Asianet Suvarna News Asianet Suvarna News

ಎಲ್ಲರನ್ನೂ ಒಂದಾಗಿಸುವವರು ಮಹಿಳೆಯರು: ಶ್ರೀ ಶ್ರೀ ರವಿಶಂಕರ್ ಗುರೂಜಿ

ಯುದ್ಧಪೀಡಿತ ಪ್ರಪಂಚಕ್ಕೆ ಮಹಿಳೆಯ ಸಹನಾಶಕ್ತಿ ಮುಖ್ಯ । ಸಮಾಜದ ಅಭಿವೃದ್ಧಿಯಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತೆ ಆರ್ಟ್ ಆಪ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಮಹಿಳಾ ಶಕ್ತಿ ಬಗ್ಗೆ ಬರೆಯುತ್ತಾರೆ.

art of living founder sri ravi shankar guruji writes about power of women on international womens day
Author
First Published Mar 8, 2024, 1:19 PM IST | Last Updated Mar 8, 2024, 1:19 PM IST

- ಶ್ರೀ ಶ್ರೀ ರವಿಶಂಕರ್ ಗುರೂಜಿ, ರ್ಟ್‌ ಆಫ್‌ ಲಿವಿಂಗ್‌

ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಅವರು ಶಾಂತಿಯ ಪ್ರವರ್ತಕರಾಗಬಹುದು; ಅದರಿಂದ ವಿಶ್ವದಲ್ಲಿ ಸಂಘರ್ಷ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು. ಜನರನ್ನು ಒಗ್ಗೂಡಿಸಲು ಮತ್ತು ಅವರ ಮಧ್ಯೆ ಸಾಮರಸ್ಯವನ್ನು ತರಬಲ್ಲ ಸ್ತ್ರೀ ನಾಯಕತ್ವದ ಕೊರತೆಯಿರುವುದರಿಂದಲೇ ಇಂದು ಜಗತ್ತಿನಲ್ಲಿ ಹೆಚ್ಚು ಯುದ್ಧಗಳಾಗುತ್ತಿವೆ. ಇಂದಿನ ಯುದ್ಧ ಪೀಡಿತ ಜಗತ್ತಿನಲ್ಲಿ, ಹೆಚ್ಚು ಒತ್ತಡಕ್ಕೆ ಒಳಗಾಗದೆ, ಮಹಿಳೆಯರು ಮುಂಚೂಣಿಗೆ ಬಂದು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ. ಮಹಿಳೆಯರು ನಮ್ಮ ಸಮಾಜದ ಬೆನ್ನೆಲುಬಾಗಿದ್ದಾರೆ. ಪುರುಷರು ಹೋರಾಡಲು ಪ್ರೇರೇಪಿಸಬಹುದು, ಆದರೆ ಮಹಿಳೆಯರು ಎಲ್ಲರನ್ನು ಒಂದಾಗಲು ಪ್ರೇರೇಪಿಸುತ್ತಾರೆ.

ಭಾರತೀಯ ಧರ್ಮಗ್ರಂಥಗಳು ಮಹಿಳೆಯರಲ್ಲಿನ ಅಗಾಧವಾದ ಶಕ್ತಿಯನ್ನು ಗುರುತಿಸುತ್ತದೆ. ಅರ್ಧನಾರೀಶ್ವರ ತತ್ತ್ವವು, ದೇವರು ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಇಡೀ ಸೃಷ್ಟಿಯ ಕಾರಣಕರ್ತವಾದ ಆದಿಶಕ್ತಿ, ಸೃಷ್ಟಿಯ ಜೀವ ಶಕ್ತಿ ಹೆಣ್ಣಿನ ಸ್ವರೂಪದ್ದೇ ಆಗಿದೆ. ‘ಸಾಂಬ ಸದಾ ಶಿವ’ ಎಂಬ ಶಿವತತ್ತ್ವವು ಶಿವ ಮತ್ತು ಶಕ್ತಿ (ಪುರುಷ ಮತ್ತು ಸ್ತ್ರೀರೂಪದ ಶಕ್ತಿ) ಎರಡನ್ನೂ ಒಳಗೊಂಡಿದೆ. ಶಿವ ಪಾರ್ವತಿಯರು ಬೇರೆ ಬೇರೆಯಲ್ಲ. ಪಾರ್ವತಿ ಎಂದರೆ ಸಂಭ್ರಮದ ಫಲ ಸ್ವರೂಪ, ಶಿವನಿಲ್ಲದೇ ಸಂಭ್ರಮವಿಲ್ಲ. ಶಿವ ಮತ್ತು ಶಕ್ತಿಯನ್ನು ಒಂದು ಕ್ಷಣ ಬೇರ್ಪಡಿಸುವುದೂ ಅಸಾಧ್ಯ. ಶಿವ ತತ್ವವು ಎಲ್ಲೆಲ್ಲಿಯೂ ಇರುವುದಾದರೆ, ಅದರ ವ್ಯಾಪ್ತಿಯನ್ನು ಮೀರಿ ಶಕ್ತಿಯು ಹೇಗೆ ಇರಲು ಸಾಧ್ಯ. ಅದಕ್ಕಾಗಿಯೇ ನಮ್ಮ ಧರ್ಮಗ್ರಂಥಗಳು ಸ್ತ್ರೀ ಶಕ್ತಿಯನ್ನು ದೈವತ್ವದ ಅತ್ಯುನ್ನತ ಅಂಶವಾದ ‘ಆದಿ ಶಕ್ತಿ’ಯೆಂದು ಗೌರವಿಸುತ್ತದೆ.

ಭಾರತದಲ್ಲಿ ಇದೇ ಮೊದಲು ಲಿಬೆಶರ್ ಮತ್ತು ಬ್ರಾಶ್ ನೋವು ಶಮನ ತರಬೇತಿ

ತಾಯಿಯೇ ನಮ್ಮ ಮೊದಲ ಗುರು. ಪ್ರಾಚೀನ ಭಾರತದಲ್ಲಿ, ದೀರ್ಘಕಾಲದವರೆಗೆ, ಮಹಿಳೆಯರು ಜನಿವಾರವನ್ನು ಸಹ ಧರಿಸುತ್ತಿದ್ದರು. ಪಾರ್ವತಿ ಮತ್ತು ಗಾರ್ಗಿ ದೇವತೆಗಳು ಇದನ್ನು ಧರಿಸಿರುವುದನ್ನು ಹಲವು ಕಡೆ ಬಿಂಬಿಸಲಾಗಿದೆ. ಇದು ನಮ್ಮ ಶಾಸ್ತ್ರಗಳಲ್ಲಿಯೂ ಸಹ ಉಲ್ಲೇಖಿತವಾಗಿದೆ. ಅಷ್ಟೇ ಅಲ್ಲದೆ ನಮ್ಮ ಧರ್ಮಗ್ರಂಥಗಳ ಪ್ರಕಾರ, ಒಂದು ಹೆಣ್ಣು ಮಗುವನ್ನು ಕೊಲ್ಲುವುದು ಸಾವಿರ ಸಂತರನ್ನು ಕೊಲ್ಲುವುದಕ್ಕೆ ಸಮವಾದ ಪಾಪವಾಗಿದೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಒಂದು ಸಮಾಜವು ಸದೃಢವಾಗಿರುವುದೇ ಮತ್ತು ಅಲ್ಲಿನ ಜನರು ಸಾಮರಸ್ಯದಿಂದ ಕೂಡಿದ್ದಾರೆಯೇ ಎಂಬುದನ್ನು ನಿರ್ಧರಿಸುವಲ್ಲಿ ಇದು ಏಕೈಕ ಮಾನದಂಡವಾಗಿದೆ.

ಅಯೋಧ್ಯೆ ಶಾಂತವಾಗಿರಲು ಈ ದೇವಿಯೇ ಕಾರಣ… ರವಿಶಂಕರ್ ಗುರೂಜಿ ಹೇಳಿದ್ದೇನು?

ಅಲ್ಲದೆ, ಮಹಿಳೆಯರಿಗೆ ಸರಿಯಾದ ಗೌರವ ಮತ್ತು ಪ್ರಾಮುಖ್ಯತೆ ನೀಡಿದಾಗ ಮಾತ್ರವೇ ಒಂದು ಭ್ರಷ್ಟಾಚಾರ-ಮುಕ್ತ ಸಮಾಜ ಹೊರಹೊಮ್ಮಲು ಸಾಧ್ಯ. ಮಹಿಳೆಯರು ಜನ್ಮತಃ ನಾಯಕರು, ಬಹು-ಪ್ರತಿಭಾವಂತರು ಮತ್ತು ಬಹುಮುಖಿಗಳು. ಅವರಲ್ಲಿರುವ ಈ ಸಹಜ ಗುಣಗಳನ್ನು ಬೆಳೆಸಬೇಕಾಗಿದೆ. ಮಹಿಳೆಯರು ಭಾವನಾತ್ಮಕವಾದ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಳ್ಳುವುದೇ ಅಲ್ಲದೇ, ಸಂಕಲ್ಪ ಶಕ್ತಿಯ ಪ್ರತಿರೂಪವಾಗಿದ್ದಾರೆ. ಈಗ ಹೆಚ್ಚಿನ ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬರುತ್ತಿರುವುದರಿಂದ, ಜನರ ಬಗ್ಗೆ ಅವರು ಹೆಚ್ಚು ಸಹಾನುಭೂತಿಯನ್ನು ಹೊಂದಬಹುದು ಮತ್ತು ಜನರ ಅಗತ್ಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬಹುದು. ಇದು ಬಹಳವೇ ಸ್ವಾಗತಾರ್ಹವಾಗಿದೆ.

Latest Videos
Follow Us:
Download App:
  • android
  • ios