ಲೇಖನವು ಹೆಂಗಸರು ಪದೇ ಪದೇ ಮೂಗು ಮುಟ್ಟಿಕೊಳ್ಳುವ ಬಗ್ಗೆ ಚರ್ಚಿಸುತ್ತದೆ. ಇದು ಅನುಮಾನ, ಗೊಂದಲ ಅಥವಾ ಕುತೂಹಲದ ಸಂಕೇತವಾಗಿರಬಹುದು. ಗಂಡಸರು ಮತ್ತು ಹೆಂಗಸರು ಎಚ್ಚರಿಕೆಯಿಂದ ಇರುವಾಗ ಅಥವಾ ವಿಡಿಯೋ ಕಾಲ್ ಮಾಡುವಾಗಲೂ ಹೀಗೆ ಮಾಡುತ್ತಾರೆ. ಇದರ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ, ಆದರೆ ಇದು ಮಾನಸಿಕ ಸ್ಥಿತಿಗೆ ಸಂಬಂಧಿಸಿರಬಹುದು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಟೈಟಲ್ ನೋಡಿದ ತಕ್ಷಣ ನಿಮಗೆ ಶಾಕ್ ಆಗ್ಬೋದು ಇದೇನಪ್ಪ ಗಂಡಸ ಎದೆ ಡವಡವ ಅನ್ನೋದು ಹೆಂಗಸರು ಈ ರೀತಿ ಮಾಡಿದರೆ ಮಾತ್ರನಾ ಏನಿದು ಅಂತ. ತಮಾಷೆನೇ ಮಾಡ್ತಿಲ್ಲ ಗುರು...ಈ ಲಕ್ಷಣ ಅಪ್ಪಿತಪ್ಪಿ ನಿಮ್ಮ ಹುಡುಗಿಯಲ್ಲಿ ಕಂಡು ಬಂದರೆ ಸ್ವಲ್ಪ ಹುಷಾರಿಗೆ ಇರುವುದು ಒಳ್ಳೆಯದು. ಈ ಆರ್ಟಿಕಲ್ ಓದುವ ಮೊದಲು ನೀವು ಡಬಲ್ ಮೀನಿಂಗ್ ಯೋಚನೆ ಮಾಡುವುದು ನಿಲ್ಲಿಸಬೇಕು ಏಕೆಂದರೆ ತೀರಾ ಸಿಂಪಲ್ ಆಗಿ ಹೆಂಗಸರ ಈ ಗುಣ ವಿವರಿಸುತ್ತೀನಿ.

ಹೌದು! ಹೆಂಗಸರು ಅಂದ್ರೆ ಜಾಸ್ತಿ ಅನುಮಾನ ಪಡ್ತಾರೆ, ಬರೀ ಕ್ಯೂರಿಯಾಸಿಟಿ, ನೂರೆಂಟು ಪ್ರಶ್ನೆಗಳನ್ನು ಕೇಳಿ ಕೇಳಿ ಹಿಂಸೆ ಕೊಡ್ತಾರೆ ಅನ್ನೋದೆ ಅದೆಷ್ಟೋ ಮನೆಯ ಗಂಡಸರ ಗೋಳು. ನೀವು ಈ ಕಿರಿಕಿರಿ, ವಾದ ಪ್ರತಿವಾದಿಂದ ಪಾರಾಗಬೇಕು ಅಂದ್ರೆ ನಿಮ್ಮವಳ ಈ ಗುಣ ಗಮನಿಸಿ. ನಿಮ್ಮೊಟಿಗೆ ಮಾತನಾಡುವ ಮುನ್ನ ಅಥವಾ ಜಗಳ ಶುರು ಮಾಡುವ ಮುನ್ನ ಆಕೆ ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಿದ್ದರೆ ಏನೂ ಸಮಸ್ಯೆ ಇದೆ ಅಂತ. ಆಕೆಗೆ ನೆಗಡಿನೂ ಆಗಿರುವುದಿಲ್ಲ ಅಥವಾ ಥೂಲ್ ಬಿದ್ದು ಅಕ್ಷಿ ಬರೋತರನೂ ಇರುವುದಿಲ್ಲ. ಅದು ಅನುಮಾನ, ಕನ್‌ಫ್ಯೂಶನ್ ಅಥವಾ ಕ್ಯೂರಿಯಾಸಿಟಿಯಲ್ಲಿ ಮಾಡುವ ಚಟುವಟಿಕೆ ಎನ್ನಬಹುದು. ಕೆಲವರು ಹೇಳ್ತಾರೆ ಹಲ್ಲು ಕಡಿಯುವುದು, ತುಟಿ ಕಚ್ಚುವುದು ಹಾಗೂ ಮೂತಿ ತಿರುಗಿಸುವುದುತು ತುಂಬಾ ಕಾಮನ್ ಗುಣಗಳು.

ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣಗಳೇನು?

ಇನ್ನೂ ಸತ್ಯ ಹೇಳಬೇಕು ಅಂದ್ರೆ ಹೆಂಗಸರು ಆಗಲಿ ಗಂಡಸರು ಆಗಲಿ ಎಚ್ಚರಿಕೆಯಿಂದ ಇರುವ ಸ್ಥಿತಿ (consciousness) ಬಂದಾಗ ಮೂಗು ಮುಟ್ಟಿಕೊಳ್ಳುತ್ತಾರೆ. ಗಮನಿಸಿದ್ದೀರಾ ಲವರ್ಸ್‌ ವಿಡಿಯೋ ಕಾಲ್ ಮಾಡಿದಾಗ ಹುಡುಗಿ ಅಥವಾ ಹುಡುಗ ...ಇಬ್ಬರಲ್ಲಿ ಒಬ್ಬರು ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಾರೆ. ಅಲ್ಲಿ ಯಾವ ರೀತಿ ನವೆ ಅಥವಾ ಕೆರಿತ ಇರುವುದಿಲ್ಲ ಜಸ್ಟ್‌ ಕಾನ್ಶಿಯಸ್‌ ಫೀಲ್ ಆಗುತ್ತಿರುತ್ತಾರೆ. ಬಾಸ್‌ ಆಫೀಸ್‌ ಮೀಟಿಂಗ್‌ ಇಟ್ಟಾಗ ಟೆನ್ಶನ್‌ನಲ್ಲಿರುವ ಕಾರ್ಮಿಕರು ತಲೆ ಕೆರೆದುಕೊಳ್ಳುವುದಿಲ್ಲ ಮೊದಲು ಮೂಗು ಮುಟ್ಟಿಕೊಳ್ಳುತ್ತಾರೆ. ಯಾಕೆ ಹೀಗ್ ಮಾಡ್ತಾರೆ? ಈ ರೀತಿ ಮಾಡಲು ಕಾರಣ ಏನು ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಇದ ಸೈಕಾಲಿಜಿ ಇದ್ರೂ ಇರ್ಬೋದು. ಆದರೆ ನಾನು ಒಮ್ಮೆ ಹುಡುಗನೊಟ್ಟಿಗೆ ವಿಡಿಯೋ ಕಾಲ್ ಮಾಡಿದಾಗ ಸ್ವಲ್ಪ ಮೂಗು ಮುಟ್ಟಿಕೊಳ್ಳುತ್ತಿದ್ದೆ. ಇದು ಅವನ ಮೇಲಿನ ಅನುಮಾನ ಅಲ್ಲ ನಂಗೆ ಒಂಥರಾ ನಾಚಿಕೆ ಆಗಿ. 

Watermelon: ಕಲ್ಲಂಗಡಿ ತಿನ್ನೋದ್ರಿಂದ ಸೆx ಡ್ರೈವ್ ಹೆಚ್ಚುತ್ತದೆಯೇ?