ಜಗತ್ತಿನಲ್ಲಿ ಚಿತ್ರ ವಿಚಿತ್ರ ಜನರಿದ್ದಾರೆ. ಸೌಂದರ್ಯ ವರ್ಧಿಸಿಕೊಳ್ಳಲು ಹರಸಾಹಸ ಮಾಡ್ತಾರೆ. ತಾವು ಮಾಡೋ ಕೆಲಸವನ್ನು ಬೇರೆಯವರಿಗೆ ಹೇಳೋದಲ್ಲದೆ ಅದನ್ನು ಫಾಲೋ ಮಾಡೋ ಸಲಹೆ ಕೂಡ ನೀಡ್ತಾರೆ. ಇಲ್ಲೊಬ್ಬಳ ವಿಚಿತ್ರ ಹವ್ಯಾಸ ಹುಬ್ಬೇರಿಸುವಂತೆ ಮಾಡಿದೆ.  

ತಾನು ಸುಂದರವಾಗಿ ಕಾಣಿಸಬೇಕೆನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತೆ. ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಫಿಟ್ ಎಂಡ್ ಹಾಟ್ ಆಗಿ ಕಾಣಿಸಿಕೊಳ್ಳುವುದು ಈಗಿನ ಯುವಜನತೆಯ ಟ್ರೆಂಡ್ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವತಿಯರಿಗೆ ಸೌಂದರ್ಯ ಪ್ರಜ್ಞೆ ಒಂದು ಕೈ ಹೆಚ್ಚೇ ಇರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೌಂದರ್ಯ (Beauty) ವನ್ನು ಹೆಚ್ಚಿಸಿಕೊಳ್ಳಲು ಮತ್ತು ಸೆಕ್ಸಿಯಾಗಿ ಕಾಣಿಸಿಕೊಳ್ಳಲು ಹೆಣ್ಣುಮಕ್ಕಳು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಇತ್ತೀಚೆಗಂತೂ ಸೆಲೆಬ್ರಿಟಿಗಳು, ಮಾಡೆಲ್ ಗಳು ಸಾಮಾಜಿಕ ಜಾಲತಾಣ (social media ) ದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾರೆ ಮತ್ತು ಕೆಲವರು ಬ್ಯೂಟಿ ಟಿಪ್ಸ್, ಹೆಲ್ತ್ ಟಿಪ್ಸ್ ಗಳನ್ನು ಕೂಡ ಹೇಳುತ್ತಾರೆ. ಅವರ ಹಾಟ್ ಚಿತ್ರಗಳನ್ನು ನೋಡಲು ಮತ್ತು ಅವರ ಬ್ಯೂಟಿ ಟಿಪ್ಸ್ ಗಳನ್ನು ಅನುಸರಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತವೆ. ಸೋಫಿಯಾ ಕ್ಲೆರಿಸಿ (Sofia Clerici) ಎನ್ನುವ ಮಾಡೆಲ್ ಕೂಡ ಇನ್ಸ್ಟಾಗ್ರಾಂ ನಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಈಕೆ ತಾನು ಸುಂದರವಾಗಿ ಮತ್ತು ಯಂಗ್ ಕಾಣಲು ಏನು ಮಾಡುತ್ತೇನೆ ಎನ್ನುವುದನ್ನು ಕೂಡ ಹೇಳಿದ್ದಾಳೆ. ಈಕೆಯ ಯೌವನದ ರಹಸ್ಯವನ್ನು ಕೇಳಿದ ಜನರು ದಂಗಾಗಿದ್ದಾರೆ.

ವೈಟ್ ಶರ್ಟ್‌ ಧರಿಸಿ ಬಟನ್ ಹಾಕೋಕೆ ಮರೆತ ಆಶಿಕಾ, ಚುಟು ಚುಟು ಬೆಡಗಿಯ ಮಾದಕ ಲುಕ್‌ಗೆ ಫ್ಯಾನ್ಸ್ ಫಿದಾ

ಹಾಟ್ ಆಗಿ ಕಾಣಲು ತನ್ನ ರಕ್ತವನ್ನೇ ಕುಡೀತಾಳೆ ಈ ಮಾಡೆಲ್ : ಸೋಫಿಯಾ ಕ್ಲೆರಿಸಿ ಎನ್ನುವ ಮಾಡೆಲ್ ತನ್ನ ಸೆಕ್ಸಿ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾಳೆ. ಫೋಟೋದ ಜೊತೆಗೆ ಈಕೆ ತಾನು ಹೀಗೆ ಫಿಟ್ ಆಗಿರಲು ಏನು ಮಾಡುತ್ತೇನೆ ಎನ್ನುವುದನ್ನು ಕೂಡ ಹೇಳಿದ್ದಾಳೆ. ಈಕೆಯ ವಿಚಿತ್ರವಾದ ಎಂಟಿ ಏಜಿಂಗ್ ಟ್ರಿಕ್ ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ 2.2 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸೋಫಿಯಾ ಆಗಾಗ ತನ್ನ ಅಭಿಮಾನಿಗಳೊಂದಿಗೆ ಆಕರ್ಷಕ ಚಿತ್ರಗಳನ್ನು ಹಂಚಿಕೊಳ್ಳುತ್ತಾಳೆ.

ವಯಸ್ಸಾದರೂ ಚಿಕ್ಕವಳಂತೆ ಕಾಣಿಸಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ. ಇನ್ಸ್ಟಾಗ್ರಾಂ ನಲ್ಲಿ ಈಕೆ ತನ್ನ ಡಿನ್ನರ್ ನ ಫೋಟೋಗಳನ್ನು ಹಂಚಿಕೊಂಡಿದ್ದಳು. ಆ ಫೋಟೋದಲ್ಲಿ ಕೆಂಪು ಬಣ್ಣದ ಪಾನೀಯ ಕೂಡ ಕಾಣಿಸುತ್ತಿತ್ತು. ಸೋಫಿಯಾ ಅಭಿಮಾನಿಯೊಬ್ಬರು ಈ ಪಾನೀಯದ ಕುರಿತು ಪ್ರಶ್ನೆ ಮಾಡಿದಾಗ ಸೋಫಿಯಾ ಅವರು ನೀಡಿದ ಉತ್ತರಕ್ಕೆ ಹಲವು ಮಂದಿ ಬೆಚ್ಚಿ ಬಿದ್ದಿದ್ದಾರೆ.

ಬಿಕಿನಿಯಲ್ಲಿ ಮೈ ಮಾಟ ತೋರಿಸಿದ ಸಾರಾ ಅಣ್ಣಯ್ಯ, ಏನಿಲ್ಲ..ಏನಿಲ್ಲ..ಎಂದು ಕಾಲೆಳೆದ ನಟ್ಟಿಗರು!

ಸೋಫಿಯಾ ಅವರು ಕೆಂಪು ಬಣ್ಣದ ಪಾನೀಯದ ಜೊತೆಗೆ, “ನಾನು ನನ್ನ ರಕ್ತವನ್ನು ತರುತ್ತೇನೆ ಮತ್ತು ಅವರು ಅದನ್ನು ಪಾನೀಯದಲ್ಲಿ ಬೆರೆಸಿ ನನಗೆ ಕೊಡುತ್ತಾರೆ” ಎನ್ನುವ ವಿಚಿತ್ರವಾದ ಶೀರ್ಷಿಕೆಯನ್ನು ಕೂಡ ಹಾಕಿದ್ದಾರೆ. ಇದರ ಜೊತೆಗೆ ಸೋಫಿಯಾ ಅವರು ತಮ್ಮ ಕಾಸ್ಮೆಟಿಕ್ಸ್ ಬ್ಯಾಗ್ ನಲ್ಲಿರುವ ರಕ್ತದ ಚಿಕ್ಕ ಟ್ಯೂಬ್ ತೋರಿಸಿದ ಅವರು ನನ್ನನ್ನು ಯಾರು ನಂಬುವುದಿಲ್ಲವೋ ಅವರು ಇದನ್ನು ನೋಡಿ ಎಂದು ಕೂಡ ಹೇಳಿದ್ದಾರೆ. ನನ್ನ ರೆಫ್ರಿಜರೇಟರ್ ನಲ್ಲಿ ಯಾವಾಗಲೂ ಒಂಬತ್ತು ಟ್ಯೂಬ್ ರಕ್ತ ಇರುತ್ತದೆ. ಪ್ರತಿವಾರ ನಾನು ಅದರಲ್ಲಿ ಕಾಲು ಭಾಗ ಅಥವಾ ಅರ್ಧ ಭಾಗವನ್ನು ತೆಗೆದುಕೊಳ್ಳುತ್ತೇನೆ ಎಂದು ಈ ಮಾಡೆಲ್ ಹೇಳಿದ್ದಾಳೆ. ಸೋಫಿಯಾ ಕ್ಲೆರಿಸಿ ಅವರ ಫೋಸ್ಟ್ ಗೆ ನಿರಂತರವಾಗಿ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ತನ್ನನ್ನು ತಾನು ಪಿಂಗಾಣಿ ಗೊಂಬೆ ಎಂದು ಹೇಳಿಕೊಳ್ಳುವ ಸೋಫಿಯಾ ಹೆಚ್ಚಾಗಿ ಬೋಲ್ಡ್ ಹಾಗೂ ಬಿಕ್ನಿ ಡ್ರೆಸ್ ನಲ್ಲೇ ಕಾಣಿಸಿಕೊಳ್ಳುತ್ತಾರೆ. ಇವರ ಇನ್ಸ್ಟಾ ಗ್ರಾಂ ಪೋಸ್ಟ್ ಅನ್ನು ನೋಡಿದ ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ. ಇವರನ್ನು ರಕ್ತಪಿಶಾಚಿ ಎಂದು ಕರೆದಿದ್ದಾರೆ.