18 ವರ್ಷದ ರಿಯಾ ಸಿಂಘಾ 2024ರ ಮಿಸ್ ಯುನಿವರ್ಸ್ ಇಂಡಿಯಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಮುಂದೆ ರಿಯಾ ಸಿಂಘಾ ಅಂತರಾಷ್ಟ್ರೀಯಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ನವದೆಹಲಿ: ರೂಪದರ್ಶಿ ರಿಯಾ ಸಿಂಘಾ 2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಿಯಾ ಸಿಂಘಾ 2024ರ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಾಜಿ ಮಿಸ್ ಯುನಿವರ್ಸ್, ನಟಿ ಊರ್ವಶಿ ರೌತೆಲಾ ಈ ಬಾರಿ ರಿಯಾ ಸಿಂಘಾ ಭಾರತಕ್ಕೆ ಕಿರೀಟ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಊರ್ವಶಿ ರೌತೆಲಾ ಅವರೇ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. .
ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ತನ್ನದಾಗಿಸಿಕೊಂಡ ಸ್ಪರ್ಧಿ ರಿಯಾ ಸಿಂಘಾ, ಇದೊಂದು ದೊಡ್ಡ ಗೆಲುವು. ಸಂತೋಷವನ್ನು ನನ್ನಿಂದ ತಡೆಯಲು ಆಗ್ತಿಲ್ಲ. ನನಗಾಗುತ್ತಿರುವ ಸಂತೋಷವನ್ನು ನನಗೆ ವ್ಯಕ್ತಪಡಿಸಲು ಆಗ್ತಿಲ್ಲ ಎಂದು ಹೇಳಿದರು. ಮುಂದುವರಿದು ಮಾತನಾಡಿದ ರಿಯಾ ಸಿಂಘಾ, ಇಂದು ಮಿಸ್ ಯುನಿವರ್ಸ್ ಇಂಡಿಯಾ-2024ರ ಕಿರೀಟ ನನ್ನದಾಗಿದೆ. ಇಲ್ಲಿಯವರೆಗೆ ಬರಲು ನನ್ನ ಸತತ ಪರಿಶ್ರಮವೇ ಕಾರಣ. ನಾನು ಈ ಕಿರೀಟಕ್ಕೆ ಅರ್ಹಳು ಎಂದು ಎಲ್ಲರೂ ಪರಿಗಣಿಸಿದ್ದಾರೆ. ಈ ಮೊದಲಿನ ಮಿಸ್ ಯುನಿವರ್ಸ್ ವಿಜೇತರಿಂದ ನಾನು ಸ್ಪೂರ್ತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಹದಿಹರೆಯದ ಹುಡುಗರಿಗೆ ವಯಸ್ಸಾದ ಹುಡುಗಿಯರ ಮೇಲೆ ಸೆಳೆತ ಜಾಸ್ತಿ ಏಕೆ? ಇಲ್ಲಿದೆ 4 ಕಾರಣಗಳು!
18 ವರ್ಷದ ರಿಯಾ ಸಿಂಘಾ ಗುಜರಾತ್ ಮೂಲದವರಾಗಿದ್ದು, ಸ್ಪರ್ಧೆಯಲ್ಲಿದ್ದ 50ಕ್ಕೂ ಅಧಿಕ ಚೆಲುವೆಯರನ್ನು ಹಿಂದಿಕ್ಕಿ ವಿಜೇತರಾಗಿದ್ದಾರೆ. ರಿಯಾ ಸಿಂಘಾ ಸೋಶಿಯಲ್ ಮೀಡಿಯಾದಲ್ಲಿ 39 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ರಿಯಾ ಸಿಂಘಾ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಕಿರೀಟ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.
ತೀರ್ಪುಗಾರರ ಪ್ಯಾನಲ್‌ನಲ್ಲಿ ನಿಖಿಲ್ ಆನಂದ್, ಊರ್ವಶಿ ರೌತೆಲಾ, ವಿಯೆಟ್ನಾಂ ತಾರೆ ನ್ಗುಯೆನ್ ಕ್ವಿನ್, ಫ್ಯಾಷನ್ ಫೋಟೋಗ್ರಾಫರ್ ರಿಯಾನ್ ಫೆರ್ನಾಂಡಿಸ್ ಮತ್ತು ಉದ್ಯಮಿ ರಾಜೀವ್ ಶ್ರೀವಾಸ್ತವ ಇದ್ದರು. ಬಾಲಿವುಡ್ ನಟಿ ಊರ್ವಶಿ ರೌತೆಲಾ 2015ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಭಾರತ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಣ್ಣಾದ ಮೇಲೆ ದೇವರನ್ನು, ಗಂಡಸರನ್ನು ನೋಡುವಂತಿಲ್ಲ... ಹಾಲು- ಹುಂಜ ಮುಟ್ಟೋಹಾಗಿಲ್ಲ ಮತ್ತು...
