ಈಗ ಹುಡುಗೀರು ಅಪ್ಪನಂತೆ ಕುಡೀತಾರೆ, ಅಮ್ಮನಂತೆ ಅಡುಗೆ ಮಾಡೋಲ್ಲ ಅಂದಿದ್ದಕ್ಕೆ...!?
ಕಾಲ ಬದಲಾಗಿದೆ. ಜೀವನಶೈಲಿಯೂ ವಿಭಿನ್ನವಾಗಿದೆ. ಗಂಡಿನಂತೆ ಹೆಣ್ಣು ಮಕ್ಕಳಿಗೆ ಕಾರು ಡ್ರೈವಿಂಗ್ ಕಲಿಸೋ ಪೋಷಕರು, ಗಂಡು ಮಕ್ಕಳಿಗೆ ಅಡುಗೆ ಮಾಡಲು ಕಲಿಸುತ್ತಲೇ ಇಲ್ಲ. ಹೆಣ್ಣಿನ ಬಗ್ಗೆ ಲೂಸ್ ಟಾಕ್ ಮಾಡಿದವನಿಗೆ ಸೋಷಿಯಲ್ ಮೀಡಿಯಾ ರಿಯಾಕ್ಷನ್ ಹೀಗಿತ್ತು!
ಹೆಣ್ಮಕ್ಕಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಕಮೆಂಟ್ ಮಾಡೋರು ತುಂಬ ಜನ ಇದ್ದಾರೆ. ಹುಡುಗಿ ಅಂದ್ರೆ ಹೀಗೆ ಅನ್ನೋ ಪೂರ್ವಾಗ್ರಹದ ಕಮೆಂಟ್ ಒಂದಕ್ಕೆ ಹೆಣ್ಮಕ್ಕಳು ಕೊಟ್ಟ ರಿಯಾಕ್ಷನ್ ನೋಡಿ ಹುಡುಗ್ರು ಗಪ್‌ಚುಪ್. ಸಾಮಾಜಿಕ ಜಾಲತಾಣದಲ್ಲಿ ಸೆಕ್ಸಿಸ್ಟ್ ಪೋಸ್ಟ್‌ಗಳಿಗೆ, ಕಮೆಂಟ್‌ಗಳಿಗೆ ಬರ ಇರೋದಿಲ್ಲ. ಯಾರೋ ಅನ್‌ಪಡ್‌ಗಳು ಮಾತ್ರ ಹೀಗೆ ಮಾಡುವುದಲ್ಲ, ಕೆಲವೊಮ್ಮೆ ದೊಡ್ಡವರು ಎನಿಸಿಕೊಂಡವರೇ ಹಾಗೆ ಮಾಡುತ್ತಾರೆ. ಸಂತೋಷದ ಸಂಗತಿ ಅಂದರೆ ಅಂಥ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಇರುವವರೇ ಅವರಿಗೆ ತಕ್ಕ ಪ್ರತ್ಯುತ್ತರ ಕೊಟ್ಟು ಬಾಯಿ ಮುಚ್ಚಿಸುತ್ತಾರೆ.
ಹೀಗೆ ಅಂಥದೊಂದು ಪೋಸ್ಟ್ ವೈರಲ್ ಕಮೆಂಟ್ ದಾಳಿಗೆ ತುತ್ತಾಗಿದೆ. ಆಕಾಶ್ ಪ್ರಜಾಪತಿ ಎಂಬವರು ಮಾಡಿದ ಟ್ವೀಟ್ ಹೀಗಿತ್ತು: ʼʼಇಂದು ಹುಡುಗಿಯರು ಅವರ ತಂದೆಯ ಹಾಗೆ ಡ್ರಿಂಕ್ ಮಾಡುತ್ತಾರೆ, ಆದರೆ ಅವರ ತಾಯಿಯ ಹಾಗೆ ಅಡುಗೆ ಮಾಡಲಾರರುʼʼ. ಇದರಿಂದ ಕೆರಳಿದ ಮಹಿಳೆಯರು ಈತನ ಮೇಲೆ ಮುಗಿಬಿದ್ದಿದ್ದಾರೆ. ಇದಕ್ಕೆ ಉತ್ತರವಾಗಿ ಅವರು ನೀಡಿದ ಕಮೆಂಟ್‌ಗಳು ಸ್ವಾರಸ್ಯಕರವಾಗಿವೆ.
'ನಾನು ನನ್ನ ತಾಯಿಯಂತೆ, ಅಜ್ಜಿಯಂತೆ ಕೂಡ ಅಡುಗೆ ಮಾಡಬಲ್ಲೆ. ಮತ್ತೆ ತಂದೆಯಂತೆ ಕುಡಿಯುತ್ತೇನೆ ಕೂಡ. ಹೇಳಿ, ಇನ್ನೇನು ಮಾಡಿ ತೋರಿಸಬೇಕು?' ಅಂತ ಒಬ್ಬರು ಟ್ವೀಟ್ ಮಾಡಿದ್ದರೆ, 'ಹುಡುಗರು ತಮ್ಮ ತಂದೆಯಂತೆ ಕುಡಿಯಬಲ್ಲರು, ಆದರೆ ತಾಯಿಯ ಹಾಗೆ ಅಡುಗೆ ಮಾಡಲಾರರು, ಯಾವತ್ತಿನಂತೆ' ಎಂದು ಮತ್ತೊಬ್ಬಾಕೆ ಝಾಡಿಸಿದ್ದಾರೆ.
ಚೀನಾದಲ್ಲಿ ಆರಂಭವಾಗಿದೆ 'ಫುಲ್ ಟೈಮ್ ಡಾಟರ್' ವೃತ್ತಿ, ಏನಿದರ ಅಸಲಿಯತ್ತು?
'ಈ ಎಲ್ಲ ಕುಕ್ಕಿಂಗ್ ಭಾಷಣ ಹುಡುಗಿಯರಿಗೆ ಮಾತ್ರವಾ? ಇಂಥ ಹುಡುಗರು ಹಸಿವಿನಿಂದ ಸತ್ತು ಹೋಗ್ತಾರಾ? ಯಾರು ಕೇರ್ ಮಾಡ್ತಾರೆ?' 'ಕುಕ್ಕಿಂಗ್ ಅನ್ನೋದು ಬೇಸಿಕ್ ಲೈಫ್ ಸ್ಕಿಲ್. ನಿಮ್ಮಂಥ ಗಂಡಸರು ಅಡುಗೆ ಮಾಡಲಾರಿರಿ. ಆದರೆ ಇಂಥ ನಾನ್‌ಸೆನ್ಸ್ ಮಾತಾಡೋಕೆ ಬಾಯಿ ಬಿಡಬಲ್ಲಿರಿ', 'ಹಾಗಾದ್ರೆ ನಿಮ್ಮಂಥ ಹುಡುಗರೇ ಹೋಗಿ ಅಡುಗೆ ಮಾಡಬಹುದಲ್ಲ, ನಮ್ಮನ್ಯಾಕೆ ಕಾಯ್ತೀರಿ?'
'ಈ ಪೋಸ್ಟ್ ಮಾಡೋ ಮುನ್ನ ನಿಮ್ಮ ಹೆಂಡತಿಯನ್ನು ಒಂದು ಮಾತು ಕೇಳಬೇಕಿತ್ತು'
'ನಿಮ್ಮ ಮಗಳು ಈ ಪೋಸ್ಟ್ ನೋಡಿದ್ರೆ ಮುಖಕ್ಕೆ ಉಗಿಯಲ್ವಾ?'
'ಹುಡುಗರು ನೀವು ಹೇಳಿದ ಒಂದನ್ನೂ ಮಾಡಲಾರರು' ಅಂತೆಲ್ಲಾ ಮಹಿಳೆಯರು ಚೆನ್ನಾಗಿಯೇ ಈತನಿಗೆ ಜಾಡಿಸಿದ್ದಾರೆ. ಹಲವು ಪುರುಷರೂ ಇದಕ್ಕೆ ಸೇರಿಕೊಂಡಿದ್ದಾರೆ.
Lakshmi Baramma : ಕೀರ್ತಿ ಪ್ರೀತಿ ಪರೀಕ್ಷೆಯಲ್ಲಿ ವೈಷ್ಣವ್ ಪಾಸ್
ಈ ಸಮಾಜ ಗಂಡಿನಿಂದ ಬಯಸುವುದೇ ಬೇರೆ, ಹೆಣ್ಣಿನಿಂದ ಬಯಸುವುದೇ ಬೇರೆ. ಗಂಡು ಆಫೀಸ್ (Office) ಮುಗಿಸಿ ಎಷ್ಟು ಹೊತ್ತಿಗೆ ಬಂದರೂ ಜುಮ್ ಆಗಿ ಇರುತ್ತಾನೆ. ಬೇಕಾದ ಸಮಯಕ್ಕೆ ಆತ ಎದ್ದು ಹೋಗಬಹುದು. ಆದ್ರೆ ಹೆಣ್ಣು ಅತ್ತ ಕಚೇರಿ ಕೆಲಸವನ್ನೂ, ಇತ್ತ ಮನೆ ಕೆಲಸವನ್ನೂ ನಿಭಾಯಿಸಬೇಕು. ಮಕ್ಕಳು (Kids) ಇದ್ದರೆ ಅವರನ್ನೂ ನೋಡಿಕೊಳ್ಳಬೇಕು. ಒಂದು ವೇಳೆ ಆಕೆ ಕ್ಲಬ್ ಪ್ರಿಯಳಾಗಿದ್ದರೆ, ಗೆಳತಿಯರ ಜತೆ ಸೇರಿ ಸ್ವಲ್ಪ ಮದ್ಯ (drinks) ಸೇವಿಸಿದರೆ, ರೂಢಿಗಿಂತ ಸ್ವಲ್ಪ ಭಿನ್ನವಾದ ಉಡುಗೆ ಧರಿಸಿ ʼನಡತೆಗೆಟ್ಟವಳುʼ ʼಚಾರಿತ್ರ್ಯಗೆಟ್ಟವಳುʼ ಎಂಬ ಮಾತುಗಳನ್ನೆಲ್ಲಾ ಕೇಳಬೇಕಾಗುತ್ತದೆ.
ಇಂಥ ಸ್ಟೀರಿಯೋಟೈಪ್‌ಗಳನ್ನು ಬಾಲಿವುಡ್‌ನ ದೀಪಿಕಾ ಪಡುಕೋಣೆ ಮುಂತಾದ ನಟಿಯರು, ಸ್ವತಂತ್ರ ಸ್ವಭಾವದ ಇತರ ಹೆಣ್ಣುಮಕ್ಕಳು ಮುರಿಯುತ್ತಲೇ ಬಂದಿದ್ದಾರೆ. ಆದರೂ ರೂಢಿಗತ ಗಂಡು ಮನಸ್ಸು ಸ್ಟಿರಿಯೋಟೈಪ್‌ಗಳನ್ನು ಬಯಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ (Social media) ಅದಕ್ಕೆ ತಕ್ಷಣದ ಚುಚ್ಚುಮದ್ದುಗಳೂ ಸಿಗುತ್ತವೆ!
ಸೋ ಇಂಥಾ ಪೋಸ್ಟ್ ಗಳನ್ನು ಅಪ್‌ಲೋಡ್ ಮಾಡೊ ಮೊದಲು ಕೊಂಚ ಯೋಚನೆ ಮಾಡಿ. ಈ ಕಾಲದ ಡ್ರೆಸ್ ಹಾಕ್ಕೊಂಡ್ರೆ ಮಾಡರ್ನ್ ಆಗಲ್ಲ, ನಿಮ್ಮ ಯೋಚನೆಯೂ ಕೊಂಚ ಕಾಲಕ್ಕೆ ತಕ್ಕಂತಿರಲಿ ಅನ್ನೋ ಎಚ್ಚರಿಕೆಯನ್ನು ಹುಡುಗೀರು ಈ ಮೂಲಕ ಕೊಡ್ತಿದ್ದಾರೆ.