ಫ್ರಿಡ್ಜ್ ಪ್ರತಿಯೊಂದು ಮನೆಯ ಅವಶ್ಯಕ ವಸ್ತು. ಆದರೆ, ನಿರ್ಲಕ್ಷ್ಯದಿಂದ ಅಪಾಯ ಸಂಭವಿಸಬಹುದು. ಫ್ರಿಡ್ಜ್ ನಿರಂತರವಾಗಿ ಆನ್ ಆಗಿದ್ದರೆ, ಅಧಿಕ ಬಿಸಿಯಾಗಿ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ. ಕಾಲಕಾಲಕ್ಕೆ ಸರ್ವಿಸ್ ಮಾಡಿಸಿ, ಕಂಪ್ರೆಸರ್ ಗ್ಯಾಸ್ ಸೋರಿಕೆಯಾಗದಂತೆ ನೋಡಿಕೊಳ್ಳಿ. ಹಳೆಯ ಫ್ರಿಡ್ಜ್‌ಗಳನ್ನು 10-12 ವರ್ಷಗಳ ನಂತರ ಬದಲಾಯಿಸುವುದು ಸೂಕ್ತ. ಮುನ್ನೆಚ್ಚರಿಕೆ ವಹಿಸಿದರೆ, ಸಂಭವನೀಯ ಅಪಾಯವನ್ನು ತಪ್ಪಿಸಬಹುದು.

ಅಡುಗೆ ಮನೆ (kitchen) ಯಲ್ಲಿ ಪ್ರತ್ಯೇಕ ಜಾಗ ಪಡೆದಿರುವ ವಸ್ತು ಅಂದ್ರೆ ಅದು ಫ್ರಿಡ್ಜ್ (fridge). ಬಹುತೇಕ ಎಲ್ಲರ ಮನೆಯಲ್ಲಿ ಫ್ರಿಡ್ಜ್ ಇದ್ದೇ ಇರುತ್ತೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಜನರು ಫ್ರಿಡ್ಜ್ ಖರೀದಿ ಮಾಡ್ತಾರೆ. ಹಣ್ಣು, ತರಕಾರಿ ಸೇರಿದಂತೆ ಆಹಾರ ವಸ್ತುಗಳು ಹಾಳಾಗದೆ ನೋಡಿಕೊಳ್ಳುವ ಈ ಫ್ರಿಡ್ಜ್ ಗೆ ಬೇಸಿಗೆಯಲ್ಲಿ ಬಹುಬೇಡಿಕೆ. ದುಬಾರಿ ಹಣ ನೀಡಿ ಫ್ರಿಡ್ಜ್ ಖರೀದಿ ಮಾಡಿರ್ತೇವೆ. ಅದ್ರಲ್ಲಿರುವ ವಸ್ತು ಹಾಳಾಗ್ಬಾರದು ಅಂತ ದಿನದ 24 ಗಂಟೆ ಮಾತ್ರವಲ್ಲ ಪ್ರವಾಸಕ್ಕೆ ಹೋಗೋ ಟೈಂನಲ್ಲೂ ಫ್ರಿಡ್ಜ್ ಆನ್ ಇಟ್ಟು ಹೋಗ್ತೇವೆ. ಫ್ರಿಡ್ಜ್, ಎಲೆಕ್ಟ್ರಿಕ್ ವಸ್ತು. ಇದನ್ನು ಕಾಳಜಿಯಿಂದ ನೋಡಿಕೊಳ್ಬೇಕು. ಹೇಗೆ ಬೇಕೋ ಹಾಗೆ ಬಳಸಿದ್ರೆ ಅಪಾಯವುಂಟಾಗ್ಬಹುದು. ಜೀವ ಹೋಗುವ ಸಾಧ್ಯತೆ ಇರುತ್ತೆ. ಫ್ರಿಡ್ಜ್, ಬಾಂಬ್ ರೀತಿ ಬ್ಲಾಸ್ಟ್ (Blast) ಆದ ಕೆಲ ಘಟನೆ ಇದೆ. ಫ್ರಿಡ್ಜ್ಶಾಕ್ ಹೊಡೆದು ಕೆಲವರು ಸಾವನ್ನಪ್ಪಿದ್ದಾರೆ. ನಿಮ್ಮ ಮನೆಯಲ್ಲೂ ಇಂಥ ಅನಾಹುತ ಸಂಭವಿಸಬಾರದು ಅಂದ್ರೆ ನೀವು ಮುನ್ನೆಚ್ಚರಿಕೆ ತೆಗೆದುಕೊಳ್ಬೇಕು. 

ಫ್ರಿಡ್ಜ್ ಬ್ಲಾಸ್ಟ್ ಆಗಲು ಕಾರಣ ಏನು? :

ಫ್ರಿಡ್ಜ್ ಆಫ್ - ಆನ್ : ಮನೆಗೆ ಫ್ರಿಡ್ಜ್ ತಂದ ನಂತ್ರ ಅದರ ಸ್ವಿಚ್ ಆಫ್ ಮಾಡದ ಜನರಿದ್ದಾರೆ. ನಿರಂತರವಾಗಿ ಫ್ರಿಡ್ಜ್ ಆನ್ ಆಗಿದ್ರೆ ಅದಕ್ಕೆ ಲೋಡ್ ಹೆಚ್ಚಾಗುತ್ತದೆ. ಇದ್ರಿಂದ ಅದು ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ನೀವು ಆಗಾಗ ಫ್ರಿಡ್ಜ್ ಸ್ವಿಚ್ ಆಫ್ ಮಾಡಿ, ಸ್ವಲ್ಪ ಸಮಯ ಬಿಟ್ಟು ನಂತ್ರ ಆನ್ ಮಾಡಿ. ಬೇರೆ ಊರಿಗೆ ಹೋಗುವ ಸಮಯದಲ್ಲಿ ಫ್ರಿಡ್ಜ್ ಆಫ್ ಮಾಡಿ ಹೋಗೋದು ಬೆಸ್ಟ್.

ಕಲಬೆರಕೆ ಹಿಟ್ಟು ಯಾವುದು? 5 ಸೆಕೆಂಡ್‌ಗಳಲ್ಲಿ ಪತ್ತೆ ಮಾಡಿ!

ಸರ್ವಿಸಿಂಗ್ : ಅನೇಕರಿಗೆ ಫ್ರಿಡ್ಜ್ ಅನ್ನ ಕೂಡ ಸರ್ವಿಸ್ ಮಾಡಿಸ್ಬೇಕು ಅನ್ನೋದೇ ಗೊತ್ತಿಲ್ಲ. ನೀವು ಕಾಲ ಕಾಲಕ್ಕೆ ಫ್ರಿಡ್ಜ್ ಸರ್ವಿಸ್ ಮಾಡಿಸ್ಬೇಕು. ಫ್ರಿಡ್ಜ್ ನಲ್ಲಿರುವ ಕೆಲ ವಸ್ತು ತುಂಬಾ ಸೂಕ್ಷ್ಮವಾಗಿರುತ್ತದೆ. ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿದ್ರೆ ಯಾವುದು ಹಾಳಾಗಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತೆ. ಇದ್ರಿಂದ ಫ್ರಿಡ್ಜ್ ಬ್ಲಾಸ್ಟ್ ತಪ್ಪಿಸಬಹುದು. 

ಗ್ಯಾಸ್ ಬಗ್ಗೆ ಗಮನವಿರಲಿ : ಫ್ರಿಡ್ಜ್ ಕಂಪ್ರೆಸರ್ ನಲ್ಲಿ ಗ್ಯಾಸ್ ಇರುತ್ತೆ. ಸಾಮಾನ್ಯವಾಗಿ R-134a, R-600a, ಅಥವಾ R-410A ನಂತಹ ಶೀತಕ ಅನಿಲಗಳನ್ನು ಬಳಸುತ್ತವೆ. ಇವು ಶಾಖವನ್ನು ಹೀರಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಕೆಲಸ ಮಾಡುತ್ತವೆ. ಅನೇಕ ಬಾರಿ ಸಣ್ಣ ಬೆಂಕಿ ಕಿಡಿ ಇದಕ್ಕೆ ತಾಗಿದ್ರೂ ಇದು ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಪಾಯಕಾರಿ ವಸ್ತುಗಳಿಂದ ಫ್ರಿಡ್ಜ್ ದೂರವಿದ್ರೆ ಒಳ್ಳೆಯದು. ಫ್ರಿಡ್ಜ್ ಕಂಪ್ರೆಸರ್ನಲ್ಲಿರುವ ಗ್ಯಾಸ್ ಲೀಕ್ ಆಗಿ ಸಮಸ್ಯೆ ಆಗೋದಿದೆ. 

ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪ

ನೀವು ಹೆಚ್ಚು ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಹೆಚ್ಚು ಖರ್ಚು ಮಾಡ್ಬೇಕಾಗಿಯೂ ಇಲ್ಲ. ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿದ್ರೆ ಎಲ್ಲ ಸಮಸ್ಯೆ ನಿಮಗೆ ತಿಳಿಯುತ್ತದೆ. ಹಾಳಾದ ಪಾರ್ಟ್ ಗಳನ್ನು ಸರಿಪಡಿಸಬೇಕು. ಆಗಾಗ ಫ್ರಿಡ್ಜ್ ಚೆಕ್ ಮಾಡ್ತಿದ್ದರೆ ಮುಂದಾಗುವ ಸಮಸ್ಯೆಯನ್ನು ತಪ್ಪಿಸಬಹುದು. ಒಂದು ಫ್ರಿಡ್ಜ್ ಹತ್ತರಿಂದ 15 ವರ್ಷ ಬಾಳಿಕೆ ಬರುತ್ತದೆ. ಆದ್ರೆ ಹತ್ತರಿಂದ 12 ವರ್ಷಗಳ ನಂತ್ರ ಫ್ರಿಡ್ಜ್ಬದಲಿಸುವುದು ಬಹಳ ಸೂಕ್ತ. ಕಂಪ್ರೆಸರ್ ಹಳೆಯದಾಗುತ್ತಿದ್ದಂತೆ ಅದ್ರ ಶಕ್ತಿಯ ದಕ್ಷತೆ ಕಡಿಮೆಯಾಗುತ್ತೆ. 8-10 ವರ್ಷ ಕಂಪ್ರೆಸರ್ ಬಾಳಿಕೆ ಬರುತ್ತೆ. ನಂತ್ರ ನೀವು ಅದನ್ನು ಬದಲಿಸಬೇಕು.