Apple’s March 8 Spring Event: ಮ್ಯಾಕ್‌ಬುಕ್ ಪ್ರೊ & ಏರ್, ಮ್ಯಾಕ್ ಮಿನಿ ಲಾಂಚ್? ಏನೆಲ್ಲಾ ವಿಶೇಷತೆ?
*ಆಪಲ್ ಕಂಪನಿಯ ಮಾರ್ಚ್ 8ರ ಸ್ಪ್ರಿಂಗ್ ಇವೆಂಟ್ ಭಾರಿ ಕುತೂಹಲವನ್ನು ಸೃಷ್ಟಿಸಿದೆ.
*ತನ್ನದೇ ಸ್ವಂತ್ ಚಿಪ್‌ಗಳನ್ನು ಹೊಂದಿರುವ ಸಾಧನಗಳನ್ನು ಲಾಂಚ್ ಮಾಡಲಾಗಿರುವ ಆಪಲ್
Tech Desk: ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಆಪಲ್, ತನ್ನ ಮುಂಬರುವ ಮಾರ್ಚ್ 8ರ ಸ್ಪ್ರಿಂಗ್ ಇವೆಂಟ್‌ನಲ್ಲಿ ಹೊಸ ಸಾಧನಗಳನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿಗಳು ಹೊರ ಬೀಳುತ್ತಿವೆ. ವರದಿಗಳ ಪ್ರಕಾರ, ಆಪಲ್ ಕಂಪನಿಯು ಈ ಇವೆಂಟ್‌ನಲ್ಲಿ ಮ್ಯಾಕ್‌ಬುಕ್ ಪ್ರೋ (MackBook Pro), ಮ್ಯಾಕ್‌ಬುಕ್ ಏರ್ (MackBook Air), ಮ್ಯಾಕ್ ಮಿನಿ (Mack Mini) ಮತ್ತು ಐಮ್ಯಾಕ್ ಪ್ರೋ (iMac Pro) ಮಾಡೆಲ್‌ಗಳನ್ನು ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಸಾಧನಗಳು ಆಪಲ್ ಎಂ1 (Apple M1) ಮತ್ತು ಆಪಲ್ ಎಂ2 (Apple M2) ಸಿಲಿಕಾನ್ ಆಧರಿತವಾಗಿರಲಿವೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ. ಕೆಲವು ವಿಶ್ಲೇಷಕರ ಪ್ರಕಾರ, ಆಪಲ್ ಪರಿಚಯಿಸುತ್ತಿರುವ ಎಂ2 ಸಿಲಿಕಾನ್, ಎಂ1 ಸಿಲಿಕಾನ್‌ಗಿಂತಲೂ ತುಸು ಹೆಚ್ಚು ವೇಗವನ್ನು ಹೊಂದಿದೆ. ಈ ಹೊಸ ಮ್ಯಾಕ್‌ಬುಕ್‌ಗಳು ಈಗಾಗಲೇ ಆಪಲ್ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಸೃಷ್ಟಿವೆ. ಈಗ ಹೊರ ಬಿದ್ದಿರುವ ಮಾಹಿತಿಗಳೇ ನಿಜವೇ ಆಗಿದ್ದರೆ, ಮಾರ್ಚ್ 8ರಂದು ಈ ಸಾಧನಗಳು ಬಳಕೆದಾರರಿಗೆ ಕೈಗೆ ಸೇರಲಿವೆ ಎಂದು ಹೇಳಬಹುದು.
ಇದನ್ನೂ ಓದಿ: Poco M4 Pro 5G ಕೈಗೆಟುಕುವ ದರದ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದರಲ್ಲಿದೆ ಹಲವು ವಿಶೇಷತೆ!
ಬ್ಲೂಮ್‌ಬರ್ಗ್ ಪ್ರಕಾರ, ಆಪಲ್ ಇಂಟೆಲ್ ಪ್ರೊಸೆಸರ್‌ಗಳಿಂದ ತನ್ನದೇ ಸ್ವಂತ ಸಿಲಿಕಾನ್‌ಗಳಿಗೆ ಬದಲಾಗುವುದು ಸೇರಿದಂತೆ ಎಂಡ್ ಟು ಎಂಡ್ ಕಂಪ್ಯೂಟರ್ ಮೂರನೇ ಹಂತದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಈ ಹಂತದಲ್ಲಿ ಆಪಲ್ ಕಂಪನಿಯು ಹೊಸ ಮಾಡೆಲ್ ಮ್ಯಾಕ್‌ಬುಕ್ ಲ್ಯಾಪ್‌ಟ್ಯಾಪ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಎಂ2 ಪ್ರೊಸೆಸರ್ ಆಧರಿತವಾಗಿರುವ ಎಂ1 ಪ್ರೋ, ಎಂ1 ಮ್ಯಾಕ್ಸ್ ಮತ್ತು ಎಂ1 ಮ್ಯಾಕ್ಸ್‌ನ ಸೂಪರ್ ಪವರ್ಡ್ ವರ್ಷನ್ ಬಿಡುಗಡೆಯಾಗಲಿವೆ. ಜತೆಗೆ, ಮ್ಯಾಕ್ ಬುಕ್ ಪ್ರೋ, ಮ್ಯಾಕ್ ಬುಕ್ ಏರ್, ಮ್ಯಾಕ್ ಮಿನಿ, ಐಮ್ಯಾಕ್ ಪ್ರೋ ಸೇರಿದಂತೆ ಇನ್ನಿತರ ಸಾಧನಗಳನ್ನು ಬಿಡುಗಡೆಯನ್ನು ನಾವು ಈ ವರ್ಷವೇ ನಿರೀಕ್ಷಿಸಬಹುದಾಗಿದೆ.
5G ಐಫೋನ್ ಎಸ್ಇ, ಐಪ್ಯಾಡ್ ಏರ್?: ಕೆಲವು ಸುದ್ದಿಗಳ ಪ್ರಕಾರ ಮಾರ್ಚ್ 8ರಂದು ನಡೆಯಲಿರುವ ಸ್ಪ್ರಿಂಗ್ ಇವೆಂಟ್‌ನಲ್ಲಿ ಆಪಲ್ ಕಂಪನಿಯು 5ಜಿ ಐಫೋನ್ ಎಸ್ಇ (5G iPhoone SE) ಮತ್ತು ಐಪ್ಯಾಡ್ ಏರ್ (iPad Air) ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮಾಹಿತಿಯನ್ನು ಈ ಹಿಂದೆಯೂ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಮತ್ತೆ ಅದೇ ಮಾಹಿತಿ ಈಗ ಎಲ್ಲೆಡೆಯೂ ಹರಿದಾಡುತ್ತಿದೆ.
ವಿಶೇಷ ಎಂದರೆ, ಆಪಲ್ ಕಂಪನಿಯು ಬಜೆಟ್ ಲೇವಲ್ 4ಜಿ ಐಫೋನ್ ಎಸ್ ಇ 3 ಮತ್ತು ಐಪ್ಯಾಡ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. ಇನ್ನೂ ಕೆಲವು ವರದಿಗಳ ಪ್ರಕಾರ ಮ್ಯಾಕ್‌ನಲ್ಲೇ ಇನ್ನಷ್ಟು ಸಾಧನಗಳ ಬಿಡುಗಡೆಯನ್ನು ಈ ವರ್ಷ ಕಾಣಬಹುದಾಗಿದೆ. ಹಾಗಾಗಿ, ಮಾರ್ಚ್ 8ರಂದು ನಡೆಯಲಿರುವ ಸ್ಪ್ರಿಂಗ್ ಇವೆಂಟ್ ತುಸು ಹೆಚ್ಚೇ ಕುತೂಹಲವನ್ನು ಕೆರಳಿಸುತ್ತಿದೆ ಎಂದು ಹೇಳಬಹುದು.
ಇದನ್ನೂ ಓದಿ: Donald Trump’s Truth Social: ಟ್ವಿಟರ್, ಫೇಸ್‌ಬುಕ್‌ಗೆ ಸೆಡ್ಡು, ಟ್ರುತ್ ಆರಂಭಿಸಿದ ಟ್ರಂಪ್
ಕಳೆದ ವರ್ಷವಷ್ಟೇ ಲಾಂಚ್ ಆಗಿರುವ ಎಂ1 ಪ್ರೋ ಪ್ರೊಸೆರ್‌ನೊಂದಿಗೆ ಆಪಲ್ ಕಂಪನಿಯು ಮ್ಯಾಕ್ ಮಿನಿ ಲಾಂಚ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 13 ಇಂಚಿನ ಮ್ಯಾಕ್‌ಬುಕ್ ಪ್ರೊ M2 ಚಿಪ್‌ನೊಂದಿಗೆ 2020 ಮಾದರಿಯನ್ನು ಯಶಸ್ವಿಯಾಗಲಿದೆ, M2 ಚಿಪ್‌ನೊಂದಿಗೆ ಮ್ಯಾಕ್ ಮಿನಿ, 24-ಇಂಚಿನ iMac ಜೊತೆಗೆ M2 ಚಿಪ್, M2 ಚಿಪ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್, M1 Pro ಜೊತೆಗೆ iMac Pro ಮತ್ತು M1 ಮ್ಯಾಕ್ಸ್ ಚಿಪ್ ಆಯ್ಕೆಗಳು ಅರ್ಧ-ಗಾತ್ರದ Mac Pro, Apple ಸಿಲಿಕಾನ್‌ನೊಂದಿಗೆ ಮೊದಲನೆಯದು, ಎರಡು ಅಥವಾ ನಾಲ್ಕು M1 ಮ್ಯಾಕ್ಸ್ ಚಿಪ್‌ಗಳಿಗೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತವಾದ ಮಾಹಿತಿಯೇನೂ ಬಹಿರಂಗಗೊಂಡಿಲ್ಲ ಎಂಬುದನ್ನು ಗಮನಿಸಬೇಕು.