ಕಣ್ಣು ಬಿಟ್ಕೊಂಡೇ ಸೀನುವ ಚಾಲೆಂಜ್ ಮಾಡಿದ ಹುಡುಗಿಯ ಕಥೆ ಇದೆ!
ಸೀನುವಾಗ ಕಣ್ಣು ಮುಚ್ಚೋದು ಸಾಮಾನ್ಯ. ಕಣ್ಣನ್ನು ಬಲವಂತವಾಗಿ ತೆಗೆಯುವ ಪ್ರಯತ್ನ ನಡೆಸಿದ್ರೆ ಕಣ್ಣಿಗೆ ಸಮಸ್ಯೆಯಾಗುತ್ತದೆ, ಕಣ್ಣು ಹೊರಗೆ ಬರುತ್ತದೆ ಎನ್ನುವ ಮಾತಿದೆ. ಈ ಹುಡುಗಿ ಚಾಲೆಂಜ್ ಸ್ವೀಕರಿಸಿದಾಗ ಆಗಿದ್ದೇನು?

ನೆಗಡಿಯಾದಾಗ, ಮೂಗಿನಲ್ಲಿ ಕಿರಿಕಿರಿಯುಂಟಾದಾಗ, ಧೂಳು ಮೂಗಿನೊಳಗೆ ಹೋದಾಗ ಸೀನು ಬರೋದು ಸಾಮಾನ್ಯ. ಸೀನುವಾಗ ನಮ್ಮ ಕಣ್ಣು ಮುಚ್ಚೋದು ಕೂಡ ಅಷ್ಟೇ ಸಾಮಾನ್ಯ. ಸೀನುವಾಗ ಕಣ್ಣು ಬಿಟ್ಟುಕೊಂಡಿದ್ರೆ ಕಣ್ಣು ಹೊರಗೆ ಬರುತ್ತದೆ ಎಂದು ಹಿರಿಯರು ಹೇಳೋದನ್ನೂ ನೀವು ಕೇಳಿರಬಹುದು. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದನ್ನು ಆಮೇಲೆ ವಿಮರ್ಶೆ ಮಾಡೋಣ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಬಗ್ಗೆ ಮಾಹಿತಿ ನೀಡ್ತೇವೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಹುಡುಗಿ ಕಣ್ಣು ಬಿಟ್ಟುಕೊಂಡು ಸೀನು (sneezing ) ವ ಚಾಲೆಂಜ್ ತೆಗೆದುಕೊಳ್ತಾಳೆ. ಅದ್ರಲ್ಲಿ ಆಕೆ ಯಶಸ್ವಿಯಾಗ್ತಾಳಾ ಎಂಬ ಕುತೂಹಲವಿದೆ. _bela_amor ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹುಡುಗಿ ಈ ಚಾಲೆಂಜ್ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಆಕೆ ಮೊದಲು ಮೂಗಿಗೆ ಪೆನ್ ಹಾಕಿ ಮೂಗಿಗೆ ಕಿರಿಕಿರಿಯುಂಟು ಮಾಡ್ತಾಳೆ. ಹಾಗೆ ಮಾಡ್ತಿದ್ದ ಹಾಗೆ ಆಕೆಗೆ ಸೀನು ಬರುತ್ತದೆ. ಸೀನುವಾಗ ಆಕೆ ಕಣ್ಣು ಮುಚ್ಚೋದಿಲ್ಲ. ಆದ್ರೆ ಕಣ್ಣು ರೆಪ್ಪೆಯನ್ನು ಮಿಟುಕಿಸ್ತಾಳೆ. ಕಣ್ಣಿನಲ್ಲಿ ನೀರು ಬರೋದನ್ನು ನೀವು ನೋಡ್ಬಹುದು. ಹುಡುಗಿಗೆ ಮತ್ತ್ಯಾವುದೇ ಸಮಸ್ಯೆ ಆಗೋದಿಲ್ಲ. ಕಣ್ಣು ಬಿಟ್ಟುಕೊಂಡೇ ಸೀನಿನ ನಂತ್ರ ಹುಡುಗಿ ನಾನು ಯಶಸ್ವಿಯಾದೆ ಎನ್ನುತ್ತಾಳೆ.
ಕೇವಲ 10000 ರೂ. ಸಾಲ ಪಡೆದು ಬಿಸಿನೆಸ್ ಆರಂಭಿಸಿದ್ದ ವ್ಯಕ್ತಿ, ಈಗ ಅಂಬಾನಿ, ಟಾಟಾ ಬಿಸಿನೆಸ್‌ಗೇ ಸ್ಪರ್ಧಿ!
ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ವೆಲ್ ಐ ಡಿಡ್ ಇಟ್ ಎಂದು ಹುಡುಗಿ ಶೀರ್ಷಿಕೆ ಹಾಕಿದ್ದಾಳೆ. ಅನೇಕ ಬಳಕೆದಾರರು ಹುಡುಗಿಯ ಈ ವಿಡಿಯೋಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ. ಇದು ಅತ್ಯಂತ ಫನ್ನಿ ವಿಡಿಯೋ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಹೀಗೆ ಸೀನಿದ್ರೆ ಕಣ್ಣು ಹೊರಗೆ ಬರುತ್ತೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ರೆ ಇನ್ನೊಬ್ಬರು 100 ಬಾರಿ ಈ ವಿಡಿಯೋ ವೀಕ್ಷಣೆ ಮಾಡಿದ್ದೇನೆ ಎಂದು ಕಮೆಂಟ್ ಹಾಕಿದ್ದಾರೆ.
'ಲಿವ್-ಇನ್ ರಿಲೇಷನ್ ಶಿಪ್ ಜಸ್ಟ್ ಟೈಮ್ ಪಾಸ್'; ರಕ್ಷಣೆ ಕೋರಿದ ಜೋಡಿಯ ಮನವಿ ತಿರಸ್ಕರಿಸಿದ ಹೈಕೋರ್ಟ್
ಕಣ್ಣು ಬಿಟ್ಟು ಸೀನೋದು ಎಷ್ಟು ಒಳ್ಳೆಯದು? : ಸೀನುವುದು ದೇಹದ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದೆ. ಮೂಗು ಮತ್ತು ಶ್ವಾಸಕೋಶದಿಂದ ಗಾಳಿಯನ್ನು ದೇಹವು ಬಾಯಿ ಮತ್ತು ಮೂಗಿನ ಮೂಲಕ ಹೊರಹಾಕುತ್ತದೆ. ಸೀನಿದಾಗ ಯಾವುದೇ ಬ್ಯಾಕ್ಟೀರಿಯಾ, ವೈರಸ್ ಅಥವಾ ಯಾವುದೇ ರೀತಿಯ ಕೊಳಕು ಹೊರಗೆ ಬರುತ್ತದೆ. ಸೀನುವಾಗ ಕಣ್ಣುಗಳನ್ನು ನಾವು ತೆರೆಯಲು ಪ್ರಯತ್ನಿಸಿದರೆ ಒತ್ತಡದಿಂದಾಗಿ ಕಣ್ಣುಗಳು ಹೊರಗೆ ಬರುತ್ತವೆ ಎಂದು ಹಿಂದಿನವರು ಹೆಲ್ತಾರೆ. ಆದ್ರೆ ಇದಕ್ಕೆ ಯಾವುದೇ ಪುರಾವೆ ಇನ್ನೂ ಬೆಳಕಿಗೆ ಬಂದಿಲ್ಲ. ಸೀನುವಾಗ ಕಣ್ಣು ಮುಚ್ಚುವುದು ಸ್ವಯಂಚಾಲಿತ ಕ್ರಿಯೆಯಾಗಿದೆ. ತಜ್ಞರ ಪ್ರಕಾರ, ಸೀನುವಾಗ ಕಣ್ಣು ಮುಚ್ಚುವುದು ಬಹಳ ಒಳ್ಳೆಯದು. ನಾವು ಸೀನಿದಾಗ ಬಾಯಿಯಿಂದ ಹೊರಬರುವ ಬ್ಯಾಕ್ಟೀರಿಯಾಗಳು ಕಣ್ಣು ತೆರೆದಿದ್ದರೆ ಕಣ್ಣಿನೊಳಗೆ ಹೋಗುವ ಅಪಾಯವಿರುತ್ತದೆ. ಸೀನಿದಾಗ ನಮ್ಮ ಕಣ್ಣುಗಳು ಮುಚ್ಚಲು ಟ್ರೈಜಿಮಿನಲ್ ನರವೂ ಕಾರಣವಾಗಿದೆ. ಈ ನರವು ಮುಖ, ಕಣ್ಣು, ಬಾಯಿ, ಮೂಗು ಮತ್ತು ದವಡೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.
ಸೀನಿದಾಗ ಶಬ್ಧ ಬರೋದು ಏಕೆ? : ಸೀನಿದಾಗ ಶಬ್ದ ಬರೋದು ನಿಮಗೆಲ್ಲ ಗೊತ್ತು. ಅದಕ್ಕೂ ಒಂದು ಕಾರಣವಿದೆ. ಶ್ವಾಸಕೋಶದಲ್ಲಿ ತುಂಬಿದ ಗಾಳಿಯು ಸೀನುವ ಮೂಲಕ ಹೊರಬರುತ್ತದೆ. ಗಾಳಿ ಹೊರಬರುವಾಗ ಶಬ್ಧ ಬರುತ್ತದೆ.
ಸೀನುವಾಗ ಕಣ್ಣು ತೆರೆದು ಸೀನಿದ್ರೆ ಹೆಚ್ಚಿನ ಅಪಾಯವಿಲ್ಲ. ಕಣ್ಣು ಹೊರಗೆ ಬರುತ್ತದೆ ಎಂಬುದು ಸುಳ್ಳು. ಆದ್ರೆ ಕಣ್ಣಿಗೆ ಬ್ಯಾಕ್ಟೀರಿಯಾ ಹೊಗಬಾರದು ಎನ್ನುವವರು ಕಣ್ಣನ್ನು ಬಲವಂತವಾಗಿ ತೆರೆಯುವ ಪ್ರಯತ್ನ ಮಾಡಬೇಡಿ. ನಿಮಗೆ ಅತಿ ಶೀತವಾಗಿದ್ದಾಗ ನೀವು ಕಣ್ಣು ತೆರೆದು ಸೀನುವ ಪ್ರಯತ್ನ ಮಾಡಿದ್ರೆ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.