್ ಪೈಲಟ್‌ಗಳಲ್ಲಿ ಶೇಕಡಾ 12.4 ರಷ್ಟು ಮಹಿಳೆಯರು :  ಅಂಕಿಅಂಶಗಳ ಪ್ರಕಾರ, ವಿಶ್ವದ ಒಟ್ಟು ಪೈಲಟ್‌ಗಳಲ್ಲಿ ಶೇಕಡಾ 5.8 ರಷ್ಟು ಮಹಿಳೆಯರು. ಮಹಿಳೆಯರ ವಿಷಯದಲ್ಲಿ ಭಾರತ ವಿಶ್ವದ ಸರಾಸರಿಗಿಂತ ಮುಂದಿದೆ. ಭಾರತದಲ್ಲಿ ಮಹಿಳಾ ಪೈಲಟ್‌ಗಳ ಪ್ರಮಾಣವು ಶೇಕಡಾ 12.4ರಷ್ಟಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂಬುದು ಹೆಮ್ಮೆಯ ಸಂಗತಿ. 

ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು : ಹಿಂದೆ ಪುರುಷರ ಏಕಸ್ವಾಮ್ಯ ಎಂದುಕೊಂಡಿದ್ದ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಧ್ವಜ ಹಾರಿಸಿದ್ದಾರೆ.  ತಂತ್ರಜ್ಞಾನ ಕ್ಷೇತ್ರಗಳು ಮಹಿಳೆಯರ ಆಕರ್ಷಣೆಯಾಗಿವೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಪೈಲಟ್‌ಗಳ ನೇಮಕಾತಿ ವೇಗ ಪಡೆದಿದೆ.  

MENSTRUAL HYGIENE: ಪರಿಮಳಯುಕ್ತ ಪ್ಯಾಡ್ ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

ಬದಲಾಗಿದ್ದಾರೆ ಕುಟುಂಬಸ್ಥರು : ಹಿಂದೆ ಮಹಿಳೆ ಮನೆಯಿಂದ ಹೊರಗೆ ಹೋಗ್ತಾಳೆ ಅಂದ್ರೆ ಕುಟುಂಬಸ್ಥರೇ ಅವಕಾಶ ನೀಡ್ತಿರಲಿಲ್ಲ. ಆದ್ರೀಗ ಕುಟುಂಬದ ಹಿರಿಯರು ಬದಲಾಗಿದ್ದಾರೆ. ಮನೆ ಮಗಳು ಸಾಧನೆ ಮಾಡುವುದನ್ನು ನೋಡುವ ತವಕ ಅವರಿಗೂ ಇದೆ. ಹಾಗಾಗಿಯೇ ಮಹಿಳಾ ಪೈಲಟ್ ಗಳಿಗೆ ಕುಟುಂಬಸ್ಥರಿಂದ ಸಂಪೂರ್ಣ ಬೆಂಬಲ ಸಿಗ್ತಿದೆ. ಕುಟುಂಬಸ್ಥರು ಹಿಂದಿರುವ ಕಾರಣ, ಮನೆ ಚಿಂತೆ ಮರೆತು ಮಹಿಳೆಯರು ವೃತ್ತಿಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

ಮಹಿಳೆಯರಿಗೆ ಅಗತ್ಯ ಸೌಲಭ್ಯ ನೀಡುತ್ತದೆ ವಿಮಾನ ಸಂಸ್ಥೆ : ಭಾರತದ ವಿಮಾನಯಾನ ಸಂಸ್ಥೆಗಳು ಮಹಿಳಾ ಪೈಲಟ್‌ಗಳಿಗೆ ಅತ್ಯಂತ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿವೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ , ಮಹಿಳಾ ಪೈಲಟ್‌ಗಳಿಗೆ ಅತ್ಯಂತ ಸುಲಭವಾದ ನಿಯಮಗಳಲ್ಲಿ ಉದ್ಯೋಗಗಳನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳಾ ಪೈಲಟ್‌ಗಳಿಗೆ ಹಾರಾಟದ ಕೆಲಸವನ್ನು ನೀಡುವುದಿಲ್ಲ. ಕಾನೂನಿನ ಪ್ರಕಾರ, ಆಕೆಗೆ 26 ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಲಾಗುತ್ತದೆ. ಇದರೊಂದಿಗೆ ಮಕ್ಕಳ ಆರೈಕೆಗಾಗಿ ಶಿಶುವಿಹಾರಗಳೂ ಲಭ್ಯವಿವೆ. ಮಗುವಿಗೆ 5 ವರ್ಷವಾಗುವವರೆಗೆ ಮಹಿಳಾ ಪೈಲಟ್‌ಗಳು ಹೊಂದಿಕೊಳ್ಳುವ ಒಪ್ಪಂದವನ್ನು ತೆಗೆದುಕೊಳ್ಳಬಹುದು. ತಿಂಗಳಲ್ಲಿ 2 ವಾರಗಳ ರಜೆ ನೀಡಲಾಗುತ್ತದೆ.

ಭಾರತೀಯ ಕಾರ್ಗೋ ಏರ್‌ಲೈನ್ಸ್ ನಲ್ಲಿ ಈ ಸಂಖ್ಯೆ ಕಡಿಮೆ : ವರದಿಯ ಪ್ರಕಾರ, ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳು ಪ್ರಪಂಚದಾದ್ಯಂತ ಹೆಚ್ಚಿನ ಮಹಿಳೆಯರನ್ನು ನೇಮಿಸಿಕೊಂಡಿವೆ. ಮಹಿಳಾ ಪೈಲಟ್‌ಗಳ ಪಾಲು ಶೇಕಡಾ 6.4 ರಷ್ಟಿದೆ. ಭಾರತದಲ್ಲಿನ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳು ಶೇಕಡಾ 13.9ರಷ್ಟು ಮಹಿಳಾ ಪೈಲಟ್‌ಗಳನ್ನು ನೇಮಿಸಿಕೊಂಡರೆ, ಭಾರತೀಯ ಕಾರ್ಗೋ ಏರ್‌ಲೈನ್ಸ್ ಕಡಿಮೆ ಸಂಖ್ಯೆಯ ಮಹಿಳಾ ಪೈಲಟ್‌ಗಳನ್ನು ನೇಮಿಸಿಕೊಂಡಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ಈ ವಿಷಯದಲ್ಲಿ ಮುಂಚೂಣಿಯಲ್ಲಿವೆ.

ಗರ್ಭಿಣಿಯರಿಗೆ ಉಪ್ಪಿನಕಾಯಿ ತಿನ್ನೋ ಬಯಕೆ ಆಗೋದು ಯಾಕೆ?

ಇವರು ಭಾರತದ ಮೊದಲ ಮಹಿಳಾ ಪೈಲಟ್ : ಸರಳಾ ಥಕ್ರಾಲ್ ಭಾರತದ ಮೊದಲ ಮಹಿಳಾ ಪೈಲಟ್. 1936ರಲ್ಲಿ ಸರಳಾ ಸೀರೆಯುಟ್ಟು ವಿಮಾನ ಹಾರಾಟ ನಡೆಸಿದ್ದರು. 

Follow Us:
Download App:
  • android
  • ios