ಕರ್ನಾಟಕ ಪತ್ರಕರ್ತೆಯರ ಸಂಘಕ್ಕೆ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು
ಬೆಂಗಳೂರು (ಜ. 23): ಕರ್ನಾಟಕ ಪತ್ರಕರ್ತೆಯರ ಸಂಘಕ್ಕೆ (Karnataka Women Journalist Association) ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಅಧ್ಯಕ್ಷೆಯಾಗಿ ಪತ್ರಕರ್ತೆ ಪದ್ಮಾ ಶಿವಮೊಗ್ಗ (ಸ್ವತಂತ್ರ) ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆಯಾಗಿ ಸಂಯುಕ್ತ ಕರ್ನಾಟಕದ ಜೆ.ಎನ್.ವಾಣಿಶ್ರೀ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿಯ ಮಂಜುಶ್ರೀ ಎಂ. ಕಡಕೋಳ, ಸಹ ಕಾರ್ಯದರ್ಶಿಯಾಗಿ ಪತ್ರಕರ್ತೆ ಪಂಕಜಾ ಗೊರೂರು, ಖಜಾಂಚಿಯಾಗಿ ಉದಯವಾಣಿಯ ಹಲಿಮತ್ ಸಾದಿಯಾ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೌತ್ ಫಸ್ಟ್‌ನ ಚೇತನಾ ಬೆಳಗೆರೆ, ವಿಸ್ತಾರ ಟಿ.ವಿ.ಯ ಶೀಲಾ ಸಿ. ಶೆಟ್ಟಿ, ದಿ ಹಿಂದು ಪತ್ರಿಕೆಯ ಮಿನಿ ತೇಜಸ್ವಿ , ಸಂಯುಕ್ತ ಕರ್ನಾಟಕದ ಕೀರ್ತಿ ಶೇಖರ್, ಅವಧಿಯ ವಿ.ಎನ್.ಶ್ರೀಜಾ, ದೂರದರ್ಶನದ ಶಾಂತಾ ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತೆ ಎಂ.ಪಿ. ಸುಶೀಲಾ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: Digital Media Workshop: ಕರ್ನಾಟಕ ಪತ್ರಕರ್ತೆಯರ ಸಂಘದಿಂದ 'ಡಿಜಿಟಲ್ ಕಾರ್ಯಾಗಾರ!