Asianet Suvarna News Asianet Suvarna News

ಮಗಳ ಪೈಲಟ್ ಮಾಡಲು ಜಮೀನು ಮಾರಿದ ಅಪ್ಪ, ವಿಮಾನ ಹಾರಿಸೋ ಟೀನಾ 2 ಮಕ್ಕಳ ತಾಯಿ!

ಬರೀ ಕನಸು ಕಂಡ್ರೆ ಸಾಲದು. ಅದನ್ನು ನನಸು ಮಾಡುವ ಛಲ ಬೇಕು. ಮದುವೆಗಿಮತ ಮೊದಲು ಕಷ್ಟಪಟ್ಟು ಗುರಿ ಹತ್ತಿರಕ್ಕೆ ಹೋದ್ರೂ ಮದುವೆಯಾಗಿ, ಮಕ್ಕಳಾದ್ಮೇಲೆ ಅದು ಕಷ್ಟ. ಆದ್ರೆ ಕೆಲವರು ಮದುವೆ, ಮಕ್ಕಳನ್ನು ಸಂಭಾಳಿಸ್ತಲೇ ಸಾಧಿಸಿ ತೋರಿಸಿದ್ದಾರೆ.
 

Inspiring Stories Madhya Pradesh Female Commercial Pilot Teena roo
Author
First Published Aug 14, 2023, 12:34 PM IST

ಈಗ ಹಳ್ಳಿಗಳೂ ಸಾಕಷ್ಟು ಅಭಿವೃದ್ಧಿ ಹೊಂದಿವೆ. ಮನೆ ಮನೆಗೆ ಇಂಟರ್ನೆಟ್ ಲಗ್ಗೆಯಿಟ್ಟಿದೆ. ಆದ್ರೆ ಈಗ 10 ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿರುವ ಒಂದು ಹುಡುಗಿ ಪೈಲೆಟ್ ಆಗುವ ಕನಸು ಕಾಣುವುದು ಸಾಮಾನ್ಯವಲ್ಲ. ಆ ಕನಸನ್ನು ನನಸು ಮಾಡಿಕೊಂಡು ಆಕಾಶದಲ್ಲಿ ಹಾರಾಡುವುದು ಅಸಾಧ್ಯವಾದ ಕೆಲಸವೆಂದ್ರೂ ತಪ್ಪಲ್ಲ. ಆದ್ರೆ ಮಧ್ಯಪ್ರದೇಶದ ಹುಡುಗಿಯೊಬ್ಬಳು ಇದನ್ನು ಮಾಡಿ ತೋರಿಸಿದ್ದಾಳೆ. 

ಮಗಳ ಕನಸಿಗೆ ನೀರೆರೆದ ತಂದೆ (Father) : ಮನೆಯ ಪಾಲಕರ ಬೆಂಬಲವಿದ್ರೆ ಮಕ್ಕಳು ಅಸಾಧ್ಯವಾದದ್ದನ್ನೂ ಸಾಧಿಸಿ ತೋರಿಸುತ್ತಾರೆ. ಅದಕ್ಕೆ ಮಧ್ಯಪ್ರದೇಶ ಮೊದಲು ಮಹಿಳಾ ವಾಣಿಜ್ಯ ಪೈಲೆಟ್ (Pilot) ಟೀನಾ ಉತ್ತಮ ನಿದರ್ಶನ. ಅವರ ತಂದೆ ಮಗಳನ್ನು ಸಾಮಾನ್ಯರಂತೆ ನೋಡಲು ಬಯಸಲಿಲ್ಲ. ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಮಗಳ ಕನಸು ನನಸು ಮಾಡಲು ತಮ್ಮ ಜಮೀನ (land) ನ್ನೇ ಮಾರಿದ್ದ ತಂದೆ, ಮಗಳನ್ನು ಪೈಲೆಟ್ ಮಾಡಲು ಯಶಸ್ವಿಯಾದ್ರು. ತನ್ನ 25ನೇ ವಯಸ್ಸಿನಲ್ಲೇ ಮಧ್ಯಪ್ರದೇಶದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಮತ್ತು ಕಿರಿಯ ಪೈಲೆಟ್ ಗಳಲ್ಲಿ ಒಬ್ಬರಾಗಿ ಟೀನಾ ಮಿಂಚಿದ್ರು. ಈಗ ಕ್ಯಾಪ್ಟನ್ ಸ್ಥಾನಕ್ಕೇರಿದ್ದಾರೆ.  ವೃತ್ತಿಯಲ್ಲಿ 21 ವರ್ಷಗಳ ಅನುಭವ ಹೊಂದಿರುವ ಟೀನಾ, ಈಗ ಪೈಲೆಟ್ ಮಮ್ಮಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಈಗ ಅಮ್ಮನಾಗಿ, ಪೈಲೆಟ್ ಆಗಿ ಎರಡೂ ಕೆಲಸವನ್ನು ಟೀನಾ ನಿಭಾಯಿಸುತ್ತಿದ್ದಾರೆ. ಅಮ್ಮ, ಪತಿ ಹಾಗೂ ಮಕ್ಕಳ ಬೆಂಬಲ ಟೀನಾಗೆ ಸದಾ ಸಿಗ್ತಿದೆ.

3 ನಿಮಿಷ ಐಸ್ ನೀರಲ್ಲಿ ಮುಖವಿರಿಸಿ; ನಟಿ ರಾಗಿಣಿ ದ್ವಿವೇದಿ ಕೊಟ್ಟ ಬ್ಯೂಟಿ ಟಿಪ್ಸ್​ ಏನು?

ಈ ಬಗ್ಗೆ ಕ್ಯಾಪ್ಟನ್ ಟೀನಾ ಹೇಳೋದೇನು? :  ಯಾವಾಗಲೂ ವಿಮಾನದಲ್ಲಿ ಹಾರುವುದು ನನ್ನ ಕನಸಾಗಿತ್ತು. ನಿನ್ನ ಇಷ್ಟು ದೊಡ್ಡ ಕನಸು ಈಡೇರಲು ಸಾಧ್ಯವಿಲ್ಲ, ನಿನ್ನ ಕನಸನ್ನು ಬಿಟ್ಟುಬಿಡು ಎಂದು ಹೇಳುವ ಬದಲು ನನ್ನ ಶಿಕ್ಷಣಕ್ಕಾಗಿ ತಂದೆ ತನ್ನ ಜಮೀನನ್ನು ಮಾರಿದ್ದರು. ನಾನು ಆ ಅವಕಾಶವನ್ನು ವ್ಯರ್ಥ ಮಾಡಲು ಬಯಸಲಿಲ್ಲ, ಆದ್ದರಿಂದ ನಾನು ಎಲ್ಲರಿಗಿಂತ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿದ್ದೇನೆ. 25 ನೇ ವಯಸ್ಸಿನಲ್ಲಿ ಮಧ್ಯಪ್ರದೇಶದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಆದೆ.  ಕುಟುಂಬ ಮತ್ತು ತಾಯ್ತನದೊಂದಿಗೆ ಕೆಲಸ ಮಾಡುವುದು ಅಸಾಧ್ಯವೆಂದು ತೋರುತ್ತಿರುವ ಸಮಯದಲ್ಲೂ, ನಾನು  ನನ್ನ ಕನಸನ್ನು ಎಂದಿಗೂ ಮರೆತಿಲ್ಲ.  ನನ್ನ ಸಮವಸ್ತ್ರವನ್ನು ಹಾಕಲು, ವಿಮಾನವನ್ನು ಕಮಾಂಡ್ ಮಾಡಲು, ಆಕಾಶದಲ್ಲಿ ಹಾರಲು ನಾನು ಈಗಲೂ ಉತ್ಸುಕನಾಗಿರುತ್ತೇನೆ. ಕೆಲಸದ ಜೊತೆ ಮಕ್ಕಳನ್ನು ನಿರ್ವಹಿಸುವ ನಾನು, ಸಮವಸ್ತ್ರ ಧರಿಸಿದಾಗ ನನ್ನ ಮಕ್ಕಳಿಗೆ ಜೀವನದ ಪ್ರಮುಖ ಪಾಠಗಳಲ್ಲಿ ಒಂದನ್ನು ಕಲಿಸುತ್ತಿದ್ದೇನೆ ಎಂದು ತಿಳಿದುಕೊಂಡು ಸಾಂತ್ವನ ಹೇಳಿಕೊಳ್ಳುತ್ತೇನೆ. ಕನಸುಗಳ ವಿಷ್ಯದಲ್ಲಿ ಆಕಾಶವೇ ಕೊನೆ ಅಲ್ಲ ಎನ್ನುತ್ತಾರೆ ಟೀನಾ. 

Women Health: ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ರೆ… ಈ ಸಮಸ್ಯೆ ಇದೆ ಎಂದರ್ಥ!

Officialhumansofbombay ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟೀನಾ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಟೀನಾ ಬಾಲ್ಯ, ಪೈಲೆಟ್ ವಸ್ತ್ರದಲ್ಲಿ ಹಾಗೂ ಮಕ್ಕಳ ಜೊತೆಗಿರುವ ವಿಡಿಯೋಗಳನ್ನು ನಾವು ಕಾಣ್ಬಹುದು. ಟೀನಾ ಕೂಡ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದು ಅನೇಕ ವಿಡಿಯೋಗಳನ್ನು ಹಂಚಿಕೊಳ್ತಾರೆ. ಟೀನಾ ಸಾಧನೆ ವಿಡಿಯೋವನ್ನು ಈವರೆಗೆ ಅನೇಕರು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿಯಿಂದ ಕಮೆಂಟ್ ಬಂದಿದೆ. ನೀವು ಅನೇಕ ಮಹಿಳೆಯರಿಗೆ ಸ್ಪೂರ್ತಿ ಎಂದು ಕೆಲವರು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಮನೆ,ಮಕ್ಕಳು ಮತ್ತು ಕೆಲಸವನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿರುವ ಟೀನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶಸ್ಸು ಎನ್ನುವುದು ಸುಲಭವಾಗಿ ಸಿಗೋದಿಲ್ಲ. ನೀವು ಮಾಡಿ ತೋರಿಸಿದ್ದೀರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಿಮ್ಮ ಸಾಧನೆ ಹಿಂದೆ ನಿಂತಿರುವ ನಿಮ್ಮ ತಂದೆ – ತಾಯಿ, ಮಕ್ಕಳು, ಪತಿ ಎಲ್ಲರಿಗೂ ಸೆಲ್ಯೂಟ್ ಎಂದಿದ್ದಾರೆ ಬಳಕೆದಾರರು.  
 

Follow Us:
Download App:
  • android
  • ios