ತಾಮ್ರದ ಪಾತ್ರೆಗಳನ್ನು ಫಳ ಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಈಸಿ ಟಿಪ್ಸ್

ತಾಮ್ರ ಆರೋಗ್ಯಕ್ಕೂ ಸೈ, ಪೂಜೆಗೂ ಸೈ. ಇಂಥ ತಾಮ್ರದ ಪಾತ್ರೆಗಳನ್ನು ಕ್ಲೀನ್ ಮಾಡುವುದೇ ಸವಾಲು ಎನಿಸುತ್ತದೆ. ಹಾಗಿದ್ದರೆ ಅದನ್ನು ಸುಲಭದಲ್ಲಿ ಶುಚಿಗೊಳಿಸುವುದು ಹೇಗೆ ನೋಡೋಣ
 

Here is an easy way to polish copper vessels suc

ತಾಮ್ರದ (Copper) ಆರೋಗ್ಯಪೂರಕವಾಗಿರುವ ಹಿನ್ನೆಲೆಯಲ್ಲಿ ತಲೆತಲಾಂತರಗಳಿಂದ ಇದನ್ನು ಬಳಸಲಾಗುತ್ತಿದೆ.  ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳನ್ನು ಒದಗಿಸುವ ಶಕ್ತಿ ತಾಮ್ರಕ್ಕೆ ಇದೆ. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.  ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್‌ಗಳನ್ನು ದೇಹಕ್ಕೆ ಪೂರೈಸುವಲ್ಲಿ ತಾಮ್ರವು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಆದ್ದರಿಂದ ಇದೇ ಕಾರಣಕ್ಕೆ ರಾತ್ರಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ಬೆಳಗ್ಗೆ ಕುಡಿದರೆ ಆರೋಗ್ಯವನ್ನು ಕಾಪಿಟ್ಟುಕೊಳ್ಳಬಹುದು ಎನ್ನಲಾಗಿದೆ. ಇಂಥ  ನೀರನ್ನು ಕುಡಿಯುವುದರಿಂದ  ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ದೇಹದಲ್ಲಿ ತಾಮ್ರ ಕಡಿಮೆಯಾದರೆ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥವೂ ಕಡಿಮೆಯಾಗುತ್ತದೆ. ಪರಿಣಾಮ, ರಕ್ತಹೀನತೆ. ಹಾಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ, ಇದನ್ನು ಹೀರಿಕೊಳ್ಳಲು ತಾಮ್ರದ ನೆರವು ಬೇಕೇ ಬೇಕು. ತಾಮ್ರದ ಅಂಶ ದೇಹದಲ್ಲಿ ಹೆಚ್ಚಿದರೆ ಕಬ್ಬಿಣದ ಅಂಶವೂ ಹೆಚ್ಚುತ್ತದೆ, ತನ್ಮೂಲಕ ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ. 

ತಾಮ್ರಕ್ಕೆ ಅದರದ್ದೇ ಆದ ವಿಶೇಷತೆ ಇರುವುದರಿಂದ ಪೂಜೆಗಳಲ್ಲಿಯೂ ಇದಕ್ಕೆ ವಿಶೇಷ ಸ್ಥಾನಮಾನ. ದಿನನಿತ್ಯ ಬಳಸುವ ತಾಮ್ರದ ಪಾತ್ರೆಗಳನ್ನು ಶುಚಿಗೊಳಿಸುವುದು ಕಷ್ಟ ಎಂದು ಅದರ ಉಸಾಬರಿ ಬೇಡ ಎಂದು ಇಂದು ಈ ಪಾತ್ರೆಗಳು ಅಟ್ಟಕ್ಕೇರಿವೆ. ಇನ್ನು ಹಬ್ಬ-ಹರಿದಿನಗಳಲ್ಲಿ ಪೂಜಾ ಸಾಮಗ್ರಿಗಳಾದ ತಾಮ್ರದ ಪಾತ್ರೆಗಳನ್ನು ಹೊರಕ್ಕೆ ತೆಗೆದು ಅದನ್ನು  ಚಕಚಕಗೊಳಿಸುವುದೇ ದೊಡ್ಡ ಸವಾಲಾಗುತ್ತದೆ. ಇದು ಹಬ್ಬಗಳ ಮಾತಾದರೆ, ಪ್ರತಿದಿನವೂ ಪೂಜಾ ಸಾಮಗ್ರಿಯನ್ನು ಬಳಸುವವರು ತಮ್ಮದೇ ಆದ ರೀತಿಯಲ್ಲಿ ತಾಮ್ರದ ಸಾಮಗ್ರಿಗಳು ತೊಳೆದರೂ ಅವು ಬಹು ಬೇಗನೇ ಕಪ್ಪಾಗಿಬಿಡುತ್ತವೆ. ಇವುಗಳನ್ನು ಜಗಮಗಗೊಳಿಸುವ ಹಲವು ಪೌಡರ್​ಗಳನ್ನು (Powder) ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವುಗಳಲ್ಲಿನ ರಾಸಾಯನಿಕದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ. ಆದ್ದರಿಂದ ಇವುಗಳಿಂದ ಮುಕ್ತಿ ಹೊಂದಿ ಸುಲಭದಲ್ಲಿ ತಾಮ್ರದ ಪಾತ್ರೆಗಳನ್ನು ಚಕಚಕಗೊಳಿಸೋ ಸುಲಭ ವಿಧಾನ ಇಲ್ಲಿದೆ. ಮನೆಯಲ್ಲಿಯೇ ಸಿಗುವ ಸಾಮಗ್ರಿಗಳಿಂದ ಇವುಗಳನ್ನು ತಯಾರು ಮಾಡಬಹುದು.

Health Tips : ವೈದ್ಯರ ಸಲಹೆ ಇಲ್ಲದೆ ಗರ್ಭಪಾತದ ಮಾತ್ರೆ ಸೇವಿಸ್ಬೇಡಿ
 
ಇದನ್ನು ತಯಾರಿಸುವ ಹಂತಹಂತದ ವಿಧಾನವನ್ನು ವರ್ಮಾ ಚುಕ್ಕಾ ಎನ್ನುವವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ. 

ಹಂತ 1: 3 ಸ್ಪೂನ್ ಕಡಲೆ ಹಿಟ್ಟು (Gram Floor) ತೆಗೆದುಕೊಳ್ಳಿ.
ಹಂತ 2:  ಹಿಟ್ಟಿಗೆ 1 ಚಮಚ ಉಪ್ಪನ್ನು ಸೇರಿಸಿ.
ಹಂತ 3: ಮಿಶ್ರಣಕ್ಕೆ 3 ಚಮಚ ಮೊಸರು (curd) ಮಿಶ್ರಣ ಮಾಡಿ.
ಹಂತ 4: ಮಿಶ್ರಣಕ್ಕೆ 1 ಚಮಚ ಅರಿಶಿನ ಸೇರಿಸಿ.
ಹಂತ 5: ಅಂತಿಮವಾಗಿ, 2 ಚಮಚ ನಿಂಬೆ ರಸವನ್ನು ಸೇರಿಸಿ.
ಹಂತ 6:  ಒಂದು ಹದಕ್ಕೆ ಬರುವವರೆಗೆ ಪೇಸ್ಟ್ ಆಗುವಂತೆ ಮಿಕ್ಸ್​ ಮಾಡಿ.
ಇಷ್ಟು ಮಾಡಿದರೆ ಪೇಸ್ಟ್​ ಸಿದ್ಧವಾಗುತ್ತದೆ.

ತಾಮ್ರದ ಶುಚಿಗೊಳಿಸುವ ವಿಧಾನ 
ಹಂತ 1: ಸ್ವಲ್ಪ ಪ್ರಮಾಣದ ಪೇಸ್ಟ್ (paste)  ತೆಗೆದುಕೊಂಡು ಅದನ್ನು ನೀವು ಸ್ವಚ್ಛಗೊಳಿಸಲು ಬಯಸುವ ತಾಮ್ರದ ಉತ್ಪನ್ನಗಳ ಮೇಲೆ ಉಜ್ಜಿಕೊಳ್ಳಿ.
ಹಂತ 2: ತಾಮ್ರದ ವಸ್ತುಗಳನ್ನು ಪೇಸ್ಟ್‌ನೊಂದಿಗೆ ನಿಧಾನವಾಗಿ ಉಜ್ಜಲು ಮೃದುವಾದ ಬಟ್ಟೆ ಅಥವಾ ಮೃದುವಾದ ಬ್ರಷ್  ಬಳಸಿ.
ಹಂತ 3:  ಕೊಳಕು ಹೊರಬರಲು ಪ್ರಾರಂಭವಾಗುವವರೆಗೆ ಉಜ್ಜುವುದನ್ನು ಮುಂದುವರಿಸಿ.
ಹಂತ 4: ಪೇಸ್ಟ್‌ ಸಂಪೂರ್ಣವಾಗಿ ಪಾತ್ರೆಯಿಂದ ಹೋಗುವವರೆಗೆ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಹಂತ 11: ತಾಮ್ರದ ವಸ್ತುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.  

ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ 3 ಆರೋಗ್ಯ ರಹಸ್ಯಗಳು!

 

 
 
 
 
 
 
 
 
 
 
 
 
 
 
 

A post shared by Varma Chukka (@mudman.in)

Latest Videos
Follow Us:
Download App:
  • android
  • ios