ಪತಿಗೆ ಸರ್ವಸ್ವವನ್ನೇ ಧಾರೆ ಎರೆದ್ರೂ ತನ್ನ ಈ ಅಂಗ ಸ್ಪರ್ಶಿಸೋಕೆ ಬಿಡಲ್ಲ ಭಾರತೀಯ ಪತ್ನಿ !
ಭಾರತದಲ್ಲಿ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಪತಿ – ಪತ್ನಿ ಮಹತ್ವದ ಪಾತ್ರವನ್ನು ವಹಿಸ್ತಾರೆ. ತನ್ನ ಸರ್ವಸ್ವವನ್ನೇ ಧಾರೆ ಎರೆಯುವ ಪತ್ನಿ, ಪತಿಗೆ ತನ್ನ ದೇಹದ ಈ ಅಂಗ ಸ್ಪರ್ಶಿಸೋಕೆ ಮಾತ್ರ ಬಿಡೋದಿಲ್ಲ. ಅದು ಯಾವ್ದು ಗೊತ್ತಾ?
ಭಾರತ (India)ದಲ್ಲಿ ಮದುವೆ, ಕುಟುಂಬ, ದಾಂಪತ್ಯ (Marriage)ಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಭಾರತೀಯ ಸಂಸ್ಕೃತಿ (Indian Culture)ಯಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಇದು ಎರಡು ಜೀವಗಳ, ಆತ್ಮಗಳ ಮಿಲನ ಎಂದು ನಂಬಲಾಗುತ್ತದೆ. ಸ್ವರ್ಗದಲ್ಲಿಯೇ ಮದುವೆ ನಿಶ್ಚಯವಾಗಿರುತ್ತದೆ ಎಂದು ಜನರು ಭಾವಿಸ್ತಾರೆ. ಪತಿ – ಪತ್ನಿ ತನು, ಮನ, ಧನದಿಂದ ಒಂದೇ ಸಮಾನರು. ಪತಿ ಮತ್ತು ಪತ್ನಿ ಎರಡು ದೇಹ ಒಂದೇ ಆತ್ಮ ಎಂದು ಹಿರಿಯರು ಹೇಳೋದನ್ನು ನೀವು ಕೇಳಿರಬೇಕು.
ವಿವಾಹಿತ ಮಹಿಳೆ ತನ್ನ ಸರ್ವಸ್ವವನ್ನು ಪತಿಗೆ ಧಾರೆ ಎರೆಯುತ್ತಾಳೆ. ತನ್ನದೆಲ್ಲವೂ ನಿನ್ನಂದು ಎಂದು ಜೀವನ ನಡೆಸ್ತಾಳೆ. ತನ್ನಿಚ್ಛೆಯಿಂದ ಎಲ್ಲವನ್ನು ಪತಿಗೆ ನೀಡಲು ಪತ್ನಿ ಸಿದ್ಧವಿರ್ತಾಳೆ. ಆದ್ರೆ ತನ್ನ ದೇಹದ ಒಂದು ಅಂಗ ಸ್ಪರ್ಶಿ (Touch)ಸಲು ಪತಿಗೆ ಅವಕಾಶ ನೀಡುವುದಿಲ್ಲ. ಯುಪಿಎಸ್ಸಿ ಸೇರಿದಂತೆ ಅನೇಕ ಉನ್ನತ ಪರೀಕ್ಷೆ, ಸಂದರ್ಶನದಲ್ಲಿ ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದ್ರೆ ಅವರು ಕೇಳುವ ಕೆಲ ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಇರೋದಿಲ್ಲ. ಹಾಗಾಗಿ ನಮ್ಮ ಬುದ್ಧಿಯನ್ನು ಉಪಯೋಗಿಸಿ, ಕಾಲಕ್ಕೆ ತಕ್ಕಂತೆ ಉತ್ತರ ನೀಡುವುದು ಅನಿವಾರ್ಯ. ಇಂಥ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರ ನೀಡ್ತೀರಿ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿಂತಿರುತ್ತದೆ. ಭಾರತ ಸರ್ಕಾರ (Government) ದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಭಾರತದ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿದಿರಬೇಕು.
ಶಾರ್ದೂಲ್ ಠಾಕೂರ್ ಪತ್ನಿ ಸೌಂದರ್ಯದ ಮುಂದೆ ಬಾಲಿವುಡ್ ನಟಿಯರು ಡಮ್ಮಿ!
ಪತ್ನಿ ಯಾವ ಭಾಗವನ್ನು ಸ್ಪರ್ಶಿಸಲು ಅನುಮತಿ ನೀಡೋದಿಲ್ಲ : ಯುಪಿಎಸ್ಸಿ (UPSC) ಲಿಖಿತ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸಂದರ್ಶನಕ್ಕೆ ಹೊರಟಿದ್ದರೆ ಕೆಲವೊಂದು ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿದಿರಿ. ಭಾರತದ ಮಹಿಳೆಯರು ಪತಿಯನ್ನು ದೇವರಂತೆ ಭಾವಿಸ್ತಾರೆ. ಈಗಿನ ದಿನಗಳಲ್ಲಿ ಮಹಿಳೆಯರು ಹಿಂದಿನಂತಿಲ್ಲ. ಹಿಂದೆ ಪತಿ ಹೇಳಿದ ಮಾತಿಗೆ ಪತ್ನಿ ತಿರುಗಿ ಉತ್ತರ ನೀಡುತ್ತಿರಲಿಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಅತೀ ಮುಖ್ಯವಾಗಿತ್ತು. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇರಲಿ ಇಲ್ಲ ಉತ್ತಮ ಉದ್ಯೋಗದಲ್ಲಿರುವ ಪತ್ನಿ ಇರಲಿ, ಪತಿಗೆ ಮುಖಕೊಟ್ಟು ಮಾತನಾಡ್ತಿರಲಿಲ್ಲ. ಭಾರತದಲ್ಲಿ ಈಗ್ಲೂ ಕೆಲ ಮಹಿಳೆಯರು ಹಿಂದಿನಿಂದ ಬಂದ ಸಂಪ್ರದಾಯವನ್ನು ಪಾಲಿಸ್ತಿದ್ದಾರೆ. ಹಾಗೆಯೇ ತಮ್ಮ ದೇಹದ ಒಂದು ಭಾಗವನ್ನು ಪತಿಗೆ ಅಪ್ಪಿತಪ್ಪಿಯೂ ಸ್ಪರ್ಶಿಸಲು ಬಿಡ್ತಿಲ್ಲ. ಅದು ಕಾಲು.
ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುವ ರಾಜ್ಯವಿದು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಭಾರತದಲ್ಲಿ ಪತ್ನಿಯಾದವಳು, ಪ್ರತಿ ನಿತ್ಯ ಪತಿಗೆ ನಮಸ್ಕಾರ ಮಾಡ್ಬೇಕು, ಕಾಲು ಮುಟ್ಟಿ ಆಶೀರ್ವಾದ ಪಡೆಯಬೇಕು ಎಂಬ ಸಂಪ್ರದಾಯವಿದೆ. ಆದ್ರೆ ಪತ್ನಿಯಾದವಳು ಪತಿಗೆ ತನ್ನ ಕಾಲನ್ನು ಸ್ಪರ್ಶಿಸಲು, ನಮಸ್ಕರಿಸಲು ಅವಕಾಶ ನೀಡುವುದಿಲ್ಲ. ಇದು ಆಕೆ ಪ್ರಕಾರ ಪತಿಗೆ ನೀಡುವ ಗೌರವ. ಪತಿ ತನ್ನ ಮುಂದೆ ಚಿಕ್ಕವರಾಗ್ಬಾರದು, ಅವರು ಸದಾ ಎತ್ತರದಲ್ಲಿರಬೇಕು ಎಂದು ಆಕೆ ಬಯಸ್ತಾಳೆ. ಸದಾ ಯಶಸ್ವಿ ಜೀವನ ನಡೆಸಬೇಕು, ಎಂದೂ ಆತ ತನ್ನ ಕಾಲಿನ ಕೆಳಗೆ ಬೀಳುವಂತೆ ಆಗದಿರಲಿ ಎಂದು ಆಕೆ ಆಶೀಸುತ್ತಾಳೆ. ಹಾಗಾಗಿ ಎಂದೂ ಪತಿ ತನ್ನ ಕಾಲನ್ನು ಸ್ಪರ್ಶಿಸದಂತೆ, ನಮಸ್ಕರಿಸದಂತೆ ನೋಡಿಕೊಳ್ತಾಳೆ.