ಭಾರತೀಯರ ಕೆರಳಿಸಿದ ಟ್ವಿಟರ್; ಇಂಡಿಯಾ ಮ್ಯಾಪ್‌ನಿಂದ ಜಮ್ಮು ಕಾಶ್ಮೀರ, ಲಡಾಖ್ ಮಾಯ!
- ಕೇಂದ್ರದ ವಿರುದ್ದ ಕತ್ತಿ ಮಸೆಯುತ್ತಿದ್ದ ಟ್ವಿಟರ್ ಇದೀಗ ಮತ್ತೊಂದು ಉದ್ಧಟತನ
- ಟ್ವಿಟರ್ ವೈಬ್‌ಸೈಟ್‌ನಲ್ಲಿ ಹಾಕಿರುವ ಭೂಪಟದಲ್ಲಿ ಲಡಾಖ್, ಜಮ್ಮು ಕಾಶ್ಮೀರ ಪ್ರತ್ಯೇಕ ದೇಶ
- ಭಾರತದ ಮಕುಟಮಣಿ ಬೇರ್ಪಡಿಸಿ ಭಾರತೀಯರ ಕೆರಳಿಸಿದ ಟ್ವಿಟರ್
ನವದೆಹಲಿ(ಜೂ.28): ಟ್ವಿಟರ್ ಹಾಗೂ ಕೇಂದ್ರ ಸರ್ಕಾರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಭಾರತ ನಿಯಮ ಪಾಲಿಸಲು ಹಿಂದೇಟು ಹಾಕಿರುವ ಟ್ವಿಟರ್‌ಗೆ ಪಾಠ ಕಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೆ, ಇತ್ತ ಟ್ವಿಟರ್ ಒಂದೊಂದೆ ಅಸ್ತ್ರಗಳನ್ನು ಪ್ರಯೋಗಿಸುತ್ತಾ ಸೆಡ್ಡು ಹೊಡೆಯುತ್ತಿದೆ. ಇಷ್ಟು ದಿನ ಈ ಸಮರದಲ್ಲಿ ಹಲವರು ಕೇಂದ್ರದ ಪರ ನಿಂತಿದ್ದರೆ, ಇನ್ನೂ ಕೆಲವರು ಟ್ವಿಟರ್ ಪರ ನಿಂತಿದ್ದರು. ಇದೀಗ ಟ್ವಿಟರ್ ನಡೆ ಸಮಸ್ತ ಭಾರತೀಯರನ್ನು ಕೆರಳಿಸಿದೆ. ಇಷ್ಟೇ ಅಲ್ಲ ಟ್ವಿಟರ್ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
"
ಟ್ವಿಟರ್ ಜಟಾಪಟಿ; ಒಂದೇ ತಿಂಗಳಿಗೆ ನೇಮಕಗೊಂಡಿದ್ದ ಅಧಿಕಾರಿ ಗುಡ್‌ಬೈ!.
ಅಷ್ಟಕ್ಕೂ ಟ್ವಿಟರ್ ಮಾಡಿದ ಉದ್ಧಟತನ ಸಣ್ಣದೇನಲ್ಲ. ಭಾರತದ ಭೂಪಟದಿಂದ ಲಡಾಖ್ ಹಾಗೂ ಜಮ್ಮ ಕಾಶ್ಮೀರವನ್ನೇ ಟ್ವಿಟರ್ ತೆಗೆದು ಹಾಕಿದೆ. ಇಷ್ಟೇ ಅಲ್ಲ ಭಾರತದ ಅವಿಭಾಜ್ಯ ಅಂಗಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ್ನು ಪ್ರತ್ಯೇಕ ದೇಶಗಳನ್ನಾಗಿ ತೋರಿಸಿದೆ.
ಟ್ವಿಟರ್ ವೆಬ್‌ಸೈಟ್‌ನಲ್ಲಿ ನೀಡಿರುವ ವಿಶ್ವ ಭೂಪಟದಲ್ಲಿ ಈ ತಪ್ಪೆಸಗಲಾಗಿದೆ. ಟ್ವಿಟರ್ ಈ ರೀತಿಯ ಉದ್ಧಟತನ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಭಾರತ ಚೀನಾ ಸಂಘರ್ಷದ ಸಮಯದಲ್ಲಿ ಟ್ವಿಟರ್ ಭಾರತ ಲೇಹ್ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿತ್ತು.
ಸರ್ಕಾರ Vs ಟ್ವಿಟರ್: ಐಟಿ ಸಚಿವರ ಖಾತೆಯನ್ನೇ ಬ್ಲಾಕ್ ಮಾಡಿದ Twitter!
ಟ್ವಿಟರ್ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್ ಟ್ವಿಟರ್(#BanTWITTER ) ಅಭಿಯಾನ ಆರಂಭಗೊಂಡಿದೆ. IT ನಿಯಮ ಪಾಲಿಸಲು ಒಪ್ಪದ ಟ್ವಿಟರ್, ಅಮೆರಿಕ ನಿಯಮ ಪಾಲಿಸುತ್ತಿದೆ. ಭಾರತದ ನೆಲದಲ್ಲಿದ್ದುಕೊಂಡು, ಭಾರತೀಯರನ್ನು ಕೆರಳಿಸುತ್ತಿರುವ ಟ್ವಿಟರ್ ಬ್ಯಾನ್ ಆಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ವಿಡಿಯೋ ಕಾಲ್ ಆಗಲ್ಲ, ಠಾಣೆಯಲ್ಲೇ ವಿಚಾರಣೆ; ಟ್ವಿಟರ್ MDಗೆ ಯುಪಿ ಪೊಲೀಸ್ ಸಮನ್ಸ್
ಕೇಂದ್ರ ಜಾರಿಗೆ ತಂದಿರುವ ಹೊಸ ಐಟಿ ನಿಯಮ ಪಾಲಿಸಲು ಟ್ವಿಟರ್ ನಿರಾಕರಿಸಿದೆ. ಮೂವರು ಅಧಿಕಾರಿಗಳನ್ನು ನೇಮಕ ಸೇರಿದಂತೆ ಹೊಸ ಐಟಿ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿರುವ ಟ್ವಿಟರ್, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಿನಲ್ಲಿ ಕೋರ್ಟ್ ಮೆಟ್ಟಿಲೇರಿದೆ. ಕಾಂಗ್ರೆಸ್ ಮುಖಂಡರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಟ್ವಿಟರ್ ಪರ ವಕಲಾತ್ತು ವಹಿಸಿದ್ದರು. ಹೀಗಾಗಿ ಹಲವರು ಕೇಂದ್ರ ಹಾಗೂ ಟ್ವಿಟರ್ ಜಟಾಪಟಿಗೆ ಮೌನ ವಹಿಸಿದ್ದರು.ಇದೀಗ ಟ್ವಿಟರ್ ನಡೆ ಸಮಸ್ತ ಭಾರತೀಯರನ್ನು ಕೆರಳಿಸಿದೆ.