ಕೇಂದ್ರ ದೂರ ಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಈ ನಂಬರ್‌ಗಳಿಂದ ಅಪರಿಚಿತ ಕರೆಗಳು ಬಂದಲ್ಲಿ ಮೋಸಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ. 

ನವದೆಹಲಿ(ಮಾ.30) ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಡೇಟಾ ಸೋರಿಕೆ, ಬ್ಯಾಂಕ್ ಖಾತೆಗೆ ಕನ್ನ ಸೇರಿದಂತೆ ಹಲವು ವಂಚನೆಗಳು ಬೆಳಕಿಗೆ ಬರುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಕರೆ ಮೂಲಕ ವಂಚಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ದೂರ ಸಂಪರ್ಕ ಇಲಾಖೆ ಹೆಸರಿನಲ್ಲಿ ವ್ಯಾಟ್ಸ್ಆ್ಯಪ್ ಕರೆ ಮಾಡಿ ಮೊಬೈಲ್ ಬಳಕೆದಾರರನ್ನು ವಂಚನೆಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ದೂರ ಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. 

ಸೈಬರ್ ಕ್ರಿಮಿನಲ್ಸ್ ಇದೀಗ ವ್ಯಾಟ್ಸ್ಆ್ಯಪ್ ಮೂಲಕ ಮೊಬೈಲ್ ಬಳಕೆದಾರರಿಗೆ ಕರೆ ಮಾಡಿ ವಂಚಿಸುತ್ತಿದ್ದಾರೆ. ವಿದೇಶಿ ವ್ಯಾಟ್ಸ್ಆ್ಯಪ್ ನಂಬರ್‌ಗಳಿಂದ ( +92-xxxxxxxxxx) ಕರೆ ಮಾಡಿ ವೈಯುಕ್ತಿಕ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ದೂರಸಂಪರ್ಕ ಇಲಾಖೆ ಹೆಸರಿನಲ್ಲಿ ಕರೆ ಮಾಡಿ ಮುಗ್ದ ಬಳಕೆದಾರರನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಈ ನಂಬರ್‌ ನಿಷ್ಕ್ರೀಯಗೊಳಿಸಲಾಗುತ್ತಿದೆ. ಟ್ರಾಯ್ ನಿಮಯ ಉಲ್ಲಂಘನೆಯಾಗಿದೆ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಬೆದರಿಸುತ್ತಿದ್ದಾರೆ.ಈ ತಂತ್ರದ ಬಲೆಗೆ ಬಿದ್ದ ಗ್ರಾಹಕರು ತಮ್ಮ ವೈಯುಕ್ತಿಕ ಮಾಹಿತಿ, ದಂಡ ಪವಾತಿ ಮಾಡಿ ಮೋಸ ಹೋಗುತ್ತಿದ್ದಾರೆ ಎಂದು ದೂರ ಸಂಪರ್ಕ ಇಲಾಖೆ ಎಚ್ಚರಿಸಿದೆ.

ರಾಮ ಮಂದಿರ ಸೇರಿ ದೇಶದ 264 ವೆಬ್‌ಸೈಟ್ ಹ್ಯಾಕ್‌ಗೆ ಯತ್ನ, ಪಾಕ್-ಚೀನಾ ಹ್ಯಾಕರ್ಸ್ ಕುತಂತ್ರ!

ವೈಯುಕ್ತಿಕ ಮಾಹಿತಿ ಹಂಚಿದ ಗ್ರಾಹಕರ ಮೊಬೈಲ್ ನಂಬರ್ ಬಳಸಿ ಬೇರೆ ವಂಚನೆ ನಡೆಸಲಾಗುತ್ತದೆ. ಇದೇ ನಂಬರ್ ಬಳಸಿ ಹಲವು ಅಕ್ರಮಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಮೊಬೈಲ್ ಗ್ರಾಹಕರು ಎಚ್ಚರಿಕೆಯಿಂದ ಇರಬೇಕಾಗಿ ಸೂಚಿಸಿದ್ದಾರೆ. ವಿದೇಶಿ ನಂಬರ್ ಕರೆ, ಅನಾಮಿಕ ಕರೆಗಳ ಮೂಲಕ ವೈಯುಕ್ತಿಕ ಮಾಹಿತಿ, ಬೆದರಿಸುವ ತಂತ್ರಗಳ ಉಪಯೋಗಿಸುವ ವಂಚಕರಿಂದ ಮೋಸ ಹೋಗಬೇಡಿ ಎಂದು 

ಕೆವೈಸಿ ಸಂಬಂಧಿತ ಯಾವುದೇ ಅನುಮಾನಗಳಿಗೆ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಪರಿಶೀಲನೆ ಮಾಡಬಗುದು. ಅಥವಾ ಹತ್ತಿರದ ಡೀಲರ್‌ಶಿಪ್ ಬಳಿಕ ತೆರಳಿ ಕೆವೈಸಿ ಪೂರ್ಣಗೊಳಿಸಬಹುದು. ಆದರೆ ಅನಾಮಿಕ ಕರೆಗೆ ಪ್ರತಿಕ್ರಿಯಿಸಿ ಮೋಸಹೋಗಬೇಡಿ ಎಂದು ದೂರಸಂಪರ್ಕ ಇಲಾಖೆ ಸೂಚಿಸಿದೆ.

ಪಾರ್ಟ್ ಟೈಮ್ ಉದ್ಯೋಗ ನೆಪದಲ್ಲಿ ವಂಚಿಸಿ 15 ಕೋಟಿ ರೂ ಚೀನಾಗೆ ಕಳುಹಿಸಿದ ನಾಲ್ವರು ಅರೆಸ್ಟ್!

ವ್ಯಾಟ್ಸ್ಆ್ಯಪ್ ಮೂಲಕ ಬರುವ ಅನಾಮಿಕ ಕೆರಗಳನ್ನು ನಿಯಂತ್ರಿಸಲು ಸಾಧ್ಯವಿದೆ. ವ್ಯಾಟ್ಸ್ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ಸೈಲೆಂಟ್ ಅನ್‌ನೋನ್ ಕಾಲ್ ಎಂಬ ಆಯ್ಕೆ ಆನ್ ಮಾಡಿದರೆ ಅನಾಮಿಕ ಕರೆಗಳ ಕಿರಿಕಿರಿ ಇರುವುದಿಲ್ಲ.