ಚಳಿಗಾಲ ಶುರುವಾಗಿದೆ. ಬೆಂಗಳೂರಿನಲ್ಲಿ ಆಗಾಗ ಮಳೆ ಕೂಡ ಬರ್ತಿದೆ. ಬಟ್ಟೆ ಒಣಗ್ತಿಲ್ಲ. ಹಸಿ ಇರೋ ಬಟ್ಟೆಯಿಂದ ವಾಸನೆ ಬರ್ತಿದೆ ಎನ್ನುವವರು ಕೆಲ ಟಿಪ್ಸ್ ಫಾಲೋ ಮಾಡಿ, ಬಟ್ಟೆಯಿಂದ ಬರುವ ವಾಸನೆ ಓಡಿಸಬಹುದು.
ಮಳೆಗಾಲದಲ್ಲಿ ಮಾತ್ರವಲ್ಲ ಚಳಿಗಾಲದಲ್ಲಿ ಕೂಡ ಬಟ್ಟೆ ಒಣಗಿಸೋದು ಸುಲಭವಲ್ಲ. ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಕಡಿಮೆ ಪ್ರಮಾಣದಲ್ಲಿ ಬೀಳುತ್ತವೆ. ಇದ್ರಿಂದ ಬಟ್ಟೆ ಸರಿಯಾಗಿ ಒಣಗೋದಿಲ್ಲ. ಬಟ್ಟೆ ಒಣಗಿದ್ದರೂ ತಣ್ಣಗಿರುತ್ತದೆ. ಸರಿಯಾಗಿ ಬಟ್ಟೆಯಲ್ಲಿರುವ ನೀರು ಆರಿಲ್ಲವಂದ್ರೆ ವಾಸನೆ ಬರಲು ಶುರುವಾಗುತ್ತದೆ. ಗಾಳಿ ಸರಿಯಾಗಿ ಬರ್ತಿಲ್ಲ, ಸೂರ್ಯನ ಕಿರಣ ಬಟ್ಟೆ ಮೇಲೆ ಬೀಳ್ತಿಲ್ಲ ಎಂದಾಗ ಬಟ್ಟೆ ಆರದೆ ವಾಸನೆ ಬರುತ್ತದೆ. ಚಳಿಗಾಲದಲ್ಲಿ ಬಟ್ಟೆಯನ್ನು ಹೇಗೆ ಒಣಗಿಸಬೇಕು ಎಂಬ ಟ್ರಿಕ್ ಗೊತ್ತಿದ್ದರೆ ಒಳ್ಳೆಯದು.
ಸಾಮಾನ್ಯವಾಗಿ ಹಗುರವಾದ ಬಟ್ಟೆ (Clothes) ಗಳು ಬೇಗ ಆರುತ್ತವೆ. ಆದ್ರೆ ಭಾರವಾದ ಬಟ್ಟೆಗಳಿಂದ ನೀರು ತೆಗೆಯುವುದು ಕಷ್ಟ. ಸೂರ್ಯ (Sun) ನ ಕಿರಣ ಬೀಳದ ಪ್ರದೇಶದಲ್ಲಿ ನೀವು ಬಟ್ಟೆ ಒಣಗಿಸಿದಾಗ ಅದು ಮತ್ತೊಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ನೀವು ಒದ್ದೆ ಬಟ್ಟೆಯನ್ನು ಗಾಳಿ (Wind)ಯಾಡದ ರೂಮಿನಲ್ಲಿ ಒಣಗಿಸಿದಾಗ, ಬಟ್ಟೆ ವಾಸನೆ ಬರುವುದಲ್ಲದೆ ಆ ರೂಮಿನ ವಾಸನೆ ಕೂಡ ಬದಲಾಗುತ್ತದೆ. ಚಳಿಗಾಲದಲ್ಲಿ ಹೇಗೆ ಬಟ್ಟೆ ಒಗೆದು, ಒಣಗಿಸಬೇಕು ಎಂಬುದನ್ನು ನಾವು ಹೇಳ್ತೇವೆ.
ಯಾವಾಗ ಬಟ್ಟೆ ಒಗೆಯಬೇಕು ಗೊತ್ತಾ? : ಕೆಲವರು ರಾತ್ರಿ ಬಟ್ಟೆ ಒಗೆಯಲು ಆದ್ಯತೆ ನೀಡ್ತಾರೆ. ಇದು ಒಳ್ಳೆ ಮಾರ್ಗವಲ್ಲ. ನೀವು ಬೆಳಿಗ್ಗೆ ಬಟ್ಟೆ ಒಗೆಯಬೇಕು. ಸ್ವಲ್ಪ ಸೂರ್ಯನ ಕಿರಣ ಬಟ್ಟೆಗೆ ತಾಕಿದ್ರೆ ಒಳ್ಳೆಯದು. ಟೆರೇಸ್ ಮೇಲೆ ಬಟ್ಟೆ ಒಣಗಿಸ್ತಿಲ್ಲ, ಬಾಲ್ಕನಿಗೆ ಬಿಸಿಲು ಬರೋದಿಲ್ಲ ಎನ್ನುವವರು ಕೂಡ ಬೆಳಿಗ್ಗೆ ಬಟ್ಟೆ ಒಗೆದು ಬಾಲ್ಕನಿಯಲ್ಲಿ ಹಾಕಬಹುದು. ರಾತ್ರಿಯಾಗ್ತಿದ್ದಂತೆ ಅದನ್ನು ತೆಗೆದು ರೂಮಿನಲ್ಲಿ ಒಣ ಹಾಕ್ಬೇಕು. ರಾತ್ರಿ ಪೂರ್ತಿ ಬಟ್ಟೆ ಅಲ್ಲೇ ಇದ್ದರೆ ಅದು ಇಬ್ಬನಿಗೆ ಮತ್ತೆ ಒದ್ದೆಯಾದಂತಾಗುತ್ತದೆ. ಇದ್ರಿಂದ ವಾಸನೆ ಬರಲು ಶುರುವಾಗುತ್ತದೆ.
Health Tips: ಹೆರಿಗೆಯ ನಂತರದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದಿರಲೇಬೇಕು!
ವಾಷಿನ್ ಮಷಿನ್ ಗೆ ಬಟ್ಟೆ ಹಾಕುವಾಗ ಇರಲಿ ಗಮನ : ಒಂದೇ ಬಾರಿ ಸಾಕಷ್ಟು ಬಟ್ಟೆಗಳನ್ನು ಹಾಕಿ ವಾಷ್ ಮಾಡೋರಿದ್ದಾರೆ. ಹೀಗೆ ಮಾಡಿದಾಗ ಬಟ್ಟೆ ಸರಿಯಾಗಿ ಕ್ಲೀನ್ ಆಗೋದಿಲ್ಲ. ಜೊತೆಗೆ ವಾಷಿಂಗ್ ಮಷಿನ್ ನಲ್ಲಿ ಒಣಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ವಾಷಿಂಗ್ ಮಷಿನ್ ಗೆ ಬಟ್ಟೆ ಹಾಕುವಾಗ ಅದ್ರಲ್ಲೂ ಬೆಡ್ ಶೀಟ್, ಸ್ವೆಟರ್ ನಂತಹ ಭಾರೀ ವಸ್ತ್ರಗಳನ್ನು ಹಾಕುವಾಗ ಸಾಧ್ಯವಾದಷ್ಟು ಕಡಿಮೆ ಹಾಕಿ.
ಸ್ಪಿನ್ ಪ್ರೋಗ್ರಾಂ ಆಯ್ಕೆ ಮಾಡಿ : ವಾಷಿಂಗ್ ಮಷಿನ್ ನಲ್ಲಿ ಬಟ್ಟೆ ವಾಶ್ ಆಗುವ ಜೊತೆಗೆ ಸ್ವಲ್ಪ ಒಣಗಿ ಬರುತ್ತದೆ. ಬಟ್ಟೆಯಲ್ಲಿರುವ ನೀರಿನಂಶ ಹೋಗಿರಬೇಕು ಎನ್ನುವವರು ಸ್ಪಿನ್ ಸ್ಪೀಡ್ ಜಾಸ್ತಿ ಮಾಡ್ಬೇಕು. ಆಗ ವಾಷಿನ್ ಮಷಿನ್, ಬಟ್ಟೆಯಲ್ಲಿರುವ ನೀರಿನಂಶವನ್ನು ಸಂಪೂರ್ಣವಾಗಿ ಹಿಂಡಿ ನಿಮಗೆ ನೀಡುತ್ತದೆ. ಇದನ್ನು ಆಯ್ಕೆ ಮಾಡುವ ಮೊದಲು ನಿಮ್ಮ ಬಟ್ಟೆಗೆ ಇಷ್ಟು ಸ್ಪಿನ್ ಬೇಕಾ ಎಂಬುದನ್ನು ಗಮನಿಸಿ. ಅತಿ ಸ್ಪಿನ್, ಬಟ್ಟೆ ಹಾಳು ಮಾಡುವ ಸಾಧ್ಯತೆಯಿರುತ್ತದೆ.
ಬಟ್ಟೆ ಒಣ ಹಾಕುವ ವಿಧಾನ : ಬಟ್ಟೆಯನ್ನು ಒಂದರ ಮೇಲೆ ಒಂದರಂತೆ ಒಣ ಹಾಕಿದ್ರೆ ಬಟ್ಟೆ ಬೇಗ ಒಣಗುವುದಿಲ್ಲ. ನೀರಿನಾಂಶ ಹಾಗೆಯೇ ಇರುವ ಕಾರಣ ವಾಸನೆ ಬರಲು ಶುರುವಾಗುತ್ತದೆ. ಹಾಗಾಗಿ ಬಟ್ಟೆಯನ್ನು ಬಿಡಿಸಿ, ದೂರ ದೂರ ಒಣಗಿಸಿದ್ರೆ ಸರಿಯಾದ ಪ್ರಮಾಣದಲ್ಲಿ ಗಾಳಿ ತಾಗಿ ಬಟ್ಟೆ ಬೇಗ ಒಣಗುತ್ತದೆ. ನೀವು ಜೀನ್ಸ್ ಅಥವಾ ಶರ್ಟ್ ಗಳನ್ನು ಹ್ಯಾಂಗರ್ ಗೆ ಹಾಕಿ ಒಣಗಿಸಿದ್ರೆ ಅವು ಬೇಗ ಆರುತ್ತವೆ.
Craft Ideas: ಸ್ವೀಟ್, ಶೂ ಬಾಕ್ಸ್ ಕಸಕ್ಕೆ ಎಸಿಬೇಡಿ: ಹೀಗೆ ಯೂಸ್ ಮಾಡಿ
ಈ ಕೋಣೆಯಲ್ಲಿ ಬಟ್ಟೆ ಒಣ ಹಾಕಿ : ಬಟ್ಟೆ ಒಣ ಹಾಕುವ ಜಾಗ ಕೂಡ ಇಂಪಾರ್ಟೆಂಟ್ ಆಗಿತ್ತದೆ. ನೀವು ಗಾಳಿಯಾಡುವ ಜಾಗದಲ್ಲಿ ಬಟ್ಟೆ ಒಣ ಹಾಕಬೇಕು. ಕಿಟಿಕಿ, ಬಾಗಿಲುಗಳನ್ನು ತೆರೆದಿರಬೇಕು. ಇಲ್ಲವಾದ್ರೆ ಬಟ್ಟೆ ಬೇಗ ಆರುವುದಿಲ್ಲ. ಜೊತೆಗೆ ಕೋಣೆಯೆಲ್ಲ ವಾಸನೆಯಾಗಿರುತ್ತದೆ.
