Asianet Suvarna News Asianet Suvarna News

ಇಷ್ಟೊಂದು ಫೇಮಸ್ ಇದ್ರು ಹುಡುಗ ಸಿಗಲಿಲ್ಲಾ? ತನ್ನೇ ತಾನು ಮದುವೆ ಆದ ಮಾಡೆಲ್!

ಮದುವೆ ಅನ್ನೋದು ಇಬ್ಬರ ಮಧ್ಯೆ ನಡೆಯುವುದು ಎನ್ನುವ ಮಾತು ಸುಳ್ಳಾಗ್ತಿದೆ. ಈಗಿನ ಯುವಜನರ ಆಲೋಚನೆ ಭಿನ್ನವಾಗಿದೆ. ಮದುವೆ ಆಗೋಕೆ ಯಾರೂ ಬೇಡ ಎನ್ನುವ ಅವರು ವಿಚಿತ್ರ ನಿರ್ಧಾರಕ್ಕೆ ಬರ್ತಿದ್ದಾರೆ.  
 

Playboy Model And Influencer Janaina Prazeres Marrying Herself  roo
Author
First Published Mar 7, 2024, 5:09 PM IST

ಈಗಿನ ದಿನಗಳಲ್ಲಿ ಯಾರನ್ನು ಯಾರು ಮದುವೆ ಆಗ್ತಾರೆ ಅಂತ ಹೇಳೋದೇ ಕಷ್ಟ. ಸಲಿಂಗಕಾಮಿಗಳ ಮದುವೆ ಕಾಮನ್ ಆಗಿದೆ. ಅದಲ್ಲದೆ ಸಹೋದರ – ಸಹೋದರಿಯನ್ನು ಮದುವೆ ಆಗುವ ಜನರಿದ್ದಾರೆ. ಕೆಲವರು ಪ್ರಾಣಿ, ಭೂತ, ಗಿಡದ ಜೊತೆ ಮದುವೆ ಆಗ್ತಾರೆ. ಮತ್ತೆ ಕೆಲವರಿಗೆ ಮದುವೆ ಆಗೋಕೆ ಯಾವುದೇ ಮನುಷ್ಯನಾಗ್ಲಿ, ಪ್ರಾಣಿಯಾಗ್ಲಿ, ವಸ್ತುವಾಗ್ಲಿ ಬೇಕಾಗಿಲ್ಲ. ಅವರು ಅವರನ್ನೇ ಮದುವೆ ಆಗ್ತಾರೆ. ಈಗ ಅಂಥಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ಲೇಬಾಯ್ ರೂಪದರ್ಶಿಯೊಬ್ಬಳು ತನ್ನ ಮದುವೆ ವಿಷ್ಯದಲ್ಲಿ ಸುದ್ದಿಯಲ್ಲಿದ್ದಾಳೆ. ಮಾಡೆಲ್ ತನ್ನನ್ನು ತಾನು ಮದುವೆ ಆಗಿದ್ದಲ್ಲದೆ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಹೇಳಿದ್ದಾಳೆ. ಆಕೆ ಹೇಳಿದ ಕಾರಣ ಜನರನ್ನು ಆಘಾತಗೊಳಿಸಿದೆ. ಮದುವೆ ಆಗಿದ್ದಲ್ಲದೆ ಮಾಡೆಲ್ ತನಗೇ ತಾನು ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾಳೆ. 

ತನ್ನನ್ನೇ ತಾನು ಮದುವೆ ಆದ ಮಾಡಲ್ (Model) ಹೆಸರು ಜನೈನಾ ಪ್ರಜೆರೆಸ್. ಆಕೆಗೆ 35 ವರ್ಷ. ಬ್ರೆಜಿಲಿಯನ್ (Brazilian) ಮಾಡೆಲ್ ಈಕೆ. ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಮಂದಿ ಮನಸ್ಸು ಗೆದ್ದಿದ್ದಾಳೆ ಈಕೆ. ಪ್ಲೇಬಾಯ್ (Playboy) ವೆಬ್ಸೈಟ್ ನಲ್ಲಿ ಈಕೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾಳೆ. ಆಕೆ ಅಂದ ನೋಡಿದ ಪ್ಲೇಬಾಯ್ ಕೆಲ ದಿನಗಳ ಹಿಂದಷ್ಟೆ ಜನೈನಾ ಪ್ರಜೆರೆಸ್ ಗೆ ಪರ್ಫೆಕ್ಟ್ ವುಮೆನ್ ಎಂಬ ಪಟ್ಟ ನೀಡಿದೆ. ಜನೈನಾ ಪ್ರಜೆರೆಸ್ ಪರ್ಫೆಕ್ಟ್ ವುಮೆನ್ ಆಗಿರಬಹುದು, ಆದ್ರೆ ಮದುವೆ ವಿಷ್ಯದಲ್ಲಿ ಆಕೆಗೆ ಸರಿಯಾದ ವರ ಸಿಗ್ತಿಲ್ಲ. 

ಬಿಗ್ಬಾಸ್ ಸ್ಪರ್ಧಿ ಜೊತೆ ಮತ್ತೆ ಹಸೆಮಣೆ ಏರಿದ್ರಾ ರಾಖಿ ಸಾವಂತ್ ಪತಿ ಆದಿಲ್ ಖಾನ್

ಜನೈನಾ ಪ್ರಜೆರೆಸ್ ಸ್ವತಂತ್ರವಾಗಿರಲು ಬಯಸುವ ಮಾಡೆಲ್. ಆಕೆಗೆ ಬೇರೆಯವರ ಇಷ್ಟದಂತೆ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜನೈನಾ ಪ್ರಜೆರೆಸ್ ತನ್ನನ್ನು ತಾನು ಮದುವೆಯಾಗಿದ್ದಾಳೆ. ಜನೈನಾ ಪ್ರಜೆರೆಸ್ ಬರೀ ಮದುವೆ ಆಗಿದ್ದು ಮಾತ್ರವಲ್ಲ ತನಗೆ ತಾನೇ ಉಡುಗೊರೆ ಕೊಟ್ಟುಕೊಂಡಿದ್ದಾಳೆ. 67 ಲಕ್ಷ ರೂಪಾಯಿ ಮೌಲ್ಯದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾಳೆ ಮಾಡೆಲ್.  ಬೇರೆಯವರ ಸಹಾಯ ಪಡೆದು ನಾನು ಇಷ್ಟೆಲ್ಲ ಹಣಗಳಿಸಿದ್ದೇನೆ ಎಂದು ಜನರು ಭಾವಿಸ್ತಾರೆ. ಆದ್ರೆ ನಾನು ಯಾರ ಸಹಾಯವನ್ನೂ ಪಡೆದಿಲ್ಲ. ನಾನು ಇಷ್ಟೊಂದು ಪ್ರಸಿದ್ಧಿ ಪಡೆಯಲು, ಹಣ ಸಂಪಾದನೆ ಮಾಡಲು ನಾನೇ ಕಾರಣ ಎಂದು ಜನೈನಾ ಹೇಳಿದ್ದಾಳೆ. 

ಜನೈನಾ ಸೆಲ್ಫ್ ಲವ್ವರ್. ಮಹಿಳೆಯಾಗಿ ಆಕೆಯನ್ನು ಆಕೆ ಗೌರವಿಸುತ್ತಾಳೆ. ನನಗೆ ಏನು ಬೇಕು ಎಂಬುದು ನನಗೆ ಗೊತ್ತು ಎನ್ನುತ್ತಾಳೆ ಜನೈನಾ.  ನಿಜವಾಗಿಯೂ ಸಂತೋಷವಾಗಿರಲು ಮತ್ತು  ತೃಪ್ತಿಪಡೆಯಲು ನಾನು ಮೊದಲು ನನ್ನನ್ನು ಬೇಷರತ್ತಾಗಿ ಪ್ರೀತಿಸಬೇಕು ಎಂದು ನಾನು ಅರಿತುಕೊಂಡೆ. ನನಗೆ ನಾನೇ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಜನೈನಾ ಹೇಳಿದ್ದಾಳೆ. ಈ ಉಂಗುರ ನನ್ನ ಜೊತೆಗಿರುವ ಸಂಬಂಧದ ಸೂಚಕ ಎಂದು ಜನೈನಾ ಹೇಳಿದ್ದಾಳೆ. 

ಗಂಡ ಹೆಂಡತಿ ನಡುವೆ ಅಂತರ ಬೆಳೆಯಲು ಇದೇ ಕಾರಣವಂತೆ ಗೊತ್ತಾ?

ತನ್ನನ್ನು ತಾನು ಮದುವೆ ಆಗಿರುವ ಬಗ್ಗೆ ಮಾತನಾಡಿದ ಜನೈನಾ, ಇದು ಸ್ವಯಂ ಅನ್ವೇಷಣೆಯ ಪ್ರಕ್ರಿಯೆ. ಪ್ಲೇಬಾಯ್ ನನಗೆ ಪರ್ಫೆಕ್ಟ್ ವುಮೆನ್ ಪಟ್ಟ ನೀಡಿದ ಮೇಲೆ ನಾನು ಸಂಪೂರ್ಣವಾಗಿ ಬದಲಾಗಿದ್ದೇನೆ ಎನ್ನುತ್ತಾಳೆ ಜನೈನಾ.  ಆರಂಭದಲ್ಲಿ ನನಗೆ ಈ ಪ್ರಶಸ್ತಿ ಖುಷಿ ನೀಡಿತ್ತು. ಇದನ್ನು ನಂಬೋದು ಕೂಡ ಕಷ್ಟವಾಗಿತ್ತು. ನಿಧಾನವಾಗಿ ನನ್ನ ಸೌಂದರ್ಯದ ಬಗ್ಗೆ ಅರಿವಾಯ್ತು. ನನ್ನ ಪ್ರತಿಯೊಂದು ಗುಣಗಳನ್ನು ಗುರುತಿಸುವುದನ್ನು ನಾನು ಅಭ್ಯಾಸ ಮಾಡಿದ್ದೇನೆ ಎಂದು ಜನೈನಾ ಹೇಳಿದ್ದಾಳೆ. 

ಇಲ್ಲಿನ ಯಾವುದೇ ಸಂಬಂಧ ಜನೈನಾಗೆ ಸಂತೋಷ ನೀಡಿರಲಿಲ್ಲ. ಪುರುಷರನ್ನು ಖುಷಿಪಡಿಸಲು ತನ್ನನ್ನು ತಾನು ಬದಲಿಸಿಕೊಂಡಿದ್ದಳು ಜನೈನಾ. ಆದ್ರೂ ಪುರುಷರಿಂದ ಆಕೆಗೆ ಸಿಗಬೇಕಾದ ಗೌರವ ಸಿಕ್ಕಿರಲಿಲ್ಲ. ನನ್ನ ಈ ಹೊಸ ಸಂಬಂಧದಲ್ಲಿ ಯಾವುದೇ ತೊಂದರೆ ಆಗೋದಿಲ್ಲ ಎನ್ನುತ್ತಾಳೆ ಜನೈನಾ. 

Follow Us:
Download App:
  • android
  • ios