ಈ ಸಂದರ್ಭದಲ್ಲಿ ಅಪ್ಪಿತಪ್ಪಿಯೂ Menstrual Cup ಬಳಸ್ಬೇಡಿ

ಮುಟ್ಟಿನ ಕಪ್ ಈಗ ಜನಪ್ರಿಯವಾಗಿದೆ. ಎಲ್ಲರೂ ಇದನ್ನು ಬಳಸಲು ಮುಂದಾಗ್ತಿದ್ದಾರೆ. ನೀವೂ ಅದನ್ನು ಖರೀದಿಸಿದ್ದರೆ ಮೊದಲು ನಿಮಗೆ ಅದು ಹೊಂದಿಕೆಯಾಗುತ್ತಾ ಎಂಬುದನ್ನು ನೋಡಿ. ಎಲ್ಲರಿಗೂ ಮುಟ್ಟಿನ ಕಪ್ ಆಗಿ ಬರೋದಿಲ್ಲ ಎಂಬುದು ನೆನಪಿರಲಿ. 

Know When Not To Use A Menstrual Cup

ಮಾರುಕಟ್ಟೆ (Market)ಯಲ್ಲಿ ಮುಟ್ಟಿ (Menstruation))ನ ಸಂದರ್ಭದಲ್ಲಿ ಬಳಸುವ ಅನೇಕ ಉತ್ಪನ್ನಗಳನ್ನು ನಾವು ನೋಡ್ಬಹುದು. ಸ್ಯಾನಿಟರಿ ಪ್ಯಾಡ್ ((Sanitary pad))ಪರಿಸರ ನಾಶ ಮಾಡ್ತಿದೆ ಎಂಬ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್‌ ((Menstrual cup))ಗಳ ಜನಪ್ರಿಯತೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಇದರತ್ತ ಮುಖ ಮಾಡುತ್ತಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಇದು ಆರಾಮದಾಯಕವಾಗಿದೆ. ಪದೇ ಪದೇ ಪ್ಯಾಡ್ ಬದಲಿಸುವ ಚಿಂತೆ ಇರುವುದಿಲ್ಲ. ಲೀಕ್ ಆಗುವ ಭಯ ಕಾಡುವುದಿಲ್ಲ. ದೂರದ ಪ್ರಯಾಣ ಸೇರಿದಂತೆ ಬಹಳ ಸಮಯ ನಿರಂತರವಾಗಿ ಕೆಲಸ ಮಾಡುವ ಮಹಿಳೆಯರಿಗೆ ಇದು ಬಹಳ ಒಳ್ಳೆಯದು.

ದಿನಕ್ಕೆ ಮೂರ್ನಾಲ್ಕು ಪ್ಯಾಡ್ ಬಳಸಲು ಅನೇಕರ ಬಳಿ ಹಣವಿರುವುದಿಲ್ಲ. ಅಂತವರು ಹಳೆಯ ಪದ್ಧತಿಗೆ ಮೊರೆ ಹೋಗ್ತಾರೆ. ಆದ್ರೆ ಬಟ್ಟೆ, ಅತಿ ಹೆಚ್ಚು ರಕ್ತಸ್ರಾವವನ್ನು ತಡೆಯುವ ಶಕ್ತಿ ಹೊಂದಿರುವುದಿಲ್ಲ. ಇದ್ರಿಂದ ಮತ್ತೊಂದಿಷ್ಟು ಸಮಸ್ಯೆ ಕಾಡುತ್ತದೆ. ಆದ್ರೆ ಮುಟ್ಟಿನ ಕಪ್ ಒಮ್ಮೆ ಖರೀದಿ ಮಾಡಿದ್ರೆ 7 ವರ್ಷಗಳ ಕಾಲ ಆರಾಮವಾಗಿ ಬಳಸಬಹುದು. ಹಾಗೆಯೇ ಅದನ್ನು ತೆಗೆದುಕೊಂಡು ಹೋಗುವುದು ಸುಲಭ. ಈ ಎಲ್ಲ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಮುಟ್ಟಿನ ಕಪ್ ಬಳಕೆ ರೂಢಿಸಿಕೊಂಡಿದ್ದಾರೆ. ಆದ್ರೆ ಇನ್ನೂ ಅನೇಕರಿಗೆ ಇದ್ರ ಬಗ್ಗೆ ಭಯವಿದೆ. ಇದನ್ನು ಬಳಸುವ ಸರಿಯಾದ ಮಾಹಿತಿ ಅನೇಕರಿಗಿಲ್ಲ. ಎಷ್ಟೇ ಲಾಭವಿದ್ದರೂ ಎಲ್ಲ ವಸ್ತುಗಳಲ್ಲಿ ಒಂದಿಲ್ಲೊಂದು ದೋಷವಿರುತ್ತದೆ. ಮುಟ್ಟಿನ ಕಪ್ ನಲ್ಲಿಯೂ ಕೆಲ ದೋಷವಿದೆ. ಎಲ್ಲರೂ ಇದನ್ನು ಬಳಸಲು ಸಾಧ್ಯವಿಲ್ಲ. ಮುಟ್ಟಿನ ಕಪ್ ಬಳಸುವ ಮೊದಲು ಯಾರು ಅದನ್ನು ಬಳಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. 

ಇವರು ಮುಟ್ಟಿನ ಕಪ್ ಬಳಸಬೇಡಿ 

1. ಸಿಲಿಕಾನ್ ಅಲರ್ಜಿ : ಮುಟ್ಟಿನ ಕಪ್ ಒಂದು ಮರುಬಳಕೆ ಮಾಡಬಹುದಾದ ಉತ್ಪನ್ನವಾಗಿದೆ. ಅದು ಕೊಳವೆಯ ಆಕಾರದಲ್ಲಿರುತ್ತದೆ.  ರಬ್ಬರ್ ಅಥವಾ ಸಿಲಿಕಾನ್‌ನಿಂದ ಮಾಡಲ್ಪಟ್ಟಿದೆ. ಇದು ಇತರ ವಿಧಾನಗಳಿಗಿಂತ ಹೆಚ್ಚು ರಕ್ತವನ್ನು ಹಿಡಿದಿಡಬಲ್ಲದು. ತಜ್ಞರ ಪ್ರಕಾರ, ಸಿಲಿಕಾನ್‌ ಅಲರ್ಜಿ ಇದ್ದವರು ಮುಟ್ಟಿನ ಕಪ್‌ ಬಳಸಬಾರದು. ಮುಟ್ಟಿನ ಕಪ್ ಖರೀದಿ ಮೊದಲು ಅದನ್ನು ಪರೀಕ್ಷಿಸುವ ಅಗತ್ಯವಿದೆ. ಕಪ್ ಸಿಲಿಕಾನ್ ನಿಂದ ತಯಾರಿಸಲ್ಪಟ್ಟಿದ್ದರೆ ಅಲರ್ಜಿ ಇರುವವರು ಅದನ್ನು ಬಳಸಬೇಡಿ. ಕೆಂಪು ದದ್ದು ಮತ್ತು ಯೋನಿಯ ಒಳಗೆ ಮತ್ತು ಹೊರಗೆ ಊತ ಸಿಲಿಕೋನ್ ಅಲರ್ಜಿಯ ಸಾಮಾನ್ಯ ಲಕ್ಷಣಗಳಾಗಿರುತ್ತವೆ.

ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ Sex Life ಹೇಗಿರುತ್ತೆ?

2. ಗರ್ಭಾಶಯದ ಸಾಧನ ಐಯುಡಿ : ಗರ್ಭಾಶಯದ ಸಾಧನ ಐಯುಡಿ ಹೊಂದಿದ್ದರೆ ಮುಟ್ಟಿನ ಕಪ್ ಬಳಸುವುದು ಕಷ್ಟವಾಗುತ್ತದೆ. ಐಯುಡಿ ಒಂದು ಒಳ ಸೇರಿಸಬಹುದಾದ ಗರ್ಭನಿರೋಧಕ ಸಾಧನವಾಗಿದೆ. ಸಣ್ಣ ಟಿ-ಆಕಾರದ ಪ್ಲಾಸ್ಟಿಕ್ ಮತ್ತು ತಾಮ್ರದ ಸಾಧನವಾಗಿದೆ. ಇದನ್ನು ವೈದ್ಯರು ನಿಮ್ಮ ಗರ್ಭಾಶಯದೊಳಗೆ ಇರಿಸುತ್ತಾರೆ. ಕೆಲವೊಮ್ಮೆ ನಿಮ್ಮ ಕಪ್  ತೆಗೆಯುವಾಗ ಐಯುಡಿ ಅದ್ರ ಜೊತೆ ಬರುವ ಅಪಾಯವಿದೆ.  ಅದರಿಂದ ನೋವಾಗುತ್ತದೆ. ಗರ್ಭನಿರೋಧಕ ವಿಫಲತೆಗೆ ಕಾರಣವಾಗುತ್ತದೆ. 

3. ಯೋನಿ ಶಸ್ತ್ರಚಿಕಿತ್ಸೆ : ನೀವು ಇತ್ತೀಚೆಗೆ ಯೋನಿ ಶಸ್ತ್ರಚಿಕಿತ್ಸೆ, ಗರ್ಭಪಾತ ಅಥವಾ ಹೆರಿಗೆಯಾಗಿದ್ದರೆ  ಕನಿಷ್ಠ ಆರು ವಾರಗಳವರೆಗೆ ಮುಟ್ಟಿನ ಕಪ್ ಮತ್ತು ಟ್ಯಾಂಪೂನ್ ಗಳನ್ನು ಬಳಸಬೇಡಿ. ಇದನ್ನು ಯೋನಿಯಿಂದ ದೂರವಿಡುವುದು ಒಳ್ಳೆಯದು. ಮುಟ್ಟಿನ ಕಪ್ ಬಳಸುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆಯಿರಿ.

Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!

4. ಅಸಹಜತೆ : ಕೆಲವರಿಗೆ ಮುಟ್ಟಿನ ಕಪ್ ಬಳಸುವುದು ಕಷ್ಟವಾಗುತ್ತದೆ. ಸರಿಯಾಗಿ ಮಾಹಿತಿ ಪಡೆದ ನಂತ್ರವೂ ಕಪ್ ಬಳಸಲು ಸಾಧ್ಯವಾಗದೆ ಹೋದಲ್ಲಿ ಅಥವಾ ಕಪ್ ಹಾಕಿದ ನಂತ್ರ ಸಹಜವಾಗಿರಲು ಸಾಧ್ಯವಿಲ್ಲ ಎನ್ನುವವರು ಅದನ್ನು ಬಳಸದಿರುವುದು ಒಳ್ಳೆಯದು. ಕೆಲವೊಮ್ಮೆ ಗಾತ್ರದ ಕಾರಣಕ್ಕೂ ಸಮಸ್ಯೆಯಾಗುತ್ತದೆ. ಹಾಗಾಗಿ ಇದ್ರ ಬಗ್ಗೆ ಸರಿಯಾಗಿ ತಿಳಿದು ಬಳಸಬೇಕಾಗುತ್ತದೆ. ಮುಟ್ಟಿನ ಕಪ್ ಸರಿಯಾಗಿ ಬಳಸದೆ ಹೋದಾಗ ಅದು ಚುಚ್ಚಿದ ಅನುಭವವಾಗುತ್ತದೆ. ಯೋನಿ ಗಾಯಗೊಳ್ಳುವ ಸಾಧ್ಯತೆಯಿದೆ. 

Latest Videos
Follow Us:
Download App:
  • android
  • ios