ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾಗವಹಿಸಿ, ರಸ್ತೆ ಅಪಘಾತದ ನಂತರದ ಮೊದಲ ಕಾರ್ಯಕ್ರಮ ಇದಾಗಿದೆ ಎಂದರು. ಮಹಿಳೆಯರು ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಹೊಂದಿದ್ದು, ಮನೆಯಾಚೆಗೂ ಸಾಧನೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಮಹಿಳಾ ಶಕ್ತಿಯ ಪ್ರತೀಕ. ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥೆಯಾದ ತನಗೆ ಹೆಮ್ಮೆ ಇದೆ ಎಂದರು. ತಮ್ಮ ರಾಜಕೀಯ ಹೋರಾಟದ ಬಗ್ಗೆಯೂ ಅವರು ಮಾತನಾಡಿದರು.

ಬೆಂಗಳೂರು (ಮಾ.8): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಭಾಗಿಯಾಗಿದ್ದರು. ರಸ್ತೆ ಅಪಘಾತವಾದ ಮೇಲೆ ಇದು ನನ್ನ ಮೊದಲ ಕಾರ್ಯಕ್ರಮ ಎಂದು ಸಚಿವೆ ವೇದಿಕೆಯಲ್ಲಿದ್ದ ಮಾಜಿ ಶಾಸಕಿ ಸೌಮ್ಯರೆಡ್ಡಿಯ ಬಗ್ಗೆ ಮಾತನಾಡಿದ್ದಾರೆ. 16 ವೋಟಿನಲ್ಲಿ ಸೋತಿದ್ದಾಳೆ. ಅವಳದ್ದೇ ತಪ್ಪಿನಿಂದ ಸೋತಿದ್ದಾಳೆ. ಆದ್ರೇ ನನ್ನ ಪಾಲಿಗೆ ಆಕೆ ಶಾಸಕಿನೇ. ನಾನು 1975 ರಲ್ಲಿ ಹುಟ್ಟಿದ್ದು ನಂಗೆ 50 ವರ್ಷ! ಆದ್ರೇ ನಾನು ಹಾಗೆ ಕಾಣ್ತೀನಾ? ವಯಸ್ಸು ಮುಖ್ಯ ಅಲ್ಲ ಬಿಡಿ ಎಂದರು.

ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಸದ್ಯದಲ್ಲೇ ಬಿಡುಗಡೆ: ಲಕ್ಷ್ಮಿ ಹೆಬ್ಬಾಳ್ಕರ್ !

ಪುರುಷರಿಗಿಂತ 100% ಹೆಚ್ಚು ಜವಾಬ್ದಾರಿ, ಬದ್ಧತೆ ಮಹಿಳೆಯರಿಗೆ ಹೆಚ್ಚು ಇರುತ್ತೆ. ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಈಗ ಮನೆಯಾಚೆಗೂ ಸಾಧನೆ ಮಾಡುತ್ತಿದ್ದಾಳೆ. ರಾಜಕಾರಣದಲ್ಲಿ ಇಂದಿರಾಗಾಂಧಿ ಮಹಿಳೆಯರ ಶಕ್ತಿಯ ಪ್ರತೀಕ. ವಾಜಪೇಯಿಯವರ ಬಾಯಲ್ಲಿಯೇ ಇಂದಿರಾಗಾಂಧಿ ದುರ್ಗಮಾತೆ ಅನ್ನುವ ಮಾತನ್ನು ಹೇಳಿದ್ರು. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥಳು ನಾನು.ನಂಗೆ ಬಹಳ ಹೆಮ್ಮೆ ಇದೆ.ನಾನು ಕಡಿಮೆ ಕಲಿತಿರುವೆ ಆದ್ರೇ ಅನುಭವ ಪಾಠ ಕಲಿಸಿದೆ‌. ಮಹಿಳೆಗೆ ಸ್ವಾಭಿಮಾನಕ್ಕೆ ಪೆಟ್ಟು ಬಿದ್ರೆ ಎಂತಹ ಕೆಲಸಕ್ಕೂ ಮಹಿಳೆ ಮುಂದಾಗ್ತಾಳೆ.

ABVP Protest Belagavi: ಭಿಕ್ಷಾಟನೆ ಮೂಲಕ ಹೆಬ್ಬಾಳ್ಕರ್ ಮನೆ ಮುಂದೆ ABVP ಕಾರ್ಯಕರ್ತರ ಪ್ರತಿಭಟನೆ

ನನ್ ಗಾಡಿ 30ರ ಮೇಲೆ ಓಡಿಸಲ್ಲ. ಡ್ರೈವರ್ ಇದ್ದನಲ್ಲಾ ಅವನಿಗೆ ಭಯ.ನಂಗೆ ಮನೆಯಿಂದ ಇಲ್ಲಿಯವರೆಗೆ ಬರೋಕೆ 1 ಕಾಲು ಗಂಟೆ ಆಯ್ತು. ನಾನ್ ಬೈದ್ರೂ ಅವ್ನು ಗಾಡಿನಾ 30 ಮೇಲೆ ಓಡಿಸಲ್ಲ ಈಗ. ಲಿಂಗಾಯಿತರು ಯಾರು ಇರಲಿಲ್ಲ. ಅಲ್ಲಿ ಎಲ್ಲರು ಮರಾಠರು ಮರಾಠಿ ಭಾಷೆ ಮಾತನಾಡ್ತಾರೆ. ಆದ್ರೇ ಸೋತು ಸೋತು ಕೊನೆಗೆ ಗೆದ್ದೆ. ಅದು ನನ್ನ ಶ್ರಮ. 

ನಮ್ ಮನೆಯಲ್ಲಿ ಯಾರೂ ರಾಜಕಾರಣ ಮಾಡಿಲ್ಲ. ಆರಂಭದಲ್ಲಿ ಯಾರೂ ರೆಡ್ ಕಾರ್ಪೆಟ್ ಹಾಕಿಲ್ಲ.ಆದ್ರೇ ಈಗ ರೆಡ್ ಕಾರ್ಪೆಟ್ ಹಾಕುತ್ತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನ 2025 ಮತ್ತಷ್ಟು ವಿಶೇ‍ಷವಾಗಿಸಿದ ಗೂಗಲ್!

Scroll to load tweet…