ಗಂಡನಿಗಾಗಿ ತನ್ನ ತಟ್ಟೆಯ ಊಟವನ್ನೂ ಕೊಡೋ ಹೆಂಡ್ತಿ, ವಿಡಿಯೋ ವೈರಲ್‌; ನೆಟ್ಟಿಗರು ಗರಂ

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡೋದು ಇತ್ತೀಚಿಗೆ ಎಲ್ಲರಿಗೂ ಕ್ರೇಜ್‌ ಆಗಬಿಟ್ಟಿದೆ. ಡೈಲೀ ಲೈಫ್‌ನ ಕೆಲವು ಘಟನೆಗಳನ್ನು ಮಾಡೋದೆ ಕೆಲವೊಮ್ಮೆ ಸಿಕ್ಕಾಪಟ್ಟೆ ಟ್ರೆಂಡ್ ಆಗಿಬಿಡುತ್ತದೆ. ಆದರೆ  ಸದ್ಯ ವೈರಲ್ ಆಗ್ತಿರೋ ವಿಡಿಯೋವೊಂದು ಮಹಿಳೆಯ ಕುರಿತು ಸಮಾಜಕ್ಕೆ ತಪ್ಪು ಸಂದೇಶ ನೀಡ್ತಿದೆ.

Instagram Reel Glorifying Desi Woman Giving Up Food For Husband Leaves Twitter Unhappy Vin

ಭಾರತೀಯ ಸಂಪ್ರದಾಯದಲ್ಲಿ ಮಹಿಳೆ ಅಂದ್ರೆ ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವಾಕೆ ಎಂಬುದು ಜನರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಮನೆಕೆಲಸ ಮಾಡ್ಕೊಂಡು, ಮನೆಮಂದಿಗೆ ಇಷ್ಟವಾದ ಅಡುಗೆ ಮಾಡಿ ಕೊಟ್ಟು, ಬಟ್ಟೆ ಒಗೆದುಕೊಟ್ಟು ಎಲ್ಲರ ಯೋಗಕ್ಷೇಮವನ್ನು ಆಕೆ ದಿನ ಕಳೆದು ಬಿಡಬೇಕು. ಮಗುವಿಗಾಗಿ, ಗಂಡನಿಗಾಗಿ, ಮಗನಿಗಾಗಿ, ಮೊಮ್ಮಕ್ಕಳಿಗಾಗಿ ಆಕೆಯ ಜೀವನ ಮುಡಿಪಾಗಿಬಿಡುತ್ತದೆ. ತನಗೆ ತಿನ್ನಲು ಇದೆಯೋ ಇಲ್ಲವೋ ಮತ್ತೊಬ್ಬರ ಹೊಟ್ಡೆಯಂತೂ ತುಂಬಬೇಕು. ಆಕೆಗೆ ನಿದ್ದೆ ಮಾಡಲು ಸಮಯವಿದೆಯೋ ಇಲ್ಲವೋ ಗೊತ್ತಿಲ್ಲ. ಉಳಿದವರಂತೂ ಕಣ್ತುಂಬಾ ನಿದ್ದೆ ಮಾಡಬೇಕು. ಆಕೆ ಮಾಡುವ ಈ ಕೆಲಸವನ್ನು ತ್ಯಾಗವೆಂದು ಅಂದುಕೊಳ್ಳುವ ಬದಲು ಇದು ಆಕೆಯ ಕರ್ತವ್ಯ ಎಂದು ಲೇಬಲ್ ಮಾಡುವವರೇ ಹೆಚ್ಚು.

ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ಅಭ್ಯಾಸಗಳು (Habit) ಕಡಿಮೆಯಾಗಿವೆ. ಹೆಣ್ಣು ಸಹ ಸಮಾಜದಲ್ಲಿ ಕೆಲವೊಂದು ನಡವಳಿಕೆಯ ವಿರುದ್ಧ ಧ್ವನಿಯೆತ್ತುವಲ್ಲಿ ಶಕ್ತಳಾಗಿದ್ದಾಳೆ. ಹೀಗಾಗಿಯೇ ಹೆಣ್ಣು (Woman) ಮನೆಕೆಲಸ, ಮನೆಮಂದಿಗಾಗಿ ಎಲ್ಲಾ ತ್ಯಾಗವನ್ನು ಮಾಡಬೇಕು ಅನ್ನೋ ಜನರ ಮನೋಭಾವವೂ ಕಡಿಮೆಯಾಗಿದೆ. ಇಂಥಾ ಅಭ್ಯಾಸಗಳನ್ನು ಸ್ವೀಕಾರಾರ್ಹ ಅಥವಾ ಸಾಮಾನ್ಯವೆಂದು ಪರಿಗಣಿಸಬಾರದು ಎಂದು ಜನರು ಗುರುತಿಸಲು ಪ್ರಾರಂಭಿಸುತ್ತಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಹಳೆ ಸಂಪ್ರದಾಯವನ್ನೇ ಎತ್ತಿ ಹಿಡಿಯುವಂತಿದೆ.

ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿಗೆ ಅಡುಗೆ ಮಾಡೋಕೆ ಬರಲ್ವಂತೆ!

ಗಂಡನಿಗಾಗಿ ತನ್ನ ಆಹಾರವನ್ನೂ ಕೊಡೋ ಮಹಿಳೆ, ಪೋಸ್ಟ್ ವೈರಲ್
ಇನ್‌ಸ್ಟಾಗ್ರಾಂನಲ್ಲಿ @tims_island ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೋವೊಂದು ಇತ್ತೀಚಿಗೆ ಎಲ್ಲರ ಗಮನ ಸೆಳೆಯುತ್ತಿದೆ .
ರೀಲ್‌ನಲ್ಲಿ  ದಂಪತಿಗಳು ಒಟ್ಟಿಗೆ ಊಟ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮೊಬೈಲ್ ನೋಡುತ್ತಾ ಊಟ ಮಾಡುತ್ತಿರುವ ಗಂಡ ಹೆಂಡತಿಯ (Wife) ಬಳಿ ಮತ್ತಷ್ಟು ಊಟ ಬಡಿಸುವಂತೆ ಸೂಚಿಸುತ್ತಾನೆ. ಹೆಂಡತಿ ಪಾತ್ರೆಯಲ್ಲಿ ನೋಡಿದಾಗ ಅದರಲ್ಲಿ ಅನ್ನವಿರುವುದಿಲ್ಲ. ಆಗ ಹೆಂಡತಿ ತಕ್ಷಣ ತನ್ನ ತಟ್ಟೆಯಲ್ಲಿದ್ದ ಅನ್ನವನ್ನು ಪಾತ್ರೆಗೆ ವರ್ಗಾಯಿಸಿ ಅದನ್ನು ಗಂಡನ (Husband) ತಟ್ಟೆಗೆ ಬಡಿಸುತ್ತಾಳೆ. ಗಂಡ ಊಟ ಮಾಡುವುದನ್ನು ನೋಡಿ ಹೆಂಡತಿ ಖುಷಿಯಿಂದ ನಗುತ್ತಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ವೈರಲ್ ಆದ ವಿಡಿಯೋವನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರು, 'ಅರ್ಥಹೀನವಾದ ಈ ಹಳೆಯ ಸಂಪ್ರದಾಯವನ್ನು ವೈಭವೀಕರಿಸುವುದರಲ್ಲಿ ಅರ್ಥವಿಲ್ಲ. ಮಹಿಳೆಯರ ತಮ್ಮ ಆಹಾರವನ್ನು (Food) ಹೀಗೆ ಗಂಡನಿಗೆ ಕೊಟ್ಟು ತಾವು ಉಪವಾಸವಿರುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಈ ವಿಡಿಯೋ ಹೆಣ್ಣೆಂದರೆ ತನಗಿರುವ ಎಲ್ಲವನ್ನೂ ಮತ್ತೊಬ್ಬರಿಗೆ ಕೊಡಲು ಇರುವವಳು ಎಂಬ ತಪ್ಪು ಸಂದೇಶವನ್ನು ಜನರಿಗೆ ನೀಡುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗೃಹಿಣಿಯರೇ, ಪೋಸ್ಟ್ ಆಫೀಸ್‌ನಲ್ಲಿ ಈ ರೀತಿ ಸೇವಿಂಗ್ಸ್ ಮಾಡಿ ಲಕ್ಷ ಲಕ್ಷ ಗಳಿಸಿ

ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್‌
ಮತ್ತೊಬ್ಬ ವ್ಯಕ್ತಿ, 'ನಾನು ಈ ವಿಡಿಯೋದ ಪಾರ್ಟ್‌-2 ಬೇಕೆಂದು ಬೇಡಿಕೆಯಿಡುತ್ತೇನೆ, ಅಲ್ಲಿ ಅವಳು ಅವನಿಗೆ ಕೈಯಿಂದ ಆಹಾರ ನೀಡುತ್ತಾಳೆ. ಅವನು ಅವಳಿಗೂ ತಿನ್ನಿಸುತ್ತಾನೆ' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಇನ್ನೊಬ್ಬ ವ್ಯಕ್ತಿ, 'ವಾಸ್ತವವಾಗಿ ಭಾಗ-2ರಲ್ಲಿ, ಮಹಿಳೆ ಟೇಬಲ್‌ನ್ನು ಕ್ಲೀನ್ ಮಾಡುತ್ತಾಳೆ. ಪಾತ್ರೆ ತೊಳೆಯುತ್ತಾಳೆ. ಮತ್ತು ಮರುದಿನದ ಊಟಕ್ಕೆ ತಯಾರಿ ಮಾಡುತ್ತಾಳೆ. ಅದಕ್ಕಿಂತ ವಿಭಿನ್ನವಾಗಿ ಏನೂ ನಡೆಯುವುದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. 

ಒಟ್ನಲ್ಲಿ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲರ ಗಮನ ಸೆಳೆದಿದೆ, ಟ್ವಿಟರ್‌ನಲ್ಲಿ 6.5 ಮಿಲಿಯನ್ ವೀವ್ಸ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 277 ಸಾವಿರ ವೀವ್ಸ್ ಗಳಿಸಿದೆ.

ವೈರಲ್ ವಿಡಿಯೋ ನೋಡಿ:

 
 
 
 
 
 
 
 
 
 
 
 
 
 
 

A post shared by Timsy Jain (@tims_island)

Latest Videos
Follow Us:
Download App:
  • android
  • ios