Tips to control rats: ಇಲಿ ಅಥವಾ ಹೆಗ್ಗಣದ ನಿಯಂತ್ರಣ ಸುಲಭವಲ್ಲ. ಅದಕ್ಕಾಗಿ ಹಲವಾರು ಮಾರ್ಗೋಪಾಯಗಳು ನಿಮಗೂ ತಿಳಿದಿರಬಹುದು. ಕೆಲವು ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸುವ ಮೂಲಕ ಇಲಿಯನ್ನು ಮನೆಯೊಳಗೆ ಬಾರದಂತೆ ಹಾಗೂ ಬಂದರೂ ಹಾನಿ ಮಾಡದಂತೆ ನೋಡಿಕೊಳ್ಳಬಹುದು.
ಮನೆಯಲ್ಲಿ ಇಲಿ (Rat), ಹೆಗ್ಗಣಗಳ (Mice) ಕಾಟ ನಿಯಂತ್ರಿಸುವುದು ಕೆಲವೊಮ್ಮೆ ಬಹುದೊಡ್ಡ ಸವಾಲಾಗುತ್ತದೆ. ಗ್ಯಾರೇಜ್, ಕೈತೋಟ (Garnen), ಅಡುಗೆಮನೆ (Kichen) ಎಲ್ಲೆಂದರಲ್ಲಿ ಅವು ಸಾಮ್ರಾಜ್ಯ ಸ್ಥಾಪನೆ ಮಾಡಬಲ್ಲವು. ಹೂಕುಂಡಗಳಿಗೆ ಹಾಕಿರುವ ಎರೆಹುಳುಗಳನ್ನೂ ನೀಟಾಗಿ ತಿಂದುಮುಗಿಸುವ ಸಾಮರ್ಥ್ಯ ಹೊಂದಿರುವ ಇಲಿಯನ್ನು ನಿಮ್ಮ ಸುತ್ತಮುತ್ತಲ ಬೇರೆ ಯಾವುದೇ ಪ್ರಾಣಿಗೆ ಹಾನಿಯಾಗದಂತೆ ನಿಯಂತ್ರಿಸಬೇಕಾಗುತ್ತದೆ.
ಇಲಿಗಳನ್ನು ಜೀವಂತವಾಗಿ ಸೆರೆಹಿಡಿದು ಕೊಲ್ಲುವುದು ಕಷ್ಟಸಾಧ್ಯ. ಈ ವಿಚಾರದಲ್ಲಿ ಇಲಿಗಳು ನಮ್ಮನ್ನು ಹೈರಾಣಾಗಿಸಬಲ್ಲವು. ಕೆಲವರು ಇಲಿಗಳನ್ನು ಹಿಡಿಯಲು ಅಂಟುಪ್ಯಾಡ್ (Glue Pad) ಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಸಿಲುಕಿಕೊಳ್ಳುವ ಇಲಿ ಕೆಲವು ದಿನಗಳ ಕಾಲ ಒದ್ದಾಡಿ ಸಾಯುತ್ತದೆ. ಹೀಗಾಗಿ, ಇದು ಮಾನವೀಯ ವಿಧಾನ ಎನಿಸಿಕೊಳ್ಳುವುದಿಲ್ಲ. ಹೆಚ್ಚು ಪರಿಣಾಮಕಾರಿ ಹಾಗೂ ಮಾನವೀಯ ವಿಧಾನಗಳನ್ನು ಅನುಸರಿಸುವುದು ಅಗತ್ಯ. ಇದಕ್ಕಾಗಿ ಕೆಲವು ಮಾರ್ಗೋಪಾಯಗಳನ್ನು ಅರಿತುಕೊಳ್ಳಿ.
ನಿಮಗೆ ಗೊತ್ತೇ? ರೈತ (Farmer) ಬೆಳೆದ ಬೆಳೆಯ ಬಹುಪಾಲು ಇಲಿ-ಹೆಗ್ಗಣಗಳ ಪಾಲಾಗುತ್ತದೆ. ಹೀಗೆ ನಾಶವಾಗುವ ಬೆಳೆಗಳ ಮೌಲ್ಯ ಅಪಾರ. ಒಂದು ಅಂದಾಜಿನ ಪ್ರಕಾರ, ಜಾಗತಿಕವಾಗಿ 1930ರಿಂದ 2018ರವರೆಗೆ ಇಲಿಗಳು ನಾಶ ಮಾಡಿದ ಆಹಾರಧಾನ್ಯಗಳ (Food Grain) ಮೌಲ್ಯ 35 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಹೀಗಾಗಿ, ಇದೊಂದು ಜಾಗತಿಕ ಸಮಸ್ಯೆ. ಆದರೆ, ನಾವು ಮೊದಲು ನಮ್ಮ ಮನೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹೀಗಾಗಿ, ಇಲಿ ಸಮೂಹ ನಮ್ಮ ಮನೆಗಳಿಗೆ ಹಾನಿಯುಂಟು ಮಾಡದಂತೆ ಮಾಡಲು ಈ ಕ್ರಮಗಳನ್ನು ಅನುಸರಿಸಬಹುದು.
• ಯಾಂತ್ರಿಕ ಟ್ರ್ಯಾಪ್ (Trap):
ಮನೆಯೊಳಗೆ ಮಾತ್ರ ಬಳಕೆ ಮಾಡಬಹುದಾದ ಯಾಂತ್ರಿಕ ಟ್ರ್ಯಾಪ್ ಗಳನ್ನು ಬಳಕೆ ಮಾಡಬಹುದು. ಇದು ಹಳೆಯ ಫ್ಯಾಷನ್ ಎನಿಸಬಹುದು. ಆದರೆ, ಪರಿಣಾಮಕಾರಿ ವಿಧಾನವಾಗಿದೆ. ಇಲಿ ಓಡಾಡುವ ಜಾಗದಲ್ಲಿ ಈ ಸಲಕರಣೆ ಇಟ್ಟುಬಿಟ್ಟರೆ ಸಾಕು.
• ವಿದ್ಯುತ್ (Electrical) ಟ್ರ್ಯಾಪ್:
ಬ್ಯಾಟರಿಚಾಲಿತ ಟ್ರ್ಯಾಪ್ ಗಳನ್ನೂ ಬಳಕೆ ಮಾಡಬಹುದು. ಇದರಿಂದ ಇಲಿಗೆ ಶಾಕ್ (Shock) ಹೊಡೆಯುತ್ತದೆ. ಇದು ಭಾರೀ ಪರಿಣಾಮಕಾರಿ ಹಾಗೂ ಮಾನವೀಯ ಮಾರ್ಗ ಎನಿಸಿದೆ. ಏಕೆಂದರೆ, ಇದರಲ್ಲಿರುವ ಎರಡು ಪ್ಲೇಟ್ ಗಳು ಇಲಿಗೆ ಸ್ಪರ್ಶವಾದ ಕೂಡಲೇ ಅದಕ್ಕೆ ಶಾಕ್ ತಗುಲಿ ತಕ್ಷಣವೇ ಹೃದಯ ನಿಂತುಹೋಗುತ್ತದೆ. ಹಿಂಸೆಯಾಗುವುದೇ ಇಲ್ಲ. ಬೇರೆ ಪ್ರಾಣಿಗಳು ಸಂಚರಿಸುವ ಕಡೆಗಳಲ್ಲಿ ಇದನ್ನು ಬಳಕೆ ಮಾಡಬಾರದು.
ಇದನ್ನೂ ಓದಿ: Summer Tips: ಎಸಿ, ಕೂಲರ್ ಇಲ್ಲದೆ ಮನೆ ಥಂಡಾ ಥಂಡಾ ಕೂಲ್ ಆಗೋದು ಹೇಗೆ?
• ವಿಷಪೂರಿತ (Poison) ಔಷಧ ಅಥವಾ ಕ್ರೀಮ್, ಪ್ಯಾಡ್ ಇತ್ಯಾದಿ:
ಅಸಲಿಗೆ ಇದು ಮಾನವೀಯವಲ್ಲದ ವಿಧಾನ. ಏಕೆಂದರೆ, ಈ ವಿಧಾನದಿಂದ ಇಲಿಗಳು ನಿಧಾನವಾಗಿ ಸಾವಿಗೀಡಾಗುತ್ತವೆ. ಸರಿಸುಮಾರು 2-7 ದಿನಗಳಲ್ಲಿ ಸಾವಿಗೀಡಾಗುವುದು ಕಂಡುಬರುತ್ತದೆ. ಆದರೆ, ಉದ್ದಿಮೆಯಂತಹ ದೊಡ್ಡ ಸ್ಥಳದಲ್ಲಿ ಇದನ್ನು ಬಳಕೆ ಮಾಡುವುದು ಸೂಕ್ತ.
ಇದನ್ನೂ ಓದಿ: Fact Check: ತಣ್ಣಗಾದ ನಿಂಬೆ ಸಿಪ್ಪೆ ಕ್ಯಾನ್ಸರ್ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
• ಪೆಸ್ಟ್ ನಿರ್ವಹಣಾ ವಿಧಾನ ಅತ್ಯಂತ ಸೂಕ್ತ:
ಪೆಸ್ಟ್ ಮ್ಯಾನೇಜ್‌ಮೆಂಟ್ ಈ ನಿಟ್ಟಿನಲ್ಲಿ ಅತ್ಯಂತ ಸೂಕ್ತ ವಿಧಾನ ಎನ್ನಬಹುದು. ಯಾವುದೋ ಒಂದು ವಿಧಾನವನ್ನು ಅವಲಂಬಿಸುವ ಬದಲು ಇಡೀ ಮನೆಗೇ ಪೆಸ್ಟ್ ಮ್ಯಾನೇಜ್‌ಮೆಂಟ್ ಅನುಸರಿಸಿದರೆ ಉತ್ತಮ. ಇಲಿ ಬಾರದಂತೆ ಪ್ರೂಫಿಂಗ್ (Proofing) ಅಳವಡಿಸುವುದು, ಶೆಡ್ (Shed) ಬಳಕೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕು. ಮನೆಯ ಕಾಂಪೋಂಡ್ ಒಳಗೆ ಯಾವುದೇ ರೀತಿಯ ರಂಧ್ರ ಇಲ್ಲದಂತೆ ನೋಡಿಕೊಳ್ಳುವುದು, ನೀರಿನ ಮೂಲಗಳನ್ನು ಭದ್ರ ಮಾಡುವುದು, ಸ್ಟೋರೇಜ್, ಗ್ಯಾರೇಜ್ ಗಳನ್ನು ನಿರ್ವಹಿಸುವುದು ಇದರಲ್ಲಿ ಸೇರಿರುತ್ತದೆ. ಕೀಟ ನಿರೋಧಕ ಗುಣವುಳ್ಳ ಸಂಗ್ರಹ ವಸ್ತುಗಳ ಬಳಕೆ ಮಾಡುವುದು ಸೂಕ್ತ. ಮನೆ ಹಾಗೂ ಕಾಂಪೋಂಡ್ ಸುತ್ತಮುತ್ತಲಿನ ಎಲ್ಲ ಗ್ಯಾಪ್ (Gap) ಗಳನ್ನೂ ಮುಚ್ಚುವುದು ಉತ್ತಮ ಮಾರ್ಗ. ಇದರಿಂದ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ.
