Plastic Baby: ಬಿಹಾರದಲ್ಲಿ ವಿಶೇಷ ಮಗು ಜನಿಸಿದ್ದಕ್ಕೆ ಕಾರಣ ಹೇಳಿದ ವೈದ್ಯರು!

ಔರಂಗಾಬಾದ್‌ನ ಸೊಹ್ಡಾದ ಮಹಿಳೆಯೊಬ್ಬರು  ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಸಂಪೂರ್ಣ ದೇಹ ಪ್ಲಾಸ್ಟಿಕ್‌ನಿಂದ ಮುಚ್ಚಲ್ಪಟ್ಟಿದೆ. ಇಂತಹ ಮಕ್ಕಳನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಕೊಲೊಡಿಯನ್ ಶಿಶುಗಳು ಎಂದು ಕರೆಯಲಾಗುತ್ತದೆ. 

Woman in Bihars Auragabad gives birth to a plastic baby mnj

Tech Desk: ಔರಂಗಾಬಾದ್‌ನ ಸೊಹ್ಡಾದ ಮಹಿಳೆಯೊಬ್ಬರು ಬುಧವಾರ (ಡಿ. 29)  ಸದರ್ ಆಸ್ಪತ್ರೆಯಲ್ಲಿ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಸಂಪೂರ್ಣ ದೇಹವನ್ನು ಪ್ಲಾಸ್ಟಿಕ್‌ನಿಂದ (Plastic Baby) ಮುಚ್ಚಲ್ಪಟ್ಟಿದೆ. ಇಂತಹ ಮಕ್ಕಳನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ  ಕೊಲೊಡಿಯನ್ ಶಿಶುಗಳು (Collodion babies) ಎಂದು ಕರೆಯಲಾಗುತ್ತದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಜಗತ್ತಿನಲ್ಲಿ ಜನಿಸುವ 6 ಲಕ್ಷ ಶಿಶುಗಳಲ್ಲಿ  ಈ ರೀತಿ ಒಂದು ಕೊಲೊಡಿಯನ್ ಮಗು ಜನನವಾಗುತ್ತದೆ. ಎಸ್‌ಎನ್‌ಸಿಯುನಲ್ಲಿ (SNCU) ಚಿಕಿತ್ಸೆ ಪಡೆಯುತ್ತಿರುವ ಈ ಮಗು ಸದ್ಯ ಸಂಪೂರ್ಣ ಆರೋಗ್ಯ ಸ್ಥಿರವಾಗಿದ್ದೂ, ಸಾಮಾನ್ಯ ಮಗುವಿನಂತೆ ಪ್ರತಿಯೊಂದು ಚಟುವಟಿಕೆಯನ್ನೂ ಮಾಡುತ್ತಿದೆ, ಆದರೆ ಈ ಮಗು ಎಷ್ಟು ದಿನ ಬದುಕುತ್ತದೆ ಎಂದು ಹೇಳಲು ಈಗ ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

ವೀರ್ಯದಲ್ಲಿನ ಅಸಹಜತೆ ಕಾರಣ!

ಎಸ್‌ಎನ್‌ಸಿಯುನ  ವೈದ್ಯಾಧಿಕಾರಿ ಡಾ.ದಿನೇಶ್ ದುಬೆ ಮಾತನಾಡಿ, "ತಂದೆಯ ವೀರ್ಯದಲ್ಲಿನ (Sperm) ಅಸಹಜತೆಯಿಂದ ಇಂತಹ ಮಗು ಜನಿಸುತ್ತದೆ. ಈ ವೀರ್ಯದ ಕೊರತೆಯನ್ನು ಚಿಕಿತ್ಸೆಯಿಂದ ನೀಗಿಸಬಹುದು, ಆದರೆ ಅದರ ಚಿಕಿತ್ಸೆಯು ವೈದ್ಯಕೀಯ ಕಾಲೇಜು ಅಥವಾ ಸಂಶೋಧನಾ ಕೇಂದ್ರದಲ್ಲಿ ಮಾತ್ರ ಸಾಧ್ಯ" ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಆಸ್ಪತ್ರೆ ನರ್ಸ್ ಕೂಡ ಮಗು ತುಂಬಾ ಆರೋಗ್ಯವಾಗಿ ಕಾಣುತ್ತಿದೆ ಆದರೆ ದೇಹದಾದ್ಯಂತ ಪ್ಲಾಸ್ಟಿಕ್ ಹೊದಿಕೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿBrain Computer: ಮೆದುಳಿನಲ್ಲಿ ಅಳವಡಿಸಿದ ಮೈಕ್ರೋಚಿಪ್ ಬಳಸಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಟ್ವೀಟ್!

2014 ಹಾಗೈ 2015ರಲ್ಲಿ ಪಂಜಾಬ್‌ನ ಅಮೃತಸರದಲ್ಲಿ (Amritsar) ಕೊಲೊಡಿಯನ್ ಶಿಶುಗಳು ಜನಿಸಿದ ಬಗ್ಗೆ ವರದಿಯಾಗಿದೆ. ಇನ್ನು ಕಳೆದ ಏಳು ವರ್ಷಗಳಲ್ಲಿ ಇಂತಹ ಮೂರು ಮಕ್ಕಳು ಜನಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಮೂರನೆ ಮಗು ಇನ್ನೂ ಚಿಕಿತ್ಸೆ ಪಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಔರಂಗಾಬಾದ್‌ನ ಸೊಹ್ಡಾದನ್‌ ಈ ಮಗು ಕೂಡ ಆರೋಗ್ಯವಾಗಿರಲಿ ಎಂದು ವೈದ್ಯರು ಹಾರೈಸಿದ್ದಾರೆ.

Woman in Bihars Auragabad gives birth to a plastic baby mnj 2015ರಲ್ಲಿ ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಕೊಲೊಡಿಯನ್ ಶಿಶು

 

ಕೊಲೊಡಿಯನ್ ಶಿಶುಗಳು ಎಂದರೇನು?

ಕೊಲೊಡಿಯನ್ ಶಿಶುಗಳು, ಸಾಮಾನ್ಯವಾಗಿ ಪ್ರಿಮೆಚ್ಯುರ್ ಶಿಶುಗಳಾಗಿದ್ದು (Premature Babies), ಪ್ಲಾಸ್ಟಿಕ್ ಶಿಶುಗಳು ಎಂದೂ ಕರೆಯಲಾಗುತ್ತದೆ. ಹಳದಿ, ಬಿಗಿಯಾದ ಮತ್ತು ಹೊಳೆಯುವ ಫಿಲ್ಮ್ ಅಥವಾ ಒಣಗಿದ ಕೊಲೊಡಿಯನ್ (ಸಾಸೇಜ್ ಸ್ಕಿನ್) ಅನ್ನು ಹೋಲುವ ಚರ್ಮದ ಜತೆಗೆ ಶಿಶುಗಳು ಜನಿಸುತ್ತವೆ. ಈ ಶಿಶುಗಳಿಗೆ ಕೊಲೊಡಿಯನ್ ಮೆಂಬರೇನ್ ಡಿಸ್ಕ್ವಾಮೇಷನ್ ಅಥವಾ ಚರ್ಮ ಸುಲಿಯುವಿಕೆ ಚಿಕಿತ್ಸೆಗೆ (peeling) ಒಳಪಡಿಸಬೇಕಾಗುತ್ತದೆ. ಆದರೆ ಈ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿದೆ.

ಇದನ್ನೂ ಓದಿ: Oldest Family Tree: 5700 ವರ್ಷಗಳಷ್ಟು ಹಳೆ ಸಮಾಧಿಯಲ್ಲಿದೆ ವಿಶ್ವದ ಅತ್ಯಂತ ಹಳೆಯ ಕುಟುಂಬದ ರಹಸ್ಯ!

ಪ್ಲಾಸ್ಟಿಕ್ ಶಿಶುಗಳು ಜನನದ ನಂತರ ತಮ್ಮ ಚರ್ಮದಲ್ಲಿ ಬಿರುಕುಗಳನ್ನು ಬೆಳೆಸಿಕೊಳ್ಳುತ್ತವೆ ಮತ್ತು ಮಗುವಿನ ಪೊರೆಯು 15 ರಿಂದ 30 ದಿನಗಳ ಅವಧಿಯಲ್ಲಿ ಸ್ವಯಂಚಾಲಿತವಾಗಿ ಕಿತ್ತುಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ, ಪ್ಲಾಸ್ಟಿಕ್ ಲೇಪನದಂತಹ ಚರ್ಮವು ಮಗುವಿನ ಸಂಪೂರ್ಣ ಜೀವನವನ್ನು ಶೋಚನೀಯಗೊಳಿಸುತ್ತದೆ. ದೇಹದ ಚರ್ಮ ಕಿತ್ತುಹೋದಾಗ ಮಗುವಿಗೆ  ಸೋಂಕು ತಾಗುವ ಸಾಧ್ಯತೆ ಇರುತ್ತದೆ. ಇದು  ಜೀವನದುದ್ದಕ್ಕೂ ಹೀಗೆ ಉಳಿಯುವ ಸಾಧ್ಯತೆಗಳಿರುತ್ತದೆ.

ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, ಪ್ರತಿ ಆರು ಲಕ್ಷ ಶಿಶುಗಳಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ. ಇದು ಒಂದು ರೀತಿಯ ಮೇಣ ಮತ್ತು ಹೊಳೆಯುವ ಚರ್ಮವಾಗಿದ್ದು ಅದು ಬಿಗಿಯಾಗಿರುತ್ತದೆ. ಕೆಲವೊಮ್ಮೆ ಪ್ಲಾಸ್ಟಿಕ್ ಶಿಶುಗಳು ಇತರ ಸಮಸ್ಯೆಗಳ ಜೊತೆಗೆ Hypothermia ಮತ್ತು Dehydration ನಿಂದ ಕೂಡ ಬಳಲುತ್ತವೆ. 

Latest Videos
Follow Us:
Download App:
  • android
  • ios