ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್, ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!
ವ್ಯಾಟ್ಸ್ಆ್ಯಪ್ ಹತ್ತು ಹಲವು ಹೊಸ ಫೀಚರ್ ಪರಿಚಯಿಸಿದೆ. ಇದರಲ್ಲಿ ವಾಯ್ಸ್ ಸ್ಟೇಟಸ್ ಕೂಡ ಒಂದು. ನೂತನ ಫೀಚರ್ ಇದೀಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ನೂತನ ಫೀಚರ್ಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮೇ.18): ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸ್ಆ್ಯಪ್ ಬಳಕೆದಾರರ ಬೇಡಿಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಪರಚಯಿಸುತ್ತಿದೆ. ಚಾಟ್ ಲಾಕ್, ಗ್ರೂಪ್ ಕಾಲ್, ಮೆಸೇಜ್ ಎಡಿಟ್, ಭದ್ರತಾ ಫೀಚರ್ ಸೇರಿದಂತೆ ಹಲವು ಸೌಲಭ್ಯಗಳನ್ನು ವ್ಯಾಟ್ಸ್ಆ್ಯಪ್ ನೀಡಿದೆ. ಇದೀಗ ಹೊಸ ಫೀಚರ್ ಪರಿಚಯಿಸಿದೆ. ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್. ಧ್ವನಿ ಸ್ಟೇಟಸ್ ಫೀಚರ್‌ನ್ನು ವ್ಯಾಟ್ಸ್ಆ್ಯಪ್ ಮಾರ್ಚ್ ತಿಂಗಳಲ್ಲಿ ಪರಿಚಯಿಸಿತ್ತು. ಇದೀಗ ನೂತನ ವಾಯ್ಸ್ ಸ್ಟೇಟಸ್ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.
ವ್ಯಾಟ್ಸ್ಆ್ಯಪ್ ಸ್ಟೇಟಸ್ ಅತೀ ಹೆಚ್ಚು ಸದ್ದು ಮಾಡುವ ಫೀಚರ್. ಬಳಕೆದಾರರು ಸ್ಟೇಟಸ್ ಮೂಲಕ ಫೋಟೋಗಳನ್ನು ಹಾಕುತ್ತಾರೆ. ಇದೀಗ ಸ್ಟೇಟಸ್ ಮೂಲಕ ಧ್ವನಿ ನೋಟ್ ಸೇರಿಸಿಕೊಳ್ಳಲು ಸಾಧ್ಯವಿದೆ. ಬಳಕೆದಾರರು ತಮ್ಮದೇ ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್‌ನಲ್ಲಿ ಹಾಕಬಹುದು. ಆರಂಭಿಕ ಹಂತದಲ್ಲಿ ಬಿಟಾ ವರ್ಶನ್‌ನಲ್ಲಿದ್ದ ಈ ಫೀಚರ್, ಇದೀಗ ಎಲ್ಲಾ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಲಭ್ಯವಿದೆ.
WhatsApp ಹೊಸ ಫೀಚರ್, ಗ್ರೂಪ್ ಕಾಲ್‌ನಲ್ಲಿ ಮಹತ್ತರ ಬದಲಾವಣೆ!
ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್ ಹಾಕುವುದು ಹೇಗೆ?
ಮೊದಲು ವ್ಯಾಟ್ಸ್ಆ್ಯಪ್ ಆ್ಯಪ್ಲೀಕೇಶನ್ ಒಪನ್ ಮಾಡಿಕೊಳ್ಳಿ
ಸ್ಟೇಟಸ್ ಟ್ಯಾಬ್ ಕ್ಲಿಕ್ ಮಾಡಿ
ಸ್ಟೇಟಸ್ ಟ್ಯಾಬ್‌ನಲ್ಲಿರುವ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ
ಇಲ್ಲಿರುವ ಮೈಕ್ರೋಫೋನ್ ಬಟಲ್ ಒತ್ತಿ ಹಿಡಿದು ನಿಮ್ಮ ಧ್ವನಿ ರೆಕಾರ್ಡ್ ಮಾಡಿ
ಮೈಕ್ರೋಫೋನ್ ಬಟನ್ ರಿಲೀಸ್ ಮಾಡಿ, ಸ್ಟೇಟಸ್‌ಗೆ ವಾಯ್ಸ್ ಆ್ಯಡ್ ಮಾಡಿ
ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಮತ್ತೊಂದು ಫೀಚರ್, ಮೆಸೇಜ್ ಎಡಿಟ್‌ಗೆ ಅವಕಾಶ!
ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ವಾಯ್ಸ್ ಸ್ಟೇಟಸ್‌ನಲ್ಲಿ 30 ಸೆಕೆಂಡ್‌ಗಿಂತ ಹಚ್ಚು ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್‌ಗೆ ಹಾಕಲು ಸಾಧ್ಯವಿಲ್ಲ. ಸ್ಟೇಟಸ್ ಹಾಕುವ ವಾಯ್ಸ್ ನೋಟ್ 30 ಸೆಕೆಂಡ್ ಒಳಗಿರಬೇಕು.
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಬಿಡುಗಡೆ ಮಾಡಿದೆ. ಇದೀಗ ಬಳಕೆಗಾರರು ಗ್ರೂಪ್ ಕಾಲ್‌ನಲ್ಲಿ ಹೊಸ ಫೀಚರ್ ಬಳಕೆ ಮಾಡಲು ಸಾಧ್ಯವಿದೆ. ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರ ಬದಲು ಆಯ್ದ ಸದಸ್ಯರಿಗೆ ಕಾಲ್ ಮಾಡುವ ಫೀಚರ್ ನೀಡಲಾಗಿದೆ. ಇನ್ನು ವ್ಯಾಟ್ಸ್ಆ್ಯಪ್ ಬಳಕೆದಾರರು ಮೆಸೇಜನ್ನು ಎಡಿಟ್ ಮಾಡಲು ಅವಕಾಶ ನೀಡಿದೆ. ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ಸಂದೇಶದಲ್ಲಿರುವ ಪದಗಳ ತಪ್ಪುಗಳನ್ನು ಸರಿಪಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಸಂದೇಶದ ಮೂಲ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಿಲ್ಲ.
ಇಷ್ಟೇ ಅಲ್ಲ ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಚಾಟ್ ಲಾಕ್ ಫೀಚರ್ಸ್ ಕೂಡ ಪರಿಚಯಿಸಿದೆ. ನಿಮಗೆ ಬಂದಿರುವ ಸಂದೇಶಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಪ್ರೈವೇಟ್ ಮಾಡಲು ಸಾಧ್ಯವಿದೆ. ಚಾಟ್ ಲಾಕ್ ಮಾಡಿದ ಸಂದೇಶಗಳು ಯಾರಿಗೂ ಕಾಣಿಸುವುದಿಲ್ಲ. ವ್ಯಾಟ್ಸ್ಆ್ಯಪ್ ಆಪ್ಲಿಕೇಶನ್ ಒಪನ್ ಆಗಿದ್ದರೂ ಲಾಕ್ ಆಗಿರುವ ಸಂದೇಶಗಳು ಕಾಣಿಸುವುದಿಲ್ಲ. ಫಿಂಗರ್ ಪ್ರಿಂಟ್ ಲಾಕ್ ಮೂಲಕ ಒಪನ್ ಮಾಡಿದರೆ ಲಾಕ್ ಆಗಿರುವ ಮೆಸೇಜೇಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ಕಾಣಿಸಲಿದೆ.