ಎಲನ್ ಮಸ್ಕ್ ಒಡೆತದನ ಟ್ವಿಟರ್ ಇದೀಗ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿದೆ. ಇಂದು ಸಂಜೆ ಭಾರತದಲ್ಲಿ ಬಳಕೆದಾರರು ಟ್ವಿಟರ್ ಬಳಸಲು ಸಾಧ್ಯವಾಗದೇ ಪರದಾಡಿದ್ದಾರೆ.

ನವದೆಹಲಿ(ಡಿ.11): ಉದ್ಯಮಿ ಎಲನ್ ಮಸ್ಕ್ ಟ್ವಿಟರ್ ಖರೀದಿಸದ ಬೆನ್ನಲ್ಲೇ ಪ್ರತಿ ದಿನ ಟ್ವಿಟರ್ ಟ್ರೆಂಡ್‌ನಲ್ಲಿದೆ. ಉದ್ಯೋಗಿಗಳ ವಜಾ, ಬ್ಲೂಟಿಕ್ ಪಾವತಿ, ಲೈಕ್ಸ್ ಸಿಂಬಲ್ ಸೇರಿದಂತೆ ಹಲವು ವಿಚಾರಗಳು ಭಾರಿ ಚರ್ಚೆಯಾಗಿದೆ. ಇದೀಗ ಮಸ್ಕ್ ಅಧಿಪತ್ಯದಲ್ಲಿ ಎರಡನೇ ಬಾರಿಗೆ ಟ್ವಿಟರ್ ಡೌನ್ ಆಗಿದೆ. ಇಂದು(ಡಿ.11) ಸಂಜೆ 7 ಗಂಟೆ ಸುಮಾರಿಗೆ ಭಾರತದಲ್ಲಿ ಬಳಕೆದಾರರು ಟ್ವಿಟರ್ ಬಳಸಲು ಸಾಧ್ಯವಾಗದೇ ಪರದಾಡಿದ್ದಾರೆ ಎಂದು ಡೌನ್‌ಡಿಟೆಕ್ಟರ್ ವರದಿ ಮಾಡಿದೆ. ಡೌನ್ ಡಿಟೆಕ್ಟರ್ ಪ್ರಕಾರ 3,000 ಕ್ಕೂ ಹೆಚ್ಚು ಬಳಕೆದಾರರು ಟ್ವಿಟರ್ ಬಳಸು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಶೇಕಡಾ 63 ರಷ್ಟು ಡೌನ್‌ಡಿಟೆಕ್ಟರ್ ಬಳಕೆದಾರರು ಟ್ವಿಟರ್ ಸಮಸ್ಯೆ ಕುರಿತು ದೂರು ನೀಡಿದ್ದಾರೆ. 

ಎಲನ್ ಮಸ್ಕ್ ಕುತೂಹಲಕ ಮಾಹಿತಿ ಒಳಗೊಂಡ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಟ್ವಿಟರ್ ಡೌನ್ ಆಗಿದೆ. ಟ್ವೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಟ್ವಿಟರ್ ಪೇಜ್‌ನಲ್ಲಿ ಹೊಸ ಟ್ವೀಟ್‌ಗಳು ಕಾಣುತ್ತಿಲ್ಲ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಲ್ಲಿ ಟ್ವಿಟರ್ ಸಮಸ್ಯೆಯಾಗುತ್ತಿದೆ ಎಂದು ಹಲವರು ದೂರು ನೀಡಿದ್ದಾರೆ. ಟ್ವಿಟರ್ ಬ್ಲೂ ಲಾಂಚ್‌ಗೆ ಒಂದು ದಿನ ಮೊದಲು ಟ್ವಿಟರ್ ಬಳಕೆಯಲ್ಲಿ ಸಮಸ್ಯೆಯಾಗಿದೆ. 

Forbes: ಜಗತ್ತಿನ ನಂ. 1 ಶ್ರೀಮಂತ ಎಂಬ ಹಣೆಪಟ್ಟಿನೂ ಕಳಕೊಂಡ್ರೇ ಎಲಾನ್‌ ಮಸ್ಕ್..?

ಟ್ವೀಟರ್‌ ಬ್ಲುಟಿಕ್‌ಗೆ ಮಾಸಿಕ 8 ಡಾಲರ್‌ ಶುಲ್ಕ 
ಬ್ಲು ಟಿಕ್‌ ಹೊಂದಿರುವ ಟ್ವೀಟರ್‌ನ ವೆರಿಫೈಡ್‌ ಬಳಕೆದಾರರು ಇನ್ನು ಮುಂದೆ ಮಾಸಿಕ 8 ಡಾಲರ್‌ (ಅಂದಾಜು 660 ರು.) ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸಂಸ್ಥೆಯ ಹೊಸ ಮಾಲೀಕ ಎಲಾನ್‌ ಮಸ್‌್ಕ ಪ್ರಕಟಿಸಿದ್ದಾರೆ. ಇದು ಟ್ವೀಟರ್‌ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ‘ಜನರಿಗೆ ಅಧಿಕಾರ! ಬ್ಲುಗಾಗಿ ಪ್ರತಿ ತಿಂಗಳಿಗೆ 8 ಡಾಲರ್‌’ ಎಂದು ಮಸ್‌್ಕ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ದೇಶದ ಜನರ ಕೊಳ್ಳುವ ಶಕ್ತಿಯ ಸಾಮ್ಯತೆ ಅನುಸಾರವಾಗಿ ಬೆಲೆಯನ್ನು ಸರಿಹೊಂದಿಸಲಾಗುವುದು ಎಂದು ಹೇಳಿದ್ದಾರೆ.

ಮಸ್‌್ಕ ನಿರ್ಧಾರಕ್ಕೆ ಟ್ವೂಟರ್‌ ಬಳಕೆದಾರ ಸ್ಟೀಫನ್‌ ಕಿಂಗ್‌, ಕಸ್ತೂರಿ ಶಂಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಮಸ್‌್ಕ ‘ಟ್ವೀಟರ್‌ ಕೇವಲ ಜಾಹೀರಾತಿನಿಂದ ಬಂದ ಹಣದ ಮೇಲೆ ಅವಲಂಬಿಸಲು ಸಾಧ್ಯವಾಗುವುದಿಲ್ಲ. ನಾವು ಬಿಲ್‌ ಪಾವತಿಸಲೇಬೇಕು. 8 ಡಾಲರ್‌ಗೆ ಏನನ್ನುತ್ತೀರಿ?’ ಮಸ್‌್ಕ ರಿಟ್ವೀಟ್‌ ಮಾಡಿದ್ದಾರೆ.

ಟ್ವಿಟ್ಟರ್‌ ಕಚೇರಿಯ ಕೊಠಡಿಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ ಎಲಾನ್‌ ಮಸ್ಕ್..!

ಶೇ.75ಕ್ಕೂ ಹೆಚ್ಚು ಸಿಬ್ಬಂದಿಗೆ ಕೊಕ್ ನೀಡುವ ಕಾರ್ಯಕ್ಕೆ ಚಾಲನೆ
ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಟ್ವಿಟರ್‌ ಅನ್ನು 3.6 ಲಕ್ಷ ಕೋಟಿ ರು.ಗೆ ಖರೀದಿಸಿದ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್‌್ಕ, ಸಿಇಒ ಪರಾಗ್‌ ಅರ್ಗವಾಲ್‌ ಸೇರಿದಂತೆ ಹಲವು ಹಿರಿಯರನ್ನು ತೆಗೆದು ಹಾಕಿದ ಬೆನ್ನಲ್ಲೇ ಇದೀಗ ಒಟ್ಟಾರೆ ಸಿಬ್ಬಂದಿ ಪೈಕಿ ಶೇ.75ರಷ್ಟುಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಮೂಲಗಳ ಪ್ರಕಾರ ಮ್ಯಾನೇಜರ್‌ಗಳಿಗೆ ಉದ್ಯೋಗಿಗಳ ಕಡಿತಕ್ಕಾಗಿ ಪಟ್ಟಿತಯಾರಿಸುವಂತೆ ಸೂಚಿಸಲಾಗಿದ್ದು, ಶೇ.75ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಗುರುವಾರ ಟ್ವೀಟರ್‌ ಖರೀದಿ ಒಪ್ಪಂದ ಕುದುರಿದ ಬೆನ್ನಲ್ಲೇ ಮಸ್‌್ಕ ಉದ್ಯೋಗಿಗಳ ಕಡಿತಕ್ಕಾಗಿ ಸೂಚನೆ ನೀಡಿದ್ದರು. ಪ್ರಸ್ತುತ 7500 ಜನರು ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನ.1ಕ್ಕೂ ಮುನ್ನ ವಜಾಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.