Asianet Suvarna News Asianet Suvarna News

ಆಕೆಗೇನು..ಕೋಟ್ಯಾಧಿಶೆ ಅಂತೀರಾ? ಡಿಕೆಶಿ ಮಗಳನ್ನು ಇಷ್ಟಪಡೋಕೆ ಇಲ್ಲಿವೆ ಕಾರಣಗಳು!

ಬ್ಯುಸಿನೆಸ್ ನಲ್ಲಿ ಡಿಕೆಶಿ ಮಗಳಿಗೆ ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಈಕೆಯನ್ನು ಹತ್ತಿರದಿಂದ ಬಲ್ಲವರು ಈಕೆಯ ಬುದ್ಧಿವಂತಿಕೆ, ವ್ಯವಹಾರದಲ್ಲಿ ತಂತ್ರಗಾರಿಕೆ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ.

reasons to like DCM DK Shivakumar daughter as a entrepreneur, educator Vin
Author
First Published Oct 1, 2023, 2:41 PM IST

ಡಿಸಿಎಂ ಡಿಕೆ ಶಿವಕುಮಾರ್ ಮಗಳು ಎಂಬುದು ಆಕೆಯ ಹಿಂದಿರುವ ಪ್ರಭಾವಳಿ. ಕೋಟ್ಯಂತರ ಆಸ್ತಿ ಇದೆ. ಡಿಕೆಶಿ ಆಸ್ತಿಯೆಲ್ಲವೂ ಸೇರಲಿರುವುದೂ ಅವರ ಮಗಳಿಗೇ. ಜತೆಗೆ ಸಿದ್ಧಾರ್ಥ ಅವರು ಕಟ್ಟಿದ ಸಾಮ್ರಾಜ್ಯಕ್ಕೂ ಆಕೆಯೇ ಮನೆ ಸೊಸೆ. ಇಂಥ ಹುಡುಗಿಯ ಲೈಫು ಹೇಗಿರಬಹುದು? ವಾರಕ್ಕೊಂದು ವಿದೇಶ ಪ್ರವಾಸ ಮಾಡಿಕೊಂಡು, ನೈಟ್ ಲೈಫ್‌ನಲ್ಲಿ ಮಜಾ ಉಡಾಯಿಸುತ್ತಾ, ಅಪ್ಪನ ಆಸ್ತಿಯನ್ನೆಲ್ಲ ಚಿಂದಿ ಚಿತ್ರಾನ್ನ ಮಾಡಿಕೊಂಡು ಇರಬಹುದು ಅಂದುಕೊಂಡಿದೀರಾ? ಊಹೂಂ. 

ಡಿಕೆಶಿ ಪುತ್ರಿ ಐಶ್ವರ್ಯ ತುಂಬಾ ಮೆಚ್ಯೂರ್ಡ್ ಹುಡುಗಿ. ಹೌದೋ ಅಲ್ಲವೋ ಅಂತ ಆಕೆಯ ಇನ್‌ಸ್ಟಾಗ್ರಾಂ ಅಕೌಟ್ ನೋಡಿದರೆ ಗೊತ್ತಾಗುತ್ತೆ. ಅದರಲ್ಲಿ ಇರೋದೆಲ್ಲ ಮೋಟಿವೇಶನ್ ಮಾತುಗಳು, ಆಕೆ ತನ್ನ ಇನ್‌ಸ್ಟಿಟ್ಯುಶನ್‌ನ ಸಿಬ್ಬಂದಿಗಳನ್ನು ಹುರಿದುಂಬಿಸುತ್ತಿರುವ ಭಾಷಣ, ತನ್ನ ಶಾಲೆ ಕಾಲೇಜಿನ ಮಕ್ಕಳಿಗೆ ಕಾಂಪಿಟಿಟಿವ್ ಜಗತ್ತಿನಲ್ಲಿ ಸಕ್ಸಸ್ ಹೇಗೆ ಅಚೀವ್ ಮಾಡಬೇಕು ಅಂತ ಹೇಳ್ತಾ ಇರೋ ಮಾತು, ಅಲ್ಲೆಲ್ಲೋ ಯಾರಿಗೋ ಸಹಾಯ (Help) ಮಾಡ್ತಾ ಇರೋದು, ಇನ್ನೆಲ್ಲೋ ಸುಧಾ ಮೂರ್ತಿ ಜೊತೆಗೋ, ಸದ್ಗುರು ಜೊತೆಗೋ ಸಂಭಾಷಣೆ (Conversation) ಮಾಡ್ತಿರೋದು, ಮತ್ತೆಲ್ಲೋ ವಿದೇಶದಲ್ಲಿ ಯಾವುದೋ ದೊಡ್ಡ ಕಾನ್ಫರೆನ್ಸ್‌ನಲ್ಲಿ ಭಾಷಣ (Speech) ಮಾಡುತ್ತಿರುವುದು, ಮತ್ತಿನ್ನೊಂದು ಕಡೆ ಟಿವಿ ಇಂಟರ್‌ವ್ಯೂ ಕೊಡ್ತಾ ಇರೋದು....

ಲೈಫ್‌ನಲ್ಲಿ ಹೀಗಿದ್ದರೆ ಸಕ್ಸಸ್‌ ಆಗುವುದು ಸುಲಭ; ಡಿಕೆಶಿ ಮಗಳು ಐಶ್ವರ್ಯ ಜೀವನ ಪಾಠ

ದೊಡ್ಡ ಶಿಕ್ಷಣ ಸಂಸ್ಥೆಗಳ ಸಾಮ್ರಾಜ್ಯ ಮುನ್ನಡೆಸಿಕೊಂಡು ಹೋಗ್ತಿರೋ ಸ್ತ್ರೀ ಶಕ್ತಿ
ಐಶ್ವರ್ಯ ಡಿಕೆಎಸ್ ಹೆಗ್ಡೆ ಎಂಬ ಹೆಸರಿನ  ಈಕೆಯ ಪ್ರೊಫೈಲ್ ನೋಡಿದರೆ ನೀವು ದಂಗಾಗಿ ಹೋಗುತ್ತೀರಿ. ಇವೆಲ್ಲಾ ಬರೀ ಶೋ ಆಫ್‌ಗಳೆಂದು ಅನ್ನಿಸುವುದೂ ಇಲ್ಲ. ಆಕೆಯ ನಡೆ ನುಡಿಯಲ್ಲಿ ಒಂದು ಖಚಿತತೆ ಇದೆ. ತನ್ನ ಗುರಿ ಹಾಗೂ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇದೆ. ದಾರಿಯ ಬಗ್ಗೆ ನಿಖರತೆ ಇದೆ. ಮಾತನಾಡುವುದು ತಡವರಿಸುವುದಿಲ್ಲ. ಅಸ್ಖಲಿತ ಇಂಗ್ಲಿಷ್‌ನಲ್ಲಿ ಈಕೆ ಮಾತನಾಡುತ್ತಾಳೆ. ತನ್ನ ಕನಸುಗಳನ್ನು ಕಟ್ಟಿಕೊಡುತ್ತಾಳೆ. ಮುಖ್ಯವಾಗಿ ಈಕೆ ಎಜುಕೇಶನ್ ಹಾಗೂ ವಿಮೆನ್ ಎಂಪವರ್‌ಮೆಂಟ್- ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣದ- ಪ್ರತಿಪಾದಕಿ. ತಮ್ಮ ಎಲ್ಲ ಮಾತುಗಳಲ್ಲಿ ಇವೆರಡಕ್ಕೆ ಪ್ರಥಮ ಸ್ಥಾನ. ತಂದೆ ಡಿಕೆಶಿ ಕಟ್ಟಿರುವ ದೊಡ್ಡ ಶಿಕ್ಷಣ ಸಂಸ್ಥೆಗಳ (Educational Institution) ಸಾಮ್ರಾಜ್ಯವನ್ನು ಯಾವುದೇ ಕೊರತೆಯಿಲ್ಲದಂತೆ ಮುನ್ನಡೆಸಿಕೊಂಡು ಹೋಗುತ್ತಿರುವ ಸ್ತ್ರೀ ಶಕ್ತಿ ಈಕೆ. 

ಡಿಕೆಶಿ ಶಿಕ್ಷಣ ಸಂಸ್ಥೆಗಳ ಅದರಲ್ಲೂ ಬಹು ಪ್ರತಿಷ್ಠಿತ ಎನಿಸಿರುವ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರವನ್ನು ಮಗಳು ಐಶ್ವರ್ಯಾ ನೋಡಿಕೊಳ್ಳುತ್ತಿದ್ದಾರೆ. ಬ್ಯುಸಿನೆಸ್ ನಲ್ಲಿ ಡಿಕೆಶಿ ಮಗಳಿಗೆ ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಈಕೆಯನ್ನು ಹತ್ತಿರದಿಂದ ಬಲ್ಲವರು ಈಕೆಯ ಬುದ್ಧಿವಂತಿಕೆ, ವ್ಯವಹಾರದಲ್ಲಿ ತಂತ್ರಗಾರಿಕೆ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ. ಇನ್ನೂ ೨೪ರ ಹರೆಯದ ಈ ಯುವತಿ. ತನ್ನ ಉಳಿದ ವಿವರಗಳನ್ನು ಹೊರ ಜಗತ್ತಿಗೆ ಗುಪ್ತವಾಗಿಯೇ ಇಟ್ಟಿರುವ ಈಕೆಯ ಹೆಸರು ಬೆಳಕಿಗೆ ಬಂದಿದ್ದು ತಂದೆಯ ಹಣ ಅವ್ಯವಹಾರ ಪ್ರಕರಣದಲ್ಲಿ.

ನೂರಾರು ಕೋಟಿ ಆಸ್ತಿ ಒಡತಿ ಡಿಕೆ ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ!

ಆಗ ತನ್ನನ್ನು ಅನಾವಶ್ಯಕವಾಗಿ ಫೋಕಸ್ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಈಕೆ ಸಿಟ್ಟಿನ ದನಿ ಎತ್ತಿದ್ದರು. ವಿಚಾರಣೆಯನ್ನು ಧೈರ್ಯವಾಗಿ ಎದುರಿಸಿದ್ದರು. ಆಗ ಡಿಕೆಶಿ ಮಗಳು ಸುಮ್ನೆ ಅಲ್ಲ ಅಂತ ಮಾಧ್ಯಮಗಳು ಮಾತನಾಡಿಕೊಂಡವು. ಐಶ್ವರ್ಯಾ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡತಿ. ನೂರಾರು ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳೂ ಈಕೆಯ ಹೆಸರಿನಲ್ಲಿವೆ. ಮುಂಬಯಿಯಲ್ಲಿ ಅಪಾರ್ಟ್‌ಮೆಂಟ್‌ ಇದೆ. ಗುಜರಾತ್‌ನ ಒಬ್ಬ ಉದ್ಯಮಿ (Businessman), ಮೋದಿಯ ಸ್ನೇಹಿತ ಈ ಉದ್ಯಮಿಯ ವ್ಯವಹಾರದಲ್ಲೂ ಡಿಕೆಶಿ ಮಗಳ ಷೇರುಗಳು ಇವೆ ಎನ್ನಲಾಗುತ್ತಿದೆ. 

ಬನ್ನಿ, ಈಕೆಯ ಜಾಣ್ಮೆ, ವಿಷನ್‌ನ ಒಂದು ಝಲಕ್ ನೋಡೋಣ. ಈಕೆಯ ಕೆಲವು ಕೋಟ್‌ಗಳು ಇಲ್ಲಿವೆ. 

- ಮಹಿಳೆಯರು ಶತಮಾನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೇವಲ ಒಂದಲ್ಲ, ಅನೇಕ ಯುದ್ಧಗಳನ್ನು ಎದುರಿಸುತ್ತಾರೆ- ಮನೆಯಲ್ಲಿ, ಸಮಾಜದಲ್ಲಿ ಅಥವಾ ಬಾಲ್ಯದಿಂದಲೂ ಅವಳ ಸ್ವಂತ ಕಂಡೀಷನಿಂಗ್‌ನಲ್ಲಿ.
- ತನ್ನ ಕನಸುಗಳ ಕಡೆಗೆ ಧುಮುಕುವುದು ಮತ್ತು ತಾನು ಬಯಸಿದ್ದನ್ನು ಸಾಧಿಸುವುದು ಮಹಿಳೆಗೆ ಮಾತ್ರ ಸಾಧ್ಯ. ಸಮಾಜವು ಅವಳಿಂದ ಅದನ್ನು ಬಯಸುವುದಿಲ್ಲ. ಆದರೆ ತಾನು ಕಟ್ಟುಪಾಡುಗಳಿಗೆ ಮಣಿಯುವುದಿಲ್ಲ ಎಂದು ದೃಢಚಿತ್ತದಿಂದ ನಿಂತಾಗ ಆಕೆ ಗೆಲ್ಲುತ್ತಾಳೆ. 
- ವೈಫಲ್ಯಗಳಿಂದ ಪಡೆದ ಪಾಠಗಳ ಕಡೆಗೆ ನಮ್ಮ ಗಮನವನ್ನು ಬದಲಾಯಿಸುವುದು ಮತ್ತು ಆ ಪಾಠಗಳನ್ನು ಬೆಳವಣಿಗೆಯಾಗಿ ಪರಿವರ್ತಿಸುವುದು ಸವಾಲುಗಳನ್ನು ಜಯಿಸಲು ಇಂಬು ನೀಡುತ್ತದೆ.
- ಪ್ರತಿದಿನ, ನಾನು ಕ್ಯಾಪ್ಟನ್ ಜತೆಗೆ ಸಿಬ್ಬಂದಿಯೂ ಆಗುತ್ತೇನೆ. ಕುತೂಹಲದ ನೀರಿನಲ್ಲಿ ನೌಕಾಯಾನ ಮಾಡುತ್ತೇನೆ. ಜ್ಞಾನ ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆಗೆ ನನ್ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತೇನೆ.
- ಪುಸ್ತಕಗಳು ಮನಸ್ಸನ್ನು ಪರಿವರ್ತಿಸುವ ಮತ್ತು ಕನಸುಗಳನ್ನು ಪ್ರೇರೇಪಿಸುವ ಶಕ್ತಿಯನ್ನು ಹೊಂದಿವೆ. ಪ್ರತಿಯೊಂದು ಪುಸ್ತಕವು ನಮ್ಮ ದೃಷ್ಟಿಕೋನಗಳನ್ನು ಮರುರೂಪಿಸುವ ಮತ್ತು ನಮ್ಮ ಆಕಾಂಕ್ಷೆಗಳನ್ನು ಸಶಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
- ತೆರೆದ ತೋಳುಗಳೊಂದಿಗೆ ಭವಿಷ್ಯವನ್ನು ಅಪ್ಪಿಕೊಳ್ಳಿ; ಅಲ್ಲಿ ನಿಮ್ಮ ಸಾಮರ್ಥ್ಯವು ನಿಜವಾಗಿಯೂ ಹೊಳೆಯುತ್ತದೆ. ನಿಮ್ಮ ಹಿಂದಿನವರು ಅಮೂಲ್ಯವಾದ ಶಿಕ್ಷಕರು. ಆದರೆ ಅವರ ಭಾರವು ನಿಮ್ಮನ್ನು ತಡೆಹಿಡಿಯಲು ಬಿಡಬೇಡಿ. 
- ಜೀವನದ ಹಾದಿಯೇ ನಮ್ಮ ಕ್ಯಾನ್ವಾಸ್ ಆಗಿದೆ. ಅಲ್ಲಿನ ಪ್ರತಿಯೊಂದು ಸವಾಲು ಮತ್ತು ಅವಕಾಶವು ನಮ್ಮ ಅಸ್ತಿತ್ವದ ವಿಶಿಷ್ಟ ಮತ್ತು ರೋಮಾಂಚಕ ಚಿತ್ರವನ್ನು ಚಿತ್ರಿಸುತ್ತದೆ.

Follow Us:
Download App:
  • android
  • ios