Health
ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣಗಳು
ಇಂದು ಹೆಚ್ಚಿನವರಲ್ಲಿ ಕಂಡುಬರುವ ಒಂದು ಸಮಸ್ಯೆ ಎಂದರೆ ಮೂತ್ರಪಿಂಡದ ಕಲ್ಲು.
ಮೂತ್ರ ವಿಸರ್ಜಿಸುವಾಗ ನೋವು, ಮೂತ್ರದ ಬಣ್ಣ ಬದಲಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ, ಹೊಟ್ಟೆ ನೋವು ಪ್ರಮುಖ ಲಕ್ಷಣಗಳು.
ಮೂತ್ರಪಿಂಡ ಕಲ್ಲು ಉಂಟಾಗಲು ಕೆಲವು ಕಾರಣಗಳು ಇಲ್ಲಿವೆ..
ಕಡಿಮೆ ನೀರಿನ ಅಂಶವು ಮೂತ್ರಪಿಂಡದ ಕಲ್ಲು ಉಂಟಾಗಲು ಮುಖ್ಯ ಕಾರಣವಾಗಿದೆ.
ಅಧಿಕ ತೂಕ ಮತ್ತೊಂದು ಕಾರಣ. ಸ್ಥೂಲಕಾಯ ಹೊಂದಿರುವ ಅನೇಕ ಜನರಲ್ಲಿ ಮೂತ್ರಪಿಂಡದ ಕಲ್ಲು ಕಂಡುಬರುತ್ತದೆ.
ಹೈಪರ್ಪ್ಯಾರಾಥೈರಾಯ್ಡಿಸಮ್, ಯುಟಿಐ, ಜೀರ್ಣಕಾರಿ ಸಮಸ್ಯೆಗಳು ಮೂತ್ರಪಿಂಡದ ಕಲ್ಲು ಉಂಟಾಗಲು ಕಾರಣಗಳಾಗಿವೆ.
ಹೆಚ್ಚಿನ ಪ್ರೋಟೀನ್ ಆಹಾರವು ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ಕಲ್ಲಿಗೆ ಕಾರಣವಾಗುತ್ತದೆ.
ಹೆಚ್ಚಿನ ಸೋಡಿಯಂ ಅಂಶವು ಮೂತ್ರಪಿಂಡದ ಕಲ್ಲಿನ ಅಪಾಯವನ್ನು ಹೆಚ್ಚಿಸುತ್ತದೆ.