ಗೋವಾಗೆ ಹನಿಮೂನ್‌ಗೆ ಹೊರಟ ತನ್ನನ್ನು ತಾನೇ ಮದ್ವೆಯಾದ ಯುವತಿ

ತನ್ನನ್ನು ತಾನೇ ಮದುವೆಯಾಗುವ ಮೂಲಕ ಇಡೀ ದೇಶದ ಮಾಧ್ಯಮಗಳನ್ನು ತನ್ನತ್ತ ತಿರುಗುವಂತೆ ಮಾಡಿದ್ದ ಗುಜರಾತ್‌ನ 24 ವರ್ಷ ಪ್ರಾಯದ ಯುವತಿ ಕ್ಷಮಾ ಬಿಂದು ಈಗ ಹನಿಮೂನ್‌ ಹೊರಟ್ಟಿದ್ದಾರೆ.

Gujarat woman who married herself now going to goa to Honeymoon akb

ತನ್ನನ್ನು ತಾನೇ ಮದುವೆಯಾಗುವ ಮೂಲಕ ಇಡೀ ದೇಶದ ಮಾಧ್ಯಮಗಳನ್ನು ತನ್ನತ್ತ ತಿರುಗುವಂತೆ ಮಾಡಿದ್ದ ಗುಜರಾತ್‌ನ 24 ವರ್ಷ ಪ್ರಾಯದ ಯುವತಿ ಕ್ಷಮಾ ಬಿಂದು ಈಗ ಹನಿಮೂನ್‌ ಹೊರಟ್ಟಿದ್ದಾರೆ. ತನ್ನನ್ನೇ ಮದುವೆಯಾದ ಈಕೆ ತನ್ನೊಂದಿಗೆ ಹನಿಮೂನ್ ಹೊರಟ್ಟಿದ್ದು, ಮತ್ತೆ ಜನರ ತಲೆಯಲ್ಲಿ ಈಕೆ ಹುಳು ಬಿಟ್ಟಿದ್ದಾಳೆ. ತನ್ನನ್ನೇ ತಾನು ಮದುವೆಯಾಗುವ ಮೂಲಕ ಭಾರತದ ಮೊದಲ ಸ್ವವಿವಾಹ ಅಥವಾ ಸೊಲೊಗಮಿ ವಿವಾಹವಾದ ಈಕೆಯ ಬಗ್ಗೆ ಅನೇಕರು ಅನೇಕ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  ಈ ಕ್ಷಮಾ ಬಿಂದು ಈಗ ತನ್ನ ಪಟ್ಟಿಯಲ್ಲಿನ ಮುಂದಿನ ಯೋಜನೆಯನ್ನು ಪೂರೈಸಲು ಸಜ್ಜಾಗಿದ್ದಾಳೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಆಕೆ ತಾವು ಹನಿಮೂನ್‌ಗೆ ಗೋವಾವನ್ನು  ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ ಅಲ್ಲದೇ ಅದಕ್ಕಾಗಿ ಅವರು ತುಂಬಾ ಉತ್ಸುಕಳಾಗಿರುವುದಾಗಿ ಹೇಳಿದ್ದಾರೆ.

ತನ್ನ ಯೋಜನೆಗಳ ಬಗ್ಗೆ ಕ್ಷಮಾಬಿಂದು ವಿವರ ನೀಡಿದ್ದು, ಆಕೆ ಆಗಸ್ಟ್‌ ಮೊದಲ ವಾರದಲ್ಲಿ ತನ್ನ ಹನಿಮೂನ್‌ಗೆ ತೆರಳಲಿದ್ದು, ಈ ವೇಳೆ ತನ್ನ ಬದುಕಿನ ವಿಶೇಷ ಕ್ಷಣಗಳನ್ನು ಸೆರೆ ಹಿಡಿಯಲು ಕಾತುರಳಾಗಿರುವುದಾಗಿ ಆಕೆ ಹೇಳಿದ್ದಾಳೆ. ಎಲ್ಲಾ ಮಧುವಣಗಿತ್ತಿಯಂತೆ ನಾನು ಕೂಡ ನನ್ನ ಹನಿಮೂನ್‌ ಬಗ್ಗೆ ಉತ್ಸುಕಳಾಗಿದ್ದೇನೆ. ಆಗಸ್ಟ್ ಏಳರಂದು ನಾನು ಗೋವಾಗೆ ತೆರಳಲಿದ್ದೇನೆ. ಅಲ್ಲಿ ನನ್ನ ಬದುಕಿನ ಎಲ್ಲಾ ವಿಶೇಷ ಕ್ಷಣಗಳನ್ನು ನನ್ನ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿಯಲಿದ್ದೇನೆ. ಅಲ್ಲದೇ ಆಕೆ ಭೇಟಿ ನೀಡಲಿರುವ ಗೋವಾದ ಎಲ್ಲಾ ಸ್ಥಳಗಳ ಬಗ್ಗೆ ಆಕೆ ಪಟ್ಟಿ ಮಾಡಿಕೊಂಡಿದ್ದಾಳೆ. ಅಲ್ಲದೇ ಹನಿಮೂನ್ ಸಮಯದಲ್ಲೇ ಆಗಸ್ಟ್‌ 10ರಂದು ಗೋವಾದಲ್ಲೇ ಆಕೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾಳೆ.

Sologomy ಅಂದ್ರೇನು ? ಇದಕ್ಕಿದ್ಯಾ ಕಾನೂನು ಮಾನ್ಯತೆ ?

ಗೋವಾದ ಅರಂಬೋಲ್ ಬೀಚ್ ಆಕೆಯ ಇಷ್ಟದ ಸ್ಥಳವಾಗಿದ್ದು, ಗೋವಾದಲ್ಲಿ ನನ್ನ ಇಷ್ಟದ ಸ್ಥಳವಾದ ಅರಂಬೋಲ್ ಬೀಚ್‌ನಲ್ಲಿ ನಾನು ನನ್ನ ಬಹುತೇಕ ಸಮಯವನ್ನು ಕಳೆಯಲಿದ್ದೇನೆ. ಅಲ್ಲದೇ ಅಲ್ಲಿ ನಾನು ಯಾರ ಅಂಜಿಕೆಯೂ ಇಲ್ಲದೇ ಬಿಕಿನಿ ಧರಿಸುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ಹೋದಲೆಲ್ಲಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಗಂಡ ಎಲ್ಲಿ ಎಂದು ಕೇಳುವ ಅನೇಕರ ಪ್ರಶ್ನೆಗಳಿಗೆ ತಾನು ಉತ್ತರಿಸಲು ಸಮರ್ಥವಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ನಾನು ಹನಿಮೂನ್ ಹೊರಟೆ ಎಂದರೆ ಖಂಡಿತವಾಗಿ ಜನ ಗಂಡನ ಬಗ್ಗೆ ಕೇಳಿಯೇ ಕೇಳುತ್ತಾರೆ. ಇದು ಸೊಲೊಗಮಿ ಬಗ್ಗೆ ಜನರಿಗೆ ತಿಳಿಸಲು ಸಿಗುವ ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ನಾನು ಏಕೆ ನನ್ನನ್ನೇ ಮದುವೆಯಾದೆ ಎಂಬುದನ್ನು ಅವರಿಗೆ ವಿವರಿಸುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. 

ಸೊಲೊಗಾಮಿಯ ಅರ್ಥ ನಿಮಗೆ ತಿಳಿದಿದೆಯೇ? ಯಾಕೆ ಈ ಟ್ರೆಂಡ್ ಹೆಚ್ಚುತ್ತಿದೆ?

ಜೂನ್ 8 ರಂದು ವಡೋದರಾದ ತನ್ನ ಮನೆಯಲ್ಲಿ ನಡೆದ ದೊಡ್ಡ ಸಮಾರಂಭದಲ್ಲಿ ಕ್ಷಮಾ ತನ್ನನ್ನೇ ತಾನು ಮದುವೆಯಾಗಿದ್ದಳು. ತಾನು ತುಂಬಾ ಸಂತೋಷವಾಗಿದ್ದೇನೆ, ವಿವಾಹಿತ ದಂಪತಿಗಳು ಮಾಡುವ ರೀತಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದೇನೆ ಎಂದು ಆಕೆ ಹೇಳಿದ್ದರು. ತನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಈ ನಿರ್ಧಾರಕ್ಕೆ ಬಹಳ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು. ಕ್ಷಮಾ ಅವರು ಇತ್ತೀಚೆಗೆ ತಮ್ಮ ಕೆಲಸವನ್ನು ಬದಲಾಯಿಸಿದ್ದು ಜೊತೆಗೆ ಹಣವನ್ನು ಉಳಿತಾಯ ಮಾಡಿದ್ದಾರೆ. ಆ ಹಣವನ್ನು ಅವರು ತಮ್ಮ ಮಧುಚಂದ್ರಕ್ಕೆ ಬಳಸಲಿದ್ದಾರೆ. ಮಧುಚಂದ್ರದಿಂದ ಹಿಂದಿರುಗಿದ ಬಳಿಕ ತಮ್ಮ ವಿವಾಹ ನೋಂದಣಿಗೆ ಅವರು ಅರ್ಜಿ ಸಲ್ಲಿಸಲಿದ್ದಾರೆ ಎಂದು ಕ್ಷಮಾ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios