ಟೈಮ್ಸ್ 100 ಉತ್ತಮ ಆವಿಷ್ಕಾರ ಪಟ್ಟಿಯಲ್ಲಿ ದೆಹಲಿ MIT ಪದವೀಧರನ ಹೆಡ್‌ಸೆಟ್!
ಟೈಮ್ಸ್ 100 ಅತ್ಯುತ್ತಮ ಅವಿಷ್ಕಾರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ದೆಹಲಿ ವಿದ್ಯಾರ್ಥಿ ಅಭಿವೃದ್ಧಿ ಪಡಿಸಿದ ಮೈಂಡ್ ರೀಡಿಂಗ್ ಹೆಡ್‌ಸೆಟ್ ಸ್ಥಾನ ಪಡಿದೆ. ನೂತನ ಹೆಡ್‌ಸೆಟ್ ವಿಶೇಷತೆ ಇಲ್ಲಿವೆ.
ದೆಹಲಿ(ನ.22): ಭಾರತದ ಯುವ ಪ್ರತಿಭೆಗಳು ಇದೀಗ ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ಇತರ ಎಲ್ಲಾ ದೇಶಗಳಿಗಿಂತ ಮುಂಚೂಣಿಯಲ್ಲಿದ್ದಾರೆ. ಇದೀಗ ದೆಹಲಿಯ MIT ಪದವೀದರ ಅಭಿವೃದ್ಧಿ ಪಡಿಸಿದ ಮೈಂಡ್ ರೀಡರ್ ಹೆಡ್‌ಸೆಡ್, ಟೈಮ್ಸ್ 100 ಅತ್ಯುತ್ತಮ ಆವಿಷ್ಕಾರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!
MITಯ ಪೋಸ್ಟ್‌ಡಾಕ್ಟ್ರಲ್ ವಿದ್ಯಾರ್ಥಿ ಅರ್ನವ್ ಕಪೂರ್ ಈ ಮೈಂಡ್ ರೀಡರ್ ಹೆಡ್‌ಸೈಟ್ ರೂವಾರಿ. MIT ಮೀಡಿಯಾ ಲ್ಯಾಬ್‌ನಲ್ಲಿ ಅರ್ನವ್ ಹಾಗೂ ಸಹೋದರ ಶ್ರೇಯಸ್ ಕಪೂರ್ ಜೊತೆ ಸೇರಿ ವಿನೂತನ ಮೈಂಡ್ ರೀಡರ್ ಹೆಡ್‌ಸೆಟ್ ಅಭಿವೃದ್ಧಿ ಪಡಿಸಲಾಗಿದೆ. ಈ ಹೆಡ್‌ಸೆಟ್ ಬಳಸಿ ಒಂದು ಮಾತು ಆಡದೆ, ಮನಸ್ಸಿನ ಮೂಲಕ ಕಂಪ್ಯೂಟರ್‌ಗೆ ಸೂಚನೆ ನೀಡಬಹುದು. ನಮ್ಮ ಮನಸ್ಸಿನ ಸೂಚನೆಯನ್ನು ಈ ಹೆಡ್‌ಸೆಟ್ ರೀಡ್ ಮಾಡಲಿದೆ.
ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!.
ಈ ಹೆಡ್‌ಸೆಟ್ ಮನಸ್ಸಿನಲ್ಲಿನ ಸಂವೇದಕಗಳನ್ನು ರೀಡ್ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಮೂಲಕ ಕಂಪ್ಯೂಟರ್‌ಗೆ ಸಂಜ್ಞೆಗಳನ್ನು ರವಾನಿಸುತ್ತದೆ. ಇದು ಶೇಕಡಾ 92 ರಷ್ಟು ನಿಖರತೆಯನ್ನು ಹೊಂದಿದೆ ಎಂದು ಟೈಮ್ಸ್ ವರದಿ ಮಾಡಿದೆ.
ನಾವು ಜೋರಾಗಿ ಮಾತನಾಡದಿದ್ದರೂ, ನಾವು ಹೇಳದ ಆಲೋಚನೆಗಳು ನಮ್ಮ ಆಂತರಿಕ ಭಾಷಣ ವ್ಯವಸ್ಥೆಯ ಮೂಲಕ ಸಾಗುವಿಕೆಯನ್ನು ಮೂಲವಾಗಿಟ್ಟುಕೊಂಡು ಈ ಹೆಡ್‌ಸೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಮನಸ್ಸಿನಲ್ಲಿನ ಆಲೋಚನೆಗಳನ್ನು ಚಾಚುತಪ್ಪದೆ ಸಂಜ್ಞೆಗಳಾಗಿ ಪರಿವರ್ತಿಸಿ ಸೂಚನೆಗಳನ್ನು ಇದು ನೀಡುತ್ತದೆ.