ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ವಾಟ್ಸಪ್‌ನಲ್ಲಿ ಸ್ಟಿಕ್ಕರ್ ಬಳಸುವವರಿಗೆ ಈಗೊಂದು ಸಿಹಿಸುದ್ದಿ. ನಿಮಗಾಗಿ ವಾಟ್ಸಪ್ ಈಗ ಹೊಸ ಫೀಚರ್‌ವೊಂದನ್ನು ನೀಡಲು ಸಿದ್ಧವಾಗಿದೆ. ಅದೇ ಅನಿಮೇಟೆಡ್ ಸ್ಟಿಕ್ಕರ್ ಸೇವೆ. 

ಹೌದು, ಈಗ ಮೆಸೇಜ್ ಮಾಡುವಾಗ ಬಹತೇಕ ಸಂದರ್ಭಗಳಲ್ಲಿ ಪದಗಳಿಗಿಂತ ಸ್ಟಿಕ್ಕರ್‌ಗಳ ಮೂಲಕ ಹೇಳಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಇದಕ್ಕೆಂದೇ ಸಾಕಷ್ಟು ಸ್ಟಿಕ್ಕರ್‌ಗಳು ಈಗಾಗಲೇ ಬಹುತೇಕ ಮೆಸೇಂಜರ್ ಆ್ಯಪ್‌ಗಳಲ್ಲಿವೆ. ಆದರೆ, ಅನಿಮೇಟೆಡ್ ಸ್ಟಿಕ್ಕರ್‌ಗಳ ಕೊರತೆ ಕಾಡುತ್ತಿದೆ. ಫೇಸ್ಬುಕ್‌ನಲ್ಲಿ ಈಗಾಗಲೇ ಸಿಗುತ್ತಿದೆಯಾದರೂ ಎಲ್ಲ ಆ್ಯಪ್‌ಗಳಲ್ಲೂ ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಸೇವೆ ನೀಡಲು ಮುಂದಾಗಿರುವ ವಾಟ್ಸಪ್, ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಪರಿಚಯಿಸುತ್ತಿದೆ.

ಇದನ್ನು ಓದಿ: ವಾಟ್ಸಪ್‌ ರೀತಿ ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಟ್ವೀಟ್ ಮಾಡಿ!

ಗುಟ್ಟು ಬಿಡದ ವಾಟ್ಸಪ್ 
ಈ ನೂತನ ಫೀಚರ್ ಆ್ಯಂಡ್ರಾಯ್ಡ್‌ನ ಬೆಟಾ ವರ್ಶನ್ ವಾಟ್ಸಪ್ v2.20.194.7 ನಲ್ಲಿ ಲಭ್ಯವಾದರೆ, ಐಫೋನ್‌ನ ವಾಟ್ಸಪ್ v2.20.70.26 ಬೆಟಾ ವರ್ಶನ್‌ನಲ್ಲಿ ಸಿಗಲಿದೆ. ಈಗ ಈ ನೂತನ ಫೀಚರ್‌ನಡಿ ವಾಟ್ಸಪ್ ಸಂಸ್ಥೆ ಕಾರ್ಯನಿರ್ವಹಣೆ ಮಾಡುತ್ತಿದೆ. ಆದರೆ, ಇವು ಯಾವ ಸ್ವರೂಪದ್ದಾಗಿರುತ್ತದೆ, ಏನೆಲ್ಲ ಹೊಸತನದಿಂದ ಕೂಡಿರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. 2019ರಿಂದಲೇ ವಾಟ್ಸಪ್ ಸ್ಟಿಕ್ಕರ್‌ಗಳಿಗೆ ಆದ್ಯತೆ ಕೊಡುತ್ತಾ ಬಂದಿದೆ. ಅಲ್ಲದೆ, ಈ ನೂತನ ಫೀಚರ್ ವಾಟ್ಸಪ್ ಬ್ಯುಸಿನೆಸ್‌ನಲ್ಲೂ ಲಭ್ಯವಿರಲಿದೆ.ಮೂರು ವಿಭಾಗಗಳಾಗಿ ವಿಂಗಡನೆ
ವಾಬೆಟಾಇನ್ಫೋ (WABetaInfo) ಮಾಹಿತಿ ಪ್ರಕಾರ, ಈ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಮೂರು ವಿಭಾಗಗಳಾಗಿ ಪ್ರತ್ಯೇಕಿಸಲಾಗುತ್ತದೆ. ಲೇಟೆಸ್ಟ್ ಬೆಟಾ ಅಪ್ಡೇಟ್ ಪಡೆದ ಕೆಲವೇ ಕೆಲವು ವಾಟ್ಸಪ್ ಬಳಕೆದಾರರು ಈ ಸ್ಟಿಕ್ಕರ್‌ಗಳನ್ನು ನೋಡಬಹುದಾಗಿದೆ. ಮತ್ತಿದನ್ನು ಫಾರ್ವರ್ಡ್ ಮಾಡುವ ಅವಕಾಶವನ್ನೂ ಹೊಂದಿರುತ್ತಾರೆ. ಆದರೆ, ಬೇರೆ ಆ್ಯಪ್‌ಗಳಿಂದ ಸ್ಟಿಕ್ಕರ್ಗಳನ್ನು ಪಡೆಯುವ ಇಲ್ಲವೇ ವಾಟ್ಸಪ್ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಇನ್ನೂ ಲಭ್ಯವಾಗಿಲ್ಲ. ಹೀಗಾಗಿ ಇನ್ನೂ ಫೀಚರ್ ಪ್ರಾಯೋಗಿಕ ಹಂತದಲ್ಲೇ ಇದೆ. 

ಇದನ್ನು ಓದಿ: ನಿಮ್ಮನೆ ಹತ್ತಿರ ಕೊರೋನಾ ಟೆಸ್ಟಿಂಗ್ ಸೆಂಟರ್ ಎಲ್ಲಿದೆ ಅಂತ ಹೇಳುತ್ತೆ ಗೂಗಲ್!

ಸದ್ಯ 5 ಸ್ಟಿಕ್ಕರ್ ಪ್ಯಾಕ್‌ಗಳು ಲಭ್ಯ
ವಾಟ್ಸಪ್‌ನಿಂದ ಡಿಫಾಲ್ಟ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಆ್ಯಂಡ್ರಾಯ್ಡ್ ಪೊಲೀಸ್ ವರದಿ ಮಾಡಿದೆ. ಇಲ್ಲಿ ಪ್ಲೇಫುಲ್ ಪಿಯೋಮರು, ರಿಕೊಸ್ ಸ್ವೀಟ್ ಲೈಫ್, ಮೂಡಿ ಫುಡೀಸ್, ಚುಮ್ಮಿ ಚುಮ್ ಚುಮ್ಸ್ ಹಾಗೂ ಬ್ರೈಟ್ ಡೇಸ್ ಎಂಬ 5 ಸ್ಟಿಕ್ಕರ್ ಪ್ಯಾಕ್‌ಗಳನ್ನು ನೋಡಬಹುದಾಗಿದೆ. ಆದರೆ, ಇಲ್ಲಿ ಪ್ರತಿ ಪ್ಯಾಕ್‌ನಿಂದ ಬೇರೆ ಬಳಕೆದಾರರು ಈ ಪ್ರತಿ ಪ್ಯಾಕ್‌ಗಳಿಂದ ಸ್ಟಿಕ್ಕರ್ ಕಳುಹಿಸದ ಹೊರತು ನಿಮಗೆ ಈ ಯಾವುದೇ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೋಡಲಾಗುವುದಿಲ್ಲ. ಇನ್ನು ಬೇರೆ ಆ್ಯಪ್‌ಗಳ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳು ವಾಟ್ಸಪ್ v2.20.194.7 ಬೆಟಾದಲ್ಲಿ ಸಪೋರ್ಟ್ ಆಗುವುದಿಲ್ಲ.

ಇದನ್ನು ಓದಿ: ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!

ಪ್ರಾಯೋಗಿಕ ಯೋಜನೆ
ಚಾಟ್‌ಗಳಲ್ಲಿನ ಸ್ಟಿಕ್ಕರ್‌ಗಳು ಒಮ್ಮೆ ಮಾತ್ರ ಅನಿಮೇಟ್ ಆಗುತ್ತವೆ. ಮತ್ತೆ ಅವುಗಳು ಎನಿಮೇಟ್ ಆಗಬೇಕಿದ್ದರೆ ಸ್ಕ್ರೀನ್ ಅನ್ನು ಮೇಲೆ-ಕೆಳಗೆ ಸ್ಕ್ರಾಲ್ ಮಾಡಬೇಕು. ಆ್ಯಂಡ್ರಾಯ್ಡ್‌ಗಾಗಿ ವಾಟ್ಸಪ್ v2.20.194.7 ಬೆಟಾವನ್ನು ಎಪಿಕೆ ಮಿರರ್ ಮೂಲಕ ಡೌನ್‌ಲೋಡ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ ಮೂಲಕ ವಾಟ್ಸಪ್ ಬೆಟಾ ಚಾನೆಲ್‌ನಲ್ಲಿದ್ದರೆ ಅಟೋಮ್ಯಾಟಿಕ್ ಆಗಿ ಡೌನ್‌ಲೋಡ್ ಆಗಿರುತ್ತದೆ. ಒಟ್ಟಿನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಫೀಚರ್ ನೀಡಲು ಪ್ರಾಯೋಗಿಕ ಯೋಜನೆ ರೂಪುಗೊಂಡಿದೆ. ಪೂರ್ಣಪ್ರಮಾಣದಲ್ಲಿ ಬಳಕೆಗೆ ಸಿದ್ಧವಾದ ಬಳಿಕವಷ್ಟೇ ಅದರಲ್ಲಿನ ಹೊಸ ಹೊಸ ಅಂಶಗಳನ್ನು ತಿಳಿಯಬಹುದಾಗಿದೆ.