Asianet Suvarna News Asianet Suvarna News

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೆ ಮಾಂಗಲ್ಯ, ಕಾಲುಂಗುರ ಹಾಕಿಕೊಳ್ಳಿ ಎಂದ ಜೆಡಿಎಸ್ ನಾಯಕ

ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರಿಗೆ ಮಾಂಗಲ್ಯ, ಕಾಲುಂಗುರ ಹಾಕಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಜೆಡಿಎಸ್ ನಾಯಕ ಕಮೆಂಟ್ ಮಾಡಿದ್ದಾರೆ.

Aishwarya dk shivakumar hegde s vara mahalakshmi festival photos troll in social media mrq
Author
First Published Aug 17, 2024, 11:50 AM IST | Last Updated Aug 17, 2024, 11:50 AM IST

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ವರಮಹಾಲಕ್ಷ್ಮೀ ಹಬ್ಬ ಆಚರಣೆಯ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಯಲ್ಲಿ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಐಶ್ವರ್ಯಾ ಶಿವಕುಮಾರ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಕೆಲವರು ಕಮೆಂಟ್ ಮಾಡಿದ್ದು ವೈರಲ್ ಆಗುತ್ತಿದೆ. ಶ್ರಾವಣ ಶುಕ್ರವಾರ ನಾಡಿನಾದ್ಯಂತ ವರಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಪೂಜೆಯ ಸಂಭ್ರಮವನ್ನು ಜನರು ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ದೇವಿಯ ಅಲಂಕಾರದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಬ್ಬ ಅಂದ್ರೆ ಮಹಿಳೆಯರು ಸಹ ಗ್ರ್ಯಾಂಡ್‌ ಆಗಿ ರೆಡಿಯಾಗಿರುತ್ತಾರೆ. ಲಕ್ಷ್ಮೀದೇವಿ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. 

ಎಲ್ಲರಂತೆಯೇ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶಿವಕುಮಾರ್ ಹೆಗಡೆ ಮನೆಯಲ್ಲಿ ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿದ್ದಾರೆ. ನಂತರ ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ಫೋಟೋಗೆ ಕಮೆಂಟ್ ಮಾಡಿರುವ ಕೆಲ ನೆಟ್ಟಗರು ಕಾಲುಂಗರ ಮತ್ತು ಮಾಂಗಲ್ಯ ಸರ ಧರಿಸಿ ಎಂದು ಸಲಹೆ ನೀಡಿದ್ದಾರೆ. ಈ ಕಮೆಂಟ್‌ಗಳಿಗೆ 30ಕ್ಕೂ ಅಧಿಕ ಲೈಕ್ಸ್ ಬಂದಿವೆ. 

ಹರೀಶ್ ಹಳ್ಳಿಕಾರ್ (@harish_hallikar_) ಎಂಬ ಖಾತೆಯಿಂದ, ಅಮ್ಮ ಮಹಾ ತಾಯಿ ಕಾಲಿಗೆ ಕಾಲು ಉಂಗುರ ಮತ್ತೆ ತಾಳಿ ಮುಖ್ಯ ಕಣಮ್ಮ ಮೊದಲು ಮದುವೆ ಹಾಗಿರಲಿಲ್ಲ. ಈಗ ಮದುವೆ ಹಾಗಿರುವಾಗ ಹೆಣ್ಣು ಮಗಳು ನೀನು ಮೊದಲು ಕಾಲುಂಗುರ ತಾಳಿ ಹಾಕಿಕೊಳ್ಳುವ ಅಭ್ಯಾಸ ಬಳಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಹರೀಶ್ ಹಳ್ಳಿಕಾರ್ ತಮ್ಮನ್ನು ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘ (ರಿ)ದ ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ (ರಿ)ರಾಜ್ಯ ಉಪಾಧ್ಯಕ್ಷರು ಎಂದು ಇನ್‌ಸ್ಟಾಗ್ರಾಂ ಬಯೋ ಎಂದು ಬರೆದುಕೊಂಡಿದ್ದಾರೆ. @mgykblr ಎಂಬ ಖಾತೆಯಿಂದಲೂ ಅಕ್ಕ ಕಾಲುಂಗುರ ಕಾಣಿಸ್ತಿಲ್ಲ ಎಂಬ ಕಮೆಂಟ್ ಬಂದಿದೆ.  

ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಮಗಳು, ಬ್ಯೂಟಿ ವಿತ್ ಬ್ರೈನ್ ಅಂದ್ರೆ ನೀವೇ ಮೇಡಂ ಎಂದ ನೆಟ್ಟಿಗರು

ಐಶ್ವರ್ಯಾವರ ಈ ಫೋಟೋಗೆ ಐದು ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಡಿಕೆ ಶಿವಕುಮಾರ್ ಅಭಿಮಾನಿಗಳು ಸೇರಿದಂತೆ ಆಪ್ತರು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ನೀವೂ ನಮ್ಮ ಮೊದಲ ಕ್ರಶ್ ಅಂತಾನೂ ಕಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಐಶ್ವರ್ಯಾರನ್ನು 4.25 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

ಕಳೆದ ತಿಂಗಳು ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆಗೂ ಐಶ್ವರ್ಯಾ ತೆರಳಿದ್ದರು. ಡಿಕೆ ಶಿವಕುಮಾರ್ ಖಾಸಗಿ ಕಾರ್ಯಕ್ರಮ ಅಂತ ಬರೆದು ಪೋಸ್ಟ್ ಮಾಡಿಕೊಂಡಿದ್ದರೆ, ಮಗಳು ಐಶ್ವರ್ಯಾ ಮಾತ್ರ ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗಿಯಾಗಿರುವ ವಿಷಯವನ್ನು ಹಂಚಿಕೊಂಡಿದ್ದರು. ಅಂಬಾನಿ ವಿರುದ್ಧ ಕಾಂಗ್ರೆಸ್ ಸದಾ ವಾಗ್ದಾಳಿ ನಡೆಸುತ್ತಿರುತ್ತದೆ. ಆದ್ರೆ ಅದೇ ಕುಟುಂಬದ ಮದುವೆಯಲ್ಲಿ ಡಿಕೆ ಶಿವಕುಮಾರ್ ಕುಟುಂಬ ಭಾಗಿಯಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?

Latest Videos
Follow Us:
Download App:
  • android
  • ios