Asianet Suvarna News Asianet Suvarna News

ಹಳೇದಾಗಿದ್ರೂ ಫ್ರಿಡ್ಜ್‌ ಈ ರೀತಿ ಕ್ಲೀನ್ ಮಾಡಿದ್ರೆ ಫಳಫಳ ಹೊಳೆಯುತ್ತೆ

ಅಡುಗೆ ಕೋಣೆಯಲ್ಲಿ ಫ್ರಿಡ್ಜ್‌ವೊಂದಿದ್ದರೆ ಸಾಕು ಎಲ್ಲಾ ಕೆಲಸವೂ ಸುಲಭವಾಗಿ ಬಿಡುತ್ತದೆ. ಆದರೆ ಫ್ರಿಡ್ಜ್‌ ಕ್ಲೀನ್ ಮಾಡೋ ರೀತಿ ಸರಿಯಾಗಿಲ್ಲದಿದ್ದರೆ ಕೆಲವೇ ಸಮಯದಲ್ಲಿ ಬಣ್ಣ ಮಾಸಿ ಹಳತರಂತೆ ಕಾಣಲು ಶುರುವಾಗುತ್ತದೆ. ಹೀಗಾಗದಿರಲು ಸರಿಯಾದ ರೀತಿಯಲ್ಲಿ ಫ್ರಿಡ್ಜ್‌ನ್ನು ಕ್ಲೀನ್ ಮಾಡೋದು ಮುಖ್ಯ. ಅದ್ಹೇಗೆ ?

Clean Your Fridge Like This, It Will Be Like New For Years Vin
Author
First Published Oct 4, 2022, 12:31 PM IST

ಫ್ರಿಡ್ಜ್‌ ಎಲ್ಲಾ ಅಡುಗೆ ಮನೆಗಳಲ್ಲೂ ಅತೀ ಅಗತ್ಯವಾದ ಸಾಧನವಾಗಿದೆ. ರೆಫ್ರಿಜರೇಟರ್‌ ಮನೆಯಲ್ಲಿದ್ದರೆ ತರಕಾರಿಗಳನ್ನು ತಾಜಾವಾಗಿರುವಂತೆ ಶೇಖರಿಸಿ ಇಡಬಹುದು. ಉಳಿದ ಆಹಾರವನ್ನು ಸಂಗ್ರಹಿಸಿ ಇಡಬಹುದು. ಆದ್ರೆ ಫ್ರಿಡ್ಜ್‌ ಕ್ಲೀನ್ ಮಾಡೋ ರೀತಿ ಸರಿಯಾಗಿಲ್ಲದಿದ್ದರೆ ಅತೀ ಬೇಗನೆ ಹಳೆಯದಾಗಿ ಕಾಣಿಸುತ್ತೆ. ಇದು ಇತ್ತೀಚಿಗೆ ತಗೊಂಡಿದ್ದು ಹೌದೋ, ಅಲ್ವೋ ಅಂತ ನಮ್ಗೇ ಅನುಮಾನ ಶುರುವಾಗಿ ಬಿಡುತ್ತೆ. ಹೀಗಾಗಿ ಫ್ರಿಡ್ಜ್‌ನ್ನು ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡುವುದು ತುಂಬಾ ಮುಖ್ಯ. ಮನೆಯನ್ನು ಶುಚಿಗೊಳಿಸುವುದರಷ್ಟೇ ಫ್ರಿಡ್ಜ್ ಕ್ಲೀನ್ ಮಾಡುವತ್ತ ಸಹ ಗಮನ ಹರಿಸಬೇಕು. ಕಡಿಮೆ ಶ್ರಮದಲ್ಲಿ ನಿಮ್ಮ ಫ್ರಿಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸುವ ಕೆಲವು ಸುಲಭ ವಿಧಾನಗಳು ಇಲ್ಲಿವೆ.

ಟ್ರೇ ಮತ್ತು ಡ್ರಾಯರ್
ಫ್ರಿಡ್ಜ್‌ (Fridge) ಟ್ರೇ ಮತ್ತು ಡ್ರಾಯರ್‌ನಲ್ಲಿ ಕಲೆಗಳಿದ್ದರೆ, ನೀವು ಟ್ರೇ ಮತ್ತು ಡ್ರಾಯರ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೋಪ್ ಅಥವಾ ಡಿಟರ್ಜೆಂಟ್ ಅನ್ನು ಸೇರಿಸುವ ಮೂಲಕ ನೆನೆಸಿಡಬಹುದು. ಇದರ ನಂತರ ನೀವು ಡಿಶ್ವಾಶ್ ಜೆಲ್ ಅನ್ನು ಬಳಸಬಹುದು. ಹೀಗೆ ಮಾಡಿದಾಗ ಕಲೆ (Mark) ಸುಲಭವಾಗಿ ಬಿಟ್ಟು ಹೋಗುತ್ತದೆ.

Kitchen Hacks : ಫ್ರಿಡ್ಜ್ ನಲ್ಲಿ ಈ ದ್ರವ ಆಹಾರವನ್ನು ಅಪ್ಪಿತಪ್ಪಿಯೂ ಇಡ್ಬೇಡಿ

ಫ್ರಿಡ್ಜ್‌ ಒಳ ಮತ್ತು ಹೊರಭಾಗವನ್ನು ಸ್ವಚ್ಛಗೊಳಿಸುವುದು
ಫ್ರಿಡ್ಜ್‌ನ ಒಳಭಾಗವನ್ನು ಸ್ವಚ್ಛಗೊಳಿಸಲು, ನೀವು 1 ಬೌಲ್ ನೀರಿನಲ್ಲಿ 1 ಚಮಚ ಪಾತ್ರೆ ತೊಳೆಯುವ ದ್ರವವನ್ನು ಹಾಕಿ. ನಂತರ ಈ ದ್ರಾವಣದಲ್ಲಿ ಒಂದು ಕ್ಲೀನ್ ಸ್ಪಾಂಜ್ ಅನ್ನು ನೆನೆಸಿ ಮತ್ತು ಅದನ್ನು ಸ್ವಚ್ಛಗೊಳಿಸಿ. ಇದರ ನಂತರ ಸಂಪೂರ್ಣ ಫ್ರಿಜ್ ಅನ್ನು ಒಣ ಹತ್ತಿ ಬಟ್ಟೆ (Cotton cloth)ಯಿಂದ ಒರೆಸಿ. ಹೀಗೆ ಮಾಡುವುದರಿಂದ ಫ್ರಿಡ್ಜ್‌ನ ಒಳಭಾಗ ಮತ್ತು ಹೊರಭಾವ ತುಂಬಾ ಸುಂದರವಾಗಿ ಕಾಣುತ್ತದೆ. 

ಹ್ಯಾಂಡಲ್ ಶುಚಿಗೊಳಿಸುವಿಕೆ
ಫ್ರಿಡ್ಸ್‌ ಒಳಗಡೆ ಕ್ಲೀನಾಗಿದ್ದರಷ್ಟೇ ಸಾಲದು, ಫ್ರಿಡ್ಜ್‌ನ ಬಾಗಿಲು, ಹ್ಯಾಂಡಲ್‌ನ್ನು ಸಹ ಶುಚಿಯಾಗಿಟ್ಟುಕೊಳ್ಳುವುದು ಮುಖ್ಯ. ಇದಕ್ಕೆ ಬೆಚ್ಚಗಿನ ನೀರಿನಲ್ಲಿ ಒಂದು ಬಟ್ಟಲಿನಲ್ಲಿ ಒಂದು ಚಮಚ ಪಾತ್ರೆ ತೊಳೆಯುವ ದ್ರವ ಮತ್ತು ಚಮಚ ವಿನೆಗರ್ ಮಿಶ್ರಣ ಮಾಡಿ. ಇದು ಉತ್ತಮ ಫ್ರಿಜ್ ಕ್ಲೀನರ್ ಆಗಿದೆ. ಇದು ಫ್ರಿಡ್ಜ್‌ನ ಬಾಗಿಲು ಮತ್ತು ಹ್ಯಾಂಡಲ್‌ನ್ನು ಸುಲಭವಾಗಿ ಸ್ವಚ್ಛ ಮಾಡುತ್ತದೆ. 

ಫ್ರಿಜ್‌ನಲ್ಲಿಟ್ಟು ಹಳೇ ಫುಡ್ ಎಲ್ಲ ತಿಂದ್ರೆ ಆರೋಗ್ಯ ಕೆಡೋದು ಗ್ಯಾರಂಟಿ

ಗ್ಯಾಸ್ಕೆಟ್ ಕ್ಲೀನ್‌
ಒಂದು ಬಟ್ಟಲಿನಲ್ಲಿ ವಿನೇಗರ್ ಮತ್ತು ಒಂದು ಕಪ್ ನೀರು (Water) ತೆಗೆದುಕೊಳ್ಳಿ. ನಂತರ ಈ ದ್ರಾವಣದಲ್ಲಿ ಸ್ವಚ್ಛವಾದ ಬಟ್ಟೆಯನ್ನು ತೇವಗೊಳಿಸಿ ಗ್ಯಾಸ್ಕೆಟ್‌ನ್ನು (ಫ್ರಿಡ್ಜ್‌ನಲ್ಲಿ ಕವಾಟುಗಳನ್ನು ಹೊಂದಿಸಲು ಬಳಸುವ ರಬ್ಬರ್) ಸ್ವಚ್ಛಗೊಳಿಸಿ. ಈಗ ಒಣ ಬಟ್ಟೆಯ ಸಹಾಯದಿಂದ ಗ್ಯಾಸ್ಕೆಟ್ ನಲ್ಲಿರುವ ತೇವಾಂಶ ತೆಗೆದು ಹಾಕಿ. ಇದರ ನಂತರ, ಮೃದುವಾದ ಬಿರುಗೂದಲು ಬ್ರಷ್‌ನೊಂದಿಗೆ, ಗ್ಯಾಸ್ಕೆಟ್‌ನಲ್ಲಿ ಕೆಲವು ಹನಿಗಳನ್ನು ನಿಂಬೆ (Lemon) ಸಾರಭೂತ ತೈಲವನ್ನು ಅನ್ವಯಿಸಿ. ಇದು ರಬ್ಬರ್‌ನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ.

ಫ್ರಿಡ್ಜ್‌ನಲ್ಲಿರುವ ಕಲೆಗಳು
ಫ್ರಿಡ್ಜ್‌ನಲ್ಲಿ ಆಹಾರ (Food)ಗಳನ್ನು ಇಡುವಾಗ, ತೆಗೆಯುವಾಗ ಉಂಟಾಗುವ ಕೆಲವು ಕಲೆಗಳು ಅದೆಷ್ಟೇ ವರೆಸಿದರೂ ಹೋಗುವುದಿಲ್ಲ. ಇಂಥಾ ಮೊಂಡುತನದ ಕಲೆಗಳನ್ನು ಹೋಗಲಾಡಿಸಲು, 2 ಟೇಬಲ್ ಸ್ಪೂನ್‌ ಅಡಿಗೆ ಸೋಡಾವನ್ನು ವಿನೇಗರ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಸ್ವಚ್ಛವಾದ ಬಟ್ಟೆಯ ಮೇಲೆ ಹಚ್ಚಿ. ಕಲೆಯಿರುವ ಭಾಗಕ್ಕೆ ಇದನ್ನು ಹಚ್ಚಿದರೆ ಎಂಥಾ ಕಲೆಯೂ ಮಾಯವಾಗುತ್ತದೆ. ಫ್ರಿಡ್ಜ್‌ನ ಒಳಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಮರೆಯಬೇಡಿ.

Follow Us:
Download App:
  • android
  • ios