ಗರ್ಭದಲ್ಲಿ ಮಗುವಿದ್ದಾಗ ಮಹಿಳೆ ಏನೇನೋ ವಿಚಿತ್ರ ಅನುಭವಗಳನ್ನು ಅನುಭವಿಸುವುದು ಉಂಟು. ಆದರೆ ಆ 9 ತಿಂಗಳು ಮಗು ಗರ್ಭದಲ್ಲಿ ಏನೆಲ್ಲಾ ಮಾಡುತ್ತೆ? ಕುತೂಹಲದ ವಿಡಿಯೋ ಇಲ್ಲಿದೆ ನೋಡಿ... 

ಬಹುತೇಕ ಎಲ್ಲಾ ಮಹಿಳೆಗೂ ಅಮ್ಮನಾಗುವ ಹಂಬಲ ಇದ್ದೇ ಇರುತ್ತದೆ. ಇಂದು ಅಮ್ಮನಾದರೆ ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಹಿಂದೇಟು ಹಾಕುವುದು, ಕರಿಯರ್​ ದೃಷ್ಟಿಯಿಂದ ಮಗುವನ್ನು ಮಾಡಿಕೊಳ್ಳಲು ವಿಳಂಬ ಮಾಡುವುದು, ಮಗುವಾದರೆ ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಮಗುವೇ ಬೇಡ ಎನ್ನುವವರು... ಹೀಗೆ ಕೆಲವರು ಮನಸ್ಥಿತಿ ಏನೇ ಇದ್ದರೂ ಒಂದು ಕಂದನ ನಗು ನೋಡಿದ ತಕ್ಷಣ ಆ ಹೃದಯದಲ್ಲಿ ನನ್ನದೂ ಒಂದು ಮಗು ಇದ್ದರೆ ಎನ್ನಿಸದೇ ಇರದು. ಆದರೆ ಮನುಷ್ಯನೇ ಆಗಲಿ, ಪ್ರಾಣಿ-ಪಕ್ಷಿ, ಕೀಟ ಯಾವುದೇ ಇರಲಿ... ಹೆಣ್ಣಿನ ಗರ್ಭದಲ್ಲಿ ಒಂದು ಜೀವದ ಸೃಷ್ಟಿಯಾಗುವುದೇ ವಿಚಿತ್ರದಲ್ಲಿ ವಿಚಿತ್ರ ಎನ್ನಿಸುತ್ತದೆ. ಅಂಡಾಣು ಮತ್ತು ವೀರ್ಯಾಣು ಸೇರಿದಾಗ ಒಂದು ಜೀವದ ಸೃಷ್ಟಿಯಾಗುತ್ತದೆ ಎಂದು ಹೀಗೆ ಊಹಿಸಿಕೊಂಡರೆ ನಿಜಕ್ಕೂ ಅದೊಂದು ಪವಾಡವೇ ಎನ್ನಿಸುವುದು ಉಂಟು. ಈ ಸೃಷ್ಟಿಯ ವೈಚಿತ್ರ್ಯದ ಮುಂದೆ ಎಲ್ಲವೂ ಗೌಣ ಎನ್ನುವಂತೆ ಇದನ್ನು ಹಾಗೆಯೇ ಸ್ವೀಕರಿಸಿದ್ದೇವೆ ಅಷ್ಟೇ.

ಆದರೆ, ಗರ್ಭದಲ್ಲಿ 9 ತಿಂಗಳು ಇರುವ ಮಗು ಏನೆಲ್ಲಾ ಮಾಡುತ್ತದೆ ಎಂದು ಊಹಿಸುವುದು ಕಷ್ಟವೇ. 5-6ನೇ ತಿಂಗಳಿಗೆ ಗರ್ಭಿಣಿಗೆ ಹೊಟ್ಟೆಯಲ್ಲಿ ಮಗು ಹರಿದಾಡಿದ ಅನುಭವ, ಬಳಿಕ ಮಗು ಒದ್ದಂತೆ ಆಗುವುದು ಎಲ್ಲವೂ ರೋಚಕ ಎನ್ನಿಸುವುದು ಉಂಟು. ಆ ಮಗುವನ್ನು ಹೊತ್ತು ಅದರ ಅನುಭವದ ರಸಸ್ವಾದವನ್ನು ಪಡೆಯುವುದು ಮಹಿಳೆಗೆ ಖುಷಿಯೂ ಹೌದು, ಕೆಲವೊಮ್ಮೆ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚೂ ಕಡಿಮೆಯಾದರೆ ಅದಕ್ಕಿಂತ ಹಿಂಸೆ ಇನ್ನೊಂದಿಲ್ಲ ಎನ್ನುವುದೂ ಸಹಜವೇ. ಅದರಲ್ಲಿಯೂ ಪ್ರಸವ ಎಂದರೆ ಮಹಿಳೆಗೆ ಪುನರ್ಜನ್ಮ ಎನ್ನುವ ಮಾತಿಗೆ. ನಾರ್ಮಲ್​ ಡಿಲೆವರಿಯೇ ಆಗಲಿ, ಸಿಸರಿಯನ್ನೇ ಆಗಲಿ ಮಹಿಳೆ ನೋವು ತಿನ್ನುವುದು ಇದ್ದರೂ, ಆ ಮಗುವಿನ ಮುಖ ನೋಡುತ್ತಲೇ ಆ ನೋವನ್ನು ಮರೆಯುವುದೂ ಪ್ರಕೃತಿ ಸಹಜವೇ.

ಹಾಗಿದ್ದರೆ ಮಗು ಗರ್ಭದಲ್ಲಿ ಇದ್ದಾಗ ಏನೇನು ಮಾಡುತ್ತದೆ, ಅದು ಊಟ ಮಾಡುತ್ತಾ, ಕನಸು ಕಾಣತ್ತಾ, ಅಮ್ಮನಿಗೆ ಹೇಗೆ ಒದೆಯತ್ತೆ, ಅದಕ್ಕೆ ಆಹಾರ ಏನು? 9 ತಿಂಗಳು ಮಗು ಹೇಗೆ ಉಸಿರಾಡಿಸುತ್ತದೆ, ಅದು ಏನೆಲ್ಲಾ ಮಾಡಬಹುದು ಎನ್ನುವ ಕುತೂಹಲವಂತೂ ಬಹುತೇಕ ಮಂದಿಗೆ ಇದದ್ದೇ. ಇದೀಗ ಗರ್ಭದಲ್ಲಿನ ಮಗುವಿನ ಸಂಪೂರ್ಣ ಜೀವನ ಕ್ರಮವನ್ನು ಈ ಕೆಳಗಿನ ವಿಡಿಯೋದಲ್ಲಿ ಕಟ್ಟಿಕೊಡಲಾಗಿದೆ. ನೋಡಿ...

ಮೊದಲ 14 ವಾರಗಳು ಅರ್ಥಾತ್​ ಮೂರುವರೆ ತಿಂಗಳು ಮಗು ಅಮ್ಮ ಸೇವಿಸಿದ ದ್ರವ್ಯವನ್ನು ಕುಡಿಯುತ್ತದೆ, ಆಕಳಿಕೆ ತೆಗೆಯುತ್ತದೆ, ಕೈಕಾಲುಗಳನ್ನು ಅಲ್ಲಾಡಿಸುತ್ತದೆ, ಗರ್ಭಕೋಶವನ್ನು ಎಳೆಯುತ್ತದೆ, ರಿಲ್ಯಾಕ್ಸ್​ ಮೂಡ್​ಗೆ ಬರುತ್ತದೆ, ಅದಾದ ಬಳಿಕ ಒದೆಯಲು ಶುರು ಮಾಡುತ್ತದೆ, ಬಿಕ್ಕಳಿಸುತ್ತದೆ, 15 ವಾರ ಆಗುತ್ತಿದ್ದಂತೆಯೇ ಅಲ್ಲಿಯೇ ಅಳುತ್ತದೆ, ಮೂತ್ರ ವಿಸರ್ಜನೆ ಮಾಡುತ್ತದೆ, ಕುಡಿಯುವುದನ್ನು ಹೆಚ್ಚಿಸುತ್ತವೆ, ಅಲ್ಲಿಯೇ ಜಿಗಿಯುತ್ತವೆ... ಈ ಎಲ್ಲವನ್ನೂ ಈ ಕೆಳಗಿರುವ ವಿಡಿಯೋದಲ್ಲಿ ತೋರಿಸಲಾಗಿದೆ ನೋಡಿ...

View post on Instagram