Asianet Suvarna News Asianet Suvarna News

325 ಗ್ರಾಂ ತೂಕದ ಅತ್ಯಂತ ಸಣ್ಣ ಮಗುವಿಗೆ ಜನ್ಮ ನೀಡಿದ 17ರ ಬಾಲೆ

  • ಅತ್ಯಂತ ಸಣ್ಣ ಮಗುವಿಗೆ ಜನನ
  •  325 ಗ್ರಾಂ ತೂಕದ ಮಗುವಿಗೆ ಜನ್ಮಕೊಟ್ಟ  17ರ ಬಾಲೆ
  • ಇದು 20 ವರ್ಷಗಳ ನಂತರ ಬ್ರಿಟನ್‌ನಲ್ಲಿ ಜನಿಸಿದ ಅತ್ಯಂತ ಸಣ್ಣ 
A teenager gave birth to a premature baby newborn weighed 325 grams akb
Author
Bangalore, First Published Jan 13, 2022, 12:36 AM IST

ಬ್ರಿಟನ್‌(ಜ.12): ಬ್ರಿಟನ್‌ನಲ್ಲಿ 17 ವರ್ಷದ ಬಾಲೆಯೊಬ್ಬಳು ಅತ್ಯಂತ ಸಣ್ಣ ಮಗುವಿಗೆ ಜನ್ಮ ನೀಡಿದ್ದು, ಮಗು 325 ಗ್ರಾಂ ತೂಕವಿದೆ. ಇದು 20 ವರ್ಷಗಳ ನಂತರ ಬ್ರಿಟನ್‌ನಲ್ಲಿ ಜನಿಸಿದ ಅತ್ಯಂತ ಸಣ್ಣ ಮಗು ಎಂದು ತಿಳಿದು ಬಂದಿದೆ. 

17 ವರ್ಷದ ಎಲ್ಲೀ ಪ್ಯಾಟನ್ (Ellie Paton) ಇಷ್ಟು ಕಡಿಮೆ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ.  25 ವಾರದ ಮಗುವನ್ನು ಸಿಸೇರಿಯನ್‌ ನಡೆಸಿ ಹೊರ ತೆಗೆಯಲಾಗಿದೆ.  ಮಗುವಿಗೆ ಹನ್ನಾ ಎಂದು ಹೆಸರಿಡಲಾಗಿದೆ. ನವಜಾತ ಶಿಶು ಜನನದ ಸಮಯದಲ್ಲಿ ಕೇವಲ 325 ಗ್ರಾಂ ತೂಕವನ್ನು ಹೊಂದಿತ್ತು ಮತ್ತು ಈ ಮಗು  ಕೇವಲ 20 ಪ್ರತಿಶತದಷ್ಟು ಮಾತ್ರ ಬದುಕುವ ಸಾಧ್ಯತೆ ಇದೆ ಎಂದು ನಂಬಲಾಗಿತ್ತು.  ಆದರೆ ಮಗು ಹನ್ನಾ ಜೀವನ್ಮರಣ ಹೋರಾಟದಲ್ಲಿ ಯಶಸ್ವಿಯಾಗಿದ್ದಾಳೆ. 

ಎಲ್ಲೀ ಪ್ಯಾಟನ್ ಮತ್ತು ಆಕೆಯ ಸಂಗಾತಿ ಬ್ರ್ಯಾಂಡನ್ ಸ್ಟಿಬಲ್ಸ್ (Brandon Stibbles) ಅವರಿಗೆ 22 ವಾರಗಳ ಸ್ಕ್ಯಾನ್‌ನಲ್ಲಿ ಮಗು ತುಂಬಾ ಚಿಕ್ಕದಾಗಿದೆ ಎಂದು ಹೇಳಲಾಗಿತ್ತು.  ಮಗು  22 ವಾರದಲ್ಲಿ ಕೇವಲ 16 ವಾರಗಳ ಭ್ರೂಣದ ಗಾತ್ರ ಹೊಂದಿದೆ ಎಂದು ಸ್ಕ್ಯಾನ್‌ನಲ್ಲಿ ತೋರಿಸಲಾಗಿತ್ತು.

ಹಾಲುಣಿಸುವ ತಾಯಿಗೆ ಕೋವಿಡ್‌... ಮಗುವಿನ ಕಾಳಜಿ ಹೇಗೆ... ಅನುಭವ ಹಂಚಿಕೊಂಡ ನಟಿ ಶಿಖಾ

ಈ ಮಗುವಿನ ತಾಯಿ ಎಲ್ಲೀ ಪ್ಯಾಟನ್  ಪ್ರಿ-ಎಕ್ಲಾಂಪ್ಸಿಯಾದಿಂದ ಬಳಲುತ್ತಿದ್ದು, ಡಿಸೆಂಬರ್ 29 ರಂದು ಐರ್‌ಶೈರ್‌ನ (Ayrshire) ಕಿಲ್ಮಾರ್ನಾಕ್‌ (Kilmarnock) ನಲ್ಲಿರುವ ಕ್ರಾಸ್‌ಹೌಸ್ ಆಸ್ಪತ್ರೆಗೆ  ಅಸಹನೀಯವಾದ ಹೊಟ್ಟೆ ನೋವು ಹಾಗೂ  ಎದೆ ನೋವಿನ ಕಾರಣಕ್ಕೆ  ದಾಖಲಾಗಿದ್ದಳು. 
ಗರ್ಭಿಣಿ ತಾಯಿಯನ್ನು ನಂತರ ಗ್ಲಾಸ್ಗೋದ(Glasgow) ಕ್ವೀನ್ ಎಲಿಜಬೆತ್ (Queen Elizabeth) ಯೂನಿವರ್ಸಿಟಿ ಆಸ್ಪತ್ರೆಗೆ ಸಾಗಿಸಲಾಯಿತು.  ಅಲ್ಲಿ ಅವರು ಡಿಸೆಂಬರ್ 30 ರಂದು ಮಗು ಹನ್ನಾಗೆ ಜನ್ಮ ನೀಡಿದರು. 

ತಾಯಿ ಎಲ್ಲೀ  ಪ್ಯಾಟನ್‌ಗೆ ಮಗು ಹನ್ನಾಳನ್ನು ಕೇವಲ ಒಂದು ಬಾರಿ ಮಾತ್ರ ಎತ್ತಿಕೊಳ್ಳಲು ಅವಕಾಶ ಸಿಕ್ಕಿತ್ತು. ಅದೂ ಆಕೆಯ ಸಂಗಾತಿ ಬ್ರ್ಯಾಂಡನ್ ಸ್ಟಿಬಲ್ಸ್‌, ಮಗುವಿನ  ಡೈಪರ್‌ ಅನ್ನು ಬದಲಾಯಿಸುತ್ತಿದ್ದಾಗ. ಹನ್ನಾ ನಿಜವಾಗಿ ಹುಟ್ಟಬೇಕಾಗಿದ್ದ ದಿನಾಂಕವಾದ ಎಪ್ರಿಲ್‌ 13ರವರೆಗೆ ಹನ್ನಾಳನ್ನು ಮನೆಗೆ ಕರೆದೊಯ್ಯಲು ಈ ಪೋಷಕರಿಗೆ ಸಾಧ್ಯವಿಲ್ಲ.  ಪ್ರಸ್ತುತ ಮಗುವಿನ ತೂಕ 25 ಗ್ರಾಂ ಹೆಚ್ಚಳವಾಗಿದೆ. 

Plastic Baby: ಬಿಹಾರದಲ್ಲಿ ವಿಶೇಷ ಮಗು ಜನಿಸಿದ್ದಕ್ಕೆ ಕಾರಣ ಹೇಳಿದ ವೈದ್ಯರು!

ನಮಗೆ ಇನ್ಕ್ಯುಬೇಟರ್‌ನಲ್ಲಿ ನಮ್ಮ ಕೈಗಳನ್ನು ಹಾಕಲು ಅವಕಾಶವಿದೆ, ನಾನು ಅವಳನ್ನು ಒಮ್ಮೆ ಹಿಡಿದಿದ್ದೇನೆ  ಅವಳು ಗೂಡಿನ ಮೇಲೆ ಮಲಗುತ್ತಾಳೆ. ನರ್ಸ್ ಅದನ್ನು ಬದಲಾಯಿಸಿದಾಗ ನಾವು ಅವಳನ್ನು ಎತ್ತಿಕೊಳ್ಳಬೇಕು. ಅಲ್ಲದೇ  ಶೀಘ್ರದಲ್ಲೇ ನಾವು ಅವಳನ್ನು ಎತ್ತಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಗುವಿನ ತಾಯಿ ಎಲ್ಲೀ ಹೇಳಿದ್ದಾಳೆ. 

ಎಲ್ಲೀ  ಪ್ಯಾಟನ್‌ ಅವಳನ್ನು ಹಿಡಿದುಕೊಂಡಳು ಮತ್ತು ನಾನು ಅವಳ ಡಯಪರ್‌ ಅನ್ನು ಬದಲಾಯಿಸಿದೆ ನಾನು ಅವಳ ನ್ಯಾಪಿಯನ್ನು ಬದಲಾಯಿಸಿ ನನ್ನ ಕೈಯನ್ನು ಹಿಂದಕ್ಕೆ ತೆಗೆದುಕೊಂಡಾಗ, ಅವಳು ಅದನ್ನು ಹಿಡಿದಳು ಎಂದು ಬ್ರಾಂಡನ್ ಹೇಳಿದರು. ಅವಳಿಗೆ ಬದುಕುಳಿಯುವ ಅವಕಾಶ ಶೇಕಡಾ 20% ರಷ್ಟು ಮಾತ್ರವಿದೆ. ಆಕೆಗೆ ಪುನರುಜ್ಜೀವನದ ಅಗತ್ಯವಿದೆ ಅಥವಾ ಆಕೆ ಸತ್ತೇ ಹುಟ್ಟಬಹುದು ಎಂದು ವೈದ್ಯರು ನಮಗೆ ತಿಳಿಸಿದರು.  ಆದರೆ ಅವಳು ಹೊರಬಂದಾಗ ಉಸಿರಾಡುತ್ತಿದ್ದಳು ಎಂದು ಮಗುವಿನ ತಂದೆ ಬ್ರಾಂಡನ್‌ ಹೇಳಿದ್ದಾರೆ. ಬ್ರಿಟನ್‌ನಲ್ಲಿ ಹನ್ನಾಗಿಂತ  ಮೊದಲು  2003 ರಲ್ಲಿಯೂ  ಅತ್ಯಂತ ಚಿಕ್ಕ ಮಗು ಜನಿಸಿತ್ತು. ಆಲಿಯಾ ಹರ್ಟ್ ಹೆಸರಿನ ಆ ಮಗು ಕೇವಲ 340 ಗ್ರಾಂ ತೂಕವಿತ್ತು.

Follow Us:
Download App:
  • android
  • ios