ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!
ಭಾರತದ ವ್ಯವಹಾರಗಳೆಲ್ಲ ಡಿಜಿಟಲೀಕರಣವಾಗಿದೆ. ಪ್ರಮುಖವಾಗಿ ಹಣ ಪಾವತಿ, ಬಿಲ್ ಪಾವತಿ ಸೇರಿದಂತೆ ಹಣದ ವ್ಯವಹಾರಗಳು ಇದೀಗ ಆ್ಯಪ್ ಮೂಲಕ UPI ಪೇಮೆಂಟ್ ಮಾಡಲಾಗುತ್ತಿದೆ. ಭಾರತದಲ್ಲಿ ಗೂಗಲ್ ಪೇ, ಫೋನ್ ಫೇ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ವ್ಯಾಟ್ಸಾಪ್ ಪೇ ಆರಂಭಗೊಳ್ಳುತ್ತಿದೆ.
ನವದೆಹಲಿ(ನ.06): ಭಾರತದಲ್ಲಿ ವ್ಯಾಟ್ಸಾಪ್ ಬಳಕೆ, ಜನಪ್ರಿಯತೆ ಹಾಗೂ ಅವಲಂಬನೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಶಾಲಾ ಮಕ್ಕಳಿಂದ ಹಿಡಿದು, ಪ್ರತಿಯೊಬ್ಬರು ವ್ಯಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಬಹುತೇಕ ವ್ಯವಹಾರಗಳು ವ್ಯಾಟ್ಸಾಪ್ ಮೂಲಕವೇ ನಡೆಯುತ್ತಿದೆ. ಹೀಗಾಗಿ ವ್ಯಾಟ್ಸಾಪ್ ಭಾರತದಲ್ಲಿ ಬರೋಬ್ಬರಿ 40 ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ವ್ಯಾಟ್ಸಾಪ್ ಮತ್ತೊಂದು ಬಹುನಿರೀಕ್ಷಿತ ಫೀಚರ್ಸ್ ವ್ಯಾಟ್ಸಾಪ್ ಪೇ ಆರಂಭಿಸಿದೆ.
ವಾಟ್ಸಾಪ್‌ನಲ್ಲೂ ಬಂದಿದೆ ತನ್ನಿಂತಾನೇ ‘ಅಳಿಸುವ ಮೆಸೇಜ್’ ಆಯ್ಕೆ
UPI ಪೇಮೆಂಟ್ ವ್ಯವಹಾರಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಗಮ(NPCI) ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ . ಈ ಮೂಲಕ ಕಳೆದೆರಡು ವರ್ಷಗಳಿಂದ ಪ್ರಾಯೋಗಿಕ ಹಂತದಲ್ಲಿದ್ದ ವ್ಯಾಟ್ಸಾಪ್ ಪೇ ಇದೀಗ ಭಾರತದಲ್ಲಿ ಆರಂಭಗೊಳ್ಳುತ್ತಿದೆ. ಇನ್ನು ಗೂಗಲ್ ಪೇ, ಫೋನ್ ಪೇ ರೀತಿಯಲ್ಲಿ ವ್ಯಾಟ್ಸಾಪ್ ಪೇ ಮೂಲಕ ಹಣದ ವ್ಯವಹಾರ ಸುಲಭವಾಗಿ ನಡೆಸಬಹುದು.
QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?
2018ರಲ್ಲಿ ಭಾರತದಲ್ಲಿ ವ್ಯಾಟ್ಸಾಪ್ ಪೇಮೆಂಟ್ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಸುರಕ್ಷತೆ ಹಾಗೂ ಇತರ ಪಾಲಿಸಿ ಕುರಿತು ಭಾರತ ಪಾವತಿ ನಿಗಮ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಹೀಗಾಗಿ ಭಾರತದ ನೀತಿ ನಿಯಮಕ್ಕೆ ಅನುಸಾರವಾಗಿ ಕೆಲ ಆ್ಯಪ್ ಡೇಟಾದಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಅನುಮತಿಗಾಗಿ ಮನವಿ ಮಾಡಿತ್ತು. ಇದೀಗ NPCI ಗ್ರೀನ್ ಸಿಗ್ನಲ್ ನೀಡಿದೆ.
ಥರ್ಡ್ ಪಾರ್ಟಿ ಆ್ಯಪ್ ತಿಂಗಳಿಗೆ ಒಟ್ಟು ಹಣದ ವ್ಯಹಾರದ ಶೇಕಡಾ 30ರಷ್ಟು ಮಾತ್ರ ಮಾಡಲು ಭಾರತ ಪಾವತಿ ನಿಗಮ ಅನುಮತಿ ನೀಡಿದೆ. ಇತ್ತ ವ್ಯಾಟ್ಸಾಪ್ 160 ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಸದ್ಯ ವ್ಯಾಟ್ಸಾಪ್ ಬಳಕೆ ಮಾಡುತ್ತಿರುವ ಬಳಕೆದಾರರು, ತಮ್ಮ ವ್ಯಾಟ್ಸಾಪ್ ಅಪ್‌ಡೇಟ್ ಮಾಡಿಕೊಂಡರೆ ವ್ಯಾಟ್ಸಾಪ್ ಪೇ ಫೀಚರ್ಸ್ ಲಭ್ಯವಾಗಲಿದೆ.
ಅಪ್‌ಡೇಟ್ ವೇಳೆ ವ್ಯಾಟ್ಸಾಪ್ ಪೇಮೆಂಟ್ ಆಯ್ಕೆ ಬಯಸುವುದಾದರೆ, ಬ್ಯಾಂಕ್ ಖಾತೆಯನ್ನು ವ್ಯಾಟ್ಸಾಪ್ ಜೊತೆ ಲಿಂಕ್ ಮಾಡಿಕೊಳ್ಳಬೇಕು.