ಸದಸ್ಯರು ಮಾಡುವ ನಿಂದನಾತ್ಮಕ ಪೋಸ್ಟ್‌ಗಳಿಗೆ ವಾಟ್ಸಾಪ್‌ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ!

*ಸದ್ಯರು ಮಾಡುವ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ವಾಟ್ಸಾಪ್ ಅಡ್ಮಿನ್‌ಗೆ  ಭೌತಿಕ ನಿಯಂತ್ರಣವಿರುವುದಿಲ್ಲ.
*ವಾಟ್ಸಾಪ್ ಗ್ರೂಪ್‌ನಲ್ಲಿ ಸದಸ್ಯರು ಮಾಡುವ ಯಾವುದೇ ನಿಂದನಾತ್ಮಕ  ಪೋಸ್ಟುಗಳಿಗೆ ಅವರು ಹೊಣೆಗಾರರಾಗುವುದಿಲ್ಲ.

Whatsapp Group admin is not liable to members objectionable post says Kerala High court

Tech Desk: ವಾಟ್ಸಾಪ್ (Whatsapp) ಗ್ರೂಪ್ ಸದಸ್ಯರು ಪೋಸ್ಟ್ ಮಾಡುವ ಯಾವುದೇ ನಿಂದನಾತ್ಮಕ ಸಂದೇಶಗಳಿಗೆ ವಾಟ್ಸಾಪ್ ರಚಿಸಿದವರು (Creater) ಅಥವಾ ಗ್ರೂಪ್ ಅಡ್ಮಿನ್ (Group Admin) ಅವರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ. ವಾಟ್ಸಾಪ್ ಗ್ರೂಪಿ (Whatsapp Group)ನಲ್ಲಿ   ಸದಸ್ಯರೊಬ್ಬರು ಚೈಲ್ಡ್ ಪೋರ್ನೋಗ್ರಫಿ (Child Pornography) ಪೋಸ್ಟ್ ಮಾಡಿದ ಪ್ರಕರಣದ ವಿಚಾರಣೆ ಸಂಬಂಧ ಹೈಕೋರ್ಟ್ ಈ ಆದೇಶವನ್ನು ಮಾಡಿದೆ.  

ಈ ಪ್ರಕರಣದಲ್ಲಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿರುದ್ಧ ಜಾರಿ ಮಾಡಲಾಗಿದ್ದ ಪೋಕ್ಸೊ (POCSO) ಕಾಯಿದೆಯನ್ನು ಹೈಕೋರ್ಟ್ ರದ್ದು ಮಾಡಿ, ಸದಸ್ಯರು ಮಾಡುವ ನಿಂದನಾತ್ಮಕ ಪೋಸ್ಟುಗಳು, ಯಡವಟ್ಟುಗಳಿಗೆ ಗ್ರೂಪ್ ಅಡ್ಮಿನ್ ಜವಾಬ್ದಾರನಾಗಿರುವುದಿಲ್ಲ ಎಂದು ಹೇಳಿದೆ. ಗ್ರೂಪ್ ಅಡ್ಮಿನ್ ಕೇವಲ ವಾಟ್ಸಾಪ್ ಗ್ರೂಪ್‌ಗೆ ಸದಸ್ಯರನ್ನು ಸೇರಿಸುವುದು ಇಲ್ಲವೇ ಸದಸ್ಯರನ್ನು ಕಿತ್ತು ಹಾಕುವ ಜವಾಬ್ದಾರಿಯ ಸೌಲಭ್ಯವನ್ನು ಹೊಂದಿರುತ್ತಾನೆಂಬ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನುಈ ವೇಳೆ ಉಲ್ಲೇಖಿಸಿದೆ.

ಇದನ್ನೂ ಓದಿ: Indian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!    

ವಾಟ್ಸಾಪ್ ಗ್ರೂಪಿನಲ್ಲಿ ಸದಸ್ಯರು ಏನನ್ನು ಮಾಡುತ್ತಾರೆ, ಯಾವ ವಿಷಯವನ್ನು ಪೋಸ್ಟ್ ಮಾಡುತ್ತಾರೆಂಬುದರ ಮೇಲೆ ಗ್ರೂಪ್ ಅಡ್ಮಿನ್‌ಗೆ ಭೌತಿಕ ನಿಯಂತ್ರಣವಾಗಲೀ ಅಥವಾ ಇನ್ನಾವುದೇ ರೀತಿಯ ನಿಯಂತ್ರಣವನ್ನು ಹೊಂದಿರುವುದಿಲ್ಲ. ಹಾಗಾಗಿ, ಗ್ರೂಪ್‌ನಲ್ಲಿ ದಾಖಲಾಗುವ ಸಂದೇಶಗಳನ್ನು ಆತ ಮಾಡರೇಟ್ ಅಥವಾ ಸೆನ್ಸರ್ ಮಾಡಲು ಸಾಧ್ಯಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕಾರಣದಿಂದಾಗಿಯೇ, ವಾಟ್ಸಾಪ್ ಗ್ರೂಪ್ (Whatsapp Group) ರಚಿಸಿದವರು ಅಥವಾ ಅಡ್ಮಿನ್‌ಗಳು ಈ ವಿಷಯದಲ್ಲಿ ಅವರು ಸಾಮರ್ಥ್ಯವು ಹಿರಿದಾಗಿರುವುದಿಲ್ಲ. ಹಾಗಾಗಿ, ಗ್ರೂಪ್ ಸದಸ್ಯರು ಪೋಸ್ಟ್ ಮಾಡುವ ಯಾವುದೇ ನಿಂದನಾತ್ಮಕ ಪೋಸ್ಟುಗಳಿಗೆ ಗ್ರೂಪ್ ಅಡ್ಮಿನ್ ಅಥವಾ ರಚನಾಕಾರರನ್ನು ಹೊಣೆಗಾರರನ್ನಾಗಿ ಮಾಡಲು ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈಗ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿದಾರರು ಫ್ರೆಂಡ್ಸ್ (Friends) ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ, ತಾವು ಮಾತ್ರವಲ್ಲದೇ ಇನ್ನಿಬ್ಬರ ಸ್ನೇಹಿತರನ್ನು ಅಡ್ಮಿನ್ (Admin) ಗಳಾಗಿ ಮಾಡಿದ್ದರು. ಈ ಪೈಕಿ ಒಬ್ಬರು ಪೋರ್ನ್ ವಿಡಿಯೋ ಪೋಸ್ಟ್ ಮಾಡಿದಿದರು. ಈ ವಿಡಿಯೋದಲ್ಲಿ ಲೈಂಗಿಕ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುವ ದೃಶ್ಯಗಳಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಆ ವ್ಯಕ್ತಿಯ ವಿರುದ್ಧ, ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಲೈಂಗಿಕ ಕಾಯಿದೆ ಮತ್ತು ಪೋಟೆಕ್ಷನ್ ಆಫ್ ಚಿಲ್ಡ್ರನ್ ಫ್ರಂ ಸೆಕ್ಸುವಲ್ ಅಫೇನ್ಸ್(ಪೋಕ್ಸೋ) ಕಾಯಿದೆಯಡಿ ಕೇಸ್ ದಾಖಲಿಸಿದ್ದರು.

ಈ ವ್ಯಕ್ತಿಯನ್ನು ಪೋಲಿಸರು ಆರೋಪಿ ನಂ.1 ಎಂದು ಗುರುತಿಸಿದ್ದರು. ಆ ಬಳಿಕ, ಈಗ ಕೋರ್ಟ್‌ಗೆ ಮೊರೆ ಹೋಗಿರುವ ಅರ್ಜಿದಾರರನ್ನುಪೊಲೀಸರು ಆರೋಪಿ ನಂ.2 ಎಂದು ಗುರುತಿಸಿ, ತನಿಖೆಯನ್ನುಪೂರ್ಣಗೊಳಿಸಿದ ಬಳಿಕ ವಿಚಾರಣಾ ಕೋರ್ಟ್ ಮುಂದೆ ವರದಿ ಸಲ್ಲಿಸಿದ್ದರು. 

ಇದನ್ನೂ ಓದಿ: Apple’s March 8 Spring Event: ಮ್ಯಾಕ್‌ಬುಕ್ ಪ್ರೊ & ಏರ್, ಮ್ಯಾಕ್ ಮಿನಿ ಲಾಂಚ್? ಏನೆಲ್ಲಾ ವಿಶೇಷತೆ?

ಅರ್ಜಿದಾರರು, ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯಲ್ಲಿ, ಇಡೀ ಪ್ರಕರಣದಲ್ಲಿ ಮಾಡಲಾಗಿರುವ ಎಲ್ಲ ಆರೋಪಗಳ ಮೌಲ್ಯವನ್ನು ಪರಿಗಣಿಸಿದರೂ ಅವು, ಅರ್ಜಿದಾರರು ಯಾವು ರೀತಿಯ ಅಪರಾಧ ಮಾಡಿದ್ದಾರೆಂಬುದನ್ನು ಸೂಚಿಸುವುದಿಲ್ಲ ಎಂದು ತಿಳಿಸಿದ್ದರು. 

ಅರ್ಜಿದಾರರ ಈ ವಾದವನ್ನು ಒಪ್ಪಿಕೊಂಡ ಕೇರಳ ಹೈಕೋರ್ಟ್, ಅರ್ಜಿದಾರರು ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಆಪಾದಿತ ಅಶ್ಲೀಲ ವಸ್ತುಗಳನ್ನು ಪ್ರಕಟಿಸಿದ್ದಾರೆ ಅಥವಾ ಎಂದು ಸೂಚಿಸಲು ಯಾವುದೇ ದಾಖಲೆಗಳಿಲ್ಲ ಅಥವಾ ಅವರು ಹೇಳಿದ ವಿಷಯವನ್ನು ಬ್ರೌಸ್ ಮಾಡಿದ್ದಾರೆ ಅಥವಾ ಡೌನ್‌ಲೋಡ್ ಮಾಡಿದ್ದಾರೆ ಅಥವಾ, ಯಾವುದೇ ರೀತಿಯಲ್ಲಿ, ಆನ್‌ಲೈನ್‌ನಲ್ಲಿ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳಲು ಅನುಕೂಲವಾಯಿತು ಎಂಬುದು ಕಂಡು ಬರುವುದಿಲ್ಲ ಹೇಳಿದೆ.

Latest Videos
Follow Us:
Download App:
  • android
  • ios