Asianet Suvarna News Asianet Suvarna News

Indian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!

* Deloitte TMT ವರದಿಯಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ
* ನೂರು ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಾದರೆ ಜಗತ್ತಿನ ಅತಿ ದೊಡ್ಡ ರಾಷ್ಟ್ರವಾಗಲಿದೆ.
* ಸ್ಮಾರ್ಟ್‌ಫೋನ್ ಬಳಕೆದಾರರ ಹೆಚ್ಚಳಕ್ಕೆ ಕಾರಣಗಳೇನು ಎಂಬ ಮಾಹಿತಿಯನ್ನು ಬಿಚ್ಚಿಟ್ಟ ವರದಿ

India will have 1 Billion smartphone users by 2026  says  Deloitte TMT report
Author
Bengaluru, First Published Feb 23, 2022, 3:19 PM IST

Tech Desk: ಸ್ಮಾರ್ಟ್‌ಫೋನ್ (Smartphone) ಬಳಕೆ ಮತ್ತು ಮಾರಾಟದಲ್ಲಿ ಜಗತ್ತಿನಲ್ಲೇ ಭಾರತೀಯ ಮಾರುಕಟ್ಟೆ (Indian Market) ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿರುವ ಜನಸಂಖ್ಯೆ ಹಾಗೂ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಇದೇ ವೇಳೆ, ವರದಿಯೊಂದು ಹೊರಗೆ ಹಾಕಿರುವ ಮಾಹಿತಿಯು ನಿಮಗೆ ಅಚ್ಚರಿಯನ್ನು ತರಿಸುತ್ತದೆ. 2026ರ ಹೊತ್ತಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ (Smartphone users) ಸಂಖ್ಯೆ ನೂರು ಕೋಟಿಗೆ ತಲುಪಲಿದೆಯಂತೆ!. ಹೌದು, ಈ ಸುದ್ದಿ ಕೇಳಲು ಆಶ್ಚರ್ಯವಾದರೂ ನಿಜ.

Deloitte ಅಧ್ಯಯನವು ಈ ಮಾಹಿತಿಯನ್ನು ನೀಡಿದೆ, ಅದರ ಪ್ರಕಾರ, ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಆಧರಿತ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗಲಿದೆಯಂತೆ. ಸದ್ಯ 2021ರ ಮಾಹಿತಿಯ ಪ್ರಕಾರ, ಭಾರತದಲ್ಲಿ 1.2 ಶತಕೋಟಿ ಮೊಬೈಲ್ ಚಂದಾದಾರರಿದ್ದು, ಈ ಪೈಕಿ 75 ಲಕ್ಷ ಜನರು ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ. ಹಾಗಾಗಿ, ಮುಂದಿನ ಐದು ವರ್ಷದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ದೇಶ ಎಂಬ ಕೀರ್ತಿಗೆ ಭಾರತವು ಪಾತ್ರವಾಗಲಿದೆ.

ಇದನ್ನೂ ಓದಿ: Donald Trump’s Truth Social: ಟ್ವಿಟರ್, ಫೇಸ್‌ಬುಕ್‌ಗೆ ಸೆಡ್ಡು, ಟ್ರುತ್ ಆರಂಭಿಸಿದ ಟ್ರಂಪ್

2026ರ ಹೊತ್ತಿಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನೂರು ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಣಲಿದೆ ಎಂದು Deloitteನ 2022ರ ಗ್ಲೋಬಲ್ ಟಿಎಂಟಿ (ಟೆಕ್ನಾಲಜಿ, ಮೀಡಿಯಾ ಮತ್ತು ಎಂಟರ್‌ಟೈನ್ಮೆಂಟ್, ಟೆಲಿಕಾಂ) ಈ  ಬಗ್ಗೆ ಭವಿಷ್ಯ ನುಡಿದಿದೆ. 

ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರ ಹೆಚ್ಚಳಕ್ಕೆ ಭಾರತದ ಗ್ರಾಮೀಣ ಬಳಕೆದಾರರು ಕಾರಣವಾಗಲಿದ್ದಾರೆ. ಅಂದರೆ, 2021ರಿಂದ 2026ರ ಅವಧಿಯಲ್ಲಿ ಗ್ರಾಮೀಣ ವಲಯದಲ್ಲಿನ ಬಳಕೆ ಹೆಚ್ಚಳ ಮತ್ತು ಸಂಯುಕ್ತ ವಾರ್ಷಿಕ ಬೆಳವಣಿಗೆ (CAGR) ದರವು ಶೇ.6 ಇರಲಿದೆ. ಇದೇ ವೇಳೆ ನಗರ ಬಳಕೆದಾರರ ಸಿಎಎಜಿಆರ್ ಪ್ರಮಾಣವು ಶೇ.2.5ರಷ್ಟಿರಲಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಅತಿ ಹೆಚ್ಚಿನ ಇಂಟರ್ನೆಟ್ ಅಳವಡಿಕೆಯು ಸ್ಮಾರ್ಟ್‌ಫೋನ್ ಬೇಡಿಕೆ ಹೆಚ್ಚಾಗಲು ಕಾರಣವಾಗಲಿದೆ.

ಇದರ ಪರಿಣಾಮ ಫಿನ್‌ಟೆಕ್ (Fintech), ಇ ಹೆಲ್ತ್ (e-Health), ಇ ಲರ್ನಿಂಗ್ (e-learning) ಬೇಡಿಕೆಯೂ ಹೆಚ್ಚಾಗಲಿದ್ದು, ಅದರಿಂದಲೂ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಳಕ್ಕೆ ಕಾರಣವಾಗಲಿದೆ. ಸರ್ಕಾರ ಕೂಡ ಭಾರತ್ ನೆಟ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಗಳನ್ನು ಫೈಬರೈಜ್ ಮಾಡಲು ಮುಂದಾಗುತ್ತಿದೆ ಈ ಎಲ್ಲದರ ಪರಿಣಾಮ ಸ್ಮಾರ್ಟ್‌ಫೋನ್ ಬಳಕೆದಾರರ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ Samsung Galaxy Tab S8: ಏನೆಲ್ಲ ವಿಶೇಷತೆ ಇದೆ?

ಮತ್ತೊಂದೆಡೆ ಭಾರತವು ಈ ವರ್ಷವೇ 5ಜಿ ತಂತ್ರಜ್ಞಾನ (5G Technology)ವನ್ನು ಜಾರಿಗೊಳಿಸಲಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಹೆಚ್ಚಿನ ಪ್ರಮಾಣವನ್ನು ನಿರೀಕ್ಷಿಸಬಹುದಾಗಿದೆ. ಅಂದರೆ, 2026ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ 135 ಲಕ್ಷ ಹೆಚ್ಚುವರಿ ಸ್ಮಾರ್ಟ್‌ಫೋನ್ ಮಾರಾಟವನ್ನು ಕಾಣಬಹುದಾಗಿದೆ ಎನ್ನಲಾಗುತ್ತಿದೆ. ಹಾಗಾಗಿ, 2022-2026ರ ಅವಧಿಯಲ್ಲಿ ಒಟ್ಟಾರೆ ಸ್ಮಾರ್ಟ್‌ಫೋನ್ ಮಾರಾಟ ಪ್ರಮಾಣವು 1.7 ಶತಕೋಟಿಗೆ ತಲುಪಲಿದ್ದು, ಒಟ್ಟು ಮಾರುಕಟ್ಟೆ ಮೌಲ್ಯವು 250 ಶತಕೋಟಿ ಡಾಲರ್ ಇರಲಿದೆ. ಈ ಪೈಕಿ 840 ದಶಲಕ್ಷ 5ಜಿ ಆಧರಿತ ಸಾಧನಗಳು ಐದು ವರ್ಷದ ಅವಧಿಯಲ್ಲಿ ಮಾರಾಟ ವಾಗಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗಷ್ಟೇ ಭಾರತ ಸರ್ಕಾರವು ದೇಶದಲ್ಲೇ ಸೆಮಿಕಂಡಕ್ಟರ್ (Semiconductor) ಉತ್ಪಾದನೆಯನ್ನು ಪ್ರೋತ್ಸಾಹಿಸುವುದಕ್ಕಾಗಿ 10 ಶತಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿದೆ. ಇದರಿಂದಾಗಿ ಹ್ಯಾಂಡ್‌ಸೆಟ್ ಉತ್ಪಾದನೆ ಹೆಚ್ಚಾಗಾಲಿದೆ ಮತ್ತು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಉತ್ಪಾದನೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ ಎನಿಸಿಕೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ, ಸೆಮಿಕಂಡಕ್ಟರ್ ಕೊರತೆಯು ಸ್ಮಾರ್ಟ್‌ಫೋನ್ ಉತ್ಪಾದನೆ ಕುಂಠಿತಗೊಳ್ಳಲು ಕಾರಣವಾಗಿದೆ ಎಂಬ ಸಂಗತಿಯನ್ನು ವಿವರಿಸಲಾಗಿದೆ.

Follow Us:
Download App:
  • android
  • ios