ಚಾರಿಟಿಯಿಂದ ಒಳ ಉಡುಪು ಖರೀದಿಸ್ತಾಳೆ ಇವಳು! ಮಗು ಹುಟ್ಟಿದ ಮೇಲೆ ಆದಳಂತೆ ಇಷ್ಟು ಜುಗ್ಗಿ!

ತುರ್ತು ಸಂದರ್ಭಕ್ಕೆ ಅಗತ್ಯ ಎನ್ನುವ ಕಾರಣಕ್ಕೆ ಹಣವನ್ನು ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡಬೇಕು ಸರಿ. ಹೊಟ್ಟೆ, ಬಟ್ಟೆ ಕಟ್ಟಿ ಉಳಿತಾಯ ಮಾಡಿದ್ರೆ ಅದನ್ನು ಸೇವಿಂಗ್ ಎನ್ನುವ ಬದಲು ಜಿಪುಣತನ ಎನ್ನುತ್ತಾರೆ. ಜಿಪುಣರಲ್ಲಿ ಜಿಪುಣೆ ಈ ಮಹಿಳೆ.  
 

Cheapskate Woman Gives Broken Toys To Daughter Buy Husbands Clothes From Charity roo

ಹಣದುಬ್ಬರ ಮತ್ತು ಹೆಚ್ಚುತ್ತಿರುವ ಖರ್ಚು ವೆಚ್ಚಗಳಿಂದ ಹಣ ಉಳಿತಾಯ ಮಾಡುವುದು ದೊಡ್ಡ ಸವಾಲಾಗಿದೆ. ಸಾಮಾನ್ಯವಾಗಿ ಎಲ್ಲರೂ ದುಡ್ಡನ್ನು ಹೇಗೆ ಉಳಿಸಬೇಕು, ಖರ್ಚನ್ನು ಹೇಗೆ ಕಡಿಮೆ ಮಾಡಬೇಕು ಎನ್ನುವುದರ ಬಗ್ಗೆ ಯೋಚಿಸುತ್ತಾರೆ. ಇದಕ್ಕಾಗಿ ಹೊಸ ಹೊಸ ದಾರಿಗಳನ್ನು ಕೂಡ ಹುಡುಕುತ್ತಾರೆ. ಅನಗತ್ಯ ಖರ್ಚುಗಳನ್ನು ಮಾಡದೇ ಮಿತವ್ಯಯ ಮಾಡುವುದು ಉತ್ತಮ. ಆದರೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲೂ ಅನುಮಾನಿಸುವುದು ಮತ್ತು ಉಳಿತಾಯದ ಕಾರಣಕ್ಕೆ ತುಂಬಾ ಕಂಜೂಸ್ ಆಗುವುದನ್ನು ಜಿಪುಣತನ ಎನ್ನುತ್ತಾರೆ. 

ಮನೆಯ ಜವಾಬ್ದಾರಿ (Responsibility) ಈಗ್ಲೂ ಮಹಿಳೆ ಮೇಲಿದೆ. ಗಂಡ ಕೊಟ್ಟ ಹಣವನ್ನು ಅಚ್ಚುಕಟ್ಟಾಗಿ ಖರ್ಚು ಮಾಡುವ ಮಹಿಳೆಯರಿದ್ದಾರೆ. ತಿಂಗಳಿಗೆ ಎಷ್ಟು ಹಣ (Money) ಖರ್ಚಾಗುತ್ತದೆ ಎಂಬುದನ್ನು ಲೆಕ್ಕ ಮಾಡಿ, ಅಷ್ಟು ಹಣವನ್ನು ಪ್ರತ್ಯೇಕವಾಗಿಟ್ಟು, ಸ್ವಲ್ಪ ಹಣವನ್ನು ಯಾರಿಗೂ ತಿಳಿಯದೆ ಉಳಿತಾಯ (Saving) ಮಾಡುವ ಮಹಿಳೆಯರನ್ನು ನೀವು ನೋಡ್ಬಹುದು. ಅವರನ್ನು ಬುದ್ಧಿವಂತ ಮಹಿಳೆ ಎಂದ್ರೆ ತಪ್ಪಾಗೋದಿಲ್ಲ. ಆದ್ರೆ ಈ ಉಳಿತಾಯಕ್ಕೆ ಮಕ್ಕಳು, ಪತಿಯ ಆಸೆಗೆ ಸಂಪೂರ್ಣ ಕಡಿವಾಣ ಹಾಕಿದ್ರೆ ಅವರನ್ನು ಏನನ್ನೋದು? ಇಲ್ಲೊಬ್ಬ ಅತ್ಯಂತ ಜಿಪುಣ (Stingy) ಮಹಿಳೆಯಿದ್ದು, ಆಕೆ ಕಥೆ ನಿಮ್ಮನ್ನು ಬೆರಗಾಗಿಸುತ್ತೆ.

ಉಳಿತಾಯ ಮಾಡೋ ಆಸೆಯೇ? ಹಾಗಿದ್ರೆ ಇವತ್ತಿಂದಲ್ಲೇ ಈ ಮಹಿಳೆ ಮಾಡಿದಂತೆ ನೀವೂ ಮಾಡಿ

ಮಗಳಿಗೆ ಮುರಿದ ಆಟಿಕೆ (Toy) ಕೊಡುವ ಕಂಜೂಸಿ ತಾಯಿ ಈಕೆ : ಎಪ್ಪಲ್ ಮೆಲೆಸಿಯೋ ಎಂಬ ಹೆಸರಿನ ಮಹಿಳೆ ವಿಪರೀತ ಜಿಪುಣಿ. ಈಕೆ ಯಾವಾಗಲೂ ಹಣ ಉಳಿಸುವುದರ ಬಗ್ಗೆಯೇ ಚಿಂತಿಸುತ್ತಿರುತ್ತಾಳೆ. ಈಕೆ ಹಣವನ್ನು ಉಳಿಸುವುದಕ್ಕಾಗಿ ಮಾಡುವ ಟ್ರಿಕ್ಸ್ ನೋಡಿದವರು ನಿಬ್ಬೆರಗಾಗುತ್ತಾರೆ. ಹಣವನ್ನು ಉಳಿಸುವುದಕ್ಕಾಗಿ ಇಂತಹ ಚೀಪ್ ಟ್ರಿಕ್ ಮಾಡಬಹುದಾ ಎಂದು ಆಶ್ಚರ್ಯಪಡುತ್ತಾರೆ. ಕೆಲವರು ಇಷ್ಟೊಂದು ಕಂಜೂಸಿ ಆಗಬಾರದು ಎಂದು ಆಕೆಯನ್ನು ಬೈದುಕೊಂಡಿದ್ದಾರೆ. ಒಬ್ಬ ತಾಯಿ ತನಗೆ ಏನು ಬೇಕೋ ಅದನ್ನು ಖರೀದಿ ಮಾಡಲು ಹಿಂದೇಟು ಹಾಕಿದ್ರೂ ಮಕ್ಕಳು ಇಷ್ಟಪಟ್ಟ ವಸ್ತುಗಳನ್ನು ಕೊಡಿಸುತ್ತಾಳೆ. ಆದರೆ ಈ ಕಂಜೂಸಿ ತಾಯಿ, ಹಣ ಉಳಿಸಬೇಕೆನ್ನುವ ಕಾರಣಕ್ಕೆ ತನ್ನ ಮಕ್ಕಳಿಗೆ  ಏನೂ ಕೊಡಿಸುವುದಿಲ್ಲ.  ಎಕ್ಸಟ್ರೀಮ್ ಚೀಪ್ ಸ್ಕೇಟ್ಸ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೆಲೆಸಿಯೋ, ತಾನು ಹಣವನ್ನು ಉಳಿಸುವುದಕ್ಕಾಗಿ ಹೊರಗಡೆ ಬಿದ್ದಿರುವ ಮುರಿದ ಆಟಿಕೆಗಳನ್ನು ತಂದು ಮಗಳಿಗೆ ಆಟವಾಡಲು ಕೊಡುತ್ತೇನೆ ಎಂದು ಹೇಳಿದ್ದಾಳೆ.

ಚಾರಿಟಿಯಿಂದ ಒಳ ಉಡುಪು ಖರೀದಿ :  ಈಕೆ ಗಂಡನ ಒಳ ಉಡುಪುಗಳನ್ನು ಚಾರಿಟಿ ಅಂಗಡಿಯಿಂದ ಖರೀದಿಸುತ್ತಾಳೆ. ಮೆಲೆಸಿಯೋ ತನ್ನ ಮಗಳನ್ನು ಪೋಷಿಸಲು ಸ್ನೇಹಿತರಿಂದ ತಾಯಿಯ ಹಾಲನ್ನು ಕೂಡ ತೆಗೆದುಕೊಂಡಿರುವುದು ಆಕೆಯ ಮಿತಿ ಮೀರಿದ ಜಿಪುಣತನಕ್ಕೆ ಸಾಕ್ಷಿ. ಬಿಡುವಿನ ವೇಳೆಯಲ್ಲೂ ಮೆಲೆಸಿಯೋ ಹಣವನ್ನು ಉಳಿಸುವುದರ ಬಗ್ಗೆಯೇ ಯೋಚಿಸುತ್ತಾಳಂತೆ. ಈಕೆಗೆ ಇತರರಿಂದ ಸಹಾಯ ಪಡೆಯಲು ಯಾವ ರೀತಿಯ ಮುಜುಗರವೂ ಇಲ್ಲ, ಬದಲಾಗಿ ಈಕೆಗೆ ತನ್ನ ಜಿಪುಣತನದ ಬಗ್ಗೆ ಹೆಮ್ಮೆ ಇದೆ.

ಮೆಲೆಸಿಯೋಗೆ ಮೊದಲಿನಿಂದಲೂ ಹಣ ಉಳಿಸುವ ಅಭ್ಯಾಸವಿತ್ತು. ಮಕ್ಕಳು ಹುಟ್ಟಿದ ಮೇಲೆ ಅವಳ ಕಂಜೂಸಿತನ ಮಿತಿ ಮೀರಿದೆ ಎಂದು ಆಕೆಯ ಪತಿ ವಿಕ್ಟರ್ ಹೇಳುತ್ತಾನೆ. ಮೆಲೆಸಿಯೋ ಮಗುವಿನ ನ್ಯಾಪಿಗೆ ಹಳೆಯ ಬಟ್ಟೆಗಳನ್ನು ಬಳಸುತ್ತಾಳೆ. ಮಗುವನ್ನು ಒರೆಸುವ ಬಟ್ಟೆಗಳನ್ನು ಕೂಡ ಆಕೆ ಸ್ವತಃ ತಯಾರಿಸುತ್ತಾಳೆ ಮತ್ತು ಯಾವಾಗಲೂ ರಿಯಾಯತಿಯನ್ನೇ ಹುಡುಕುತ್ತಿರುತ್ತಾಳೆ ಎಂದು ವಿಕ್ಟರ್ ಹೇಳಿದ್ದಾನೆ.  

ಅಜ್ಜಅಜ್ಜಿ ಮೊಮ್ಮಗುವನ್ನು ಮುದ್ದು ಮಾಡಿ ಹಾಳು ಮಾಡೋದು ಜೀವನದ ಸುಂದರ ಕ್ಷಣ; ತಾಯಿಯನ್ನು ನೆನೆಸಿಕೊಂಡ ಸೆಲೀನಾ ಜೇಟ್ಲಿ

ಸೋಷಿಯಲ್ ಮೀಡಿಯಾದಲ್ಲಿ ಈಕೆಯ ಬಗ್ಗೆ ತಿಳಿದ ಜನರು ಅಚ್ಚರಿಗೊಂಡಿದ್ದಾರೆ. ಇಂಥ ವಿಪರೀತ ಜಿಪುಣತನವಿರುವ ಪತ್ನಿ ಜೊತೆ ಸಂಸಾರ ಮಾಡೋದು ಕಷ್ಟ. ಆಕೆ ಮಕ್ಕಳು ಹಾಗೂ ಪತಿಯ ಸ್ಥಿತಿ ನೆನೆದ್ರೆ ಕಷ್ಟವಾಗುತ್ತದೆ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios