ಸಿನಿ ಪ್ರಿಯರಿಗೆ ವಿಐ ಭರ್ಜರಿ ಆಫರ್ ಘೋಷಿಸಿದೆ. ಕೇವಲ 35 ರೂಪಾಯಿಗೆ 9 ಭಾಷೆಗಳಲ್ಲಿ 6ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್ ಸಬ್‌ಸ್ಕ್ರಿಪ್ಶನ್ ನೀಡಿದೆ. ಈ ಪ್ಯಾಕ್ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್

ದೆಹಲಿ (ನ.07) ಭಾರತೀಯ ಒಟಿಟಿ (OTT) ಮನರಂಜನಾ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗಳು ಹಾಗೂ ವೆಬ್ ಸೀರೀಸ್‌ಗಳಿಗೆ ದಿನೇದಿನೆ ಬೇಡಿಕೆ ಹೆಚ್ಚಿಸಿಕೊಳ್ಳಿುತ್ತಿದೆ. ಇದರ ಬೆನ್ನಲ್ಲೇ ವಿ ಟೆಲಿಕಾಂ ಸಂಸ್ಥೆ (Vi) ವಿ ಮೂವೀಸ್ ಅಂಡ್ ಟಿವಿ (Vi Movies & TV) ಮೂಲಕ ಪ್ರಾದೇಶಿಕ ಮನರಂಜನಾ ಕೊಡುಗೆ ವಿಸ್ತರಿಸಿದೆ. ಪ್ರಾದೇಶಿಕ ಒಟಿಟಿ ಪ್ರಿಯರಿಗಾಗಿ ಭಾರತದ ಅತ್ಯಂತ ಅಗ್ಗದ ಹಾಗೂ ಕೈಗೆಟುಕುವ ದರದ ಆಡ್-ಆನ್ ಪ್ಯಾಕ್ ಕೇವಲ 35ರೂಪಾಯಿಗೆ ಪರಿಚಯಿಸಿಸಿದೆ. ಈ ಮೂಲಕ ದೀಪಾವಳಿ ಸಿಹಿ ನೀಡಿದೆ.

ಹೊಸ ಆಫರ್ ಪ್ರೀಮಿಯಂ ದರ್ಜೆಯ ಪ್ರಾದೇಶಿಕ ಮನರಂಜನೆಯನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಮೂಲಕ ಅರ್ಹ ವಿ ಪ್ರೀಪೇಯ್ಡ್ (Vi Prepaid) ಗ್ರಾಹಕರು 9 ಭಾಷೆಗಳನ್ನು ಒಳಗೊಂಡ 6 ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪಟ್ಟಿಯಿಂದ ತಮಗೆ ಇಷ್ಟವಾದ ಯಾವುದೇ 2 ಒಟಿಟಿಗಳನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಯಾವ ಭಾಷೆಗೆ ಯಾವ ಒಟಿಟಿ ಆಯ್ಕೆ ಲಭ್ಯ?:

  • ಪ್ರತಿಯೊಂದು ಒಟಿಟಿ ವೇದಿಕೆಗೆ ಪ್ರತ್ಯೇಕವಾಗಿ ದುಬಾರಿ ಚಂದಾದಾರಿಕೆ (Subscription) ಪಡೆಯುವ ಅಗತ್ಯವಿಲ್ಲದೆ, ಗ್ರಾಹಕರು ಒಂದೇ ಪ್ಯಾಕ್ ಅಡಿಯಲ್ಲಿ ಹಲವು ಭಾಷೆಗಳ ಮನರಂಜನೆ ವೀಕ್ಷಿಸಬಹುದು:
  • ದಕ್ಷಿಣ ಭಾರತೀಯ ಭಾಷೆಗಳು (ಕನ್ನಡ, ತಮಿಳು, ತೆಲುಗು, ಮಲಯಾಳಂ): ಸೋನಿಲಿವ್ ಸೌತ್ (SonyLIV South)
  • ಮಲಯಾಳಂ ಮನರಂಜನೆ: ಮನೋರಮಾಮ್ಯಾಕ್ಸ್ (Manoramamax)
  • ಉತ್ತರ ಭಾರತೀಯ ಭಾಷೆಗಳು (ಪಂಜಾಬಿ, ಹರ್ಯಾನ್ವಿ, ಭೋಜ್‌ಪುರಿ): ಚೌಪಾಲ್ (Chaupal)
  • ಬಂಗಾಳಿ ಭಾಷೆ: ಕ್ಲಿಕ್ (KLIKK) ಮತ್ತು ಅಡ್ಡಾಟೈಮ್ಸ್ (Hoichoi/Addatimes)
  • ಒಡಿಯಾ ಮನರಂಜನೆ: ಆವೊನೆಕ್ಸ್ಟ್ (AAO Nxt)

35ರೂ ಪ್ಯಾಕ್‌ ವಿವರ

ಮೊಬೈಲ್ ಬಳಕೆದಾರರಿಗೆ ಮಾತ್ರ ಅನ್ವಯವಾಗುವ ಈ ₹35ರ ಆಡ್-ಆನ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಟಿಡಿ ಹೊಂದಿದೆ. ಇದರೊಂದಿಗೆ ಆಯ್ಕೆ ಮಾಡಿದ 2 ಪ್ರಾದೇಶಿಕ ಒಟಿಟಿಗಳ ವೀಕ್ಷಣೆಯ ಜೊತೆಗೆ 7 ದಿನಗಳ ವ್ಯಾಲಿಡಿಟಿ ಹೊಂದಿರುವ 1GB ಉಚಿತ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. ಸಕ್ರಿಯ ಸೇವಾ ಮಾನ್ಯತೆ (Active Service Validity) ಹೊಂದಿರುವ ಅರ್ಹ ವಿ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಸಿಗಲಿದೆ.

ರೀಚಾರ್ಜ್ ಮಾಡಿಕೊಳ್ಳುವುದು, ಆಕ್ಟಿವೇಟ್ ಮಾಡುವುದು ಹೇಗೆ?

ಗ್ರಾಹಕರು ತಮ್ಮ 'ವಿ ಆ್ಯಪ್' (Vi App) ಅಥವಾ ಯಾವುದೇ ಥರ್ಡ್-ಪಾರ್ಟಿ ರೀಚಾರ್ಜ್ ಆ್ಯಪ್‌ಗಳ (Google Pay, PhonePe ಇತ್ಯಾದಿ) ಮೂಲಕ ₹35ರ ಪ್ಯಾಕ್ ರೀಚಾರ್ಜ್ ಮಾಡಿಕೊಳ್ಳಬಹುದು. ರೀಚಾರ್ಜ್ ಯಶಸ್ವಿಯಾದ ನಂತರ 'ವಿ ಮೂವೀಸ್ ಅಂಡ್ ಟಿವಿ' (Vi Movies & TV) ಆ್ಯಪ್‌ಗೆ ತಮ್ಮ ವಿ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಬೇಕು. ಅಲ್ಲಿ ಲಭ್ಯವಿರುವ 6 ಒಟಿಟಿಗಳಲ್ಲಿ ತಮಗೆ ಇಷ್ಟವಾದ 2 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಆಯ್ಕೆ ಮಾಡುವ ಮೂಲಕ ಈ ಯೋಜನೆಯನ್ನು ತಕ್ಷಣವೇ ಸಕ್ರಿಯಗೊಳಿಸಿಕೊಳ್ಳಬಹುದು.